ಉಸೇನ್ ಬೋಲ್ಟ್ ದಾಖಲೆ ಮುರಿದ ಕಂಬಳ ಓಟಗಾರನಿಗೆ ಕೇಂದ್ರ ಕ್ರೀಡಾ ಸಚಿವರ ಬೆಂಬಲ

Source Credit TheMangaloreMirror.in

ಉಸೇನ್ ಬೋಲ್ಟ್ ದಾಖಲೆ ಮುರಿದ ಕಂಬಳ ಓಟಗಾರನಿಗೆ ಕೇಂದ್ರ ಕ್ರೀಡಾ ಸಚಿವರ ಬೆಂಬಲ

ಮಂಗಳೂರು ಫೆಬ್ರವರಿ 15: ಕಂಬಳ ಗದ್ದೆಯಲ್ಲಿ 100 ಮೀಟರ್ ಓಟವನ್ನು 9.55 ಸೆಕೆಂಡ್​ಗಳಲ್ಲಿ ಕ್ರಮಿಸಿದ ಅಶ್ವತ್ಥಪುರ ಶ್ರೀನಿವಾಸ ಗೌಡ ಅವರ ಓಟ ಈಗ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದೆ. ಇಂದು ಬೆಳಿಗ್ಗೆಯಿಂದಲೇ ಟ್ವೀಟರ್ ನಲ್ಲಿ ಉಸೇನ್ ಬೋಲ್ಟ್ ಹೆಸರಿನಲ್ಲಿ ಶ್ರೀನಿವಾಸ ಗೌಡ ಅವರು ಟ್ರೆಂಡಿಂಗ್ ನಲ್ಲಿದ್ದರು.

ಫೆ.1ರಂದು ನಡೆದ ಐಕಳಬಾವ ಕಾಂತಬಾರೆ ಬೂದಬಾರೆ ಜೋಡುಕರೆ ಕಂಬಳದಲ್ಲಿ ಶ್ರೀನಿವಾಸ್ ಕೋಣಗಳೊಂದಿಗೆ ನೇಗಿಲು ಹಿರಿಯ ವಿಭಾಗದಲ್ಲಿ 142.50 ಮೀಟರ್ ಉದ್ದದ ಕರೆಯನ್ನು 13.62 ಸೆಕೆಂಡ್​ಗಳಲ್ಲಿ ಕ್ರಮಿಸಿದ್ದಾರೆ. ಇದನ್ನು 100 ಮೀಟರ್​ಗೆ ಬದಲಾಯಿಸಿದರೆ 9.55 ಸೆಕೆಂಡ್​ಗಳಲ್ಲಿ ಓಡಿದಂತಾಗುತ್ತದೆ.

ಇಷ್ಟು ವೇಗದಲ್ಲಿ ಈವರೆಗೆ ಕಂಬಳ ಕೆರೆಯಲ್ಲಿ ಯಾರೂ ಓಡಿರುವ ದಾಖಲೆ ಇಲ್ಲ. ವಿಶ್ವವಿಖ್ಯಾತ ಓಟಗಾರ ಜಮೈಕಾದ ಉಸೇನ್ ಬೋಲ್ಟ್ ಟ್ರ್ಯಾಕ್ ನಲ್ಲಿ 9.58 ಸೆಕೆಂಡ್​ಗಳಲ್ಲಿ 100 ಮೀ. ಓಡಿರುವುದನ್ನು ಕೆಸರುಗದ್ದೆಯಲ್ಲಿ ಓಡಿರುವ ಶ್ರೀನಿವಾಸ ಗೌಡ ಮೀರಿಸಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

ಈಗಾಗಲೇ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದು, ಕಾಂಗ್ರೇಸ್ ಮುಖಂಡ ಶಶಿ ತರೂರ್ ತಮ್ಮ ಟ್ವೀಟರ್ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿದ್ದು, ಸಂಬಂಧಪಟ್ಟ ಇಲಾಖೆ ಈ ಪ್ರತಿಭೆಯನ್ನು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳಬೇಕು ಎಂದು ತಿಳಿಸಿದ್ದರು.

ಕೇಂದ್ರ ಕ್ರೀಡಾ ಸಚಿವ ಕಿರಣ್‌ ರಿಜಿಜು ಈ ಬಗ್ಗೆ ಟ್ವೀಟ್ ಮಾಡಿದ್ದು, ಶ್ರೀನಿವಾಸ ಗೌಡ ಅವರ ಜೊತೆ ಮಾತನಾಡಿದ ಸಾಯ್ ನಲ್ಲಿ ಟ್ರಯಲ್ ನೋಡಲಾಗುವುದು ಎಂದು ತಿಳಿಸಿದ್ದಾರೆ. ಅಲ್ಲದೆ ಜನರಲ್ಲಿ ಒಲಂಪಿಕ್ಸ್ ಕ್ರೀಡಾಕೂಟದ ಕುರಿತಂತೆ ಮಾಹಿತಿಯ ಕೊರತೆ ಇದ್ದು, ಅಲ್ಲಿ ಕ್ರೀಡಾಪಟುಗಳ ಸಾಮರ್ಥ್ಯವನ್ನು , ಸಹಿಷ್ಣುತೆ ಎಲ್ಲಾ ಗಣನೆಗೆ ಬರುತ್ತದೆ ಎಂದು ತಿಳಿಸಿದರು. ಅಲ್ಲದೆ ದೇಶದ ಎಲ್ಲಾ ಕ್ರೀಡಾ ಪ್ರತಿಭೆಗಳಿಗೆ ಅವಕಾಶ ನೀಡಲಾಗುವುದು ಎಂದರು. ಯಾರೊಬ್ಬರು ಅವಕಾಶ ವಂಚಿತರಾಗದಂತೆ ನೋಡಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

Facebook Comments

comments

Source Credit TheMangaloreMirror.in

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಕೆಪಿಸಿಸಿ ಅಧ್ಯಕ್ಷ ಹುದ್ದೆ: ಎಲ್ಲರೂ ಒಪ್ಪುವ ಅಂತಿಮ ಸೂತ್ರ ಫೈನಲ್ ಮಾಡಿದ ಸೋನಿಯಾ ಗಾಂಧಿ

Sat Feb 15 , 2020
Source Credit Oneindia.com Pin it Email https://nirantharanews.com/%e0%b2%89%e0%b2%b8%e0%b3%87%e0%b2%a8%e0%b3%8d-%e0%b2%ac%e0%b3%8b%e0%b2%b2%e0%b3%8d%e0%b2%9f%e0%b3%8d-%e0%b2%a6%e0%b2%be%e0%b2%96%e0%b2%b2%e0%b3%86-%e0%b2%ae%e0%b3%81%e0%b2%b0%e0%b2%bf%e0%b2%a6/#Wg== Karnataka oi-Balaraj Tantri | Published: Saturday, February 15, 2020, 12:58 [IST] ಹಲವು ಸುತ್ತಿನ ಮಾತುಕತೆ, ಅಭಿಪ್ರಾಯ ಆಲಿಸಿದ ನಂತರ, ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಜ್ಯ ಕಾಂಗ್ರೆಸ್ ಘಟಕದ ಎರಡು ಆಯಕಟ್ಟಿನ ಹುದ್ದೆಗೆ ಹೆಸರನ್ನು ಅಂತಿಮಗೊಳಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಮೂಲ ಕಾಂಗ್ರೆಸ್ಸಿಗರು ಮತ್ತು ವಲಸೆ ಕಾಂಗ್ರೆಸ್ಸಿಗರು ಎನ್ನುವ ಎರಡು ಬಣಗಳು, ತಾವಿಟ್ಟ ಬೇಡಿಕೆಗಳಿಗೆ ಮನ್ನಣೆ ಸಿಗಬೇಕು ಎನ್ನುವ ಹಠ ಮುಂದುವರಿಸಿರುವುದರಿಂದ, ಎಲ್ಲರಿಗೂ ಒಪ್ಪುವ ಸೂತ್ರವನ್ನು ಸೋನಿಯಾ ಗಾಂಧಿ ಹಣೆದಿದ್ದಾರೆ. […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links