ಕೈಗಳಿಲ್ಲದ ವಿಶ್ವದ ಮೊದಲ ಪೈಲೆಟ್ ಜೆಸ್ಸಿಕಾ ಕಾಕ್ಸ್

Source Credit Kannada.boldsky.com

Life

oi-Reena TK

|

ಸಾಧನೆ ಮಾಡುವ ಮನಸ್ಸು ಒಂದಿದ್ದರೆ ಸಾಕು ನಮಗೆ ಯಾವುದೇ ಅಡೆತಡೆಗಳಿರಲಿ, ಎಷ್ಟೇ ಕಷ್ಟವಿರಲಿ, ನಮ್ಮ ದೇಹದಲ್ಲಿ ಯಾವುದೇ ನ್ಯೂನತೆ ಇರಲಿ ಅದು ಯಾವುದೂ ನಮಗೊಂದು ಸವಾಲು ಅನಿಸುವುದೇ ಇಲ್ಲ. ನಮ್ಮ ದೃಢ ಇಚ್ಛಾ ಶಕ್ತಿಯ ಮುಂದೆ ಅವೆಲ್ಲಾ ಮಂಡಿಯೂರಿ ಕೂತು ಬಿಡುತ್ತವೆ.

ನಮಗೆ ಎಲ್ಲಾ ಇದ್ದರೂ ಇಲ್ಲದಿರುವುದರ ಬಗ್ಗೆ ಕುರಿತು ಚಿಂತಿಸಿ ಮನಸ್ಸು ಹಾಳು ಮಾಡಿಕೊಳ್ಳುವವರೇ ಹೆಚ್ಚು. ಇನ್ನು ಚಿಕ್ಕ ಕಷ್ಟಕ್ಕೆ ಹೆದರಿಕೊಳ್ಳುವವರೂ ಇದ್ದಾರೆ, ಅಂಥವಾರು ಜೆಸ್ಸಿಕಾ ಕಾಕ್ಸ್ ನೋಡಿ ಕಲಿಯುವಂಥದ್ದು ತುಂಬಾ ಇದೆ. ಹೌದು ಜೆಸ್ಸಿಕಾ ಕಾಕ್ಸ್ ಬಗ್ಗೆ ತಿಳಿಯುತ್ತಾ ಹೋದರೆ ನಿಮಗೆ ಬದುಕಿನಲ್ಲಿ ಸ್ಪೂರ್ತಿ ಸಿಗುವುದು ಹಾಗೂ ಆಕೆಯ ದೃಢ ಸಂಕಲ್ಪ ನೋಡಿ ಆಕೆಗೊಂದು ಸಲ್ಯೂಟ್‌ ಹೇಳುವಿರಿ.

ಜೆಸ್ಸಿಕಾ ಕಾಕ್ಸ್‌ಗೆ ಎರಡು ಕೈಗಳಿಲ್ಲ, ಆದರೇನಂತೆ ಆಕಾಶದಲ್ಲಿ ಹಾರಾಡುತ್ತಾರೆ, ಸಮುದ್ರದಲ್ಲಿ ಸರ್ಫಿಂಗ್ ಮಾಡುತ್ತಾರೆ, ಪಿಯಾನೋ ನುಡಿಸುತ್ತಾರೆ, ಅಷ್ಟೇ ಏಕೆ ಯಾರಾದರೂ ತಂಟೆಗೆ ಬಂದರೆ ಕರಾಟೆ ಸೈಲಿಯಲ್ಲಿ ಸದೆ ಬಡೆಯುವ ತಾಕತ್ತು ಅವರಿಗಿದೆ.

‘ಕೈಗಳಿಲ್ಲದ ಕಾರಣ ನನಗೆ ಏನೂ ಮಾಡಲು ಸಾಧ್ಯವಿಲ್ಲ ಎಂದು ಜನರು ಭಾವಿಸಿದ್ದರು, ಆದರೆ ಅವರು ಅಂದುಕೊಂಡಿದ್ದು ತಪ್ಪು’ ಎಂದು ಸಾಬೀತು ಮಾಡಿದ್ದೇನೆ’ ಎನ್ನುತ್ತಾರೆ ಜೆಸ್ಸಿಕಾ. ಇವರು ಜನರಿಗೆ ಸ್ಪೂರ್ತಿ ತುಂಬಲು ಜಗತ್ತಿನ ಎಲ್ಲಾ ಕಡೆ ಹೀಗಿ ಮೋಟಿವೇಷನಲ್ ಸ್ಪೀಚ್‌ ಕೊಡುತ್ತಾರೆ. ಹುಟ್ಟುವಾಗಲೇ ಜೆಸ್ಸಿಕಾ ಅವರಿಗೆ ಕೈಗಳಿರಲಿಲ್ಲ, ಆದರೂ ಅವರಮ್ಮ ಮಗಳಿಗೆ ಧೈರ್ಯ ತುಂಬಿ ಬೆಳೆಸಿದರು. ಎಂಟನೇ ತರಗತಿಯಲ್ಲಿ ಇರುವಾಗ ಜೆಸ್ಸಿಕಾ ಅವರನ್ನು ಡ್ಯಾನ್ಸ್ ಕ್ಲಾಸ್‌ಗೆ ಸೇರಿಸಿದರು. 5 ವರ್ಷ ಇರುವಾಗಲೇ ಈಜು ಕಲಿತರು. ಕೈಗಳಿಲ್ಲದೆ ಮಾಡಲು ಸಾಧ್ಯವಿಲ್ಲ ಎಂದು ನಾವು ಯೋಚಿಸುವ ಪ್ರತಿಯೊಂದು ಚಟುವಟಿಕೆಯನ್ನು ಇವರು ಮಾಡಿದರು. ಇವರು ತಮ್ಮ ಕಾಲುಗಳನ್ನೇ ಕೈಗಳಾಗಿ ಬಳಸಿದರು.

ಏನಾದರೂ ಸಾಧಿಸಲು ಮನಸ್ಸಿನಲ್ಲಿ ಛಲವಿದ್ದರೆ ನಮ್ಮ ಮುಂದೆ ದಾರಿಗಳು ತೆರೆದುಕೊಳ್ಳುತ್ತವೆ ಎನ್ನುವುದಕ್ಕೆ ಇವರೇ ಉದಾಹರಣೆ ಅಲ್ಲವೇ?

GET THE BEST BOLDSKY STORIES!

Allow Notifications

You have already subscribed

Source Credit Kannada.boldsky.com

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಕರ್ನಾಟಕದಲ್ಲಿ ಮುಂದಿನ 48 ಗಂಟೆಗಳಲ್ಲಿ ಸುರಿಯಲಿದೆ ಭಾರಿ ಮಳೆ

Fri Dec 13 , 2019
Source Credit Oneindia.com Pin it Email https://nirantharanews.com/%e0%b2%95%e0%b3%88%e0%b2%97%e0%b2%b3%e0%b2%bf%e0%b2%b2%e0%b3%8d%e0%b2%b2%e0%b2%a6-%e0%b2%b5%e0%b2%bf%e0%b2%b6%e0%b3%8d%e0%b2%b5%e0%b2%a6-%e0%b2%ae%e0%b3%8a%e0%b2%a6%e0%b2%b2-%e0%b2%aa%e0%b3%88/#Wg== Karnataka oi-Nayana Bj | Published: Friday, December 13, 2019, 15:57 [IST] ಬೆಂಗಳೂರು, ಡಿಸೆಂಬರ್ 13: ಕರ್ನಾಟಕದಲ್ಲಿ ಮುಂದಿನ 48 ಗಂಟೆಗಳಲ್ಲಿ ಭಾರಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಈಗಾಗಲೇ ಕಳೆದ 20 ಗಂಟೆಗಳಿಂದ ದೆಹಲಿಯಲ್ಲಿ ಮಳೆ ಸುರಿಯುತ್ತಿದ್ದು, ಗುರುವಾರ ಕನಿಷ್ಠ 12.8ಡಿಗ್ರಿ ಸೆಲ್ಸಿಯಸ್, ಗರಿಷ್ಠ 21.5 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿತ್ತು. ಆನಂದ ವಿಹಾರ್, ಪಂಜಾಬಿ ಭಾಗ್, ಲೋಧಿ ರಸ್ತೆ, ಇಂಡಿಯಾ ಗೇಟ್ ಸೇರಿದಂತೆ ಹಲವೆಡೆ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links