ಈ ಟೊಮೆಟೊ ಮನೆಮದ್ದುಗಳಿಂದ ಮೊಡವೆ, ಕಲೆ ಹೋಗಲಾಡಿಸಬಹುದು

Source Credit Kannada.boldsky.com

1. ಟೊಮೆಟೊ

ಮೊಡವೆ ಹೋಗಲಾಡಿಸಲು ಟೊಮೆಟೊ ಮಾತ್ರ ಹಚ್ಚಿದರೂ ಸಾಕು. ಒಂದು ಹಣ್ಣಾದ ಟೊಮೆಟೊವನ್ನು ತೆಗೆದು ಅದರ ಒಳಭಾಗದ ರಸವನ್ನು ಚಿಕ್ಕ ಬೌಲ್‌ಗೆ ಹಾಕಿ, ಆ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ ಒಂದು ಗಂಟೆ ಬಿಡಿ. ನಂತರ ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆದು ಮುಖಕ್ಕೆ ಮಾಯಿಶ್ಚರೈಸರ್ ಹಚ್ಚಿದರೆ ಸಾಕು.

ಈ ವಿಧಾನವನ್ನು ಮುಖದಲ್ಲಿ ಮೊಡವೆ ಇಲ್ಲದಿದ್ದರೂ ಳಸಬಹುದು. ಇದರಿಂದ ಮುಖದಲ್ಲಿರುವ ಕೊಳೆ ಹೋಗಿ ಕ್ಲೆನ್ಸ್ ಆಗುತ್ತದೆ ಹಾಗೂ ಮುಖದ ಹೊಳಪು ಹೆಚ್ಚುವುದು.

ಟೊಮೆಟೊ ಹಾಗೂ ಮೊಸರು

ಮೊಸರಿನಲ್ಲಿರುವ ಲ್ಯಾಕ್ಟಿಕ್ ಆಮ್ಲ ತ್ವಚೆಯನ್ನು ಎಕ್ಸ್‌ಫೋಲೆಟ್ ಮಾಡುತ್ತದೆ. ಇದನ್ನು ಟೊಮೆಟೊ ಜತೆ ಮಿಶ್ರ ಮಾಡಿದರೆ ಮೊಡವೆ ಹೋಗಲಾಡಿಸುವ ಉತ್ತಮವಾದ ಮನೆಮದ್ದಾಗಿದೆ.

ಬೇಕಾಗುವ ಸಾಮಗ್ರಿ

1/2 ಟೊಮೆಟೊ

2 ಚಮಚ ಮೊಸರು

ಬಳಸುವ ವಿಧಾನ

ಟೊಮೆಟೊದ ಬೀಜ ತೆಗೆದು, ಅದರ ಸಿಪ್ಪೆ ಕೂಡ ತೆಗೆದು ಬೌಲ್‌ನಲ್ಲಿ ಹಾಕಿ ಮ್ಯಾಶ್ ಮಾಡಿ, ಅದಕ್ಕೆ ಮೊಸರು ಮಿಕ್ಸ್ ಮಾಡಿ, ಆ ಮಿಶ್ರಣವನ್ನು ಮುಖಕ್ಕೆ ಹಚ್ಚಿ ಒಂದು ಗಂಟೆ ಬಿಡಿ, ನಂತರ ಮುಖ ತೊಳೆಯಿರಿ.

ಟೊಮೆಟೊ ಮತ್ತು ಸೌತೆಕಾಯಿ

ಸೌತೆಕಾಯಿಯಲ್ಲಿ ಮಾಯಿಶ್ಚರೈಸರ್‌ ಗುಣವಿದೆ ಹಾಗೂ ತ್ವಚೆಯನ್ನು ತಂಪಾಗಿಸುತ್ತದೆ. ಇದರಲ್ಲಿರುವ ಆಸ್ಟ್ರಿಜೆಂಟ್ ಅಂಶ ರಂಧ್ರಗಳನ್ನು ಮುಚ್ಚಿ ಮೊಡವೆಯನ್ನು ನಿಯಂತ್ರಿಸುತ್ತದೆ. ಸೌತೆಕಾಯಿಗೆ ಉರಿಯೂತ ಕಡಿಮೆ ಮಾಡುವ ಗುಣವಿರುವುದರಿಂದ ಉರಿಯೂತ ಕಡಿಮೆ ಮಾಡುವಲ್ಲಿ ಸಹಕಾರಿ.

ಬೇಕಾಗುವ ಸಾಮಗ್ರಿ

1 ಚಮಚ ಟೊಮೆಟೊ ರಸ

1 ಚಮಚ ಸೌತೆಕಾಯಿ ರಸ

ಬಳಕೆ

ಎರಡು ರಸವನ್ನು ಮಿಶ್ರ ಮಾಡಿ ಮುಖಕ್ಕೆ ಹಚ್ಚಿ ಅರ್ಧ ಗಂಟೆ ಬಿಟ್ಟು ನಂತರ ಮುಖ ತೊಳೆಯಿರಿ. ಈ ರೀತಿ ವಾರದಲ್ಲಿ 2-3 ಬಾರಿ ಮಾಡುತ್ತಾ ಬಂದರೆ ಸಾಕು ಮೊಡವೆ ಕಡಿಮೆಯಾಗುವುದು, ಮುಖದಲ್ಲಿ ಕಾಂತಿ ಹೆಚ್ಚುವುದು.

ಟೊಮೆಟೊ ಹಾಗೂ ನಿಂಬೆರಸ

ಮೊಡವೆ ತುಂಬಾ ಎದ್ದಿದ್ದರೆ ಈ ವಿಧಾನದಿಂದ ಸ್ವಲ್ಪ ಉರಿಯಾಗಬಹುದು. ಆದರೆ ಮೊಡವೆ ಕಡಿಮೆ ಮಾಡುವಲ್ಲಿ ನಿಂಬೆರಸ ಹಾಗೂ ಟೊಮೆಟೊ ಸಹಕಾರಿಯಾಗಿದೆ. ನಿಂಬೆರಸ ತ್ವಚೆಯನ್ನು ಆಳದಿಂದ ಕ್ಲೆನ್ಸ್ ಮಾಡುತ್ತದೆ ಹಾಗೂ ಮೊಡವೆಗೆ ಕಾರಣವಾದ ಬ್ಯಾಕ್ಟಿರಿಯಾವನ್ನು ನಾಶ ಪಡಿಸುತ್ತದೆ. ಟೊಮೆಟೊ ಮುಖದ ಕಲೆ ಕಡಿಮೆ ಮಾಡುತ್ತದೆ.

1 ಚಮಚ ಟೊಮೆಟೊ ರಸ, 1ಚಮಚ ನಿಂಬೆರಸ ಮಿಶ್ರ ಮಾಡಿ ಮುಖಕ್ಕೆ ಹಚ್ಚಿ ಅರ್ಧ ಗಂಟೆ ಬಿಟ್ಟು ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಬೇಕು. ಈ ರೀತಿ ಎರಡು ದಿನಕ್ಕೊಮ್ಮೆ ಮಾಡುತ್ತಾ ಬಂದರೆ ಮೊಡವೆ ಹಾಗೂ ಕಲೆ ಇಲ್ಲವಾಗುವುದು.

ಟೊಮೆಟೊ ಮತ್ತು ಕಿತ್ತಳೆ

ಕಿತ್ತಳೆಯಲ್ಲಿ ವಿಟಮಿನ್ ಸಿ ಇದ್ದು ತ್ವಚೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು, ಇದು ತ್ವಚೆಯಲ್ಲಿ ಮೊಡವೆ ಕಡಿಮೆ ಮಾಡುವಲ್ಲಿ ಸಹಕಾರಿ. ಕಿತ್ತಳೆ ಸಿಪ್ಪೆ ಒಣಗಿಸಿ ಕೂಡ ಬಳಸಬಹುದು.

ಬೇಕಾಗುವ ಸಾಮಗ್ರಿ

1 ಚಮಚ ಟೊಮೆಟೊ ರಸ

2 ಚಮಚ ಕಿತ್ತಳೆ ರಸ

ಈ ಎರಡು ರಸವನ್ನು ಮಿಶ್ರ ಮಾಡಿ

Source Credit Kannada.boldsky.com

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಮನೆಯ ಅಂದ ಹೆಚ್ಚಲು ಆಕರ್ಷಕವಾಗಿ ಬಲ್ಬ್‌ಗಳ್ನು ಹೀಗೆ ಸಿಂಗರಿಸಿ

Tue Dec 17 , 2019
Source Credit Kannada.boldsky.com Pin it Email https://nirantharanews.com/%e0%b2%88-%e0%b2%9f%e0%b3%8a%e0%b2%ae%e0%b3%86%e0%b2%9f%e0%b3%8a-%e0%b2%ae%e0%b2%a8%e0%b3%86%e0%b2%ae%e0%b2%a6%e0%b3%8d%e0%b2%a6%e0%b3%81%e0%b2%97%e0%b2%b3%e0%b2%bf%e0%b2%82%e0%b2%a6-%e0%b2%ae/#MDEtMTU3NjQ3ODU ವಿಧಾನ 1 ಬಣ್ಣದ ಬೆಳಕಿನ ಬಲ್ಬ್ ಗಳನ್ನು ತಯಾರಿಸುವುದು 1. ಸ್ಪಷ್ಟವಾಗಿರುವ 40 ವ್ಯಾಟ್ ನ ಬಲ್ಬ್ ಅನ್ನು ಸೆಲೆಕ್ಟ್ ಮಾಡಿಕೊಳ್ಳಿ. 40 ವ್ಯಾಟ್ ಗಿಂತ ಕಡಿಮೆ ಸಾಮರ್ಥ್ಯದ ಬೆಳಕಿನ ಬಲ್ಬ್ ಗಳು ಕೂಡ ಈ ಕೆಲಸಕ್ಕೆ ಆಯ್ಕೆ ಮಾಡಿಕೊಳ್ಳಬಹುದು. ನೀವು ಬಳಸುವ ಪೇಯಿಂಟ್ ಬಲ್ಬ್ ನಲ್ಲಿ ಬೆಳಕು ಉರಿದಾಗ ಅದರ ಶಾಖವನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆಯೇ ಎಂಬ ಬಗ್ಗೆ ನೀವು ಖಾತ್ರಿ ಮಾಡಿಕೊಳ್ಳುವುದು ಬಹಳ ಮುಖ್ಯ. ಕ್ಲಿಯರ್ ಬಲ್ಬ್ ಗಳು ಬಣ್ಣದ ಮೂಲಕ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links