ಈ ವಾರದ ಎಲಿಮಿನೇಷನ್ ಪ್ರಕ್ರಿಯೆ ಮುಕ್ತಾಯ.. ಮನೆಯಿಂದ ಹೊರ ಬಂದವರು ಇವರೇ ನೋಡಿ..

Source Credit RJ News Kannada

ಬಿಗ್ ಬಾಸ್ ಸೀಸನ್ 7 ರ ಒಂಬತ್ತನೇ ವಾರದ ಎಲಿಮಿನೇಷನ್ ಪ್ರಕ್ರಿಯೆ ಮುಕ್ತಾಯಗೊಂಡಿದ್ದು ವಾರದ ಕತೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ಈ ವಾರ ಮನೆಯಿಂದ ಹೊರ ಬಂದ ಸದಸ್ಯರ ಹೆಸರನ್ನು ಕಿಚ್ಚ ಸುದೀಪ್ ಅವರು ಅನೌನ್ಸ್ ಮಾಡಿದ್ದಾರೆ..

ಈ ಸೀಸನ್ ಕೊಂಚ ವಿಶೇಷವಾಗಿದ್ದು ಎಲ್ಲರೂ ಸೆಲಿಬ್ರೆಟಿಗಳೇ ಅನ್ನೋದು ಮತ್ತೊಂದು ವಿಶೇಷ ಎನ್ನಬಹುದು‌‌.. ಮೊದಲ ವಾರ ಗುರುಲಿಂಗ ಸ್ವಾಮಿಗಳು, ಎರಡನೇ ವಾರ ಚೈತ್ರ ವಾಸುದೇವನ್, ಮೂರನೇ ವಾರ ದುನಿಯಾ ರಶ್ಮಿ, ನಾಲ್ಕನೇ ವಾರ ಚೈತ್ರಾ ಕೊಟ್ಟೂರು ಐದನೇ ವಾರ ಜೈಜಗದೀಶ್ ಅವರು, ಆರನೇ ವಾರ ಸುಜಾತ ಏಳನೇ ವಾರ ಪೃಥ್ವಿ ಎಂಟನೇ ವಾರ ರಕ್ಷಾ ಸೋಮಶೆಖರ್ ಬಿಗ್ ಬಾಸ್ ಜರ್ನಿ ಮುಗಿಸಿ ಮನೆಯಿಂದ ಹೊರ ಬಂದರು..

ಈ ವಾರ ಮನೆಯಿಂದ ಹೊರ ಹೋಗಲು ಒಟ್ಟು 7 ಮಂದಿ ನಾಮಿನೇಟ್ ಆಗಿದ್ದರು.. ಕ್ಯಾಪ್ಟನ್ ಚಂದನ ಆಯ್ಕೆ ಪ್ರಕಾರ ಕಿಶನ್ ನೇರವಾಗಿ ನಾಮಿನೇಟ್ ಆಗಿದ್ದರೆ, ಕಳೆದ ವಾರ ಮನೆಯಿಂದ ಹೊರ ಬಂದ ರಕ್ಷಾ ಸೋಮಶೇಖರ್ ಚಂದನ್ ಆಚಾರ್ ಅವರನ್ನು ನೇರವಾಗಿ ನಾಮಿನೇಟ್ ಮಾಡಿದ್ದರು.. ಇನ್ನುಳಿದಂತೆ ಶೈನ್ ವಾಸುಕಿ ಭೂಮಿ ಶೆಟ್ಟಿ ದೀಪಿಕಾ ಹಾಗೂ ರಾಜು ತಾಳಿ‌ಕೋಟೆ ಅವರು ನಾಮಿನೇಷನ್ ಪ್ರಕ್ರಿಯೆಯಲ್ಲಿ ಹೊರ ಹೋಗಲು ನಾಮಿನೇಟ್ ಆದರು..

ಇನ್ನು ಘಟಾನುಗಟಿಗಳೇ ಈ ವಾರ ನಾಮಿನೇಟ್ ಆಗಿದ್ದರು ಎನ್ನಬಹುದು.. ಆಶ್ಚರ್ಯವೆಂದರೆ ಈ ವಾರ ಯಾರೂ ಊಹಿಸದ ಸ್ಪರ್ಧಿ ಮನೆಯಿಂದ ಹೊರ ಬಂದಿದ್ದಾರೆ.

ಹೌದು ವಾರದ ಕತೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ವಾರದ ಆಗುಹೋಗುಗಳನ್ನು ಚರ್ಚಿಸಿದ ನಂತರ ಮನೆಯಿಂದ ಹೊರ ಹೋಗೋದು ಯಾರು ಎಂದು ಕಿಚ್ಚ ಸುದೀಪ್ ತಿಳಿಸಿದ್ದಾರೆ..

ಈ ವಾರ ಮನೆಯಿಂದ ಹೊರ ಬಂದವರು ಮತ್ಯಾರೂ ಅಲ್ಲ ರಾಜು ತಾಳಿಕೋಟೆ ಅವರು.. ಹೌದು ಈ ವಾರ ರಾಜು ತಾಳಿಕೋಟೆ ಅವರು ತಮ್ಮ ಬಿಗ್ ಬಾಸ್ ಜರ್ನಿಯನ್ನು ಮುಗಿಸಿ ಮನೆಯಿಂದ ಹೊರ ಬಂದಿದ್ದಾರೆ..

ಇನ್ನುಳಿದಂತೆ ಶೈನ್ ವಾಸುಕಿ ಭೂಮಿ ಶೆಟ್ಟಿ ದೀಪಿಕಾ ಚೈತ್ರಾ ಕೊಟ್ಟೂರು ಚಂದನ್ ಆಚಾರ್ ಕಿಶನ್ ಸೇಫ್ ಆಗಿದ್ದು 10ನೇ ವಾರಕ್ಕೆ ಕಾಲಿಟ್ಟಿದ್ದಾರೆ..

Source Credit RJ News Kannada

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಬಿಗ್ ಬಾಸ್ ಮನೆಯಿಂದ ಹೊರ ಬಂದ ನಂತರ ಭೂಮಿ ಶೆಟ್ಟಿ ಮದುವೆ.‌. ಈಗಾಗಲೇ ಭೂಮಿಗೆ ವಿಷಯ ತಿಳಿಸಿದ ಮಾವ..

Sun Dec 15 , 2019
Source Credit RJ News Kannada ಬಿಗ್ ಬಾಸ್ ಸೀಸನ್ 7 ರಲ್ಲಿ 9 ನೇ ವಾರ ಮುಗಿದಿದ್ದು ಮನೆಯಿಂದ ರಾಜು ತಾಳಿಕೋಟೆ ಅವರು ತಮ್ಮ ಜರ್ನಿ ಮುಗಿಸಿ ಹೊರ ಬಂದಿದ್ದಾರೆ.. ಇನ್ನುಳಿದಂತೆ ಈ ಸೀಸನ್ ನ ಬಿಗ್ ಬಾಸ್ ಇನ್ನು 5 ವಾರಗಳಷ್ಟೇ ಇದ್ದು, 50 ಲಕ್ಷದ ಒಡೆಯನಾಗಲು ಪ್ರಬಲ ಪೈಪೋಟಿಯೇ ಇದೆ ಎನ್ನಬಹುದು. ಇನ್ನು ಈ ವಾರ ಮನೆಗೆ ಸರ್ಪ್ರೈಸ್ ಆಗಿ ಭೂಮಿ ಶೆಟ್ಟಿ ಅವರ ಮಾವ ಬಂದದ್ದು ವಿಶೇಷ. ಆ ವಿಶೇಷದ ಜೊತೆ ಮತ್ತೊಂದು ವಿಶೇಷವೂ ಇದೆ.. ಹೌದು ಭೂಮಿ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links