ಈ ವಿಚಾರದಲ್ಲಿ ‘ಯುವರತ್ನ’ ಕಿಂಗ್: ಈ ದಾಖಲೆ ಬ್ರೇಕ್ ಮಾಡೋದು ಕಷ್ಟ!

ಕಾಮೆಂಟ್ನಲ್ಲಿ ಯುವರತ್ನ ಕಿಂಗ್

ವೀಕ್ಷಣೆ, ಲೈಕ್ಸ್ ಬಿಟ್ಟರೆ ಕಾಮೆಂಟ್ಸ್ ಕೂಡ ಈಗ ಪ್ರತಿಷ್ಠೆಯಾಗಿದೆ. ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ಕಾಮೆಂಟ್ ಪಡೆದು ಟೀಸರ್ ಯಾವುದು ಎಂದು ಹುಡುಕುತ್ತಾ ಹೋದಾಗ ಪುನೀತ್ ರಾಜ್ ಕುಮಾರ್ ಅವರ ಯುವರತ್ನ ಸಿನಿಮಾ ಟೀಸರ್ ಹೆಸರಿನಲ್ಲಿ ಈ ದಾಖಲೆ ಹೊಂದಿದೆ.

ಎಷ್ಟಿದೆ ಯುವರತ್ನನ ಕಾಮೆಂಟ್ಸ್?

ಅಕ್ಟೋಬರ್ 7 ರಂದು ಹೊಂಬಾಳೆ ಫಿಲಂಸ್ ಯೂಟ್ಯೂಬ್ ನಲ್ಲಿ ಯುವರತ್ನ ಟೀಸರ್ ಬಿಡುಗಡೆಯಾಗಿತ್ತು. ಇದುವರೆಗೂ 136K ಲೈಕ್ಸ್ ಹೊಂದಿರುವ ಈ ಟೀಸರ್ ಬರೋಬ್ಬರಿ 1 ಲಕ್ಷಕ್ಕೂ ಅಧಿಕ (104,909) ಕಾಮೆಂಟ್ ಹೊಂದಿದೆ. ಇಷ್ಟು ದೊಡ್ಡ ಸಂಖ್ಯೆಯ ಕಾಮೆಂಟ್ ಹೊಂದಿರುವ ಇನ್ನೊಂದು ಟೀಸರ್ ಕನ್ನಡ ಇಂಡಸ್ಟ್ರಿಯಲ್ಲಿಲ್ಲ.

‘ಒಡೆಯ’ ಟೀಸರ್ ಎಷ್ಟಿದೆ?

ನವೆಂಬರ್ 1 ರಂದು ಬಿಡುಗಡೆಯಾಗಿದ್ದ ಒಡೆಯ ಚಿತ್ರದ ಟೀಸರ್ ಗೆ 80 ಸಾವಿರಕ್ಕೂ ಅಧಿಕ (80,470) ಕಾಮೆಂಟ್ ಬಂದಿದೆ. ಈ ಹಿಂದೆ ರಿಲೀಸ್ ಆಗಿದ್ದ ಕುರುಕ್ಷೇತ್ರ ಚಿತ್ರದ ಎರಡು ಟೀಸರ್ ಗಳಿಗೆ ಬಂದಿರುವ ಕಾಮೆಂಟ್ ಒಂದಕ್ಕೆ 2.5 ಸಾವಿರ, ಇನ್ನೊಂದಕ್ಕೆ 3.5 ಸಾವಿರ ಇದೆ.

ಪೈಲ್ವಾನ್ ಟೀಸರ್ ಕಥೆ ಏನು?

ಈ ಹಿಂದೆ ತೆರೆಕಂಡಿದ್ದ ಪೈಲ್ವಾನ್ ಚಿತ್ರದ ಟೀಸರ್ ಗೆ ಅತಿ ಹೆಚ್ಚು ಲೈಕ್ಸ್ ಸಿಕ್ಕಿತ್ತು. ಆಮೇಲೆ ಈ ದಾಖಲೆಯನ್ನ ಒಡೆಯ ಟೀಸರ್ ಬ್ರೇಕ್ ಮಾಡಿದೆ. ಕಾಮೆಂಟ್ ಲೆಕ್ಕಾಚಾರದಲ್ಲಿ ನೋಡಿದ್ರೆ ಪೈಲ್ವಾನ್ ಚಿತ್ರಕ್ಕೆ 19 ಸಾವಿರ ಇದೆ. ದಿ ವಿಲನ್ ಚಿತ್ರದ ಟೀಸರ್ (ಸುದೀಪ್ ವರ್ಷನ್) ಗೆ 7.4 ಸಾವಿರ ಕಾಮೆಂಟ್ ಬಂದಿದೆ.

‘ಪೊಗರು’ ಟೀಸರ್ ಗೆ ಬಂದಿರುವ ಕಾಮೆಂಟ್?

ಪೊಗರು ಡೈಲಾಗ್ ಟ್ರೈಲರ್ ಮೂಲಕ ಸಖತ್ ಸದ್ದು ಮಾಡುತ್ತಿರುವ ಪೊಗರು ಸಿನಿಮಾ, ಟೀಸರ್ ನಲ್ಲೂ ಹವಾ ಮಾಡಿತ್ತು. ಆದರೆ, ಕಾಮೆಂಟ್ ವಿಚಾರದಲ್ಲಿ ಪೊಗರು ಟೀಸರ್ ಕೂಡ ಹಿಂದೆ ಬಿದ್ದಿದೆ. ಪೊಗರು ಟೀಸರ್ ಗೆ 5.5 ಸಾವಿರ ಕಾಮೆಂಟ್ ಸಿಕ್ಕಿದೆ.

ಕೆಜಿಎಫ್ ಟೀಸರ್ ಲೆಕ್ಕ?

ಸ್ಯಾಂಡಲ್ ವುಡ್ ಇಂಡಸ್ಟ್ರಿಯಲ್ಲಿ ಬಹುದೊಡ್ಡ ಯಶಸ್ಸು ಗಳಿಸಿದ ಚಿತ್ರ ಕೆಜಿಎಫ್. ಟ್ರೈಲರ್ 20 ಮಿಲಿಯನ್ ಗೂ ಹೆಚ್ಚು ವೀಕ್ಷಣೆ ಕಂಡಿದೆ. ಆದರೆ, ಟೀಸರ್ ನಲ್ಲಿ ಕಾಮೆಂಟ್ ಅಷ್ಟು ದೊಡ್ಡ ಸಂಖ್ಯೆಯಲ್ಲಿಲ್ಲ. ಯೂಟ್ಯೂಬ್ ನಲ್ಲಿ ಕೆಜಿಎಫ್ ಮೇಕಿಂಗ್ ಟೀಸರ್ ಗೆ ಸಿಕ್ಕಿರುವ ಕಾಮೆಂಟ್ 11 ಸಾವಿರ.

Niranthara News

Leave a Reply

Your email address will not be published. Required fields are marked *

Next Post

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕನ್ನಡ ರಾಪರ್ ಅಲೋಕ್

Thu Nov 7 , 2019
Pin it Email https://nirantharanews.com/%e0%b2%88-%e0%b2%b5%e0%b2%bf%e0%b2%9a%e0%b2%be%e0%b2%b0%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%af%e0%b3%81%e0%b2%b5%e0%b2%b0%e0%b2%a4%e0%b3%8d%e0%b2%a8-%e0%b2%95%e0%b2%bf%e0%b2%82/#cmVkLmpwZw== News oi-Harshitha N | Published: Wednesday, November 6, 2019, 16:08 [IST] ಕನ್ನಡ ರಾಪರ್ ಮತ್ತು ‘ಬಿಗ್ ಬಾಸ್’ ವಿನ್ನರ್ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಇತ್ತೀಚೆಗಷ್ಟೇ ನಿಶ್ಚಿತಾರ್ಥ ಮಾಡಿಕೊಂಡರು. ಇದೀಗ ಮತ್ತೋರ್ವ ಕನ್ನಡ ರಾಪರ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ‘ನಾನ್ ಕನ್ನಡಿಗ’, ‘ಡೋಂಟ್ ವರಿ’, ‘ಯಾಕಿಂಗೆ’ ಸೇರಿದಂತೆ ಕನ್ನಡದಲ್ಲಿ ಹಲವು ಹಿಟ್ ರಾಪ್ ಹಾಡುಗಳನ್ನು ನೀಡಿರುವ ಅಲೋಕ್ ಬಾಬು ಅಲಿಯಾಸ್ ಆಲ್ ಓಕೆ ಅವರು ನಿಶಾ ನಟರಾಜನ್ ಜೊತೆಗೆ ಹಸೆಮಣೆ ಏರಿದ್ದಾರೆ. ಬ್ರಾಹ್ಮಣ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links