ಉಪ ಚುನಾವಣೆ; ಸಿದ್ದರಾಮಯ್ಯಗೆ ಬಿಜೆಪಿ ಚಾಲೆಂಜ್!

Source Credit Oneindia.com

Karnataka

oi-Gururaj S

|

ಬೆಂಗಳೂರು, ನವೆಂಬರ್ 22 : “15 ಕ್ಷೇತ್ರದ ಉಪ ಚುನಾವಣೆ ಬಳಿಕ ಕಾಂಗ್ರೆಸ್ ಪಕ್ಷ ಎಲ್ಲಿದೆ ಎಂದು ಗೊತ್ತಾಗಲಿದೆ. ಸ್ವೀಕಾರ ಮಾಡಲು ಕಲಿಯರಿ, ಕರ್ನಾಟಕದ ಜನರು ಅದನ್ನಾದರೂ ಹೊಗಳುತ್ತಾರೆ” ಎಂದು ಬಿಜೆಪಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ ಪಾಠ ಹೇಳಿದೆ.

ಕರ್ನಾಟಕ ಬಿಜೆಪಿ ಉಸ್ತುವಾರಿ ಪಿ. ಮುರಳೀಧರರಾವ್ ಶುಕ್ರವಾರ ಸಿದ್ದರಾಮಯ್ಯ ವಿರುದ್ಧ ಸರಣಿ ಟ್ವೀಟ್‌ಗಳನ್ನು ಮಾಡಿದ್ದಾರೆ. “ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಇಂದಿನ ಸ್ಥಿತಿಗೆ ಸಿದ್ದರಾಮಯ್ಯ, ಡಿ. ಕೆ. ಶಿವಕುಮಾರ್ ಕಾರಣ” ಎಂದು ಆರೋಪಿಸಿದ್ದಾರೆ.

ಡಿಸೆಂಬರ್ 5ರಂದು 15 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ನಡೆಯಲಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಉಪ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿವೆ. ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದ ಶಾಸಕರು ಮೈತ್ರಿ ಸರ್ಕಾರ ಬೀಳಿಸಿ, ಬಿಜೆಪಿ ಸೇರಿದ್ದು ಅವರ ವಿರುದ್ಧ ಗೆದ್ದು ಬೀಗಬೇಕು ಎಂಬುದು ಕಾಂಗ್ರೆಸ್ ಪಣವಾಗಿದೆ.

ಚುನಾವಣಾ ಪ್ರಚಾರ ದಿನದಿಂದ ದಿನಕ್ಕೆ ರಂಗು ಪಡೆದುಕೊಳ್ಳುತ್ತಿದೆ. ಟ್ವಿಟರ್ ಮೂಲಕವೂ ನಾಯಕರು ಆರೋಪ ಪ್ರತ್ಯಾರೋಪಗಳನ್ನು ಮಾಡುತ್ತಿದ್ದಾರೆ. ಏಟು-ತಿರುಗೇಟುಗಳನ್ನು ನೀಡುತ್ತಿದ್ದಾರೆ. ಬಿಜೆಪಿ ನಾಯಕರು ಸಿದ್ದರಾಮಯ್ಯರನ್ನು ಟಾರ್ಗೆಟ್ ಮಾಡುತ್ತಿದ್ದಾರೆ.

ಸುಳ್ಳು ಹೇಳುವುದನ್ನು ಬಿಡಿ

“ಶ್ರೀ ಸಿದ್ದರಾಮಯ್ಯ ಅವರೇ ಅಧಿಕಾರ ಕಳೆದುಕೊಂಡ ಮೇಲೂ ನೀವು ಸುಳ್ಳು ಹೇಳುವುದನ್ನು ನಿಲ್ಲಿಸಿಲ್ಲ. ಕಾಂಗ್ರೆಸ್ ಪಕ್ಷದ ಕರ್ನಾಟಕದ ಸ್ಥಿತಿಗೆ ಜವಾಬ್ದಾರಿ ಬಿಜೆಪಿಯಲ್ಲ. ಅದು ನೀವು ಮತ್ತು ನಿಮ್ಮ ಹೈಕಮಾಂಡ್” ಎಂದು ಪಿ. ಮುರಳೀಧರರಾವ್ ಟ್ವೀಟ್ ಮಾಡಿದ್ದಾರೆ.

ಯಡಿಯೂರಪ್ಪ ನೇತೃತ್ವ

“ಯಡಿಯೂರಪ್ಪ ಅವರ ನೇತೃತ್ವದಲ್ಲಿ ಬಿಜೆಪಿ ಸ್ಥಿರ ಸರ್ಕಾರವನ್ನು ನೀಡಲಿದೆ. ಅಭಿವೃದ್ಧಿ ಮತ್ತು ಕಲ್ಯಾಣವನ್ನು ಒಟ್ಟಿಗೆ ನೀಡಲಿದೆ” ಎಂದು ಪಿ. ಮುರಳೀಧರರಾವ್ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಸಿದ್ದರಾಮಯ್ಯಗೆ ಚಾಲೆಂಜ್

“15 ಕ್ಷೇತ್ರದ ಉಪ ಚುನಾವಣೆಯಲ್ಲಿ 12 ಕಾಂಗ್ರೆಸ್‌ನಿಂದಲೇ ಆಗುತ್ತಿದೆ. ಚುನಾವಣಾ ಫಲಿತಾಂಶ ಕಾಂಗ್ರೆಸ್ ಎಲ್ಲಿದೆ ಎಂಬುದನ್ನು ತೋರಿಸಲಿದೆ” ಎಂದು ಪಿ. ಮುರಳೀಧರರಾವ್ ಹೇಳಿದ್ದಾರೆ.

ಮೈತ್ರಿ ಸರ್ಕಾರ ಪತನ

“ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಬಿಜೆಪಿಯಿಂದ ಪತನವಾಗಿಲ್ಲ. ಸಿದ್ದರಾಮಯ್ಯ, ಡಿ. ಕೆ. ಶಿವಕುಮಾರ್‌ರಿಂದ ಪತನಗೊಂಡಿತು. ಇದಕ್ಕಾಗಿ ಬಿಜೆಪಿಯತ್ತ ಬೊಟ್ಟು ಮಾಡಬೇಡಿ” ಎಂದು ಪಿ. ಮುರಳೀಧರರಾವ್ ಟ್ವೀಟ್ ಮಾಡಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ – ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್ . ಇಡೀ ದಿನ ತಾಜಾ ಸುದ್ದಿಗಳ ಪಡೆಯಿರಿ.

Allow Notifications

You have already subscribed

Source Credit Oneindia.com

Niranthara News

Leave a Reply

Your email address will not be published. Required fields are marked *

Next Post

ಬ್ರಾಹ್ಮಣರನ್ನು ಬೈಯ್ಯಲು ಜಯವೀರ ಮೇಲಿಂದ ಉದುರಿದ್ದಾರೆಯೇ?

Sat Nov 23 , 2019
Source Credit Vishwavani.news ಪಿ. ವಿಷ್ಣುಶರ್ಮಾ ಶ್ರೀಜಯವೀರ ವಿಕ್ರಮ ಸಂಪತ್‌ಗೌಡರ ‘ ಪ್ರಶ್ನೆೆ ಮಾಡಲು ಬ್ರಾಾಹ್ಮಣರೇನು ಮೇಲಿಂದ ಇಳಿದು ಬಂದವರಾ?’ ಲೇಖನದ ಕುರಿತು ಒಂದು ಪ್ರತಿಕ್ರಿಿಯೆ.ಜಯವೀರ ಅವರು ಈ ಹಿಂದೆಯೇ ರಘುನಾಥ್ ಗುರೂಜಿ ಅವರ ವಿವಾದಕ್ಕೆೆ ಸಂಬಂಧಿಸಿದಂತೆ ವಿಶ್ವವಾಣಿಯಲ್ಲಿ ಸಾಕಷ್ಟು ಖಾರವಾಗಿಯೇ ಪ್ರತಿಕ್ರಿಿಯಿಸಿದ್ದರು. ಅದನ್ನು ಬ್ರಾಾಹ್ಮಣರೆಲ್ಲರೂ ಉತ್ತಮ ಭಾವನೆಯಿಂದ ಆರೋಗ್ಯಕರ ದೃಷ್ಟಿಿಯಿಂದಲೇ ಸ್ವೀಕರಿಸಿದ್ದರು. ಅಷ್ಟು ಸಾಕಾಗಿತ್ತು. ಮತ್ತೆೆ ಮತ್ತೆೆ ಜಯವೀರ ಅವರು ತಾವೇನೋ ಬ್ರಾಾಹ್ಮಣ ಸಮುದಾಯವನ್ನು ಉದ್ಧರಿಸಲು ಮೇಲಿಂದ ಉದುರಿದ ಅವತಾರ ಪುರುಷರಂತೆ ಇಡೀ ಬ್ರಾಾಹ್ಮಣ ಜಾತಿಯನ್ನೇ ಅವಹೇಳನ ಮಾಡುತ್ತಾಾ ಉಪದೇಶಾಮೃತ ನೀಡುವ ಪ್ರಯತ್ನ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links