ಕುಮಾರಸ್ವಾಮಿಗೆ ಮೋಸ ಮಾಡಲ್ಲ : ರವೀಂದ್ರ ಶ್ರೀಕಂಠಯ್ಯ

Source Credit Oneindia.com

Mandya

oi-Gururaj S

|

ಮಂಡ್ಯ, ಡಿಸೆಂಬರ್ 17 : “ಮಂಡ್ಯದ ಜನರು ವಿಶ್ವಾಸದಿಂದ ಅಧಿಕಾರ ಕೊಟ್ಟಿದ್ದಾರೆ. ಜೆಡಿಎಸ್ ಪಕ್ಷವನ್ನು ಬಿಟ್ಟು ಎಚ್. ಡಿ. ಕುಮಾರಸ್ವಾಮಿ ಅವರಿಗೆ ಮೋಸ ಮಾಡುವುದಿಲ್ಲ” ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಹೇಳಿದರು.

ಶ್ರೀರಂಗಪಟ್ಟಣ ಕ್ಷೇತ್ರದ ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿ ಮಂಗಳವಾರ ಹಬ್ಬಿತ್ತು. ಮಾಧ್ಯಮಗಳ ಜೊತೆ ಮಾತನಾಡಿದ ಅವರು ಈ ಕುರಿತು ಸ್ಪಷ್ಟನೆಯನ್ನು ನೀಡಿದರು.

“ಮಂಡ್ಯದ ಜನರು ವಿಶ್ವಾಸದಿಂದ ಅಧಿಕಾರ ನೀಡಿದ್ದಾರೆ. ಜೆಡಿಎಸ್ ಪಕ್ಷವನ್ನು ಬಿಟ್ಟು ಜನರಿಗೆ, ಎಚ್. ಡಿ. ಕುಮಾರಸ್ವಾಮಿ ಅವರಿಗೆ ಮೋಸ ಮಾಡುವುದಿಲ್ಲ” ಎಂದು ರವೀಂದ್ರ ಶ್ರೀಕಂಠಯ್ಯ ಸ್ಪಷ್ಟಪಡಿಸಿದರು.

“ನಮ್ಮ ಕುಟುಂಬದಲ್ಲಿ ಮೂವರು ಶಾಸಕರಿದ್ದೇವೆ. ಜೆಡಿಎಸ್ ಪಕ್ಷದಿಂದ ನಾವು ಶಾಸಕರಾಗಿದ್ದೇವೆ. ಜೆಡಿಎಸ್ ಶಾಸಕರನ್ನು ಸೆಳೆಯುವ ಮೊದಲು ಕ್ಷೇತ್ರದಲ್ಲಿ ಒಂದು ಸ್ಥಾನ ಗೆದ್ದಿರುವ ಅವರು ಜಿಲ್ಲೆಯನ್ನು ಅಭಿವೃದ್ಧಿ ಮಾಡಲಿ” ಎಂದು ರವೀಂದ್ರ ಶ್ರೀಕಂಠಯ್ಯ ಸವಾಲು ಹಾಕಿದರು.

“ನಾನು ಜೆಡಿಎಸ್ ಪಕ್ಷವನ್ನು ಬಿಡುವುದಿಲ್ಲ. ಶಾಸಕ ಸ್ಥಾನದ ಅವಧಿ ಮುಗಿಯುವ ತನಕ ಜೆಡಿಎಸ್ ಪಕ್ಷದಲ್ಲಿಯೇ ಇರಲಿದ್ದೇನೆ. ಮುಂದಿನ ದಿನಗಳಲ್ಲಿ ಏನು ಬೇಕಾದರೂ ಆಗಬಹುದು. ಸದ್ಯಕ್ಕಂತೂ ಯಾವುದೇ ಬಿಜೆಪಿ ನಾಯಕರು ನಮ್ಮನ್ನು ಸಂಪರ್ಕಿಸಿಲ್ಲ” ಎಂದು ಹೇಳಿದರು.

ನಾಗಮಂಗಲ ಕ್ಷೇತ್ರದ ಶಾಸಕ ಸುರೇಶ್ ಗೌಡ, ರವೀಂದ್ರ ಶ್ರೀಕಂಠಯ್ಯ ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಇಬ್ಬರು ಸಹ ಮಂಡ್ಯ ಜಿಲ್ಲೆಯ ಜೆಡಿಎಸ್ ಶಾಸಕರಾಗಿದ್ದು, ಕೆ. ಆರ್. ಪೇಟೆ ಉಪ ಚುನಾವಣೆ ಫಲಿತಾಂಶದ ಬಳಿಕ ಬಿಜೆಪಿ ಸೇರುತ್ತಿದ್ದಾರೆ ಎಂಬ ಸುದ್ದಿ ಹಬ್ಬಿತ್ತು.

ಕನ್ನಡ ಮ್ಯಾಟ್ರಿಮೋನಿಯಲ್ಲಿ – ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್ . ಇಡೀ ದಿನ ತಾಜಾ ಸುದ್ದಿಗಳ ಪಡೆಯಿರಿ.

Allow Notifications

You have already subscribed

Source Credit Oneindia.com

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಅನಿರುದ್ಧ್ ಅವರು ಕೊಟ್ಟ ಒಂದು ಫೇಸ್ಬುಕ್ ಸವಾಲಿನಿಂದ ಏನಾಗಿದೆ ನೋಡಿ..

Tue Dec 17 , 2019
Source Credit RJ News Kannada ಕಿರುತೆರೆಯ ಸೆನ್ಸೇಷನ್ ಅನಿರುದ್ಧ್ ಅವರು ಒಂದು ರೀತಿ ಸಾಮಾಜಿಕ ಜಾಲತಾಣದ ಸೆನ್ಸೇಷನ್ ಎಂದೂ ಹೇಳಬಹುದು.. ತಮ್ಮ ಫೇಸ್ಬುಕ್ ಪೇಜ್ ಮೂಲಕ ಅಭಿಮಾನಿಗಳೊಂದಿಗೆ ಬೆರೆಯುವ ಅನಿರುದ್ಧ್ ಅವರು ಆಗಿಂದ್ದಾಗೆ ಫೇಸ್ಬುಕ್ ಸವಾಲುಗಳನ್ನು ನೀಡುತ್ತಿರುತ್ತಾರೆ.. ಅದರಂತೆ ಕೆಲ ದಿನಗಳ ಹಿಂದೆ ಗಿಡ ನೆಡುವ ಚಾಲೆಂಜ್ ನೀಡಲಾಗಿತ್ತು.. ಅದು ದೊಡ್ಡ ಮಟ್ಟದಲ್ಲಿ ಯಶಸ್ವಿಯೂ ಆಗಿತ್ತು.. ನಿನ್ನೆ ಸರ್ಕಾರಿ ಶಾಲೆಯ ಮಕ್ಕಳಿಗೆ ಒಂದು ಪುಸ್ತಕ ಹಾಗೂ ಪೆನ್ ಕೊಟ್ಟು ಫೋಟೋ ಹಾಕಲು ತಿಳಿಸಿದ್ದರು.. Pin it Email https://nirantharanews.com/%e0%b2%95%e0%b3%81%e0%b2%ae%e0%b2%be%e0%b2%b0%e0%b2%b8%e0%b3%8d%e0%b2%b5%e0%b2%be%e0%b2%ae%e0%b2%bf%e0%b2%97%e0%b3%86-%e0%b2%ae%e0%b3%8b%e0%b2%b8-%e0%b2%ae%e0%b2%be%e0%b2%a1%e0%b2%b2%e0%b3%8d%e0%b2%b2/#UGhvdG9HcmlkXzE ಆದರೆ ಅನಿರುದ್ಧ್ ಅವರು […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links