ಐಎನ್ಎಸ್ ವಿಕ್ರಮಾದಿತ್ಯ ವೀಕ್ಷಣೆಗೆ ಹರಿದು ಬಂದ ಜನಸಾಗರ

Source Credit Oneindia.com

ವಿವಿಧ ಯುದ್ಧ ನೌಕೆಗಳ ಬಗ್ಗೆ ಮಾಹಿತಿ

ನೌಕಾನೆಲೆ ಒಳಭಾಗದಲ್ಲಿ ಸಾರ್ವಜನಿಕರಿಗೆ ಮೊಬೈಲ್, ಕ್ಯಾಮೆರಾ ನಿಷೇಧಿಸಲಾಗಿತ್ತು. ವಿವಿಧ ಯುದ್ಧ ನೌಕೆಗಳ ಬಗ್ಗೆ ಮಾಹಿತಿ ನೀಡಲು ಮಾರ್ಗದರ್ಶಿಗಳನ್ನು ನೇಮಿಸಲಾಗಿತ್ತು.

ಐಎನ್‌ಎಸ್ ವಿಕ್ರಮಾದಿತ್ಯ ನೌಕೆಯು 44,500 ಟನ್ ತೂಕ ಇದ್ದು, 284 ಮೀಟರ್ ಉದ್ದ, 60 ಮೀಟರ್ ಎತ್ತರ ಇದೆ. 34 ಯುದ್ಧ ವಿಮಾನ ಮತ್ತು ಹೆಲಿಕಾಪ್ಟರ್‌ಗಳನ್ನು ಹೊರುವ ಸಾಮರ್ಥ್ಯವನ್ನು ಇದು ಹೊಂದಿದೆ.

1,600 ಸಿಬ್ಬಂದಿ ಇದರಲ್ಲಿ ಕಾರ್ಯನಿರ್ವಹಣೆ

1,600 ಸಿಬ್ಬಂದಿ ಇದರಲ್ಲಿ ಕಾರ್ಯನಿರ್ವಹಿಸುತ್ತಾರೆ. ಒಮ್ಮೆ ಇಂಧನ ಭರ್ತಿಯಾದರೆ 13,000 ಕಿ.ಮೀ. ದೂರವನ್ನು ಇದು ಕ್ರಮಿಸುತ್ತದೆ. 2013ರ ನವೆಂಬರ್‌ನಲ್ಲಿ ಭಾರತೀಯ ನೌಕಾಪಡೆ ಸೇವೆಗೆ ಇದು ಪಾದಾರ್ಪಣೆ ಮಾಡಿತು.

ಸಾರ್ವಜನಿಕರು ಸಿಬ್ಬಂದಿ -ಮಾತಿನ ಚಕಮಕಿ

ವಿಕ್ರಮಾದಿತ್ಯದ ವೀಕ್ಷಣೆಗಾಗಿ ಬೆಳಿಗ್ಗೆ 7 ಗಂಟೆಯಿಂದಲೇ ನೌಕಾನೆಲೆಯ ಮುಖ್ಯ ದ್ವಾರದ ಬಳಿ ಸಾರ್ವಜನಿಕರು ಸಾಲುಗಟ್ಟಿದ್ದರು. 9 ಗಂಟೆಯ ಸುಮಾರಿಗೆ ನೌಕಾ ಅಧಿಕಾರಿಗಳು ಪ್ರವೇಶ ಚೀಟಿ ವಿತರಿಸಲು ಪ್ರಾರಂಭಿಸಿದ್ದರು. ಸುಮಾರು ಐದು ಸಾವಿರ ಜನರು ಈ ವೇಳೆ ವೀಕ್ಷಣೆಗೆ ಬರಲಿದ್ದಾರೆ ಎಂದು ಅಂದಾಜಿಸಿದ್ದ ನೌಕಾ ಅಧಿಕಾರಿಗಳ ನಿರೀಕ್ಷೆಗೂ ಮೀರಿ ಜನರು ಬಂದಿದ್ದರು. ಇದರಿಂದಾಗಿ ಮಧ್ಯಾಹ್ನ 1 ಗಂಟೆಯ ಬಳಿಕ ಪ್ರವೇಶ ಚೀಟಿ ವಿತರಣೆ ಸ್ಥಗಿತಗೊಳಿಸಲಾಯಿತು. ಜನಸಂದಣಿಯನ್ನು ನಿಯಂತ್ರಿಸಲು ಸಾಧ್ಯವಾಗದ ಕಾರಣ ಪ್ರವೇಶಾವಕಾಶವನ್ನು ಮಧ್ಯಾಹ್ನವೇ ನಿರ್ಬಂಧಿಸಲಾಯಿತು.

ಹಲವರು ನಿರಾಸೆಯಿಂದಾಗಿ ವಾಪಸ್ಸಾದವರು

ಇದರಿಂದಾಗಿ ವೀಕ್ಷಣೆಗೆ ಬಂದಿದ್ದವರು ನಿರಾಸೆಗೊಂಡು ಕೆಲವರು ವಾಪಸ್ಸಾದರೆ, ಇನ್ನು ಕೆಲವರು ಬಿಸಿಲಿನಲ್ಲಿ ನಿಂತು ಕಾಯುವಂತೆ ಮಾಡಿದ್ದಕ್ಕೆ ಅಧಿಕಾರಿಗಳ ವಿರುದ್ಧ ಅಸಮಾಧಾನಗೊಂಡರು. ಈ ವೇಳೆ ಅಧಿಕಾರಿಗಳು ಹಾಗೂ ಸಾರ್ವಜನಿಕರ ನಡುವೆ ಮಾತಿನ ಚಕಮಕಿ ಕೂಡ ನಡೆಯಿತು. ನಿರಾಸೆಯಿಂದಾಗಿ ವಾಪಸ್ಸಾದವರು ಹೆದ್ದಾರಿಯಲ್ಲಿ ಬಂಡೆಗಲ್ಲುಗಳ ಮೇಲೆ ನಿಂತು, ನೌಕಾನೆಲೆಯ ಕಾಂಪೌಂಡ್ ಗೋಡೆಯಿಂದ ವಿಕ್ರಮಾದಿತ್ಯ ವೀಕ್ಷಿಸಿದರು.

Source Credit Oneindia.com

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

"ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಆರೋಗ್ಯ ಸ್ಥಿರ"

Sun Dec 22 , 2019
Source Credit Oneindia.com Pin it Email https://nirantharanews.com/%e0%b2%90%e0%b2%8e%e0%b2%a8%e0%b3%8d%e0%b2%8e%e0%b2%b8%e0%b3%8d-%e0%b2%b5%e0%b2%bf%e0%b2%95%e0%b3%8d%e0%b2%b0%e0%b2%ae%e0%b2%be%e0%b2%a6%e0%b2%bf%e0%b2%a4%e0%b3%8d%e0%b2%af-%e0%b2%b5%e0%b3%80%e0%b2%95/#eGdfYXJyb3cuanB Udupi oi-Lekhaka By ಉಡುಪಿ ಪ್ರತಿನಿಧಿ | Published: Sunday, December 22, 2019, 17:03 [IST] ಉಡುಪಿ, ಡಿಸೆಂಬರ್.22: ಪೇಜಾವರ ಮಠದ ಶ್ರೀ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಆರೋಗ್ಯ ಸ್ಥಿರವಾಗಿದೆ ಎಂದು ಮಣಿಪಾಲದ ಕೆಎಂಸಿ ಆಸ್ಪತ್ರೆ ವೈದ್ಯರು ಮಾಹಿತಿ ನೀಡಿದ್ದಾರೆ. ಕಳೆದು ಮೂರು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದ ಶ್ರೀಗಳು ಚಿಕಿತ್ಸೆಗೆ ನಿಧಾನವಾಗಿ ಸ್ಪಂದಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಉಸಿರಾಟದ ಸಮಸ್ಯೆಯಿಂದ ಕೆಎಂಸಿಗೆ ದಾಖಲಾಗಿದ್ದ ಶ್ರೀಗಳು ಸದ್ಯ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಶ್ರೀಗಳಿಗೆ ವೆಂಟಿಲೇಟರ್ ಅಳವಡಿಸಿ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links