ಎಲ್ಲವೂ ಮುಗಿದ ಮೇಲೆ ಮತ್ತೆ ಈ ಲೇಖನ ಬರೆದದ್ದು ಏಕೆ?

Source Credit Vishwavani.news

ಪ್ರತಿಕ್ರಿಯೆ

ವಸಂತ ಗ ಭಟ್

ಕೆಲವೊಂದು ವಿಷಯಗಳನ್ನ ನಿರ್ಲಕ್ಷಿಸಿಬಿಡಬೇಕು, ಅದರ ಕುರಿತು ಗಮನಹರಿಸಿದಷ್ಟೂ ನಮ್ಮ ಮನಸ್ಸೇ ಹಾಳಾಗುವುದು. ಅದರಲ್ಲೂ ಯಾರಾದರೂ ಉದ್ದೇಶಪೂರ್ವಕವಾಗಿ ನಿಮ್ಮ ಮನಸ್ಸಿಿಗೆ ನೋವುಂಟು ಮಾಡುವಂತೆ ಮಾತನಾಡಿದರೆ ಅದಕ್ಕೆೆ ಅತ್ಯಂತ ಸರಿಯಾದ
ಉತ್ತರವೆಂದರೆ ಅದು ದಿವ್ಯ ನಿರ್ಲಕ್ಷ್ಯ. ಏಕೆಂದರೆ ನೀವು ಅಂತಹವರ ಮಾತಿಗೆ ತಿರುಗಿ ಮಾತನಾಡಿದಷ್ಟೂ ಅವರಿಗೆ ವಿಕೃತ ಆನಂದ.

ಮಾತಿಗೆ ಮಾತು ಬೆಳಸಿ ನಿಮ್ಮ ಮರ್ಯಾದೆಯನ್ನುಎಷ್ಟು ಸಾಧ್ಯವೋ ಅಷ್ಟು ಕಳೆದು ಬಿಡುತ್ತಾಾರೆ. ಹಾಗಾಗಿ ವೈಯಕ್ತಿಿಕವಾಗಿ ನನ್ನ ಮನಸ್ಸಿಿಗೆ ಯಾವಾಗ ಘಾಸಿಯಾದರೂ, ನಾನು ಮೌನವಹಿಸಿಬಿಡುತ್ತೇನೆ. ಇದೆ ತಿಂಗಳ 20ರಂದು ಪ್ರಕಟವಾದ ಜಯವೀರ ಗೌಡರ ಲೇಖನ ‘ಪ್ರಶ್ನೆೆ ಮಾಡದಿರಲು ಬ್ರಾಾಹ್ಮಣರೇನು ಮೇಲಿಂದ ಇಳಿದು ಬಂದವರಾ?’ ಓದಿದ ನಂತರ ನನ್ನಂತಹ ಸಾವಿರಾರು ಸಜ್ಜನ ಬ್ರಾಾಹ್ಮಣರ ಮನಸ್ಸಿಿಗೆ ನೋವಾಗಿದೆ.

ಈ ಲೇಖನದ ಬಗ್ಗೆೆ ಹಲವಾರು ಭಿನ್ನಾಾಭಿಪ್ರಾಾಯಗಳಿದ್ದರೂ ನಾನು ಅದಕ್ಕೆೆ ಉತ್ತರವಾಗಿ ಯಾವುದೇ ಲೇಖನವನ್ನು ಬರೆಯಬಾರದು ಅಂತಲೇ ನಿರ್ಧರಿಸಿದ್ದೆ. ಕಾರಣ ಜಯವೀರರ ಲೇಖನಗಳನ್ನು ಹಿಂದಿನಿಂದಲು ಓದಿಕೊಂಡು ಬಂದಿರುವ ನನಗೆ ಅವರು ಯಾವೊಂದು ಧರ್ಮ ಅಥವಾ ಜಾತಿಯ ಪರ ಎಂಬ ಭಾವನೆಯಿಲ್ಲ. ಆದರೆ ಅವರ ಲೇಖನವನ್ನು ಬ್ರಾಾಹ್ಮಣರು ಪ್ರಶ್ನಿಿಸದಿದ್ದರೆ ಈಗಾಗಲೇ ಬ್ರಾಾಹ್ಮಣರನ್ನು ಆಡಿಕೊಂಡು ಪ್ರಚಾರ ಗಿಟ್ಟಿಿಸುತ್ತಿಿರುವ ಜನರ ಸಂಖ್ಯೆೆ ಇನ್ನೂ ಹೆಚ್ಚಾಾಗಬಹುದು ಎಂಬ ನಿಟ್ಟಿಿನಲ್ಲಿ ಈ ಲೇಖನ.

ಜಯವೀರ ಎನ್ನುವ ವ್ಯಕ್ತಿಿ ವಾಸ್ತವದಲ್ಲಿ ಇಲ್ಲವೇ ಇಲ್ಲ, ಅವರ ಹೆಸರಿನಲ್ಲಿ ಬೇರೆ ಯಾರೋ ಲೇಖನ ಬರೆಯುತ್ತಿಿದ್ದಾರೆ ಎಂಬ ಶಂಕೆ ಇದ್ದ ಎಷ್ಟೋೋ ಜನರಲ್ಲಿ ನಾನು ಒಬ್ಬ. ಈ ನಿಟ್ಟಿಿನಲ್ಲಿ ಎಲ್ಲೋ ಸ್ವಲ್ಪ ಒತ್ತಡಕ್ಕೆೆ ಒಳಗಾದ ವಿಶೇಶ್ವರ ಭಟ್ಟರು ಇತ್ತೀಚೆಗೆ ಫೇಸ್ಬುಕ್‌ನಲ್ಲಿ ತಮ್ಮ ಓದುಗರೊಬ್ಬರು ಜಯವೀರರೊಡನೆ ತೆಗೆದ ಸೆಲ್ಫಿಿಯನ್ನು ಹಂಚಿಕೊಂಡಿದ್ದಾರೆ. ಹಾಗಾಗಿ ಎಲ್ಲ ಬ್ರಾಾಹ್ಮಣರು ತಮ್ಮ ಮುನಿಸನ್ನು ನೇರವಾಗಿ ಜಯವೀರರೆಡೆಗೆ ತಿರುಗಿಸಬಹುದು.

ಮೊದಲನೆಯದಾಗಿ ಹೇಳುವುದಾದರೆ ಜಯವೀರರು ಈ ಲೇಖನ ಬರೆಯುವ ಅವಶ್ಯಕತೆಯೇ ಇರಲಿಲ್ಲ. ರಘುನಾಥ ಗುರೂಜಿ ಅವರು ಬರೆದ ಲೇಖನ, ಅದಕ್ಕೆೆ ಉಂಟಾದ ವಿರೋಧ ಮತ್ತು ಅವರು ಅದಕ್ಕೆೆ ಕ್ಷಮೆಕೋರಿದ್ದು ಎಲ್ಲವೂ ಮುಗಿದು ಅದಾಗಲೇ ಕೆಲ ಸಮಯವಾಗಿತ್ತು. ಅವರ ಮೇಲೆ ಪೊಲೀಸ್ ದೂರು ನೀಡಬಾರದಿತ್ತು ಎಂಬುದನ್ನೂ ಜಯವೀರರು ಮತ್ತು ರಾಮಚಂದ್ರ ಶಾಸ್ತ್ರೀಗಳು ಪ್ರತ್ಯೇಕ ಲೇಖನ ಬರೆದು ತಮ್ಮ ಅಭಿಪ್ರಾಾಯವನ್ನು ಹೇಳಿಯಾಗಿತ್ತು. ಪ್ರತಿ ಸಾತ್ವಿಿಕ ಬ್ರಾಾಹ್ಮಣ ಸಹ ಅದನ್ನು ಒಪ್ಪುುತ್ತಾಾನೆ. ಹಾಗಾಗಿ ನಿಮ್ಮ ಹಿಂದಿದ ಲೇಖನಗಳಿಗೆ ಯಾವುದೇ ವಿರೋಧ ವ್ಯಕ್ತವಾಗಿರಲಿಲ್ಲ. ಆದರೆ ಎಲ್ಲವೂ ಮುಗಿದ ಮೇಲೆ ಮತ್ತೆೆ ಈ ಲೇಖನ ಬರೆದದ್ದು ಏಕೆ ಎಂಬ ಪ್ರಶ್ನೆೆ ನನ್ನಂತೆ ಹಲವಾರು ಬ್ರಾಾಹ್ಮಣರಿಗಿದೆ.

ಜಯವೀರರ ಲೇಖನದ ಆರಂಭದಲ್ಲಿ ಹೇಳುವಂತೆ ನಾಲ್ಕು ಜನ ಸ್ವಪ್ರತಿಷ್ಠೆೆ ತುಂಬಿದ ಬ್ರಾಾಹ್ಮಣರು ಒಂದೆಡೆ ಸೇರಿದರೆ ತಮ್ಮ
ಜಾತಿಯ ಬಗ್ಗೆೆ ಹೊಗಳುವಿಕೆ, ತಾವೇ ಶ್ರೇಷ್ಠ ಎಂಬ ಮಾತುಗಳನ್ನಾಾಡಿ ಅಲ್ಲಿರುವ ಇತರರ ಮನಸ್ಸಿಿಗೆ ನೋವುಂಟು ಮಾಡುತ್ತಾಾರೆ
ಎನ್ನುವುದು. ಇಲ್ಲಿ ಬ್ರಾಾಹ್ಮಣೇತರಿಗೆ ಒಂದು ಮಾತನ್ನು ಹೇಳಬೇಕು. ಬ್ರಾಾಹ್ಮಣರು ಸ್ವಭಾತಃ ಬಹಳ ಸೂಕ್ಷ್ಮ ಸ್ವಭಾವದವರು. ಒಂದು ಕ್ರಿಿಯೆಯನ್ನು ಮಾಡುವುದರಿಂದ ಆಗುವ ಎಲ್ಲ ಪರಿಣಾಮಗಳನ್ನು ತಿಳಿದ ನಂತರವೇ ಅದನ್ನು ಮಾಡುವುದು. ಹತ್ತು ವಾಕ್ಯಗಳಲ್ಲಿ ಹೇಳಲಾಗದಿದ್ದನ್ನು ಒಂದು ಚಿಕ್ಕ ವ್ಯಂಗ್ಯದಲ್ಲಿ ಹೇಳುವ ಬುದ್ದಿಮತ್ತೆೆ ಬ್ರಾಾಹ್ಮಣರಿಗಿದ್ದರೂ ಒಂದು ವಿಷಯವನ್ನು ಮಾತನಾಡಿದಾಗ ನೇರವಾಗಿ ಯಾರೊಬ್ಬರಿಗಾದರೂ ಬೇಸರವಾಗುವಂತಿದ್ದರೆ ಸಾಧ್ಯವಾದಷ್ಟು ಅಂತಹ ವಿಷಯಗಳನ್ನು ಮಾತನಾಡದಿರಲು ಪ್ರಯತ್ನಪಡುತ್ತಾಾರೆ.

ನಿಮ್ಮ ಸ್ನೇಹಿತರಲ್ಲಿರುವ ಬ್ರಾಾಹ್ಮಣರನ್ನೊೊಮ್ಮೆೆ ಗಮನಿಸಿ, ಗಲಾಟೆ, ಜಗಳ ಅಥವಾ ಕನಿಷ್ಠ ದೊಡ್ಡ ಧ್ವನಿಯಲ್ಲಿ ಯಾರೊಟ್ಟಿಿಗಾದರೂ ವಾಗ್ವಾಾದಕ್ಕೆೆ ಇಳಿಯುವವರ ಸಂಖ್ಯೆೆ ಬಹಳ ಕಡಿಮೆ. ಮನೆಯಲ್ಲಿ ಎಷ್ಟೇ ಕೂಗಿದರು ಹೊರಗೆ ಬ್ರಾಾಹ್ಮಣ ಸದಾ ಸಜ್ಜನ. ಜಯವೀರರು ಹೇಳುವಂತೆ ತಮ್ಮ ಶ್ರೇಷ್ಠತೆಯನ್ನು ಎಲ್ಲರೆದುರು ಕೊಚ್ಚಿಿಕೊಳ್ಳುವ ಅನಿವಾರ್ಯತೆ ಬ್ರಾಾಹ್ಮಣರಿಗೆ ಖಂಡಿತವಾಗಿಯೂ ಇಲ್ಲ, ಅವರು ಮೇಲೆ ಹೇಳಿದಂತಹ ಸನ್ನಿಿವೇಶವನ್ನು ಇಲ್ಲಿಯವರೆಗೂ ನಾನಂತೂ ನೋಡಿಲ್ಲ. ಅದೇ ಪ್ಯಾಾರಾದಲ್ಲಿ ಹಾಗೆಯೇ ಮುಂದುವರೆದು ಬ್ರಾಾಹ್ಮಣರು ಜ್ಞಾಾನಿಗಳು, ಅವರ ಕಾಕದೃಷ್ಟಿಿಗೆ ಬಿದ್ದರೆ ಹಾಗಾಗುತ್ತದೆ, ಹೀಗಾಗುತ್ತದೆ ಎಂದು ಬ್ರಾಾಹ್ಮಣರು ಎಲ್ಲೆಡೆ ಹಬ್ಬಿಿಸಿ ತಮ್ಮ ಪ್ರಭಾವ ಮೆರೆಯುತ್ತಿಿದ್ದಾರೆ ಎಂದು ಜಯವೀರರು ಹೇಳುತ್ತಾಾರೆ. ನನಗೆ ಈ ಸಾಲು ಬಹಳ ಹಿತವೆನಿಸಿತು.

ಯಾವುದೋ ಒಂದು ಲೇಖನದಲ್ಲಾದರು ಸಹ ಬ್ರಾಾಹ್ಮಣರು ಪಾರಮ್ಯ ಮೆರೆಯುತ್ತಿಿದ್ದಾರಲ್ಲ ಎಂದು. ವಿದ್ಯಾಾಭ್ಯಾಾಸ, ಕೆಲಸ, ಯಾವುದರಲ್ಲೂ ಮೀಸಲಾತಿ ಇಲ್ಲದೆ, ಮಲೆನಾಡಿನಲ್ಲಿ ಬೆಳೆದ ಬೆಳೆ ಕೈಗೆ ಹತ್ತದೆ ಕಾಡಿನ ಮಧ್ಯೆೆ ಇರುವ ಒಂಟಿ ಮನೆಗಳಲ್ಲಿ ಜೀವನ ನಡೆಸುತ್ತಿಿರುವ ಬಡ ಬ್ರಾಾಹ್ಮಣರ ಕಷ್ಟ ಎಷ್ಟೋೋ ಜನರಿಗೆ ತಿಳಿದಿದೆಯೋ ಗೊತ್ತಿಿಲ್ಲ. ಯಾವುದೋ ಒಂದು ಕಾಲಘಟ್ಟದಲ್ಲಿ ಯಾರೋ ಪೂರ್ವಿಕರು ಇತರ ಸಮುದಾಯಗಳನ್ನು ಶೋಷಿಸಿದ್ದರಿಂದ ಯಾವುದೇ ತಪ್ಪುು ಮಾಡದ ಲಕ್ಷಾಂತರ ಬ್ರಾಾಹ್ಮಣರು ಅನುಭವಿಸುತ್ತಿಿರುವ ಕಷ್ಟಗಳು ಅನುಭವಿಸಿದವರಿಗೆ ಗೊತ್ತು.

ವೃತ್ತಿಿಯಿಂದ ಜಾತಿಯೇ ಹೊರತು, ಜಾತಿಯಿಂದ ವೃತ್ತಿಿಯಲ್ಲ ಎಂಬ ಅರಿವು ಎಲ್ಲ ಸಾತ್ವಿಿಕ ಬ್ರಾಾಹ್ಮಣರಿಗೂ ಇದೆ. ನೀವು ಲೇಖನದಲ್ಲಿ ಪ್ರಸ್ತಾಾಪಿಸುವ ಈ ಮಾತಿಗೆ ನಮ್ಮೆೆಲ್ಲರ ಬೆಂಬಲವು ಇದೆ. ಸನಾತನ ಧರ್ಮದ ಮೂಲ ಆಶಯವು ಅದೇ ಆಗಿದ್ದರೂ, ಕಾಲ ನಂತರದಲ್ಲಿ ಬದಲಾವಣೆಗೊಳ್ಳುವುದೇ ಎಲ್ಲ ಧರ್ಮದ ವಿಶೇಷತೆ. ಅದಕ್ಕೆೆ ಯಾವ ಧರ್ಮವು ಹೊರತಲ್ಲ. ವಾಸ್ತವದಲ್ಲಿ ಧರ್ಮದ ಸಂಕೋಲೆಯಿಂದ ಹೊರಗೆ ಬರಬೇಕು ಎಂದು ಸಾರಿದ ಎಷ್ಟೋೋ ಮಹನೀಯರನ್ನು ಒಂದು ಧರ್ಮಕ್ಕೆೆ ಸೇರಿಸಿ ಆರಾಧಿಸಿದವರು ನಾವು. ಹಾಗಾಗಿ ಯಾವುದೋ ಕಾಲಘಟ್ಟದಲಿ ಬ್ರಾಾಹ್ಮಣನ ಮಗ ಬ್ರಾಾಹ್ಮಣನಾಗಿ, ಕ್ಷತ್ರಿಿಯನ ಮಗ ರಾಜನಾಗಿರಬಹುದು. ಇದರಲ್ಲಿ ಎಲ್ಲ ವರ್ಗದವರ ತಪ್ಪಿಿದೆ. ಕೇವಲ ಬ್ರಾಾಹ್ಮಣರನ್ನು ಬೆಟ್ಟುಮಾಡಿ ತೋರಿಸುವುದು ಖಂಡಿತವಾಗಿಯೂ ಸರಿಯಲ್ಲ.

ಇನ್ನೂ ಮಂತ್ರಗಳನ್ನು ಬೇರೆ ಜಾತಿ, ಧರ್ಮದವರು ಕಲಿಯಬಾರದು ಎಂದು ಹೇಳಲು ಬ್ರಾಾಹ್ಮಣನಾರು? ಆತ ಹೇಳಿದ ತಕ್ಷಣ ನೀವು ಕಲಿಯುವುದನ್ನು ನಿಲ್ಲಿಸಿ ಬಿಡುತ್ತೀರೊ? ಹಾಗಿದ್ದರೆ ಬ್ರಾಾಹ್ಮಣರಿಗೂ ಸರಕಾರಿ ಕೆಲಸದಲ್ಲಿ ಐವತ್ತು ಪ್ರತಿಶತ ಮೀಸಲಾತಿ ಕೊಡಿ ಎಂದು ನಾವು ಕೇಳಿಕೊಳ್ಳುತ್ತೇವೆ! ಕೊಡಲು ಸರಕಾರ, ಒಪ್ಪಲು ಎಲ್ಲ ಧರ್ಮ, ಜಾತಿಯವರು ಸಿದ್ದರಿದ್ದೀರಾ? ಒಂದು ಕಾಲದಲ್ಲಿ ಕೆಲ ಬ್ರಾಾಹ್ಮಣ ಗುರುಗಳು ಬೇರೆ ಜಾತಿಯವರಿಗೆ ಮಂತ್ರ, ಶಾಸ್ತ್ರ ಗಳ ಬೋಧನೆ ಮಾಡುತ್ತಿಿರಲಿಲ್ಲ ಎನ್ನುವುದು ಸತ್ಯ. ಆದರೆ ಈಗ ಕಾಲ ಹಾಗೆಯೇ ಇಲ್ಲವಲ್ಲ. ಬೆರಳಿನ ತುದಿಯಲ್ಲಿ ಎಲ್ಲ ಮಾಹಿತಿಗಳು ಇವೆ. ಜಯವೀರರೆ ನೀವು ಕನಿಷ್ಠ ಗಣಪತಿ ಹೋಮ ಇಲ್ಲವೇ ಸತ್ಯ ನಾರಾಯಣ

ಕಥೆಯನ್ನು ಮಾಡುವ ಮಂತ್ರಗಳನ್ನು ಅರ್ಥ ಸಮೇತ ಕಲಿತು ನಿಮಗಿಷ್ಟವಾದವರ ಮನೆಯಲ್ಲಿ ನಡೆಸಿಕೊಡಿ, ಎಷ್ಟು ಜನ ನಿಮ್ಮನ್ನು ಕರೆಸಿ ಪೂಜೆ ಮಾಡುತ್ತಾಾರೆ ಎಂಬುದನ್ನೂ ನೋಡೋಣ. ಇದು ನಾನು ನಿಮಗೆ ಹಾಕುವ ಸವಾಲಲ್ಲ, ನಿಮ್ಮಿಿಂದ ಸ್ಫೂರ್ತಿ ಪಡೆದು ಎಲ್ಲರೂ ಮಂತ್ರ, ಶಾಸ್ತ್ರಗಳನ್ನು ಕಲಿಯುವಂತಾಗಲಿ ಎಂಬ ಕಳಕಳಿ, ಜತೆಗೆ ಅದನ್ನು ಕಲಿಯುವ ಕಷ್ಟದ ಅರಿವು ನಿಮಗೆ ಮೂಡಿ, ಬ್ರಾಾಹ್ಮಣರ ಮೇಲಿನ ಗೌರವ ತನ್ನಿಿಂದ ತಾನೇ ಹೆಚ್ಚಾಾಗುತ್ತದೆ. ಇನ್ನೂ ಕುಂಬಳಕಾಯಿ ವಿಷಯವಂತು ಜಯವೀರರ ಸಾಹಿತ್ಯ ಪ್ರೌೌಢಿಮಿಗೆ ತಕ್ಕುದಾದುದೆ ಅಲ್ಲ. ಜಯವೀರರೆ, ಕುಂಬಳ ಕಾಯಿ ಭಾರತದ ಬಹುಭಾಗಗಳಲ್ಲಿ ಬೆಳೆಯುವಂತಹ ತರಕಾರಿ. ಅದನ್ನು ತಿನ್ನಬೇಡಿ

ಎನ್ನಲು ಬ್ರಾಾಹ್ಮಣನಾರು? ಆತ ಹೇಳಿದ ಅಂತಲೇ ಭಾವಿಸೊಣ, ಅವರು ಹೇಳಿದ್ದೆಲ್ಲವನ್ನು ಕೇಳುವವರದ್ದು ತಪ್ಪಿಿದೆಯಲ್ಲವೇ? ಅದು 21 ನೇ ಶತಮಾನದಲ್ಲಿ ಬ್ರಾಾಹ್ಮಣರು ಹೇಳಿದರು ಎಂದು ಕುಂಬಳಕಾಯಿ ತಿನ್ನದವರನ್ನು ನಾನಂತೂ ನೋಡಿಲ್ಲ. ಎಲ್ಲೆಡೆಯು ಮಾರಾಟವಾಗುವ ಕುಂಬಳಕಾಯಿಯನ್ನು ಎಲ್ಲರಿಗೂ ತಿನ್ನುವ ಸ್ವಾಾತಂತ್ರ್ಯವಿದೆ. ಎಲ್ಲರೂ ತಿಂದು ಜಯವೀರರು ಹೇಳಿದಂತೆ ನಿಮ್ಮ ಮೆದುಳಿದ ಶಕ್ತಿಿಯನ್ನು ಹೆಚ್ಚಿಿಸಿಕೊಳ್ಳಿಿ. ಜಯವೀರರೆ ನಿಮಗೆ ಬೇಕಿದ್ದರೆ ಕೇಳಿ, ಮನೆಯಲ್ಲಿ ಬೆಳೆದ ದೊಡ್ಡ ಕುಂಬಳಕಾಯಿಯನ್ನೇ ಬ್ರಾಾಹ್ಮಣರಿಂದಲೇ ನಿಮಗೆ ಕಳುಹಿಸಿಕೊಡುವ ಕೊಡುವ ವ್ಯವಸ್ಥೆೆ ಮಾಡೋಣ.

ದೇವರುಗಳ ಜಾತಿ ಹುಡುಕುವ ಒಂದು ಅಪೂರ್ವ ಅಧ್ಯಯನ ಮಾಡಿದ ಜಯವೀರರಿಗೆ ಯಾವುದಾದರೂ ಪ್ರಶಸ್ತಿಿ
ಖಂಡಿತವಾಗಿಯೂ ಕೊಡಬಹುದು. ಲೇಖನದ ಆರಂಭದಲ್ಲಿ ಅವರೇ ಹೇಳುತ್ತಾಾರೆ, ಕೆಲಸದಿಂದ ಜಾತಿಯೇ ಹೊರತು ಜಾತಿಯಿಂದ ಕೆಲಸವಲ್ಲ ಎಂದು. ಸ್ಮಶಾನ ಕಾಯುವ ಶಿವ ಶೂದ್ರನಾದರೆ, ಸಮುದ್ರ ಮಥನದಲ್ಲಿ ವಿಷವನ್ನು ಕುಡಿಯುವ ಉದಾತ್ತ ಗುಣದಿಂದ ಆತ ಬ್ರಾಾಹ್ಮಣನಾಗುವುದಿಲ್ಲವೇ? ರಾಕ್ಷಸರನ್ನು ಸಂಹರಿಸಿ ಆತ ಕ್ಷತ್ರಿಿಯನಾಗುವುದಿಲ್ಲವೇ? ಅಥವಾ ಇನ್ಯಾಾವುದೋ ಸನ್ನಿಿವೇಶದಲ್ಲಿ ವೈಶ್ಯನು ಆಗಬಹುದಲ್ಲವೇ? ಹೀಗೆ ಬ್ರಾಾಹ್ಮಣರು ಪೂಜೆ ಮಾಡುವ ಎಲ್ಲ ದೇವರುಗಳಲ್ಲೂ ಈ ನಾಲ್ಕು ಅಂಶಗಳಿವೆ. ಅದಕ್ಕೆೆ ಅವರನ್ನು ದೇವರು ಎಂದು ಕರೆಯುವುದು. ಬ್ರಾಾಹ್ಮಣರು ಪೂಜೆ ಮಾಡಲು ಅವರ ಜಾತಿಯವರೆ ಯಾರು ಸಿಗಲಿಲ್ಲವಾ ಎಂಬ ಪ್ರಶ್ನೆೆಗೆ ಇದರಿಂದ ಉತ್ತರ ಸಿಕ್ಕಿಿದೆ ಎಂದು ನನ್ನ ಭಾವನೆ.

ಬ್ರಾಾಹ್ಮಣರು ಇತರ ಜಾತಿಯವರು ಮಾಡಿದ ಅಡುಗೆ ತಿನ್ನುವುದಿಲ್ಲ, ಅವರೊಟ್ಟಿಿಗೆ ಒಂದೇ ಪಂಕ್ತಿಿಯಲ್ಲಿ ಊಟ ಮಾಡುವುದಿಲ್ಲ. ಈ ಎಲ್ಲ ವಿಷಯಗಳ ಕುರಿತು ನಾನು ಬ್ರಾಾಹ್ಮಣೇತರರಲ್ಲಿ ಒಂದು ಮನವಿ ಮಾಡುತ್ತೇನೆ. ಯಾವುದೇ ಕಾರಣಕ್ಕೂ ನೀವು ಬ್ರಾಾಹ್ಮಣರು ನಮ್ಮ ಮನೆಯಲ್ಲಿ ಊಟಮಾಡಲಿ, ನಾವು ಅವರ ಮನೆಯ ಒಳಗೆ ಮುಕ್ತವಾಗಿ ಓಡಾಡುವ ಹಾಗಾಗಲಿ, ಅವರಿಗಿಂತಲೂ ಮೀಸಲಿರುವ
ಪಂಕ್ತಿಿಯಲ್ಲಿ ನಮಗೂ ಊಟ ಹಾಕಲಿ ಎನ್ನುವಂತಹ ಯೋಚನೆಯನ್ನೇ ಮಾಡದಿರಿ. ಏಕೆಂದರೆ ಹಾಗೆ ಮಾಡುವ ಮೂಲಕ ನಿಮಗೆ

ಗೊತ್ತಿಿಲ್ಲದ ಹಾಗೆ ನೀವು ಬ್ರಾಾಹ್ಮಣರು ನಿಮಗಿಂತ ಶ್ರೇಷ್ಠರು ಎಂಬ ಸಂದೇಶವನ್ನು ಜಗತ್ತಿಿಗೆ ಸಾರುತ್ತಿಿರಿ. ನಿಜವಾದ ಬ್ರಾಾಹ್ಮಣ ಅದನ್ನು ಎಂದಿಗೂ ಇಷ್ಟಪಡುವುದಿಲ್ಲ. ಇನ್ನೂ ಜಯವೀರರ ಮಾತಿಗೆ ಬರುವುದಾದರೆ ಬ್ರಾಾಹ್ಮಣರಷ್ಟೆೆ ಅಲ್ಲ, ಎಲ್ಲ ಜಾತಿ ಧರ್ಮದವರು ಅವರಿಗಿಷ್ಟವಾದ ಕಡೆ ಅವರಿಷ್ಟದ ಆಹಾರ ಸೇವಿಸಲು ಸ್ವತಂತ್ರರು. ಅದನ್ನು ಪ್ರಶ್ನಿಿಸುವ ಅಧಿಕಾರ ಯಾರಿಗೂ ಇಲ್ಲ.

ಇನ್ನೂ ಅಂತರ್ಜಾತೀಯ ವಿವಾಹದ ಬಗ್ಗೆೆ ಮಾತನಾಡುತ್ತಾಾ, ಈಗಿನ ಬ್ರಾಾಹ್ಮಣರು ಎಂದು ಕೊಚ್ಚಿಿಕೊಳ್ಳುವವರು, ಅವಕಾಶ ಸಿಕ್ಕಾಾಗಲೆಲ್ಲ
ಯಾವುದೇ ಪಾಪ ಪ್ರಜ್ಞೆೆ ಇಲ್ಲದೆ ಅನುಭವಿಸಿ ಬರುತ್ತಾಾರೆ ಎಂದು ಬರೆದಿದ್ದಿರಲ್ಲಾ ಜಯವೀರರೇ? ಅವರು ಹಾಗೆ ಮಾಡುವಾಗ ನೀವೇನಾದರೂ ಕ್ಯಾಾಮೆರಾ ಹಿಡಿದು ರೆಕಾರ್ಡ್ ಮಾಡಲು ಹೋಗಿದ್ದೀರೆ? ಒಂದು ಸಮುದಾಯದ ಕುರಿತು ಈ ರೀತಿ ಕೀಳು ಮಟ್ಟದಲ್ಲಿ ಬರೆಯುವುದು ಯಾವ ಲೇಖಕನಿಗೂ ಶೋಭೆತರುವುದಿಲ್ಲ. ಬರಹದ ಕಠಿಣತೆಗೆ ಕ್ಷಮೆಯಿರಲಿ. ಆದರೆ ಒಬ್ಬ ಸಜ್ಜನ ಬ್ರಾಾಹ್ಮಣನಿಗೆ ನಿಮ್ಮ ಈ ಬರಹ ಎಷ್ಟು ಘಾಸಿ ಮಾಡಿರಬಹುದು ಎಂಬ ಅರಿವು ನಿಮಗೂ ಆಗಲಿ ಎಂದು ಈ ಮಾತನ್ನು ಹೇಳಿದೆ.

Source Credit Vishwavani.news

Niranthara News

Leave a Reply

Your email address will not be published. Required fields are marked *

Next Post

ಯಾರಿಗೆ ಬೇಕು ಬಿಲಿಯನೇರ್ ಪ್ರೆೆಸಿಡೆಂಟ್ ಹುದ್ದೆೆ?

Thu Nov 28 , 2019
Source Credit Vishwavani.news ಪ್ರಜಾಪ್ರಭುತ್ವದ ಇತಿಹಾಸದುದ್ದಕ್ಕೂ ನೋಡಿ. ರಾಜಕಾರಣಿಗಳಿಗೆ ಚುನಾವಣೆಯ ಖರ್ಚಿಗೆಂದು ಹಣ ನೀಡುತ್ತಲೇ ಬಂದಿದ್ದಾಾರೆ. ತನ್ಮೂಲಕ ಸರಕಾರವನ್ನು ನಿಯಂತ್ರಿಸುತ್ತಿದ್ದಾರೆ. ಅವರದು ಒಂಥರಾ ವಿಶೇಷವಾದ ಸಮಾಜಸೇವೆ! *ಅಲನ್ ಜೇಕಬ್ ಇಂದು ಶ್ರೀಮಂತ ಅಲ್ಪಸಂಖ್ಯಾಾತರು ಪ್ರಜಾಪ್ರಭುತ್ವವನ್ನು ನಿಯಂತ್ರಿಿಸುತ್ತಿಿದ್ದಾಾರೆ. ಜನಸಮಾನ್ಯರಿಗೆ ಇದು ಒಳ್ಳೆೆಯದೇನಲ್ಲ. ಆದರೆ ಪರಿಸ್ಥಿಿತಿ ಇರುವುದೇ ಹೀಗೆ. ಪ್ರಜಾಪ್ರಭುತ್ವದಲ್ಲಿ ಶತಕೋಟ್ಯಧಿಪತಿಗಳ ಆರಾಧನೆ ತಾರಕಕ್ಕೇರಿ, ಶ್ರೀಮಂತ ಕುಳಗಳು ಚುನಾವಣಾ ವ್ಯವಸ್ಥೆೆಯನ್ನು ಹೈಜಾಕ್ ಮಾಡಿರುವುದರಿಂದ ಸಮಾಜ ಒಡೆದಿದೆ ಎಂಬ ಮಾತೂ ನಮ್ಮ ಕಿವಿಗೆ ಬೀಳುತ್ತಿಿದೆ. ಚೀಲಗಳ ಮೇಲೆ ಕುಳಿತ ಮೋಜುಗಾರ ಪುರುಷ ಮತ್ತು ಮಹಿಳೆಯರು ಸರಕಾರ ನಡೆಸಲು ನಮ್ಮನ್ನು […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links