ಕೊನೆಗೂ ಐ ಲವ್ ಯು ಹೇಳಿದ ಆರ್ಯವರ್ಧನ್.. ಅನು ಹೇಳಿದ್ದೇನು ಗೊತ್ತಾ?

Source Credit RJ News Kannada

ಅನುಗಿಂತ ಹೆಚ್ಚಾಗಿ ಜೊತೆಜೊತೆಯಲಿ ಅಭಿಮಾನಿಗಳು ಕಾಯುತ್ತಿದ್ದ ಘಳಿಗೆ ಇಂದು ಬಂದಿದೆ ಎನ್ನಬಹುದು.. ಆರ್ಯವರ್ಧನ್ ಬಾಯಲ್ಲಿ ಅನುಗಾಗಿ ಐ ಲವ್ ಯು ಅನ್ನೋ ಮಾತು..

ಹೌದು ಹುಬ್ಬಳ್ಳಿಗೆ ಹೊರಟ ಅನುವನ್ನು ತಡೆದು ವಾಪಸ್ ಕರೆದುಕೊಂಡು ಬರುವಾಗ ಎದುರಾದ ಪುಂಡರನ್ನು ಹೆಣ್ಣಿನ ಮೇಲಿನ ಗೌರವದ ಮಾತಿನ ಮೂಲಕವೇ ಅವರನ್ನು ಹಿಮ್ಮೆಟ್ಟಿಸಿ ಅನುವನ್ನು ರಕ್ಷಣೆ ಮಾಡಿದ ರೀತಿ ಈಗಿನ ಸಮಾಜಕ್ಕೆ ಧಾರಾವಾಹಿಯ ಮೂಲಕ ಒಂದು ಅತ್ಯದ್ಭುತ ಸಂದೇಶದ ರವಾನೆಯಾಗಿದೆ ಎನ್ನಬಹುದು..

ಇನ್ನು ಅಲ್ಲಿಂದ ಯಾವುದು ಕೆಟ್ಟ ಕೂಪದ ರೂಪದ ಹೋಟೆಲ್ ನಲ್ಲಿ ಆರ್ಯ ಅನು ಉಳಿದುಕೊಳ್ಳುವ ಪರಿಸ್ಥಿತಿ ಬಂದಾಗಲೂ ಆರ್ಯವರ್ಧನ್ ಅನುವನ್ನು ಕಾಳಜಿ ಮಾಡುವ ರೀತಿ ನಿಜಕ್ಕೂ ಸೂಪರ್ ಎನ್ನಲೇ ಬೇಕು.. ಸಣ್ಣ ಸಣ್ಣ ಸಂಗತಿಗಳಿಗೆ ನಿರ್ದೇಶಕರು ಮಹತ್ವ ನೀಡುತ್ತಿರುವ ರೀತಿ ನಿಜಕ್ಕೂ ಸೊಗಸಾಗಿದೆ..

5 ಬಾರಿ ತಟ್ಟಿದರೆ ಮಾತ್ರ ಬಾಗಿಲು ತೆಗೆಯಬೇಕು ಎಂದು.. ಅದನ್ನು ಪರೀಕ್ಷೆ ಮಾಡೋದು.. ನಂತರ ರಾತ್ರೀ ಪೂರ ಅನುವನ್ನು ಮಲಗಲು ಹೇಳಿ ಆಕೆಯನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ತಾನು ಎಚ್ಚರ ಇರೋದು.. ಎಲ್ಲಾ ಸನ್ನಿವೇಶಗಳೂ ಮನಮುಟ್ಟುವಂತಿತ್ತು..

ಇನ್ನು ಇಂದಿನ ಸಂಚಿಕೆಯಲ್ಲಿ ವಾಹಿನಿಯವರು ಬಿಟ್ಟಿರುವ ಪ್ರೋಮೋದಲ್ಲಿ ತಿಳಿಸಿರುವಂತೆ ಆರ್ಯವರ್ಧನ್ ತಮ್ಮ ಮನಸ್ಸಿನಲ್ಲಿನ ಅನು ಮೇಲಿನ ಭಾವನೆಯನ್ನು ಹೇಳಿಕೊಳ್ಳುವ ಪರಿ ನಿಜಕ್ಕೂ ರೋಚಕವಾಗಿದೆ..

ಮನಸ್ಸಿನಲ್ಲಿರೋದು ತಪ್ಪು ಎಂಬ ಒಂದೇ ಕಾರಣಕ್ಕೆ ಅಗಾಧ ಪ್ರೀತಿಯನ್ನು ಮುಚ್ಚಿಟ್ಟು ತನ್ನಲ್ಲೇ ನೋವು ಅನುಭವಿಸುತ್ತಿರುವ ಆರ್ಯವರ್ಧನ್.. ಅನು ಮಲಗಿದ್ದಾಳೆ ಎಂದುಕೊಂದು ತನ್ನ ಮನಸ್ಸಿನ ಭಾವನೆಗಳನ್ನು ಹೇಳಿಕೊಂಡು ಐ ಲವ್ ಯು ಅನು ಎನ್ನುವ ದೃಶ್ಯ ಇಂದಿನ ಸಂಚಿಕೆಯಲ್ಲಿ ಪ್ರಸಾರವಾಗಲಿದೆ.. ಆದರೆ ಅನು ಈ ಎಲ್ಲಾ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದಾಳೆ ಎಂಬುದು ಆರ್ಯನಿಗೆ ತಿಳಿದಿಲ್ಲ.. ಇಷ್ಟು ದಿನ ಕಾಯುತ್ತಿದ್ದ ಮನಸ್ಸಿನ ಮಾತುಗಳ ಕೇಳಿದ ಅನು ಹೇಗೆ ಪ್ರತಿಕ್ರಿಯಿಸುತ್ತಾಳೆ.. ಇಂದಿನ ಸಂಚಿಕೆವರೆಗೂ ಕಾದು ನೋಡಬೇಕಿದೆ..

Source Credit RJ News Kannada

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

6 ಕೋಟಿ ರೈತರಿಗೆ 12,000 ಕೋಟಿ ರೂ ಹಂಚಿಕೆ ಮಾಡಲಿದ್ದಾರೆ ಮೋದಿ

Thu Jan 2 , 2020
Source Credit Oneindia.com Pin it Email https://nirantharanews.com/%e0%b2%95%e0%b3%8a%e0%b2%a8%e0%b3%86%e0%b2%97%e0%b3%82-%e0%b2%90-%e0%b2%b2%e0%b2%b5%e0%b3%8d-%e0%b2%af%e0%b3%81-%e0%b2%b9%e0%b3%87%e0%b2%b3%e0%b2%bf%e0%b2%a6-%e0%b2%86%e0%b2%b0%e0%b3%8d%e0%b2%af/#Wg== Karnataka oi-Amith | Published: Thursday, January 2, 2020, 10:51 [IST] ಬೆಂಗಳೂರು, ಜನವರಿ 2: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ‘ಆದಾಯ ಬೆಂಬಲ ಯೋಜನೆ’ಗೆ (ಪಿಎಂ-ಕಿಸಾನ್) ಮತ್ತಷ್ಟು ಉತ್ತೇಜನ ನೀಡುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ತುಮಕೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಗುರುವಾರ 6 ಕೋಟಿ ರೈತರಿಗೆ 12,000 ಕೋಟಿ ರೂ. ಮೊತ್ತವನ್ನು ಇ-ವರ್ಗಾವಣೆ ಮೂಲಕ ವಿತರಿಸಲಿದ್ದಾರೆ. ಇದು ದೇಶದ ವಿವಿಧೆಡೆ ಜನವರಿಯಲ್ಲಿ ಆಚರಿಸಲಾಗುವ ಮಕರ ಸಂಕ್ರಾಂತಿ, ಬಿಹು ಮತ್ತು ಪೊಂಗಲ್‌ನಂತಹ ಸುಗ್ಗಿ ಹಬ್ಬಕ್ಕೂ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links