ಇದ್ದಕ್ಕಿಂದಂತೆ ಶೈನ್ ಶೆಟ್ರ ಮನೆಗೆ ಹೋದ ಚೈತ್ರಾ ಕೊಟ್ಟೂರ್.. ಏನ್ ಗುರು ಇವ್ರ್ ಕತೆ..

Source Credit RJ News Kannada

ಮೊನ್ನೆಯಷ್ಟೇ ಬಿಗ್ ಬಾಸ್ ಮನೆಯಿಂದ ಎರಡನೇ ಬಾರಿಗೆ ಗೇಟ್ ಪಾಸ್ ಪಡೆದು ಬಂದಿರುವ ಚೈತ್ರಾ ಕೊಟ್ಟೂರ್ ಅವರು ದಿಢೀರ್‌ ಅಂತ ಇಂದು ಶೈನ್ ಶೆಟ್ಟಿ ಅವರ ಮನೆಗೆ ಭೇಟಿ‌ ನೀಡಿ ಅವರ ತಾಯಿಯೊಂದಿಗೆ ಮಾತನಾಡಿ ಅಪ್ಪಿಕೊಂಡು ಒಂದು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ..

ನಿನ್ನೆಯಷ್ಟೇ ಸಂದರ್ಶನವೊಂದರಲ್ಲಿ ಇದು ಪ್ರೀತಿನೋ ಏನೋ ಗೊತ್ತಿಲ್ಲ ಆದರೆ ಶೈನ್ ಎಂದರೆ ನನಗೆ ಇಷ್ಟ ಎಂದಿದ್ದ ಚೈತ್ರಾ ಕೊಟ್ಟೂರ್ ಅವರು ಇಂದು ನೇರವಾಗಿ ಶೈನ್ ಶೆಟ್ರ ಮನೆಗೆ ಮನೆಗೆ ಭೇಟಿ ನೀಡಿ ಬಂದಿದ್ದಾರೆ..

ಹೌದು ಮೊದಲ ಬಾರಿಗೆ ಬಿಗ್ ಬಾಸ್ ಮನೆಯೊಳಗೆ ಹೋದ ಚೈತ್ರಾ ಕೊಟ್ಟೂರ್ ಅವರಿಗೆ ಶೈನ್ ಮೇಲೆ ಲವ್ ಆಗಿತ್ತು ಎನ್ನಲಾಗಿತ್ತು.. ಟಿಶ್ಯು ಪೇಪರಿನ ಮೇಲೆ ಲವ್ ಲೆಟರ್ ಕೂಡ ಬರೆದಿದ್ದರು.ಮ್ ಆದರೆ ಬರುಬರುತ್ತಾ ಇಬ್ಬರ ನಡುವೆ ಸ್ನೇಹಕ್ಕಿಂತ ಮಸ್ಥಾಪಗಳೇ ಹೆಚ್ಚಿದ್ದವು.. ಮೊದಲ ಬಾರಿಗೆ ಚೈತ್ರಾ ಕೊಟ್ಟೂರ್ ಎಲಿಮಿನೇಟ್ ಆಗಿ ಮನೆಯಿಂದ ಹೊರ ಬಂದ ನಂತರವೂ ಶೈನ್ ಬಗ್ಗೆ ಬಹಳ ಅಸಮಾಧಾನ ವ್ಯಕ್ತ ಪಡಿಸಿದ್ದರು..

ಆದರೆ ಎರಡನೇ ಬಾರಿಗೆ ಚೈತ್ರಾ ಕೊಟ್ಟೂರ್ ಅವರು ಬಿಗ್ ಬಾಸ್ ಮನೆಯೊಳಗೆ ಹೋಗಿದ್ದೇ ಹೋಗಿದ್ದು ಮೊದಮೊದಲು ಬಹಳ ರಾಂಗ್ ಆಗಿಯೇ ಇದ್ದ ಚೈತ್ರಾ ಕೊಟ್ಟೂರ್ ಅವರು ಬರುಬರುತ್ತಾ ಎಲ್ಲರ ಜೊತೆ ಬೆರೆಯ ತೊಡಗಿದರು.. ಅದರಲ್ಲೂ ಶೈನ್ ಜೊತೆ ಜೋಡಿ ಟಾಸ್ಕ್ ನಲ್ಲಿ ಹೆಂಡತಿಯಂತೆ ಹಾಡಿದ್ದೂ ಡ್ಯಾನ್ಸ್ ಮಾಡಿದ್ದೂ ಎಲ್ಲವೂ ಇತ್ತು.. ತದನಂತರ ಚೈತ್ರಾ ಮನೆಯವರಿಗೆ ಕಿರಿಕಿರಿ ಎನಿಸೋದು ಕಡಿಮೆಯಾಯಿತು..

ಬರುವಾಗ ಶೈನ್ ಗೆ ಒಂದು ಅಪ್ಪುಗೆಯನ್ನೂ ನೀಡಿ ಹೊರ ಬಂದಮೇಲೆ ಸಿಗೋಣ ಎಂದು ಹೇಳಿ ಬಂದರು.. ಆದರೆ ಶೈನ್ ಬರೋವರೆಗೂ ಕಾಯದೇ ಇಂದು ಸೀದಾ ಶೈನ್ ಅವರ ಮನೆಗೆ ಹೋಗಿ ಅವರ ತಾಯಿ ಬಳಿ‌ ಮಾತನಾಡಿ ಒಂದೆರೆಡು ಫೋಟೋವನ್ನು ತೆಗೆಸಿಕೊಂಡು ಬಂದಿದ್ದಾರೆ..

ಮುಂದೇನಾಗುವುದೋ ಆ ಶೈನ್ ಶೆಟ್ರೇ ಬಲ್ಲ.. ಅವರು ಹೊರ ಬಂದ ನಂತರವೇ ಈ ಬೆಳವಣಿಗೆ ಏನಾಗಲಿದೆ ಎಂದು ಕಾದು ನೋಡಬೇಕಿದೆ..

Source Credit RJ News Kannada

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಹೊಸ ವರ್ಷಕ್ಕೆ ಕೋಟ್ ಹಾಗೂ ಸಂದೇಶಗಳು

Wed Jan 1 , 2020
Source Credit Kannada.boldsky.com Pulse oi-Reena TK | Updated: Tuesday, December 31, 2019, 13:23 [IST] 2019ಕ್ಕೆ ವಿದಾಯ ಹೇಳಿ, 2020ನ್ನು ಸ್ವಾಗತಿಸಲು ಇಡೀ ವಿಶ್ವವೇ ಸಜ್ಜಾಗಿದೆ. ಹೊಸ ವರ್ಷ ಎಂದ ಮೇಲೆ ಏನೋ ಒಂದು ಹೊಸ ಭರವಸೆ ನಮ್ಮಲ್ಲಿ ಇರುತ್ತದೆ. ಹೊಸ ವರ್ಷ ಒಳಿತನ್ನೇ ತರಲಿ ಎಂದು ಬಯಸುತ್ತೇವೆ. ನಮ್ಮ ಕನಸುಗಳು ನೆರವೇರಲಿ ಎಂದು ಆಶಿಸುತ್ತೇವೆ. ಇನ್ನು ಕೆಲವರು ಹೊಸ ವರ್ಷಕ್ಕೆ ಕೆಲವೊಂದು ರೆಸ್ಯೋಲೇಷನ್ ಕೈಗೊಳ್ಳುತ್ತಾರೆ. ನಾನು ಈ ವರ್ಷ ವ್ಯಾಯಾಮ ಮಾಡಿ ಮೈ ಫಿಟ್‌ ಆಗಿ ಇಟ್ಟುಕೊಳ್ಳುತ್ತೇನೆ, ಈ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links