ಕರು ಕೊಂದು ತಿಂದ ಬೀದಿ ನಾಯಿಗಳು; ಓಡಾಡಲು ಭಯಪಡುತ್ತಿರುವ ಜನ

Source Credit Oneindia.com

Chitradurga

oi-Chidananda M

By ಚಿತ್ರದುರ್ಗ ಪ್ರತಿನಿಧಿ

|

ಚಿತ್ರದುರ್ಗ, ಡಿಸೆಂಬರ್ 27: ಬೀದಿ ನಾಯಿಗಳ ಹಾವಳಿಗೆ ಕೋಟೆನಾಡಿನ ಜನರು ರೋಸಿಹೋಗಿದ್ದಾರೆ. ಇಂದು ಬೆಳ್ಳಂಬೆಳಿಗ್ಗೆ ಕರುವೊಂದರ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿದ್ದು, ಜನ ಭಯಭೀತರಾಗಿ ತಿರುಗಾಡುವಂತೆ ಮಾಡಿದೆ.

ಜಿಲ್ಲೆಯ ಹಿರಿಯೂರು ನಗರದ ಶ್ರೀತೇರುಮಲ್ಲೇಶ್ವರ ದೇವಸ್ಥಾನದ ಮುಂಭಾಗ ಬೀದಿ ನಾಯಿಗಳನ್ನು ಕರುವಿನ ಮೇಲೆ ದಾಳಿ ನಡೆಸಿವೆ. ನೋಡ ನೋಡುತಿದ್ದಂತೆಯೇ ಕರುವಿನ ಮೇಲೆ ನಾಲ್ಕೈದು ಬೀದಿ ನಾಯಿಗಳು ದಾಳಿ ನಡೆಸಿ ಕರುವನ್ನು ಅರ್ಧಂಬರ್ಧ ತಿಂದು ಹಾಕಿವೆ.

ನಾಯಿಗಳು ಕರುವನ್ನು ರಸ್ತೆಗೆ ಎಳೆದು ತಂದು ದಾಳಿ ನಡೆಸಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೋ ನೋಡಿದ ಹಿರಿಯೂರು ನಾಗರಿಕರು ಬೀದಿ ನಾಯಿ ಹಾವಳಿ ತಡೆಗೆ ನಗರಸಭೆಯನ್ನು ಒತ್ತಾಯಿಸಿದ್ದಾರೆ.

ಬೆಳಗ್ಗಿನ ಜಾವ ಹಾಲು ತರಲು ಹೋಗುವವರ ಮೇಲೂ ಬೀದಿ ನಾಯಿಗಳು ಎರಗಿ ಬೀಳುತ್ತಿದ್ದು, ಕರುವನ್ನು ತಿಂದು ಬಿಟ್ಟಿರುವ ದೃಶ್ಯ ಕಂಡು ಜನರು ಇನ್ನಷ್ಟು ಆತಂಕಗೊಂಡಿದ್ದಾರೆ.

“ಬೀದಿ ನಾಯಿಗಳ ಹಾವಳಿ ಬಗ್ಗೆ ಸಾಕಷ್ಟು ಬಾರಿ ನಗರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು” ಎಂದು ಹಿರಿಯೂರಿನ ಸಾರ್ವಜನಿಕರು ನಗರಸಭೆ ಅಧಿಕಾರಿಗಳನ್ನ ಒತ್ತಾಯಿಸಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ – ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್ . ಇಡೀ ದಿನ ತಾಜಾ ಸುದ್ದಿಗಳ ಪಡೆಯಿರಿ.

Allow Notifications

You have already subscribed

Source Credit Oneindia.com

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಎಂಟಿಬಿ ನಾಗರಾಜ್ ಕೂಡ ಸಚಿವರಾಗ್ತಾರೆ; ಬಿಸಿ ಪಾಟೀಲ್

Sat Dec 28 , 2019
Source Credit Oneindia.com Pin it Email https://nirantharanews.com/%e0%b2%95%e0%b2%b0%e0%b3%81-%e0%b2%95%e0%b3%8a%e0%b2%82%e0%b2%a6%e0%b3%81-%e0%b2%a4%e0%b2%bf%e0%b2%82%e0%b2%a6-%e0%b2%ac%e0%b3%80%e0%b2%a6%e0%b2%bf-%e0%b2%a8%e0%b2%be%e0%b2%af%e0%b2%bf%e0%b2%97/#Wg== Hubballi oi-Lekhaka By ಹುಬ್ಬಳ್ಳಿ ಪ್ರತಿನಿಧಿ | Published: Saturday, December 28, 2019, 15:29 [IST] ಹುಬ್ಬಳ್ಳಿ, ಡಿಸೆಂಬರ್ 28: ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ ಎಲ್ಲ ಅರ್ಹ ಶಾಸಕರಿಗೂ ಸಚಿವ ಸ್ಥಾನ ಸಿಗೋದು ಬಹುತೇಕ ಖಾತ್ರಿಯಾಗಿದೆ. ಆದ್ರೆ, ಹೊಸಕೋಟೆ ಉಪಚುನಾವಣೆಯಲ್ಲಿ ಸೋಲು ಅನುಭವಿಸಿರುವ ಎಂಟಿಬಿ ನಾಗರಾಜ ಕೂಡ ಸಚಿವರು ಆಗುತ್ತಾರೆ ಎಂದು ಹಿರೇಕೆರೂರು ಶಾಸಕ ಬಿಸಿ ಪಾಟೀಲ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಉಪಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಶಾಸಕರು ಮಾತ್ರ ಸಚಿವರು […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links