ಈ ವಾರದ ಎಲಿಮಿನೇಷನ್ ನಿಂದ ಮೊದಲು ಸೇಫ್ ಆದ ಇಬ್ಬರು ಸ್ಪರ್ಧಿಗಳು ಇವರೇ ನೋಡಿ..

Source Credit RJ News Kannada

ಬಿಗ್ ಬಾಸ್ ಸೀಸನ್ 7 ರ 14ನೇ ವಾರದ ಎಲಿಮಿನೇಷನ್ ಪ್ರಕ್ರಿಯೆ ನಡೆಯುತ್ತಿದ್ದು, ಬಿಗ್ ಮನೆಯಲ್ಲಿ ಮೊದಲಿಗೆ ಇಬ್ಬರು ಸದಸ್ಯರು ಸೇಫ್ ಆಗಿದ್ದಾರೆ.. ಹೌದು ವಾರದ ಕತೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ಈ ವಾರದ ಮನೆಯ ಆಗುಹೋಗುಗಳನ್ನು ಚರ್ಚಿಸಿ ನಂತರ ಎಲಿಮಿನೇಷನ್ ಪ್ರಕ್ರಿಯೆ ಶುರು ಮಾಡಿದ್ದಾರೆ..

ಅದರಂತೆ ಮೊದಲಿಗೆ ಅತಿ ಹೆಚ್ಚು ಓಟ್ ಪಡೆದ ಇಬ್ಬರು ಸದಸ್ಯರನ್ನು ಸೇಫ್ ಮಾಡಲಾಗಿದೆ.. ಕಳೆದ ವಾರ ಎಲಿಮಿನೇಷನ್ ಪ್ರಕ್ರಿಯೆ ಇಲ್ಲದ ಕಾರಣ ಈ ವಾರ ಡಬಲ್ ಎಲಿಮಿನೇಷನ್ ನಡೆಯುತ್ತಿದೆ.. ಅದರಂತೆ ಈ ವಾರದ ಮನೆಯ ಕ್ಯಾಪ್ಟನ್ ಶೈನ್ ಶೆಟ್ಟಿ ಅವರನ್ನು ಹೊರತುಪಡಿಸಿ ಮಿಕೆಲ್ಲಾ ಸದಸ್ಯರು ಅಂದರೆ ವಾಸುಕಿ ವೈಭವ್, ಕುರಿ ಪ್ರತಾಪ್, ಕಿಶನ್, ಹರೀಶ್ ರಾಜ್, ಚಂದನ್ ಆಚಾರ್, ದೀಪಿಕಾ, ಪ್ರಿಯಾಂಕ, ಭೂಮಿ ಶೆಟ್ಟಿ ಅವರು ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿದ್ದರು..

ಎಲಿಮಿನೇಷನ್ ಪ್ರಕ್ರಿಯೆ ಶುರು ಮಾಡಿದ ಕಿಚ್ಚ ಸುದೀಪ್ ಅವರು ಮೊದಲ ಇಬ್ಬರು ಸ್ಪರ್ಧಿಗಳನ್ನು ಸೇಫ್ ಮಾಡಿದ್ದಾರೆ.. ಹೌದು ಸೇಫ್ ಆದ ಇಬ್ಬರು ಸ್ಪರ್ಧಿಗಳು ಮತ್ಯಾರೂ ಅಲ್ಲ ಕುರಿ ಪ್ರತಾಪ್ ಹಾಗೂ ಚಂದನ್ ಆಚಾರ್..

ಹೌದು ಒಂದು ಕಾಲದಲ್ಲಿ ಕಡೆಯ ಸ್ಪರ್ಧಿಯಾಗಿ ಉಳಿದು ಸೇಫ್ ಆಗುತ್ತಿದ್ದ ಚಂದನ್ ಆಚಾರ್ ಅವರಿಗೆ ಇತ್ತೀಚಿನ ದಿನಗಳಲ್ಲಿ ಸಪೋರ್ಟರ್ಸ್ ಹೆಚ್ಚಾಗಿದ್ದರು.. ಅದರಂತೆ ಎಲಿಮಿನೇಷನ್ ಪ್ರಕ್ರಿಯೆ ಶುರು ಆಗುತ್ತಿದ್ದಂತೆ ಸೇಫ್ ಆಗಿದ್ದಾರೆ.. ಇನ್ನು ಈ ವಾರ ಡಬಲ್ ಎಲಿಮಿನೇಷನ್ ಇದ್ದು, ಯಾರು ಮನೆಯಿಂದ ಹೊರ ಹೋಗುವರು ಎಂಬುದನ್ನು ಇನ್ನೇನು ಕೆಲವೇ ಗಂಟೆಗಳಲ್ಲಿ RJ news Kannada ಪೇಜ್ ನಲ್ಲಿ ಅಪ್ಡೇಟ್ ಮಾಡಲಾಗುವುದು..

Source Credit RJ News Kannada

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಯುವಜನ ಮೇಳ ರಾಷ್ಟ್ರಭಕ್ತಿ ಬೀಜ ಬಿತ್ತುವಂತಾಗಲಿ: ಸಚಿವ ಕೋಟ ಶ್ರೀನಿವಾಸ ಪೂಜಾರಿ

Sat Jan 18 , 2020
Source Credit NewsKannada.com ಯುವಜನ ಮೇಳ ರಾಷ್ಟ್ರಭಕ್ತಿ ಬೀಜ ಬಿತ್ತುವಂತಾಗಲಿ: ಸಚಿವ ಕೋಟ ಶ್ರೀನಿವಾಸ ಪೂಜಾರಿ DA   ¦    Jan 18, 2020 06:49:18 PM (IST) Pin it Email https://nirantharanews.com/%e0%b2%88-%e0%b2%b5%e0%b2%be%e0%b2%b0%e0%b2%a6-%e0%b2%8e%e0%b2%b2%e0%b2%bf%e0%b2%ae%e0%b2%bf%e0%b2%a8%e0%b3%87%e0%b2%b7%e0%b2%a8%e0%b3%8d-%e0%b2%a8%e0%b2%bf%e0%b2%82%e0%b2%a6-%e0%b2%ae%e0%b3%8a/#eXV2YWphbmFfbm5 ಬೆಳ್ತಂಗಡಿ: ಭಾರತದ ಪ್ರತಿಯೊಬ್ಬ ಪ್ರಜೆಗೆ ಯಾವುದೇ ರೀತಿಯ ಅನ್ಯಾಯ ಆಗದಂತೆ ನೋಡಿಕೊಳ್ಳಲಾಗುವುದು ಎಂದು ಈಗಾಗಲೇ ದೇಶದ ಪ್ರಧಾನ ಮಂತ್ರಿ ಹಾಗೂ ಗೃಹಮಂತ್ರಿಗಳು ಮಾತು ಕೊಟ್ಟಿರುವುದರಿಂದ ಎನ್‍ಆರ್‍ಸಿ ಕಾಯಿದೆಯ ಬಗ್ಗೆ ಯಾವುದೇ ಭಾರತೀಯ ಪ್ರಜೆ ಆತಂಕಪಡುವ ಅವಶ್ಯಕತೆಯಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಬೆಳ್ತಂಗಡಿ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links