ಒಂದು ದಿನದಲ್ಲಿ ‘ಒಡೆಯ’ ಸಿನಿಮಾ ಗಳಿಸಿದ ಹಣ ಎಷ್ಟು?

Source Credit Filmibeat.com

ಮೊದಲ ದಿನ 3 ಕೋಟಿ?

‘ಒಡೆಯ’ ಸಿನಿಮಾ ಮೊದಲ ದಿನ 3 ಕೋಟಿ ಗಳಿಕೆ ಮಾಡಿದೆ ಎನ್ನಲಾಗುತ್ತಿದೆ. ಫಸ್ಟ್ ಡೇ ಬಹುತೇಕ ಎಲ್ಲ ಕಡೆ ಹೌಸ್ ಫುಲ್ ಪ್ರದರ್ಶನ ಆಗಿದೆ. ಸಿನಿಮಾದ ಕ್ರೇಜ್ ಕಡಿಮೆ ಇದ್ದ ಕಾರಣ ಶೋಗಳ ಸಂಖ್ಯೆ ದಾಖಲೆಯ ಮಟ್ಟದಲ್ಲಿ ಇರಲಿಲ್ಲ. ದರ್ಶನ್ ಸಿನಿಮಾ ಎನ್ನುವ ಕಾರಣಕ್ಕೆ ಅಭಿಮಾನಿಗಳು ಮೊದಲ ದಿನ ಮಿಸ್ ಇಲ್ಲದೆ ಸಿನಿಮಾ ನೋಡಿದ್ದಾರೆ. ಹೀಗಾಗಿ ಸಿನಿಮಾ ಮೂರು ಕೋಟಿ ಗಳಿಸಲು ಮಾತ್ರ ಸಾಧ್ಯವಾಗಿದೆ.

ಹಳೆಯ ಸಿನಿಮಾಗಿಂತ ಕಡಿಮೆ

ದರ್ಶನ್ ಅವರ ಹಿಂದಿನ ಸಿನಿಮಾಗಳು ಅಂದರೆ, ‘ಕುರುಕ್ಷೇತ್ರ’ ಹಾಗೂ ‘ಯಜಮಾನ’ ಸಿನಿಮಾಗಳಿಗೆ ಹೋಲಿಕೆ ಮಾಡಿದರೆ, ಈ ಸಿನಿಮಾದ ಮೊದಲ ದಿನದ ಕಲೆಕ್ಷನ್ ಕಡಿಮೆ ಆಗಿದೆ. 3 ಕೋಟಿ ಸಣ್ಣ ಮೊತ್ತ ಅಲ್ಲದೆ ಇದ್ದರೂ ದರ್ಶನ್ ಸ್ಟಾರ್ ಪಟ್ಟಕ್ಕೆ, ಅವರ ಹಿಂದಿನ ಸಿನಿಮಾಗಳ ದಾಖಲೆಗೆ ಹೋಲಿಸಿ ನೋಡಿದರೆ, ಕಲೆಕ್ಷನ್ ಪ್ರಮಾಣ ಇಳಿದಿದೆ ಎನ್ನುವುದು ಕಾಣುತ್ತಿದೆ.

‘ಯಜಮಾನ’, ‘ಕುರುಕ್ಷೇತ್ರ’ ಕಲೆಕ್ಷೆನ್ ಏನು?

ದರ್ಶನ್ ನಟಿಸಿದ್ದ ಪೌರಾಣಿಕ ಸಿನಿಮಾ ‘ಕುರುಕ್ಷೇತ್ರ’ ಮೊದಲ ದಿನ 8 ರಿಂದ 10 ಕೋಟಿ ಗಳಿಕೆ ಮಾಡಿತ್ತು. ‘ಯಜಮಾನ’ ಸಿನಿಮಾ 7 ರಿಂದ 8 ಕೋಟಿ ಕಲೆಕ್ಷನ್ ಮಾಡಿತ್ತು. ಈ ಎರಡು ಸಿನಿಮಾಗಳು ಈ ವರ್ಷದ ದೊಡ್ಡ ಹಿಟ್ ಸಿನಿಮಾಗಳಿಗಿವೆ. ‘ಕುರುಕ್ಷೇತ್ರ’ ಹಾಗೂ ‘ಯಜಮಾನ’ ಸಿನಿಮಾಗಳು ನೂರು ದಿನ ಚಿತ್ರಮಂದಿರದಲ್ಲಿ ಪ್ರದರ್ಶನ ಕಂಡಿವೆ.

‘ಒಡೆಯ’ ಸಿನಿಮಾ ಹೇಗಿದೆ?

‘ಒಡೆಯ’ ಮಾಸ್ ಹಾಗೂ ಕ್ಲಾಸ್ ಸಿನಿಮಾ. ಇದು ‘ವೀರಂ’ ಸಿನಿಮಾ ರಿಮೇಕ್ ಆಗಿದ್ದು, ಬೇರೆ ಅಂಶಗಳನ್ನು ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಕಾಮಿಡಿ, ಲವ್, ಅಣ್ಣತಮ್ಮಂದಿರ ಸಂಬಂಧ ತುಂಬಿರುವದ ಕಮರ್ಷಿಯಲ್ ಪ್ಯಾಕೇಜ್ ‘ಒಡೆಯ’.ದರ್ಶನ್ ಅಭಿಮಾನಿಗಳು, ಕಮರ್ಷಿಯಲ್ ಸಿನಿಮಾ ಇಷ್ಟ ಪಡುವವರು, ಹೊಡೆದಾಟ ನೋಡಬೇಕು ಎನ್ನುವವರು ‘ಒಡೆಯ’ನ ದರ್ಶನ ಮಾಡಬಹುದು. ಹೊಸತನದ ನಿರೀಕ್ಷೆ ಇಲ್ಲದೆ ಚಿತ್ರಮಂದಿರಕ್ಕೆ ಹೋದರೆ ನಿಮಗೆ ಮನರಂಜನೆ ಸಿಗಬಹುದು.

Source Credit Filmibeat.com

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಕ್ರಿಕೆಟಿಗ ರಿಷಬ್ ಪಂತ್ ಜೊತೆ 'ಐರಾವತ' ನಾಯಕಿ ಡಿನ್ನರ್ ಪಾರ್ಟಿ!

Fri Dec 13 , 2019
Source Credit Filmibeat.com Pin it Email https://nirantharanews.com/%e0%b2%92%e0%b2%82%e0%b2%a6%e0%b3%81-%e0%b2%a6%e0%b2%bf%e0%b2%a8%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%92%e0%b2%a1%e0%b3%86%e0%b2%af-%e0%b2%b8%e0%b2%bf%e0%b2%a8%e0%b2%bf%e0%b2%ae/#cmVkLmpwZw== Gossips oi-Bharath Kumar K | Published: Thursday, December 12, 2019, 21:15 [IST] Pin it Email https://nirantharanews.com/%e0%b2%92%e0%b2%82%e0%b2%a6%e0%b3%81-%e0%b2%a6%e0%b2%bf%e0%b2%a8%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%92%e0%b2%a1%e0%b3%86%e0%b2%af-%e0%b2%b8%e0%b2%bf%e0%b2%a8%e0%b2%bf%e0%b2%ae/#eDQ4MA== Rishab Pant dinner date with Urvashi Rautela | RISHAB PANT | URVASHI RAUTELA | ONEINDIA KANNADA ಕ್ರಿಕೆಟಿಗರ ಜೊತೆ ಬಾಲಿವುಡ್ ನಟಿಯರು ಸುತ್ತಾಡುವುದು, ಡೇಟ್ ಮಾಡುವುದು ಹೆಚ್ಚು. ಈಗಲೂ ಆ ಟ್ರೆಂಡ್ ಮುಂದುವರಿದಿದೆ. ಈಗ ಯುವ ಆಟಗಾರ ರಿಷಬ್ ಪಂತ್ ಸರದಿ. ವೆಸ್ಟ್ ಇಂಡೀಸ್ ತಂಡದ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links