ಕೊನೆಗೂ ತಮ್ಮಿಬ್ಬರ ನಡುವಿನ ಪ್ರೀತಿ ವಿಚಾರವನ್ನು ಸುದೀಪ್ ಬಳಿ ಹೇಳಿ ತೆರೆ ಎಳೆದ ಶೈನ್ ಹಾಗೂ ದೀಪಿಕಾ..

Source Credit RJ News Kannada

ಕೊನೆಗೂ ತಮ್ಮಿಬ್ಬರ ನಡುವಿನ ಪ್ರೀತಿ ವಿಚಾರವನ್ನು ಸುದೀಪ್ ಬಳಿ ಹೇಳಿ ತೆರೆ ಎಳೆದ ಶೈನ್ ಹಾಗೂ ದೀಪಿಕಾ.. – RJ News Kannada

ಕೊನೆಗೂ ತಮ್ಮಿಬ್ಬರ ನಡುವಿನ ಪ್ರೀತಿ ವಿಚಾರವನ್ನು ಸುದೀಪ್ ಬಳಿ ಹೇಳಿ ತೆರೆ ಎಳೆದ ಶೈನ್ ಹಾಗೂ ದೀಪಿಕಾ..

ಹೌದು ಮನರಂಜನೆಗಾದರೂ ಕೂಡ ಶೈನ್ ದೀಪಿಕಾರನ್ನು ಕಾಡಿಸುತ್ತಿದ್ದ ರೀತಿ ಜನರಿಗೆ ಇಷ್ಟವಾಗಿತ್ತು.. ಆದರೆ ಬಿಗ್ ಬಾಸ್ ಮನೆಗೆ ದೀಪಿಕಾ ಅವರ ತಾಯಿ ಬಂದು ಹೋದಾಗಿನಿಂದ ಅದ್ಯಾಕೋ ಶೈನ್ ಹಾಗೂ ದೀಪಿಕಾ ಹೆಚ್ಚಾಗಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿಲ್ಲ.. ದೀಪಿಕಾ ಆದಷ್ಟು ಕಿಶನ್ ಜೊತೆ ಇದ್ದರೆ.. ಶೈನ್ ಹೆಚ್ಚಾಗಿ ಭೂಮಿ ಹಾಗೂ ವಾಸುಕಿ ಜೊತೆಯೇ ಸಮಯ ಕಳೆಯುತ್ತಿದ್ದಾರೆ.. ಅದರಲ್ಲೂ ಶೈನ್ ಅವರ ತಾಯಿ ಬಂದಾಗ ಯಾರಿಗೂ ಕೆಟ್ಟದಾಗಬಾರದು.. ಹೊರಗೆ ಏನು ನಡೀತಾ ಇದೆ ಅಂತ ನಿನಗೆ ತಿಳಿದಿಲ್ಲ ಅಲ್ವಾ..‌ ಎಂದು ಸೂಕ್ಷ್ಮವಾಗಿ ನಿನ್ನಿಂದ ದೀಪಿಕಾಗೆ ತೊಂದರೆ ಆಗಬಾರದು ಎಂಬ ವಿಚಾರ ತಿಳಿಸಿದರು.. ಆಗಿನಿಂದ ಶೈನ್ ದೀಪಿಕಾ ಜೊತೆ ಪ್ರೀತಿ ಗೀತಿ ಎಂದು ಮಾತನಾಡಲಿಲ್ಲ.. ಸಿಕ್ಕಾಗ ಇತರ ಸದಸ್ಯರ ಜೊತೆ ಮಾತನಾಡುವಷ್ಟು ಮಾತ್ರ ದೀಪಿಕಾ ಅವರ ಜೊತೆ ಮಾತನಾಡುತ್ತಿದ್ದಾರೆ..

ಇದನ್ನೆಲ್ಲಾ ಗಮನಿಸಿರುವ ಕಿಚ್ಚ ಸುದೀಪ್ ಅವರು ನಿನ್ನೆ ಸಂಡೇ ಸ್ಪೆಷಲ್ ಕಾರ್ಯಕ್ರಮದಲ್ಲಿ ಯೆಸ್ ಆರ್ ನೋ ಚಟುವಟಿಕೆಯಲ್ಲಿ ಮನೆಯ ಎಲ್ಲಾ ಸದಸ್ಯರ ಬಳಿ ಕೇಳಿದ್ದಾರೆ.. “ಶೈನ್ ಶೆಟ್ಟಿ ಅವರು ದೀಪಿಕಾ ಅವರಿಂದ ಇತ್ತೀಚಿನ ದಿನಗಳಲ್ಲಿ ದೂರ ಆಗ್ತಾ ಇದ್ದಾರೆ” ಎಂಬ ಸ್ಟೇಟ್ಮೆಂಟ್ ಕೊಟ್ಟರು.. ಆ ಸಮಯದಲ್ಲಿ ಶೈನ್ ದೀಪಿಕಾ ಹಾಗೂ ಪ್ರಿಯಾಂಕ ಬಿಟ್ಟು ಮಿಕ್ಕವರೆಲ್ಲಾ ಹೌದು ಎಂದರು..

ಆನಂತರ ದೀಪಿಕಾ ಈ ಬಗ್ಗೆ ಮಾತನಾಡಿ.. ಹಾಗೇನಿಲ್ಲಾ ಸರ್ ಇಬ್ಬರೂ ಮಾತನಾಡ್ತೀವಿ.. ಟಾಸ್ಕ್ ಬಂದಾಗ ಸುಮ್ಮನೆ ಆಗ್ತೀವಿ ಅಷ್ಟೇ ಎಂದರು.. ಶೈನ್ ಕೂಡ ಮಾತನಾಡಿ ಕಳೆದ ಕೆಲ ವಾರದಿಂದ ವ್ಯಯಕ್ತಿಕ ಟಾಸ್ಕ್ ಇದ್ದದ್ದರಿಂದ ಸ್ವಲ್ಪ ದೂರ ಇದ್ದೀವಿ ಅಷ್ಟೇ.. ಟಾಸ್ಕ್ ಬಿಟ್ಟರೆ ಮುಂಚೆ ಇದ್ದ ರೀತಿಯಲ್ಲಿಯೇ ಇದ್ದೇವೆ ಎಂದರು.. ಆತ್ಮೀಯತೆ ಹಾಗೆಯೇ ಇದೆ ಎಂದರು.. ಈ ಮೂಲಕ ಮುಂಚೆ ಇಬ್ಬರ ನಡುವೆ ಇದ್ದದ್ದು.. ಈಗ ಇರುವುದು ಬರಿ ಸ್ನೇಹವಷ್ಟೇ ಎಂಬುದನ್ನು ಇಬ್ಬರೂ ಕ್ಲಾರಿಫೈ ಮಾಡಿದರು.‌ ಮನೆಯೊಳಗೆ ಅವರಿಬ್ಬರ ನಡುವಿನ ಸ್ನೇಹ ಹಾಗೂ ಮನರಂಜನೆಗಾಗಿ ಕಾಡಿಸುತ್ತಿದ್ದದ್ದನ್ನು ಹೊರಗೆ ಕೆಲವರು.. ಅದರಲ್ಲೂ ದೀಪಿಕಾರ ಆಪ್ತರೇ ಅವರ ನಡುವೆ ಪ್ರೀತಿ ಇದೆ ಎಂದುಕೊಳ್ಳುತ್ತಿದ್ದರು.. ಆದರೆ ಈ ಎಲ್ಲಾ ವಿಚಾರಕ್ಕೂ ಸ್ವತಃ ಅವರೆ ಮಾತನಾಡಿ ಕ್ಲಾರಿಫೈ ಮಾಡಿದ್ದಾರೆನ್ನಬಹುದು.

ಈಗಲೂ ಕೂಡ ಶೈನ್ ಅವರು.. ದೀಪಿಕಾ ಅವರ ತಾಯಿ ಬಂದಾಗಿನಿಂದ ಇಬ್ಬರ ನಡುವಿನ ಮಾತು ಕಡಿಮೆಯಾಯಿತು ಎಂದು ಎಲ್ಲೂ ಹೇಳಲಿಲ್ಲ.. ತಾಯಿಯ ಮಾತನ್ನು ಸೂಕ್ಷ್ಮವಾಗಿ ಅರ್ಥ ಮಾಡಿಕೊಂಡು ದೀಪಿಕಾರಿಗೆ ತಮ್ಮಿಂದ ಹೊರಗೆ ಒಂದು ಮಾತು ಬರಬಾರದೆಂದು..‌ ಆತ್ಮೀಯವಾಗಿ ಇದ್ದೀವಿ.. ಸ್ನೇಹ ಹಾಗೆ ಇದೆ ಎಂದು.. ಈ ಮುನ್ನ ಮಾಡಿದ್ದೆಲ್ಲಾ ತಮಾಷೆಗಷ್ಟೇ ಎಂಬುದನ್ನು ಇಂಡೈರೆಕ್ಟ್ ಆಗಿ ತಿಳಿಸಿ ಮಾತನ್ನು ಅಲ್ಲಿಗೆ ಮುಗಿಸಿದರು..

error: ಕಾಪಿ ಮಾಡೋದು ಬಿಟ್ಟು, ಶೇರ್ ಮಾಡಿ

Source Credit RJ News Kannada

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಬೈಕ್‍ಗೆ ಬಸ್ ಡಿಕ್ಕಿ : ಯುವ ವೈದ್ಯ ಮೃತ್ಯು  

Mon Jan 13 , 2020
Source Credit NewsKannada.com DSK   ¦    Jan 13, 2020 09:47:00 AM (IST) ಮೂಡುಬಿದಿರೆ: ಬೈಕ್‍ಗೆ ಬಸ್ಸೊಂದು ಡಿಕ್ಕಿ ಹೊಡೆದ ಪರಿಣಾಮವಾಗಿ ಆಳ್ವಾಸ್ ಆಯುರ್ವೇದ ಕಾಲೇಜಿನ ತರಬೇತಿ ನಿರತ ವೈದ್ಯರೊಬ್ಬರು ಮೃತಪಟ್ಟ ಘಟನೆ ಕೆಸರುಗದ್ದೆ ಬಳಿ ಭಾನುವಾರ ಬೆಳಿಗ್ಗೆ ನಡೆದಿದೆ.  ಕೇರಳದ ಕೊಲ್ಲಂನ ಡಾ. ಕೃಷ್ಣಾನಂದ(24)ಎಂದು ಮೃತಪಟ್ಟವರು.  ಇವರು ಕಾರ್ಕಳದಲ್ಲಿ ವೈದ್ಯಕೀಯ ಶಿಬಿರದಲ್ಲಿ ಪಾಲ್ಗೊಳ್ಳಲು  ಭಾನುವಾರ ಬೆಳಿಗ್ಗೆ ಮೂಡುಬಿದಿರೆಯಿಂದ ಬೈಕ್‍ನಲ್ಲಿ ಹೊರಟಿದ್ದರು. ಕೆಸರುಗದ್ದೆಯಲ್ಲಿ  ಹೋಗುತ್ತಿದ್ದಾಗ “ನವದುರ್ಗಾ” ಎಂಬ  ಹೆಸರಿನ ಖಾಸಗಿ ಎಕ್ಸ್ ಪ್ರೆಸ್ ಬಸ್ ಓವರ್ ಟೇಕ್ ಮಾಡುವ ಭರದಲ್ಲಿ ಬೈಕ್‍ಗೆ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links