ಉಜಿರೆ ಕಾಲೇಜಿನಲ್ಲಿ ವೆಂಚ್ಯುರಾ ಫೆಸ್ಟ್

Source Credit NewsKannada.com

ಉಜಿರೆ ಕಾಲೇಜಿನಲ್ಲಿ ವೆಂಚ್ಯುರಾ ಫೆಸ್ಟ್


HSA
  ¦   


Jan 16, 2020 02:41:30 PM (IST)

ಉಜಿರೆ: ಜೀವನದಲ್ಲಿ ಹಲವಾರು ಕಷ್ಟಗಳು ಎದುರಾಗಬಹುದು, ತೊಂದರೆಗಳು ಹುಟ್ಟಿಕೊಳ್ಳಬಹುದು, ವಿವಿಧ ರೀತಿಯ ಆಕರ್ಷಣೆಗಳಿಗೆ ಒಳಗೊಳ್ಳಬಹುದು, ಏನೇ ಅಡ್ಡಿಗಳಾದರೂ ಸಾಧಿಸಬೇಕಾದ ಗುರಿ ಬಿಡಬಾರದು ಎಂದು ಉಜಿರೆಯ ರುಡ್ಸೆಟ್ ಸಂಸ್ಥೆಯ ನಿರ್ದೇಶಕ ಡಾ.ಜನಾರ್ಧನ್ ಹೇಳಿದರು.

ಉಜಿರೆಯ ಎಸ್.ಡಿ.ಎಂ. ಪದವಿ ಕಾಲೇಜಿನ ವಾಣಿಜ್ಯ ವಿಭಾಗದಿಂದ ಗುರುವಾರ ಆಯೋಜಿಸಲಾಗಿದ್ದ ವೆಂಚ್ಯುರಾ 20 ಎಂಬ ರಾಜ್ಯ ಮಟ್ಟದ ಸ್ಪರ್ಧಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.  

ಬದುಕಿನಲ್ಲಿ ಸ್ಪೂರ್ತಿ ಪಡೆದುಕೊಂಡು, ತಲುಪಬೇಕಾದ ಗುರಿಯನ್ನು ನಿರ್ಧರಿಸಿ, ಅಂತಹ ಗುರಿಯೆಡೆಗೆ ಸಾಗಲು ನಿರ್ದಿಷ್ಟ ಸಮಯ ನಿಗದಿಗೊಳಿಸಿ ಮತ್ತು ಪರಿಶ್ರಮದಿಂದ ಸದಾ ತಮ್ಮ ಗುರಿಯೆಡೆಗೆ ಛಲ ಬಿಡದೆ ಗಮನ ಹರಿಸುವುದರ ಮೂಲಕ ಜೀವನದಲ್ಲಿ ಯಶಸ್ಸು ಪಡೆಯಬಹುದು. ಈ ಎಲ್ಲಾ ಹಂತಗಳ ಸಹಾಯದಿಂದ ಜೀವನದಲ್ಲಿ ಯಶಸ್ಸಿನ ಜೊತೆ ಗೌರವ, ಮನ್ನಣೆ, ಅಂತಸ್ತು ಮುಂತಾದವುಗಳು ಸಿಗುತ್ತವೆ ಎಂದು ಅವರು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲ ಪ್ರೊ. ಸತೀಶ್ಚಂದ್ರ ಮಾತನಾಡಿ. ಈಗಿನ ವಿದ್ಯಾರ್ಥಿಗಳಲ್ಲಿ ಕೆಲಸ ಮಾಡುವ ವಿಚಾರದಲ್ಲಿ ದಕ್ಷತೆ ಅತ್ಯಗತ್ಯವಾಗಿದೆ ಪ್ರತಿಯೊಬ್ಬರೂ ಕಾರ್ಯಕ್ಷಮತೆ ಗಳಿಸುವಂತಾಗಬೇಕು. ಮತ್ತು ಜೀವನದೆಡೆಗೆ ವಿದ್ಯಾರ್ಥಿಗಳ ವರ್ತನೆ ಅವರ ಯಶಸ್ಸಿಗೆ ಬಹು ಮುಖ್ಯ ಪಾತ್ರ ವಹಿಸುತ್ತದೆ ಎಂದರು.

ಕಾರ್ಯಕ್ರಮದಲ್ಲಿ ವಾಣಿಜ್ಯ ವಿಭಾಗದ ಪ್ರಾಧ್ಯಾಪಕ ಸುರೇಶ್ ಬಾಬು ಮತ್ತು ಪ್ರಿಯಾ ಕುಮಾರಿ ಅವರು ಪಿ.ಎಚ್.ಡಿ ಪೂರ್ಣಗೊಳಿಸಿದ ಸಲುವಾಗಿ ಸನ್ಮಾನಿಸಲಾಯಿತು. ಎನ್.ಇ.ಟಿ ಪರೀಕ್ಷೆ ಉತ್ತೀರ್ಣರಾದ ಪ್ರಾಧ್ಯಾಪಕ ಹರೀಶ್ ಶೆಟ್ಟಿ ಮತ್ತು ಡಾ.ಮಧುಶ್ರೀಯವರನ್ನು ಗೌರವಿಸಲಾಯತು. ಸಭೆಯಲ್ಲಿ ವ್ಯಾವಹಾರಿಕ ಅಧ್ಯಯನ ವಿಭಾಗದ ಮುಖ್ಯಸ್ಥ ಅಜಯ್ ಕೊಂಬ್ರಬೈಲ್ ಮತ್ತು ವಿದ್ಯಾರ್ಥಿ ನಾಯಕಿ ಅಕ್ಷತಾ ಉಪಸ್ಥಿತರಿದ್ದರು.  ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥ ಡಾ.ಉದಯ ಚಂದ್ರ ಸ್ವಾಗತಿಸಿ, ವಿದ್ಯಾರ್ಥಿನಿಯರಾದ ಯಶಸ್ವಿ ವಂದಿಸಿ, ದಿಯಾ ಅಜಯ್ ನಿರೂಪಿಸಿದರು. 

Source Credit NewsKannada.com

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಮೂರ್ಜೆ ಸುನಿತಾ ಪ್ರಭು ಪ್ರಧಾನ ಮಂತ್ರಿ ಬಾಲ ಪುರಸ್ಕಾರ  ಪ್ರಶಸ್ತಿಗೆ ಆಯ್ಕೆ

Thu Jan 16 , 2020
Source Credit NewsKannada.com HSA   ¦    Jan 16, 2020 06:15:51 PM (IST) ಮಂಗಳೂರು: ಭಾರತ ಸರಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವಾಲಯದಿಂದ ಘೋಷಿಸಲಾದ ಪ್ರದಾನ ಮಂತ್ರಿ ಬಲ ಪುರಸ್ಕಾರ ಪ್ರಶಸ್ತಿ ಬೆಳ್ತಂಗಡಿಯ ಮೂರ್ಜೆ ಸುನಿತಾ ಪ್ರಭು ರವರಿಗೆ ಒಲಿದಿದೆ. ಈ ಪುರಸ್ಕಾರ ಒಂದು ಲಕ್ಷ ನಗದು ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ. ಪ್ರತಿಭಾನ್ವಿತೆಯಾಗಿರುವ ಈಕೆ 2019 ರಲ್ಲಿ ಫಿನೀಕ್ಸ್ (ಅಮೇರಿಕಾದಲ್ಲಿ ) ನಡೆದ 80ನೇ ವಿಜ್ಞಾನ ಮತ್ತು ತಂತ್ರಜ್ಞಾನ ಮೇಳದಲ್ಲಿ ಭಾರತವನ್ನು ಪ್ರತಿನಿಧಿಸಿದ ಹಿನ್ನೆಲೆಯಲ್ಲಿ ಈ ಪುರಸ್ಕಾರ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links