ಉಪ ಚುನಾವಣೆ: ಬಿಜೆಪಿಯಿಂದ ಕಾಂಗ್ರೆಸ್ ಅಭ್ಯರ್ಥಿಗೆ 15 ಕೋಟಿ..?

Source Credit Oneindia.com

Mandya

oi-Puttappa Koli

|

ಮಂಡ್ಯ, ಡಿಸೆಂಬರ್ 25: ಉಪ ಚುನಾವಣೆಯಲ್ಲಿ ಕೆ.ಆರ್.ಪೇಟೆ ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ.ಚಂದ್ರಶೇಖರ್ ಅವರು ಬಿಜೆಪಿಯಿಂದ 15 ಕೋಟಿ ರೂ, ಪಡೆದಿದ್ದಾರೆ ಎಂದು ಜೆಡಿಎಸ್ ತಾಲ್ಲೂಕು ಪಂಚಾಯಿತಿ ಸದಸ್ಯ ದಿನೇಶ್ ರಾಜಾಹುಲಿ ಆರೋಪಿಸಿದ್ದಾರೆ.

ಮಂಡ್ಯ ಜೆಡಿಎಸ್ ನ ಭದ್ರಕೋಟೆಯಾಗಿದೆ. ಆದರೂ ಉಪ ಚುನಾವಣೆಯಲ್ಲಿ ಕೆ.ಆರ್.ಪೇಟೆಯಲ್ಲಿ ಜೆಡಿಎಸ್ ಗೆ ಸೋಲಾಗಿದ್ದು ಅಚ್ಚರಿಯನ್ನುಂಟು ಮಾಡಿದೆ ಎಂದು ದಿನೇಶ್ ಕಾರ್ಯಕರ್ತರ ಸಭೆಯಲ್ಲಿ ಹೇಳಿದ್ದಾರೆ.

ನಮ್ಮ ಅಭ್ಯರ್ಥಿಗೆ ಸೋಲಾಗಲು ಕಾಂಗ್ರೆಸ್ ಕಾರಣ, ಇಲ್ಲಿನ ಕಾಂಗ್ರೆಸ್ ಅಭ್ಯರ್ಥಿಯು ಬಿಜೆಪಿಗೆ 15 ಕೋಟಿ ರೂ, ಗೆ ಮಾರಾಟವಾಗಿದ್ದಾರೆ ಎಂದು ಆರೋಪಿಸಿದ್ದಾರೆ.

ಕ್ಷೇತ್ರದ ಮತದಾರರಿಗೆ ಈ ವಿಷಯ ಗೊತ್ತಾಗಲಿಲ್ಲ, ಆದರೆ ಕಾಂಗ್ರೆಸ್ ನ ಕೆಲವು ಮತದಾರರಿಗೆ ಈ ವಿಷಯ ಗೊತ್ತಾಗಿ ಜೆಡಿಎಸ್ ಬೆಂಬಲಿಸಿದರು ಎಂದಿದ್ದಾರೆ.

ನಮ್ಮ ಜೆಡಿಎಸ್ ಅಭ್ಯರ್ಥಿಗೆ ಈ ಉಪ ಚುನಾವಣೆಯಲ್ಲಿ ಸೋಲಾಗಿಲ್ಲ, ಪ್ರಬಲ ಸ್ಪರ್ಧೆಯೊಡ್ಡಿದ್ದರು. ಈಗ ಇನ್ನಷ್ಟು ಶಕ್ತಿ ಹೆಚ್ಚಿಸಿಕೊಂಡಿದ್ದಾರೆ ಎಂದು ದಿನೇಶ್ ಹೇಳಿದ್ದಾರೆ.

ಜೆಡಿಎಸ್ ಶಾಸಕರಾಗಿದ್ದ ನಾರಾಯಣ ಗೌಡ ಅವರು ಜೆಡಿಎಸ್ ಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿ ಉಪ ಚುನಾವಣೆಯಲ್ಲಿ ಗೆಲುವು ದಾಖಲಿಸಿದ್ದರು. ಜೆಡಿಎಸ್ ತನ್ನ ಭದ್ರಕೋಟೆಯಲ್ಲಿಯೇ ನೆಲೆ ಕಳೆದುಕೊಂಡಿದ್ದರಿಂದ ಕಾಂಗ್ರೆಸ್ ಮೇಲೆ ಆರೋಪ ಮಾಡಲಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ – ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್ . ಇಡೀ ದಿನ ತಾಜಾ ಸುದ್ದಿಗಳ ಪಡೆಯಿರಿ.

Allow Notifications

You have already subscribed

Source Credit Oneindia.com

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಮಂಗಳೂರು ಗಲಭೆಯಲ್ಲಿ ಕೇರಳದವರ ಪಾತ್ರ – ಸಂಸದೆ ಶೋಭಾ ಕರಂದ್ಲಾಜೆ

Wed Dec 25 , 2019
Source Credit TheMangaloreMirror.in ಮಂಗಳೂರು ಗಲಭೆಯಲ್ಲಿ ಕೇರಳದವರ ಪಾತ್ರ – ಸಂಸದೆ ಶೋಭಾಕರಂದ್ಲಾಜೆ ಮಂಗಳೂರು ಡಿಸೆಂಬರ್ 25: ಗೋಲಿಬಾರ್ ನಲ್ಲಿ ಮೃತಪಟ್ಟವರ ಬಗ್ಗೆ ತನಿಖೆ ನಡೆಯುತ್ತಿದೆ. ಅವರು ಗಲಭೆಯಲ್ಲಿ ಭಾಗವಹಿಸಿದರ ಬಗ್ಗೆ ತನಿಖೆ ಮಾಡುತ್ತಿದ್ದು, ಯಾವುದೇ ಅಪರಾಧಿ ಗಳಿಗೆ ಪರಿಹಾರ‌ ನೀಡಿದ ಉದಾಹರಣೆ ನಮ್ಮ ದೇಶದಲ್ಲಿ ಇಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ. Pin it Email https://nirantharanews.com/%e0%b2%89%e0%b2%aa-%e0%b2%9a%e0%b3%81%e0%b2%a8%e0%b2%be%e0%b2%b5%e0%b2%a3%e0%b3%86-%e0%b2%ac%e0%b2%bf%e0%b2%9c%e0%b3%86%e0%b2%aa%e0%b2%bf%e0%b2%af%e0%b2%bf%e0%b2%82%e0%b2%a6-%e0%b2%95%e0%b2%be/#c2hvYmEucG5n ಮಂಗಳೂರಿನಲ್ಲಿ ಮಾತನಾಡಿದ ಅವರು ಗೋಲಿಬಾರ್ ನಲ್ಲಿ ಮೃತಪಟ್ಟವರಿಗೆ ಪರಿಹಾರ ಇನ್ನು ನೀಡಿಲ್ಲ. ತನಿಖೆ ಮುಗಿದ ಬಳಿಕ ಪರಿಹಾರ ಘೋಷಣೆ ಬಗ್ಗೆ ಮರು ವಿಶ್ಲೇಷಣೆ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links