ಐವನ್ ಡಿಸೋಜಾ ಅವರನ್ನು ಗಡಿಪಾರು ಮಾಡಲು ನಾವು ಉಪವಾಸ ಕೂರಬೇಕಾಗುತ್ತದೆ- ನಳಿನ್ ಕುಮಾರ್ ಕಟೀಲ್

Source Credit TheMangaloreMirror.in

ಐವನ್ ಡಿಸೋಜಾ ಅವರನ್ನು ಗಡಿಪಾರು ಮಾಡಲು ನಾವು ಉಪವಾಸ ಕೂರಬೇಕಾಗುತ್ತದೆ- ನಳಿನ್ ಕುಮಾರ್ ಕಟೀಲ್

ಮಂಗಳೂರು ಜನವರಿ 7: ಮಂಗಳೂರಿನಲ್ಲಿ ಶಾಂತಿ ಕಾಪಾಡಿದ್ದೇ ಐವನ್ ಡಿಸೋಜಾ ಹಾಗಾಗಿ ಅವರನ್ನೇ ಗಡಿಪಾರು ಮಾಡಲು ನಾವು ಉಪವಾಸ ಕೂರಬೇಕಾಗುತ್ತದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ವ್ಯಂಗ್ಯವಾಡಿದ್ದಾರೆ.

ಸುರತ್ಕಲ್ ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಪರವಾಗಿ ಪೋಸ್ಟ್ ಕಾರ್ಡ್ ಸಹಿ ಅಭಿಯಾನದಲ್ಲಿ ಭಾಗವಹಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಮಂಗಳೂರಿಗೆ ಗೃಹ ಸಚಿವ ಅಮಿತ್ ಶಾ ಬಂದರೆ ಶಾಂತಿ ಕದಡುತ್ತದೆ, ಅದಕ್ಕಾಗಿ ಉಪವಾಸ ಸತ್ಯಾಗ್ರಹ ಮಾಡುತ್ತೇನೆ ಎಂಬ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ ಹೇಳಿಕೆಗೆ ಪ್ರತಿಕ್ರಿಯಿಸಿದರು.

ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಜನಜಾಗೃತಿ ಮೂಡಿಸಲು ರಾಜ್ಯದಲ್ಲಿ ಮೂರು ಕಡೆ ಬೃಹತ್ ಸಮಾವೇಶ ಮಾಡಲು ನಿರ್ಧರಿಸಲಾಗಿದೆ. ಮಂಗಳೂರು, ಹುಬ್ಬಳ್ಳಿ, ಬೆಂಗಳೂರಿನಲ್ಲಿ ಈ ಸಮಾವೇಶ ನಡೆಯಲಿದೆ. ಸಿಂಧನೂರಿನಲ್ಲಿ ಬಾಂಗ್ಲಾದೇಶಿಯರು, ಪಾಕಿಸ್ತಾನಿಯರು ಇರುವ ಕಾರಣಕ್ಕೆ ಅಲ್ಲಿ ಕೂಡ ಸಮಾವೇಶ ಚಿಂತನೆ ಇದೆ. ಇನ್ನುಳಿದಂತೆ ಜಿಲ್ಲಾಕೇಂದ್ರಗಳಲ್ಲಿ ಸಮಾವೇಶ ನಡೆಯಲಿದೆ. ಯಾವ ಸಮಾವೇಶದಲ್ಲಿ ಯಾರು ಪಾಲ್ಗೊಳ್ಳುತ್ತಾರೆ ಎಂದು ಇನ್ನೂ ತೀರ್ಮಾನ ಆಗಿಲ್ಲ ಎಂದು ತಿಳಿಸಿದರು.

Facebook Comments

comments

Source Credit TheMangaloreMirror.in

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ರಾತ್ರೋ ರಾತ್ರಿ ಕಿಚ್ಚನ ಮನೆಗೆ ಬಂದು BMW M5 ಕಾರ್ ಉಡುಗೊರೆ ಕೊಟ್ಟ ಸಲ್ಮಾನ್ ಖಾನ್‌.‌.. ಕಾರ್ ಬೆಲೆ ಎಷ್ಟು ಕೋಟಿ ಗೊತ್ತಾ?

Tue Jan 7 , 2020
Source Credit RJ News Kannada ಬಾಲಿವುಡ್ ಬಾಯಿಜಾನ್ ಸಲ್ಮಾನ್ ಖಾನ್ ಅವರ ದಬಾಂಗ್ 3 ಬಾಕ್ಸ್ ಆಫೀಸಿನಲ್ಲಿ ಸದ್ದು ಮಾಡಿದ್ದಷ್ಟೇ ಅಲ್ಲದೆ ಖಡಕ್ ವಿಲನ್ ಆಗಿ ಕಾಣಿಸಿಕೊಂಡ ಕಿಚ್ಚ ಸುದೀಪ್ ಅವರಿಗೂ ಬಿ ಟೌನ್ ನಲ್ಲಿ ಒಳ್ಳೆಯ ಹೆಸರನ್ನು ತಂದುಕೊಟ್ಟಿತ್ತು.. Pin it Email https://nirantharanews.com/%e0%b2%90%e0%b2%b5%e0%b2%a8%e0%b3%8d-%e0%b2%a1%e0%b2%bf%e0%b2%b8%e0%b3%8b%e0%b2%9c%e0%b2%be-%e0%b2%85%e0%b2%b5%e0%b2%b0%e0%b2%a8%e0%b3%8d%e0%b2%a8%e0%b3%81-%e0%b2%97%e0%b2%a1%e0%b2%bf%e0%b2%aa/#UGhvdG9HcmlkXzE ಈ ಸಿನಿಮಾದ ಮೂಲಕ ಕಿಚ್ಚ ಹಾಗೂ ಸಲ್ಮಾನ್ ಖಾನ್ ಬಹಳ ಅತ್ಮೀಯರಾದರು.. ಈ ಮುನ್ನ ಬೆಂಗಳೂರಿಗೆ ಸಿನಿಮಾದ ಪ್ರಮೋಷನ್ ಸಮಯದಲ್ಲಿ ಸಲ್ಮಾನ್ ಖಾನ್ ಬಂದಾಗ ಕಿಚ್ಚನ ಮನೆಗೆ ಭೇಟಿ ನೀಡಿದ್ದರು.. Pin it Email https://nirantharanews.com/%e0%b2%90%e0%b2%b5%e0%b2%a8%e0%b3%8d-%e0%b2%a1%e0%b2%bf%e0%b2%b8%e0%b3%8b%e0%b2%9c%e0%b2%be-%e0%b2%85%e0%b2%b5%e0%b2%b0%e0%b2%a8%e0%b3%8d%e0%b2%a8%e0%b3%81-%e0%b2%97%e0%b2%a1%e0%b2%bf%e0%b2%aa/#UGhvdG9HcmlkXzE […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links