ಕರೋನಾ ವೈರಸ್ ಪೀಡಿತ ವುಹಾನ್ ನಿಂದ ಮಾಲ್ಡೀವ್ಸ್ ಪ್ರಜೆಗಳ ರಕ್ಷಣೆ; ಭಾರತಕ್ಕೆ ಧನ್ಯವಾದ ಹೇಳಿದ ಅಧ್ಯಕ್ಷ ಸೋಲಿಹ್

Source Credit Kannada Prabha

Source : ANI

ನವದೆಹಲಿ: ಮಾರಣಾಂತಿಕ ಕರೋನಾ ವೈರಸ್ ಪೀಡಿತ ಚೀನಾದ ವುಹಾನ್ ನಿಂದ ಮಾಲ್ಡೀವ್ಸ್ ಪ್ರಜೆಗಳನ್ನು ರಕ್ಷಿಸಿದ ಭಾರತಕ್ಕೆ ಮಾಲ್ಡೀವ್ಸ್ ಅಧ್ಯಕ್ಷ ಇಬ್ರಾಹಿಂ ಮಹಮದ್ ಸೋಲಿಹ್ ಧನ್ಯವಾದ ಹೇಳಿದ್ದಾರೆ.

ಇಂದು ವೈರಸ್ ಪೀಡಿತ ವುಹಾನ್ ನಿಂದ ಭಾರತದ ಏರ್ ಇಂಡಿಯಾದ ಬೋಯಿಂಗ್ 747 ವಿಮಾನ 324 ಮಂದಿಯನ್ನು ಸುರಕ್ಷಿತವಾಗಿ ಭಾರತಕ್ಕೆ ರವಾನೆ ಮಾಡಿತ್ತು. ಈ ಪೈಕಿ 7 ಮಂದಿ ಮಾಲ್ಡೀವ್ಸ್ ಪ್ರಜೆಗಳಾಗಿದ್ದರು. ಇದೀಗ ಇದೇ ಕಾರಣಕ್ಕೆ ಮಾಲ್ಡೀವ್ಸ್ ಅಧ್ಯಕ್ಷ ಇಬ್ರಾಹಿಂ ಮಹಮದ್ ಸೋಲಿಹ್ ಭಾರತಕ್ಕೆ ಧನ್ಯವಾದ ಹೇಳಿದ್ದಾರೆ.

ಈ ಕುರಿತಂತೆ ಟ್ವೀಟ್ ಮಾಡಿರುವ ಮಾಲ್ಡೀವ್ಸ್ ಅಧ್ಯಕ್ಷ ಇಬ್ರಾಹಿಂ ಮಹಮದ್ ಸೋಲಿಹ್, ಕರೋನಾ ವೈರಸ್ ಪೀಡಿತ ಚೀನಾದ ವುಹಾನ್ ನಲ್ಲಿ ಅಪಾಯಕ್ಕೆ ಸಿಲುಕಿದ್ದ ಮಾಲ್ಡೀವ್ಸ್ ಪ್ರಜೆಗಳನ್ನು ಸುರಕ್ಷಿತ ಸ್ಶಳಕ್ಕೆ ರವಾನಿಸಲಾಗಿದೆ. ಹೀಗಾಗಿ ಭಾರತದ ಪ್ರಧಾನಿ ನರೇಂದ್ರ ಮೋದಿ, ವಿದೇಶಾಂಗ ಇಲಾಖೆ ಮತ್ತು ಭಾರತದ ವಿದೇಶಾಂಗ ಸಚಿವ ಜೈ ಶಂಕರ್ ಅವರಿಗೆ ಧನ್ಯವಾದ ಹೇಳುತ್ತೇನೆ. ಭಾರತದ ಈ ಕಾರ್ಯ ಮಾಲ್ಡೀವ್ಸ್ ಮತ್ತು ಭಾರತದ ನಡುವಿನ ಸೌಹಾರ್ಧ ಸಂಬಂಧಕ್ಕೆ ಉದಾಹರಣೆಯಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

Source Credit Kannada Prabha

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಮೂರು ದಿನದೊಳಗೆ ಸೋನಿಯಾ ಗಾಂಧಿ ಗುಣಮುಖರಾಗದಿದ್ದರೆ ದೇವಸ್ಥಾನಕ್ಕೆ ಪ್ರವೇಶ ಮಾಡುವುದಿಲ್ಲ – ಜನಾರ್ಧನ ಪೂಜಾರಿ ಶಪಥ

Mon Feb 3 , 2020
Source Credit TheMangaloreMirror.in ಮೂರು ದಿನದೊಳಗೆ ಸೋನಿಯಾ ಗಾಂಧಿ ಗುಣಮುಖರಾಗದಿದ್ದರೆ ದೇವಸ್ಥಾನಕ್ಕೆ ಪ್ರವೇಶ ಮಾಡುವುದಿಲ್ಲ – ಜನಾರ್ಧನ ಪೂಜಾರಿ ಶಪಥ ಮಂಗಳೂರು: ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವ ಕಾಂಗ್ರೇಸ್ ಅಧ್ಯಕ್ಷೆ ಸೋನಿಯಾಗಾಂಧಿಯವರ ಆರೋಗ್ಯಕ್ಕಾಗಿ ಕುದ್ರೋಳಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಹಿರಿಯ ಕಾಂಗ್ರೇಸ್ ಮುಖಂಡ ಜನಾರ್ಧನ ಪೂಜಾರಿ ಅವರು ಮೂರು ದಿನದೊಳಗೆ ಸೋನಿಯಾ ಗಾಂಧಿ ಗುಣಮುಖರಾಗದಿದ್ದರೆ ನಾನು ದೇವಸ್ಥಾನಕ್ಕೆ ಪ್ರವೇಶ ಮಾಡುವುದಿಲ್ಲ ಎಂದು ಶಪಥ ಮಾಡಿದರು. Pin it Email https://nirantharanews.com/%e0%b2%95%e0%b2%b0%e0%b3%8b%e0%b2%a8%e0%b2%be-%e0%b2%b5%e0%b3%88%e0%b2%b0%e0%b2%b8%e0%b3%8d-%e0%b2%aa%e0%b3%80%e0%b2%a1%e0%b2%bf%e0%b2%a4-%e0%b2%b5%e0%b3%81%e0%b2%b9%e0%b2%be%e0%b2%a8%e0%b3%8d/#eUg1QkFFQUFBQUF ಅನಾರೋಗ್ಯದಿಂದ ಬಳಲುತ್ತಿರುವ ಕಾಂಗ್ರೆಸ್ ಅಧಿನಾಯಕಿ, ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links