ಎನ್‍ಆರ್ ಸಿ, ಸಿಎಎ, ಎನ್‍ಪಿಆರ್ ಭಾರೀ ಪ್ರತಿರೋಧ: ಸ್ಟಿಕ್ಕರ್ ಅಂಟಿಸುವ ಅಭಿಯಾನಕ್ಕೆ ಚಾಲನೆ

Source Credit NewsKannada.com

ಎನ್‍ಆರ್ ಸಿ, ಸಿಎಎ, ಎನ್‍ಪಿಆರ್ ಭಾರೀ ಪ್ರತಿರೋಧ: ಸ್ಟಿಕ್ಕರ್ ಅಂಟಿಸುವ ಅಭಿಯಾನಕ್ಕೆ ಚಾಲನೆ


MV
  ¦   


Jan 10, 2020 10:14:20 AM (IST)

ಬಂಟ್ವಾಳ: “ಎನ್‍ಆರ್ ಸಿ, ಸಿಎಎ ಹಾಗೂ ಎನ್‍ಪಿಆರ್ ಸಂವಿಧಾನ ವಿರೋಧಿ ಕಾಯ್ದೆ ಎಂಬ ಅರಿವು ನಮಗಿದೆ. ಇದರ ಪರ ಜಾಗೃತಿಯ ಅವಶ್ಯಕತೆಯು ನಮಗಿಲ್ಲ. ಇಲ್ಲಿಗೆ ಬರಬೇಕಾಗಿಲ್ಲ” ಎನ್ನುವ ಸ್ಟಿಕ್ಕರ್‍ಗಳನ್ನು ಬಂಟ್ವಾಳದ ಹಲವು ಮನೆಗಳ ಮುಂದೆ ಅಂಟಿಸಲಾಗಿದ್ದು, ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಎನ್‍ಆರ್‍ಸಿಗೆ ಭಾರೀ ಪ್ರತಿರೋಧ ವ್ಯಕ್ತಪಡಿಸಿವೆ.

ಎನ್‍ಆರ್ ಸಿ, ಸಿಎಎ ಹಾಗೂ ಎನ್‍ಪಿಆರ್ ವಿವಾದಾತ್ಮಕ ಕಾಯ್ದೆಯ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು, ಧರಣಿ, ಮುಂದುವರೆದಂತೆ, ಬಿಜೆಪಿಯು ಜನರ ಬೆಂಬಲವನ್ನು ಪಡೆಯಲು ವಿವಿಧ ಕ್ರಮಗಳನ್ನು ಪ್ರಾರಂಭಿಸಿದೆ. ಇದರ ಭಾಗವಾಗಿ ಬಂಟ್ವಾಳ ಶಾಸಕರ ನೇತೃತ್ವದಲ್ಲಿ ಪೌರತ್ವ ತಿದ್ದುಪಡಿಯ ಪರವಾಗಿ ಬಂಟ್ವಾಳದ ಕೆಳಗಿನ ಪೇಟೆಯಲ್ಲಿ ಮನೆ ಮನೆ ಪ್ರಚಾರವು ಆರಂಭವಾಗಿದೆ. ಆದರೆ, ಬಂಟ್ವಾಳ ತಾಲೂಕಿನ ತಲಪಾಡಿ ಅಲ್‍ರಹ್ಮಾ ಫೌಂಡೇಶನ್ ವತಿಯಿಂದ ತಲಪಾಡಿ ಸುತ್ತಮುತ್ತಲ ಪ್ರದೇಶದ ಮನೆಗಳಲ್ಲಿ ಎನ್‍ಆರ್‍ಸಿ, ಸಿಎಎ, ಎನ್‍ಪಿಆರ್ ವಿರೋಧಿಸುವ ಪೆÇೀಸ್ಟರ್‍ಗಳನ್ನು ಅಂಟಿಸಲಾಗಿದ್ದು, ಸಂವಿಧಾನ ವಿರೋಧಿ ಕಾಯ್ದೆಯನ್ನು ಸಂಪೂರ್ಣವಾಗಿ ಬಹಿಷ್ಕರಿಸಿವೆ.

ಮನೆ, ಮಸೀದಿಗಳಲ್ಲಿ ಸ್ಟಿಕರ್: ಎನ್‍ಆರ್ ಸಿ, ಸಿಎಎ ಹಾಗೂ ಎನ್‍ಪಿಆರ್ ವಿವಾದಾತ್ಮಕ ಕಾಯ್ದೆಯ ವಿರುದ್ಧ ತಾಲೂಕು ಕೇಂದ್ರ, ಹೋಬಳಿ ಕೇಂದ್ರ, ಕೆಲವು ಹಳ್ಳಿಗಳಲ್ಲಿ ಹೋರಾಟದ ಕೂಗು ಕೇಳಿ ಬರುತ್ತಿವೆ.

ಸುಪ್ರೀಂಕೋರ್ಟ್‍ಗೆ ಪೋಸ್ಟ್ ಕಾರ್ಡ್ ಚಳವಳಿಯೂ ಆರಂಭವಾಗಿದೆ. ಹೋರಾಟದ ಕುರಿತು ಜಾಗೃತಿ ಮೂಡಿಸುವ ಸಂಬಂಧ ಮನೆಗಳ ಗೋಡೆಗಳ ಮೇಲೆ ಸ್ಟಿಕ್ಕರ್ ಅಂಟಿಸುವ ಅಭಿಯಾನಕ್ಕೆ ತಲಪಾಡಿಯಲ್ಲಿ ಚಾಲನೆ ನೀಡಲಾಗಿದ್ದು, ಜನರು ಇದನ್ನು ಸ್ವೀಕರಿ ತಮ್ಮ ಮನೆಯ ಗೋಡೆಯ ಮೇಲೆ ಸ್ಟಿಕ್ಕರ್ ಅಂಟಿಸಿಕೊಳ್ಳುತ್ತಿದ್ದಾರೆ. ಇದರ ಮುಂದುವರಿದ ಭಾಗವಾಗಿ ಪ್ರತೀ ಮಸೀದಿಗಳ ವಠಾರದಲ್ಲಿ ಸಿಎಎ ವಿರುದ್ಧ ಬೋರ್ಡ್ ಅಳವಡಿಸುವ ಚಿಂತನೆಗಳು ನಡೆಯುತ್ತಿವೆ.

Source Credit NewsKannada.com

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಸನ್ಮಾನ ಅಂತ ಕರೆಸಿ ವಿಜಯ್ ಪ್ರಕಾಶ್ ಅವರಿಗೆ ಮುಜುಗರ ಮಾಡಿದ್ದು ಸರೀನಾ?

Fri Jan 10 , 2020
Source Credit RJ News Kannada ಕೊಪ್ಪಳದಲ್ಲಿ ನಡೆಯುತ್ತಿರುವ ಆನೆಗೊಂದಿ ಉತ್ಸವಕ್ಕೆ ಖ್ಯಾತ ಗಾಯಕರಾದ ವಿಜಯ್ ಒರಕಾಶ್ ಅವರನ್ನು ಕರೆಸಲಾಗಿತ್ತು.. ಇದು ಸರ್ಕಾರದಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮವಾಗಿತ್ತು.. ಆಹ್ವಾನಕ್ಕೆ ಒಪ್ಪಿ ವಿಜಯ್ ಪ್ರಕಾಶ್ ಅವರೂ ಕೂಡ ಉತ್ಸವಕ್ಕೆ ಹಾಜರಾದರು.. Pin it Email https://nirantharanews.com/%e0%b2%8e%e0%b2%a8%e0%b3%8d%e2%80%8d%e0%b2%86%e0%b2%b0%e0%b3%8d-%e0%b2%b8%e0%b2%bf-%e0%b2%b8%e0%b2%bf%e0%b2%8e%e0%b2%8e-%e0%b2%8e%e0%b2%a8%e0%b3%8d%e2%80%8d%e0%b2%aa%e0%b2%bf%e0%b2%86%e0%b2%b0/#UGhvdG9HcmlkXzE ಆದರೆ ನಂತರ ಅಲ್ಲಿ ನಡೆದದ್ದೇ ಬೇರೆ.. ಹೌದು ಅಂದುಕೊಂಡಂತೆ ಕಾರ್ಯಕ್ರಮವೇನೋ ಚೆನ್ನಾಗಿ ನಡೆಯಿತು.. ಆದರೆ ಆ ಬಳಿಕ ವಿಜಯ್ ಪ್ರಕಾಶ್ ಅವರಿಗೆ ಸನ್ಮಾನ ಆಯೋಜಿಸಲಾಗಿತ್ತು.. ಆದರೆ ವಿಜಯ್ ಪ್ರಕಾಶ್ ಅವರಿಗೆ ಸನ್ಮಾನ ಮಾಡುವ ವಿಚಾರದಲ್ಲಿ ಅಲ್ಲಿನ ಶಾಸಕರೂ ಹಾಗೂ ಡಿಸಿ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links