ಕೆಪಿಸಿಸಿ ಅಧ್ಯಕ್ಷ ಹುದ್ದೆ: ಎಲ್ಲರೂ ಒಪ್ಪುವ ಅಂತಿಮ ಸೂತ್ರ ಫೈನಲ್ ಮಾಡಿದ ಸೋನಿಯಾ ಗಾಂಧಿ

Source Credit Oneindia.com

Karnataka

oi-Balaraj Tantri

|

ಹಲವು ಸುತ್ತಿನ ಮಾತುಕತೆ, ಅಭಿಪ್ರಾಯ ಆಲಿಸಿದ ನಂತರ, ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಜ್ಯ ಕಾಂಗ್ರೆಸ್ ಘಟಕದ ಎರಡು ಆಯಕಟ್ಟಿನ ಹುದ್ದೆಗೆ ಹೆಸರನ್ನು ಅಂತಿಮಗೊಳಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಮೂಲ ಕಾಂಗ್ರೆಸ್ಸಿಗರು ಮತ್ತು ವಲಸೆ ಕಾಂಗ್ರೆಸ್ಸಿಗರು ಎನ್ನುವ ಎರಡು ಬಣಗಳು, ತಾವಿಟ್ಟ ಬೇಡಿಕೆಗಳಿಗೆ ಮನ್ನಣೆ ಸಿಗಬೇಕು ಎನ್ನುವ ಹಠ ಮುಂದುವರಿಸಿರುವುದರಿಂದ, ಎಲ್ಲರಿಗೂ ಒಪ್ಪುವ ಸೂತ್ರವನ್ನು ಸೋನಿಯಾ ಗಾಂಧಿ ಹಣೆದಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡೂರಾವ್ ಮತ್ತು ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಿ ಹಲವು ತಿಂಗಳಾಗಿದ್ದರೂ, ಅವರಿಬ್ಬರ ರಾಜೀನಾಮೆ ಆಂಗೀಕಾರಗೊಂಡಿರಲಿಲ್ಲ.

ಕರ್ನಾಟಕ ವಿಧಾನಮಂಡಲದ ಅಧಿವೇಶನ ಸೋಮವಾರದಿಂದ (ಫೆ 17) ಆರಂಭಗೊಳ್ಳುತ್ತಿರುವುದರಿಂದ, ಅದಕ್ಕೂ ಮೊದಲು, ಈ ಎರಡು ಹುದ್ದೆಗೆ ಹೆಸರನ್ನು ಸೋನಿಯಾ, ವಾರಾಂತ್ಯದಲ್ಲಿ ಪ್ರಕಟಿಸುವ ಸಾಧ್ಯತೆಯಿದೆ.

ಸೋನಿಯಾ ಗಾಂಧಿ ಭೇಟಿಯಾದ ಕೆ.ಜೆ.ಜಾರ್ಜ್

ಸಿದ್ದರಾಮಯ್ಯನವರನ್ನೇ ವಿರೋಧ ಪಕ್ಷದ ಮತ್ತು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಮುಂದುವರಿಸಬೇಕೆಂದು ಅವರ ಆಪ್ತರು ದೆಹಲಿಯಲ್ಲಿ ಲಾಬಿ ನಡೆಸುತ್ತಿದ್ದಾರೆ. ಸೋನಿಯಾ ಗಾಂಧಿ ಕುಟುಂಬಕ್ಕೆ ಆಪ್ತರಾಗಿರುವ ಮಾಜಿ ಸಚಿವ ಮತ್ತು ಶಾಸಕ ಕೆ.ಜೆ.ಜಾರ್ಜ್, ಶುಕ್ರವಾರ (ಫೆ 14) ಹೈಕಮಾಂಡ್ ಅನ್ನು ಭೇಟಿಯಾಗಿದ್ದಾರೆ.

ಮನಮೋಹನ್ ಸಿಂಗ್ ಭೇಟಿಯಾದ ಎಚ್.ಕೆ.ಪಾಟೀಲ್

ಅಧಿವೇಶನದ ವೇಳೆ ಆಡಳಿತಾರೂಢ ಬಿಜೆಪಿಯಿಂದ ಮುಜುಗರಕ್ಕೀಡಾಗಬಾರದು ಎಂದು ಕಾಂಗ್ರೆಸ್ ಹೈಕಮಾಂಡ್ ಶ್ರೀಘ್ರದಲ್ಲೇ ಹೆಸರನ್ನು ಅಂತಿಮಗೊಳಿಸುವ ಸಾಧ್ಯತೆ ದಟ್ಟವಾಗಿದೆ. ರಾಜ್ಯದ ಮತ್ತೋರ್ವ ಹಿರಿಯ ಮುಖಂಡ, ಎಚ್.ಕೆ.ಪಾಟೀಲ್ ಕೂಡಾ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಭೇಟಿಯಾಗಿದ್ದಾರೆ.

ವಿರೋಧ ಪಕ್ಷ, ಶಾಸಕಾಂಗ ಪಕ್ಷದ ನಾಯಕರಾಗಿ ಸಿದ್ದರಾಮಯ್ಯ

ಸದ್ಯಕ್ಕೆ ಯಾವುದೇ ಸಾಹಸಕ್ಕೆ ಕೈಹಾಕುವುದು ಬೇಡವೆಂದು ಎರಡೂ ಬಣಕ್ಕೂ ಸಮಾನವಾಗಿ ಹುದ್ದೆ ನೀಡಲು ಸೋನಿಯಾ ನಿರ್ಧರಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಅದರಂತೇ, ವಿರೋಧ ಪಕ್ಷದ ಮತ್ತು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಸಿದ್ದರಾಮಯ್ಯನವರ ಹೆಸರನ್ನೇ ಹೈಕಮಾಂಡ್ ಘೋಷಿಸುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ.

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿ.ಕೆ.ಶಿವಕುಮಾರ್

ಇನ್ನು, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿ.ಕೆ.ಶಿವಕುಮಾರ್ ಅವರ ಹೆಸರನ್ನು ಸೋನಿಯಾ ಗಾಂಧಿ ಅಂತಿಮಗೊಳಿಸಿದ್ದಾರೆ. ಆ ಮೂಲಕ, ಎರಡೂ ಬಣವನ್ನು ಸಮಾಧಾನಗೊಳಿಸುವುದು ಸೋನಿಯಾ ಗಾಂಧಿಯವರ ಉದ್ದೇಶ. ಭಾನುವಾರ (ಫೆ 16), ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಸಿಎಲ್ಪಿ ಸಭೆ ನಡೆಯಲಿದ್ದು, ಅದಕ್ಕೂ ಮುನ್ನ ಘೋಷಣೆ ಹೊರಬೀಳಬಹುದು.

Oneindia ಬ್ರೇಕಿಂಗ್ ನ್ಯೂಸ್ . ಇಡೀ ದಿನ ತಾಜಾ ಸುದ್ದಿಗಳ ಪಡೆಯಿರಿ.

Allow Notifications

You have already subscribed

Source Credit Oneindia.com

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಏಸು ಪ್ರತಿಮೆ ನಿರ್ಮಾಣ: ಫೆ. 25 ರಂದು ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ

Sat Feb 15 , 2020
Source Credit Oneindia.com Pin it Email https://nirantharanews.com/%e0%b2%95%e0%b3%86%e0%b2%aa%e0%b2%bf%e0%b2%b8%e0%b2%bf%e0%b2%b8%e0%b2%bf-%e0%b2%85%e0%b2%a7%e0%b3%8d%e0%b2%af%e0%b2%95%e0%b3%8d%e0%b2%b7-%e0%b2%b9%e0%b3%81%e0%b2%a6%e0%b3%8d%e0%b2%a6%e0%b3%86/#Wg== Ramanagara oi-Lekhaka By ರಾಮನಗರ ಪ್ರತಿನಿಧಿ | Updated: Friday, February 14, 2020, 15:39 [IST] ರಾಮನಗರ, ಫೆಬ್ರವರಿ 14: ಕನಕಪುರದ ಹಾರೋಬೆಲೆಯ ಕಪಾಲ ಬೆಟ್ಟದಲ್ಲಿ ಜಗತ್ತಿನ ಎತ್ತರದ ಏಸು ಪ್ರತಿಮೆ ನಿರ್ಮಾಣ ವಿರೋಧಿ ಹೋರಾಟ ಮತ್ತೆ ಚುರುಕಾಗಿದೆ. ಏಸು ಪ್ರತಿಮೆ ನಿರ್ಮಾಣ ತಡೆಗಟ್ಟುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ ಎಂದು ಆರೋಪಿಸಿ ಹಿಂದೂ ಜಾಗರಣಾ ವೇದಿಕೆ ಇದೇ ತಿಂಗಳ 25 ರಂದು ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ ಹಾಕಲು ನಿರ್ಧರಿಸಿದೆ. ರಾಮನಗರದ ಪ್ರವಾಸಿ ಮಂದಿರದಲ್ಲಿ ಹಿಂದೂ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links