ಎಂಟಿಬಿ ನಾಗರಾಜ್ ಕೂಡ ಸಚಿವರಾಗ್ತಾರೆ; ಬಿಸಿ ಪಾಟೀಲ್

Source Credit Oneindia.com

Hubballi

oi-Lekhaka

By ಹುಬ್ಬಳ್ಳಿ ಪ್ರತಿನಿಧಿ

|

ಹುಬ್ಬಳ್ಳಿ, ಡಿಸೆಂಬರ್ 28: ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ ಎಲ್ಲ ಅರ್ಹ ಶಾಸಕರಿಗೂ ಸಚಿವ ಸ್ಥಾನ ಸಿಗೋದು ಬಹುತೇಕ ಖಾತ್ರಿಯಾಗಿದೆ. ಆದ್ರೆ, ಹೊಸಕೋಟೆ ಉಪಚುನಾವಣೆಯಲ್ಲಿ ಸೋಲು ಅನುಭವಿಸಿರುವ ಎಂಟಿಬಿ ನಾಗರಾಜ ಕೂಡ ಸಚಿವರು ಆಗುತ್ತಾರೆ ಎಂದು ಹಿರೇಕೆರೂರು ಶಾಸಕ ಬಿಸಿ ಪಾಟೀಲ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಉಪಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಶಾಸಕರು ಮಾತ್ರ ಸಚಿವರು ಆಗ್ತಾರೆ. ಸೋಲು ಅನುಭವಿಸಿರುವವರಿಗೆ ಸಚಿವ ಸ್ಥಾನ ಸಿಗಲ್ಲವೆಂದು ಆರ್ ಅಶೋಕ್ ಹಾಗೂ ಈಶ್ವರಪ್ಪ ಹೇಳಿಕೆ ನೀಡಿದ್ದು ಸುಳ್ಳು. ಎಂಟಿಬಿ ನಾಗರಾಜ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಹೇಳಿದರು.

ಎಂಟಿಬಿ ನಾಗರಾಜರನ್ನ ಸಚಿವರನ್ನಾಗಿ ಮಾಡೋದಾಗಿ ಸಿಎಂ ಬಿ ಎಸ್ ಯಡಿಯೂರಪ್ಪ ಭರವಸೆ‌ ನೀಡಿದ್ದಾರೆ. ಜನವರಿ ಮೊದಲ ವಾರದಲ್ಲಿ ಸಿಎಂ, ಅಮಿತ್ ಶಾ ಜೊತೆ ಚರ್ಚೆ ನಡೆಸಲಿದ್ದಾರೆ. ಸಂಕ್ರಾತಿ ನಂತರ ನಡೆಯುವ ಸಂಪುಟ ವಿಸ್ತರಣೆಯಲ್ಲಿ ನಮ್ಮ ಜೊತೆ ಎಂಟಿಬಿ ನಾಗರಾಜ ಸಹ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಅಲ್ಲದೇ ನಾವೂ ಯಾರು ಹಿಂತಹ ಖಾತೆಗಳೆ ಬೇಕು ಎಂದು ಪಟ್ಟುಹಿಡಿದಿಲ್ಲ. ಸಚಿವರಾಗಿ ಪ್ರಮಾಣವಚನ ಸ್ವೀಕಾರ ಮಾಡಿದ ನಂತರ ಖಾತೆಗಳ ಬಗ್ಗೆ ನಿರ್ಧಾರ ಮಾಡಲಿದ್ದೇವೆ ಎಂದಿದ್ದಾರೆ.

ಹುಬ್ಬಳ್ಳಿಯಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಬಗ್ಗೆ ಬಿಜೆಪಿ ನಡೆಸುತ್ತಿರುವ ಪ್ರಮುಖರ ಅಭಿಯಾನದಲ್ಲಿ ಪಾಲ್ಗೊಂಡಿದ್ದ ಬಿಸಿ ಪಾಟೀಲ ತಾವು ಸಚಿವರಾಗೋದು ಗ್ಯಾರಂಟಿ ಎಂದು ಭರವಸೆ ವ್ಯಕ್ತಪಡಿಸಿದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ – ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್ . ಇಡೀ ದಿನ ತಾಜಾ ಸುದ್ದಿಗಳ ಪಡೆಯಿರಿ.

Allow Notifications

You have already subscribed

Source Credit Oneindia.com

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಡಿ.ಕೆ.ಶಿವಕುಮಾರ್‌ ಗೆ ಹೊಸ ಹೆಸರು ನಾಮಕರಣ ಮಾಡಿದ ರೇಣುಕಾಚಾರ್ಯ

Sat Dec 28 , 2019
Source Credit Oneindia.com Pin it Email https://nirantharanews.com/%e0%b2%8e%e0%b2%82%e0%b2%9f%e0%b2%bf%e0%b2%ac%e0%b2%bf-%e0%b2%a8%e0%b2%be%e0%b2%97%e0%b2%b0%e0%b2%be%e0%b2%9c%e0%b3%8d-%e0%b2%95%e0%b3%82%e0%b2%a1-%e0%b2%b8%e0%b2%9a%e0%b2%bf%e0%b2%b5%e0%b2%b0/#Wg== Davanagere oi-Manjunatha C | Published: Saturday, December 28, 2019, 15:43 [IST] ದಾವಣಗೆರೆ, ಡಿಸೆಂಬರ್ 28: ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಗೆ ಬಿಜೆಪಿ ಶಾಸಕ ರೇಣುಕಾಚಾರ್ಯ ಹೊಸ ಹೆಸರು ನಾಮಕರಣ ಮಾಡಿದ್ದಾರೆ. ಏಷ್ಯಾದಲ್ಲಿ ಎತ್ತರದ ಏಸುವಿನ ಪ್ರತಿಮೆಯನ್ನು ಡಿ.ಕೆ.ಶಿವಕುಮಾರ್‌ ಕನಕಪುರದಲ್ಲಿ ನಿರ್ಮಾಮಿಸಲು ಶಿಲಾನ್ಯಾಸ ಮಾಡಿರುವ ಬಗ್ಗೆ ಟೀಕಿಸಿದ ರೇಣುಕಾಚಾರ್ಯ, ‘ಇನ್ನು ಮುಂದೆ ಡಿ.ಕೆ.ಶಿವಕುಮಾರ್ ಅನ್ನು ಇನ್ನುಮುಂದೆ ‘ಏಸುಕುಮಾರ’ ಎಂದು ಕರೆಯಬೇಕು ಎಂದರು. ಏಸು ಪ್ರತಿಮೆ ನಿರ್ಮಾಣವನ್ನು ತಡೆಯುವ ಹಠಕ್ಕೆ ಬಿದ್ದಂತಿರುವ ಬಿಜೆಪಿ, […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links