ಉಕ್ರೇನ್ ವಿಮಾನವನ್ನು ಇರಾನ್ ಆಕಸ್ಮಿಕವಾಗಿ ಹೊಡೆದುರುಳಿಸಿದೆ: ಅಮೆರಿಕಾ ಅಧಿಕಾರಿಗಳು 

Source Credit Kannada Prabha

Source : Associated Press

ವಾಷಿಂಗ್ಟನ್: ಕಳೆದ ಮಂಗಳವಾರ ಉಕ್ರೇನ್ ನ ವಿಮಾನ ಭೀಕರ ಅಪಘಾತಕ್ಕೀಡಾಗಿ ಎಲ್ಲಾ 176 ಪ್ರಯಾಣಿಕರು ಮೃತಪಟ್ಟಿದ್ದು ಇರಾನ್ ನ ಕ್ಷಿಪಣಿ ದಾಳಿಯಿಂದ ಎಂದು ಅಮೆರಿಕಾದ ಅಧಿಕಾರಿಗಳು ತಿಳಿಸಿದ್ದಾರೆ. ಅದು ಇರಾನ್ ನ ತಪ್ಪಿನಿಂದ ಆಗಿರಬಹುದೇ ಹೊರತು ಉದ್ದೇಶಪೂರ್ವಕವಾಗಿ ನಡೆಸಿದ ದಾಳಿಯಾಗಿರಲಿಕ್ಕಿಲ್ಲ ಎಂದು ಅವರು ಹೇಳಿದ್ದಾರೆ.

ಈ ವಿಮಾನ ಅಪಘಾತದಲ್ಲಿ ಕನಿಷ್ಠ 63 ಮಂದಿ ಕೆನಡಾದ ಪ್ರಜೆಗಳು ಮೃತಪಟ್ಟಿದ್ದು ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಸಹ ಟೊರಂಟೊದಲ್ಲಿ ಸುದ್ದಿಗೋಷ್ಠಿಯಲ್ಲಿ ಇದೇ ಮಾತುಗಳನ್ನು ಹೇಳಿದ್ದರು. ಮೇಲ್ಮೈ ವಾಯು ಕ್ಷಿಪಣಿ ದಾಳಿಯಿಂದ ವಿಮಾನ ಅಪಘಾತಕ್ಕೀಡಾಗಿರಬಹುದೆ ಹೊರತು ಉದ್ದೇಶಪೂರ್ವಕವಾಗಿ ನಡೆಸಿದ ದಾಳಿಯಾಗಿರಲಿಕ್ಕಿಲ್ಲ ಎಂದು ಹೇಳಿದ್ದರು.

ತನ್ನ ಕ್ರಾಂತಿಕಾರಿ ಸೇನಾಧಿಕಾರಿ ಖಾಸಿಮ್ ಸೊಲೈಮಾನಿಯನ್ನು ಹತ್ಯೆಗೈದ ಅಮೆರಿಕಾ ಸೇನಾ ನೆಲೆ ಮೇಲೆ ಪ್ರತೀಕಾರವಾಗಿ ಇರಾನ್ ಕ್ಷಿಪಣಿ ದಾಳಿ ನಡೆಸಿದ ಕೆಲವೇ ಗಂಟೆಗಳಲ್ಲಿ ಉಕ್ರೇನ್ ನ ವಿಮಾನ ಅಪಘಾತಕ್ಕೀಡಾಗಿದೆ. ಸೂಕ್ಷ್ಮ ಭದ್ರತೆ ಬಗ್ಗೆ ಮಾತನಾಡಿದ ಅಮೆರಿಕಾದ ಇಬ್ಬರು ಅಧಿಕಾರಿಗಳು ಈ ಅಪಘಾತದ ಹಿಂದೆ ಇರಾನ್ ನ ಉದ್ದೇಶ ಏನಿತ್ತು ಎಂಬುದು ಗೊತ್ತಿಲ್ಲ. ಆದರೆ ಇದು ಬೆದರಿಕೆಯೊಡ್ಡಲು ನಡೆಸಿದ ಅಪಘಾತ ಎಂದು ತಪ್ಪಾಗಿ ಭಾವಿಸಿರಬಹುದು ಎಂದು ಹೇಳಲಾಗುತ್ತಿದೆ.

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರಂಭದಲ್ಲಿ ಇರಾನ್ ಈ ಅಪಘಾತಕ್ಕೆ ಕಾರಣವಾಗಿರಬಹುದು ಎಂಬರ್ಥದಲ್ಲಿ ಹೇಳಿದ್ದರು. ತಾಂತ್ರಿಕ ಸಮಸ್ಯೆಯಿಂದ ವಿಮಾನ ಅಪಘಾತವಾಗಿದೆ ಎಂಬ ಇರಾನ್ ನ ಆರಂಭದ ಹೇಳಿಕೆಯನ್ನು ತಳ್ಳಿಹಾಕಿದ್ದರು.

Source Credit Kannada Prabha

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಎಲಿಮಿನೇಷನ್ ಇಲ್ಲ ಎಂದರು.. ಆದರೇ ಶಾಕ್ ಕೊಟ್ಟ ಕಿಚ್ಚ ಸುದೀಪ್..

Sun Jan 12 , 2020
Source Credit RJ News Kannada ಬಿಗ್ ಬಾಸ್ ನಲ್ಲಿ ಈ ವಾರ ಎಲಿಮಿನೇಷನ್ ಇಲ್ಲದಿದ್ದರೂ ಕೂಡ ಸುದೀಪ್ ಅವರು ಮನೆಯ ಸದಸ್ಯರಿಗೆ ಶಾಕ್ ನೀಡಿದ್ದಾರೆ.. ಹೌದು ಬಿಗ್ ಬಾಸ್ 13ನೇ ವಾರದಲ್ಲಿ ನೋ ಎಲಿಮಿನೇಷನ್ ಆದ ಕಾರಣ ವೋಟಿಂಗ್ ಲೈನ್ ತೆರೆದಿರುವುದಿಲ್ಲ ಎಂದು ಜನರಿಗೆ ಹೇಳಲಾಗಿತ್ತು.. ಆದರೆ ಈ ವಿಚಾರ ಬಿಗ್ ಮನೆಯ ಸದಸ್ಯರಿಗೆ ತಿಳಿದಿರಲಿಲ್ಲ.. ಎಂದಿನಂತೆ ನಾಮಿನೇಷನ್ ಪ್ರಕ್ರಿಯೆ ನಡೆದಿತ್ತು.. ಇನ್ನೇನು ಫಿನಾಲೆ ಹತ್ತಿರ ಇರುವ ಕಾರಣ ಈ ವಾರ ಮನೆಯಿಂದ ಯಾರು ಹೊರ ಹೋಗ್ತಾರೆ ಎಂಬ ಲೆಕ್ಕಾಚಾರ ಜೋರಾಗಿಯೇ ನಡೆದಿತ್ತು.. […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links