ಉಪ ಚುನಾವಣೆ ಬಳಿಕ ರಮೇಶಕುಮಾರ್ ಸತ್ಯ ಹೊರಹಾಕುತ್ತೇನೆ: ಸುಧಾಕರ್

Source Credit Oneindia.com

Chikkaballapur

oi-Puttappa Koli

|

ಚಿಕ್ಕಬಳ್ಳಾಪುರ, ಡಿಸೆಂಬರ್ 03: ಉಪ ಚುನಾವಣೆ ಮುಗಿದ ಬಳಿಕ ಸಿದ್ದರಾಮಯ್ಯ ಮತ್ತು ರಮೇಶ್ ಕುಮಾರ್ ಕುರಿತ ಸತ್ಯಗಳನ್ನು ಹೊರಹಾಕುತ್ತೇನೆಂದು ಚಿಕ್ಕಬಳ್ಳಾಪುರ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಹೇಳಿದ್ದಾರೆ.

ಉಪ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಸುಧಾಕರ್, ಈ ಇಬ್ಬರ ಕುರಿತು ಕೆಲ ಸತ್ಯಗಳನ್ನು ಹೇಳಬೇಕಿದೆ, ಉಪ ಚುನಾವಣೆ ಇರುವುದರಿಂದ ಸಾಧ್ಯವಾಗುತ್ತಿಲ್ಲ, ಮುಂದೆ ಎಲ್ಲವನ್ನು ಜನರ ಎದುರು ಬಿಚ್ಚಿಡುತ್ತೇನೆಂದು ಎಂದು ಹೇಳಿದರು.

ನಾಯಕರಾದವರು ಅವರ ಹಿರಿತನ, ಅನುಭವಕ್ಕೆ ತಕ್ಕಂತೆ ಮಾತನಾಡಬೇಕು, ಆಧಾರ ರಹಿತವಾಗಿ ನಿಂದನೆ ಮಾಡಬಾರದು, ತಮ್ಮ ಬಗ್ಗೆ ಅಪಪ್ರಚಾರ ಮಾಡುವುದರಿಂದ ಅವರ ವ್ಯಕ್ತಿತ್ವಕ್ಕೆ ಶೋಭೆ ತರುವುದಿಲ್ಲ ಎಂದು ತಿರುಗೇಟು ನೀಡಿದರು.

ನನ್ನ ರಾಜಕೀಯ ಗುರು ಎಸ್.ಎಂ.ಕೃಷ್ಣ ಅವರು, ಕಾಂಗ್ರೆಸ್ ನಿಂದ ನನಗೆ ಟಿಕೆಟ್ ಕೊಡಿಸಿದ್ದು ಅವರು ಎಂದರು. ಅದರಲ್ಲಿ ಡಾ. ಜಿ.ಪರಮೇಶ್ವರ್ ಕೂಡಾ ಒಬ್ಬರೆಂದರು.

ಮಾಜಿ ಸ್ಪೀಕರ್ ರಮೇಶ್ ಕುಮಾರ್ ಧಾರಾವಾಹಿಗಳಲ್ಲಿ ನಟಿಸುತ್ತಿದ್ದರು, ಅವರು ನಟನೆಯನ್ನೇ ಮುಂದುವರೆಸಿಕೊಂಡು ಹೋಗಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ – ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್ . ಇಡೀ ದಿನ ತಾಜಾ ಸುದ್ದಿಗಳ ಪಡೆಯಿರಿ.

Allow Notifications

You have already subscribed

Source Credit Oneindia.com

Niranthara News

Leave a Reply

Your email address will not be published. Required fields are marked *

Next Post

ಉಪ ಚುನಾವಣೆ ಪ್ರಚಾರಕ್ಕೆ ಸಂಜೆ ತೆರೆ, ಹಲವು ನಾಯಕರಿಂದ ನೀತಿ ಸಂಹಿತೆ ಉಲ್ಲಂಘನೆ

Wed Dec 4 , 2019
Source Credit Oneindia.com Pin it Email https://nirantharanews.com/%e0%b2%89%e0%b2%aa-%e0%b2%9a%e0%b3%81%e0%b2%a8%e0%b2%be%e0%b2%b5%e0%b2%a3%e0%b3%86-%e0%b2%ac%e0%b2%b3%e0%b2%bf%e0%b2%95-%e0%b2%b0%e0%b2%ae%e0%b3%87%e0%b2%b6%e0%b2%95%e0%b3%81%e0%b2%ae%e0%b2%be/#Wg== Karnataka oi-Gururaj S | Updated: Tuesday, December 3, 2019, 14:28 [IST] ಬೆಂಗಳೂರು, ಡಿಸೆಂಬರ್ 03 : 15 ಕ್ಷೇತ್ರದ ಉಪ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಇಂದು ಸಂಜೆ ತೆರೆ ಬೀಳಲಿದೆ. 156 ಪುರುಷರು ಸೇರಿದಂತೆ ಒಟ್ಟು 165 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದು, ಡಿಸೆಂಬರ್ 5ರಂದು ಮತದಾನ ನಡೆಯಲಿದೆ. ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಮತದಾನದ ತಯಾರಿ ಬಗ್ಗೆ ಮಾಹಿತಿ ನೀಡಿದ್ದಾರೆ. ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಆರೋಪದ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links