ಕಳಸಾ ಬಂಡೂರಿ ಹೋರಾಟಗಾರರಿಂದ ಪ್ರಧಾನಿ ಮೋದಿ ಪ್ರತಿಕೃತಿ ದಹನ

Source Credit Oneindia.com

Hubballi

oi-Jyothi Devangamath

By ಹುಬ್ಬಳ್ಳಿ ಪ್ರತಿನಿಧಿ

|

ಹುಬ್ಬಳ್ಳಿ, ಜನವರಿ 03: ಉತ್ತರ ಕರ್ನಾಟಕ ಭಾಗದಲ್ಲಿ ನೆರೆ ಪರಿಹಾರ ವಿತರಣೆಯಲ್ಲಿ ವಿಳಂಬವಾಗಿರುವುದನ್ನು ಖಂಡಿಸಿ ಕೇಂದ್ರ ಸರಕಾರದ ವಿರುದ್ಧ ಕಳಸಾ ಬಂಡೂರಿ ರೈತ ಹೋರಾಟ ಸಮಿತಿಯಿಂದ ಪ್ರಧಾನಿ ನರೇಂದ್ರ ಮೋದಿ ಪ್ರತಿಕೃತಿ ದಹನ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು.

ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪ್ರಧಾನಿ ಪ್ರತಿಕೃತಿ ದಹಿಸಿದ ಪ್ರತಿಭಟನಾಕಾರರು, ಉತ್ತರ ಕರ್ನಾಟಕದಲ್ಲಿ ಅತಿವೃಷ್ಠಿಯಿಂದ ಹಲವಾರು ಕುಟುಂಬಗಳು ಮನೆ ಕಳೆದುಕೊಂಡಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ ಎಂದರು.

ಆದರೆ ಇದರ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಉತ್ತರ ಕರ್ನಾಟಕದ ಬಗ್ಗೆ ನಿಷ್ಕಾಳಜಿ ತೋರುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯಕ್ಕೆ ಪರಿಹಾರ ನೀಡದೇ ಮಲತಾಯಿ ಧೋರಣೆ ತೋರಿಸಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.

ನಿನ್ನೆ ತುಮಕೂರಿನಲ್ಲಿ ನಡೆದ ರೈತರಿಗೆ ಪಿಂಚಣಿ ಹಣ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿ, ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪರಿಹಾರದ ಬಗ್ಗೆ ಮನವಿ ಮಾಡಿದರೂ ಕೂಡ ಅದಕ್ಕೆ ಉತ್ತರ ನೀಡದೇ ಬೇಜವಾಬ್ದಾರಿ ತೋರಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರಕಾರ ಉತ್ತರ ಕರ್ನಾಟಕದ ಜನತೆಗೆ ಸ್ಪಂದನೆ ಮಾಡುವಲ್ಲಿ ವಿಫಲ‌ವಾಗಿದೆ. 45,000 ಕೋಟಿ ರೂ, ಅತೀವೃಷ್ಠಿಯಿಂದ ಹಾಳಾಗಿದ್ದು, ಸರಕಾರ ಕೇವಲ‌ ಕಾಟಾಚಾರಕ್ಕೆ 10,000 ರೂ, ಒಂದು ಕುಟುಂಬಕ್ಕೆ ನೀಡಿದೆ. ಇದು ಯಾವುದಕ್ಕೂ ಸಾಲುವುದಿಲ್ಲ ಎಂದು ಕಳಸಾ ಬಂಡೂರಿ ಹೋರಾಟಗಾರರು ಅಸಮಾಧಾನ ಹೊರಹಾಕಿದರು.

ಕೂಡಲೇ ಕೇಂದ್ರ ಸರ್ಕಾರ ಉತ್ತರ ಕರ್ನಾಟಕದ ಜನರ ಕಷ್ಟಕ್ಕೆ ಸ್ಪಂದಸಲಿ. ಇಲ್ಲವಾದರೇ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತೆ ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ – ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್ . ಇಡೀ ದಿನ ತಾಜಾ ಸುದ್ದಿಗಳ ಪಡೆಯಿರಿ.

Allow Notifications

You have already subscribed

Source Credit Oneindia.com

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಅತಿಯಾಗಿ ಒಳ್ಳೆದ್ ಮಾಡಕ್ ಹೋದ್ರೆ ಹಿಂಗೆ ಆಗೋದು..

Fri Jan 3 , 2020
Source Credit RJ News Kannada ಬಿಗ್ ಬಾಸ್ ಕನ್ನಡ ಈ ಸೀಸನ್ನಿನಲ್ಲಿ ಎರಡು ವಾರದ ಹಿಂದೆ ಒಟ್ಟಿಗಿದ್ದೋರು ಈಗ ಇನ್ನೊಬ್ಬರ ಜೊತೆ ಇರ್ತಾರೆ.. ಮೊದಲ ವಾರ ದೂರ ಇದ್ದೋರು ಇಂದು ಒಟ್ಟುಗೆ ಇದ್ದಾರೆ.. ಅವರ ಬಗ್ಗೆಯೇ ಅಂದು ಕೆಟ್ಟ ಮಾತನಾಡಿದ್ದವರು.. ಇಂದು ಹೊಗಳಿ ಅಟ್ಟಕ್ಕೇರಿಸ್ತಾವ್ರೆ.. ಎಷ್ಟೇ ಆದರೂ ಅದು ಬಿಗ್ ಬಾಸ್ ಆಟ ಬಿಡಿ.. Pin it Email https://nirantharanews.com/%e0%b2%95%e0%b2%b3%e0%b2%b8%e0%b2%be-%e0%b2%ac%e0%b2%82%e0%b2%a1%e0%b3%82%e0%b2%b0%e0%b2%bf-%e0%b2%b9%e0%b3%8b%e0%b2%b0%e0%b2%be%e0%b2%9f%e0%b2%97%e0%b2%be%e0%b2%b0%e0%b2%b0%e0%b2%bf%e0%b2%82%e0%b2%a6/#UGhvdG9HcmlkXzE ಆದರೆ ಈ ಸೀಸನ್ನಿನಲ್ಲಿ‌ ಮೊದಲಿನಿಂದಲೂ ಗ್ರೂಪಿಸಮ್ ನಡೆಯುತ್ತಿದ್ದ ವಿಷಯ ಎಲ್ಲರಿಗೂ ಗೊತ್ತು.. ಸದಸ್ಯರೂ ಕೂಡ ಬಹಿರಂಗವಾಗಿ ನಾನು ಆ ಗ್ರೂಪ್ ನಾನು […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links