ಕುರಿ ಪ್ರತಾಪ್ ನಡವಳಿಕೆ ಬಗ್ಗೆ ಸತ್ಯ ಬಿಚ್ಚಿಟ್ಟ ಶ್ವೇತಾ ಚಂಗಪ್ಪ.

Source Credit RJ News Kannada

ಬಿಗ್ ಬಾಸ್ ಮನೆಯ ಕುರಿ ಪ್ರತಾಪ್ ಇತ್ತೀಚಿನ ದಿನಗಳಲ್ಲಿ ಟಾಸ್ಕ್ ವಿಷಯಗಳಲ್ಲಿ ಪ್ರಬಲ ಪೈಪೋಟಿ ನೀಡುತ್ತಿದ್ದು, ಬಿಗ್ ಬಾಸ್ ಟ್ರೋಫಿ ಗೆಲ್ಲಲು ಬಹಳ ಹತ್ತಿರವಾಗಿದ್ದಾರೆನ್ನಬಹುದು..

ಇನ್ನು ಬಿಗ್ ಬಾಸ್ ಮನೆಯಲ್ಲಿ ಕುರಿ ಪ್ರತಾಪ್ ಅವರ ನಡೆದುಕೊಳ್ಳುವ ರೀತಿ ಸಂಪೂರ್ಣ ನಾಟಕ.. ಇಷ್ಟೊಂದು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ ಆದರೂ ಈ ರೀತಿ ತಬ್ಬಿಬ್ಬಾಗೋ ರೀತಿ ನಡೆದುಕೊಳ್ಳೋದೇಕೆ.. ಅವರು ಫೇಕ್ ಎಂಬೆಲ್ಲಾ ವಿಚಾರಗಳು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗಿದ್ದವು..

ಅಷ್ಟೇ ಅಲ್ಲದೆ ಮನೆಯೊಳಗಿನ ಕೆಲ ಸದಸ್ಯರೂ ಕೂಡ “ಬಿಗ್ ಬಾಸ್ ಕೊಟ್ಟ ರೂಲ್ಸ್ ಬುಕ್ ಓದಿದರೂ ಕೂಡ ಕನ್ಫ್ಯೂಸ್ ಆಗುತ್ತೆ ಎಂದರೆ ಅದು ಡ್ರಾಮಾ” ಎಂದು ಗಂಭೀರವಾಗಿ ಆರೋಪ ಮಾಡಿ ಅದನ್ನೇ ಕಾರಣವಾಗಿಟ್ಟುಕೊಂಡು ಕುರಿ ಪ್ರತಾಪ್ ಅವರನ್ನು ನಾಮಿನೇಟ್ ಕೂಡ ಮಾಡಿದ್ದರು..

ಆದರೆ ಕುರಿ ಪ್ರತಾಪ್ ನಿಜಕ್ಕೂ ಕನ್ಫ್ಯೂಸ್ ಆಗ್ತಾರಾ? ಅವರು ಇರೋ ರೀತಿನೇ ಹೀಗಾ? ಅವರು ಡ್ರಾಮಾ ಮಾಡ್ತಿದ್ದಾರಾ? ಈ ಎಲ್ಲವೂ ಈ ಹಿಂದೆ ಅವರ ಜೊತೆ ಕೆಲಸ ಮಾಡಿದವರಿಗೆ ಖಂಡಿತ ತಿಳಿದಿರುತ್ತದೆ.. ಹೌದು ಕ್ಯಾಮರಾ ಮುಂದೆ ಎಷ್ಟೇ ಡ್ರಾಮಾ ಮಾಡಿದ್ರು.. ನಿಜ ಜೀವನದಲ್ಲಿ ಡ್ರಾಮಾ ಮಾಡಿಕೊಂಡೇ ಬದುಕೋಕಾಗಲ್ಲ.. ಕುರಿ ಪ್ರತಾಪ್ ಅವರ ಗುಣ ನಡವಳಿಕೆ ಬಗ್ಗೆ ಈ ಹಿಂದೆ ಅವರೊಟ್ಟಿಗೆ ಕೆಲಸ ಮಾಡಿದ್ದ ಶ್ವೇತಾ ಚಂಗಪ್ಪ ಅವರು ತೆರೆದಿಟ್ಟಿದ್ದಾರೆ ನೋಡಿ..

ಶ್ವೇತಾ ಚಂಗಪ್ಪ ಹಾಗೂ ಕುರಿ ಪ್ರತಾಪ್ ಅವರು ಮಜಾ ಟಾಕೀಸ್ ಗಿಂತ ಮೊದಲಿನಿಂದಲೂ ತಿಳಿದವರು.. ಮಜಾ ಟಾಕೀಸ್ ನಿಂದಾಗಿ ಬಹಳಷ್ಟು ವರ್ಷಗಳು ಒಟ್ಟಿಗೆ ಕೆಲಸ ಮಾಡುವಂತಾಯಿತು.. “ಕುರಿ ಪ್ರತಾಪ್ ಅವರು ಮಾಡುತ್ತಿರುವುದು ಡ್ರಾಮಾ ಅಲ್ಲ.. ಅವರು ಎಂದೂ ನಾಟಕ ಆಡಿದವರಲ್ಲ.. ಸದಾ ಕನ್ಫ್ಯೂಸ್ ಆಗೇ ಇರ್ತಾರೆ.. ಸೀನ್ ಪೇಪರ್ ಕೊಟ್ಟರೂ ಕೂಡ ಅವರು ಕನ್ಫ್ಯೂಸ್ ಆಗಿರ್ತಾರೆ.. ಕೊನೆಗೆ ಯಾವುದ್ಯಾವ್ಯ್ದೋ ಟ್ರಿಕ್ ಬಳಸಿ ನೆನಪಿಟ್ಟುಕೊಳ್ತಾರೆ.. ಕುರಿ ಪ್ರತಾಪ್ ಅವರು ಯಾರಿಗೂ ನೋವು ಮಾಡಿದವರಲ್ಲ..

ಕಾಮಿಡಿ ಮಾಡುವಾಗಲೂ ತಮ್ಮನ್ನು ತಾವು ಕಾಮಿಡಿ ಮಾಡಿಕೊಳ್ಳುತ್ತಾರೇ ಹೊರತು ಮತ್ತೊಬ್ಬರನ್ನು ಹೀಯಾಳಿಸುವುದಾಗಲಿ ಮತ್ತೊಂದಾಗಲಿ‌ ಮಾಡುವುದಿಲ್ಲ.. ಅವರು ದೂರದಲ್ಲಿ ಬರ್ತಿದ್ದಾರೆ ಎಂದು ಕಂಡ ಕೂಡಲೇ ನಮಗೆ ನಗು ಬರ್ತಿತ್ತು.. ಒಳ್ಳೆಯ ಗುಣದ ವ್ಯಕ್ತಿ.. ನಾವು ಬಿಗ್ ಬಾಸ್ ನೋಡುವುದೇ ಕುರಿ ಪ್ರತಾಪ್ ಅವರಿಗಾಗಿ.. ಈ ಬಾರಿ ಫೈನಲ್ ಗೆ ಖಂಡಿತ ಕುರಿ ಬರ್ತಾರೆ.. ಅವರೇ ಗೆದ್ದರೆ ನಮಗೆ ತುಂಬಾ ಖುಷಿ ಎನ್ನುತ್ತಾರೆ ಶ್ವೇತಾ ಚಂಗಪ್ಪ..

ಇನ್ನು ಮೊನ್ನೆ ಮೊನ್ನೆಯಷ್ಟೇ ಬಿಗ್ ಬಾಸ್ ಮನೆಗೆ ಬಂದಿದ್ದ ಕುರಿ ಅವರ ಪತ್ನಿ ಸರಿತಾ ಅವರೂ ಕೂಡ ಅದನ್ನೇ ಹೇಳಿದರು.. ಮನೆಯಲ್ಲೂ ಕೂಡ ಯಾವಾಗಲೂ ಕನ್ಫ್ಯೂಸ್ ಆಗ್ತಾರೆ.. ಅವರಿಂದ ನನಗೂ ಕೂಡ ಸ್ವಲ್ಪ ಸ್ವಲ್ಪ ಅದೇ ಗುಣ ಬಂದುಬಿಟ್ಟಿದೆ ಎಂದು ಗಂಡನ ಗುಣದ ಬಗ್ಗೆ ತಿಳಿಸಿದರು..

Source Credit RJ News Kannada

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ನಿರಂತರ ಅಭ್ಯಾಸ, ಸಮರ್ಪಣಾ ಭಾವದ ಹೋರಾಟದಿಂದ ಸಿ.ಎ. ಸಾಧ್ಯ: ಸಿ.ಎ. ಆದರ್ಶ್ ಶೆಣೈ

Fri Jan 17 , 2020
Source Credit NewsKannada.com ನಿರಂತರ ಅಭ್ಯಾಸ, ಸಮರ್ಪಣಾ ಭಾವದ ಹೋರಾಟದಿಂದ ಸಿ.ಎ. ಸಾಧ್ಯ: ಸಿ.ಎ. ಆದರ್ಶ್ ಶೆಣೈ Jan 17, 2020 09:29:35 AM (IST) Pin it Email https://nirantharanews.com/%e0%b2%95%e0%b3%81%e0%b2%b0%e0%b2%bf-%e0%b2%aa%e0%b3%8d%e0%b2%b0%e0%b2%a4%e0%b2%be%e0%b2%aa%e0%b3%8d-%e0%b2%a8%e0%b2%a1%e0%b2%b5%e0%b2%b3%e0%b2%bf%e0%b2%95%e0%b3%86-%e0%b2%ac%e0%b2%97%e0%b3%8d/#YWRhcnNoX21haW5 ಮೂಡುಬಿದಿರೆ: “ಕ್ಷಿಪ್ರವಾಗಿ ಬೆಳೆಯುತ್ತಿರುವ ವಾಣಿಜ್ಯ ಕ್ಷೇತ್ರದಲ್ಲಿ ಚಾರ್ಟರ್ಡ್ ಎಕೌಂಟೆಂಟ್‍ಗಳ ಬೇಡಿಕೆ ಬಹಳಷ್ಟಿದೆ. ಆದರೆ ಸಿ.ಎ. ಆಗುವುದು ಅಷ್ಟು ಸುಲಭದ ಮಾತಲ್ಲ. “ನಿರಂತರ ಅಭ್ಯಾಸ,  ಕಠಿಣ ಪರಿಶ್ರಮ, ಸಮರ್ಪಣಾ ಭಾವದ ಹೋರಾಟ ಮತ್ತು ನೈಪುಣ್ಯತೆ ಇದ್ದಲ್ಲಿ ಇದು ಸಾಧ್ಯವಾಗುವುದು.” ಎಂದು ಸಿ.ಎ. ಆದರ್ಶ್ ಶೆಣೈ ಹೇಳಿದರು. ಆಳ್ವಾಸ್ ಕಾಲೇಜಿನ ಪಿ.ಜಿ. ಸೆಮಿನಾರ್ ಹಾಲ್ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links