ಇಂದು ಜೊತೆಜೊತೆಯಲಿ ಸೀರಿಯಲ್ ಜಾತ್ರೆ.. ಯಾವ ಊರಲ್ಲಿ ನಡೆಯುತ್ತಿದೆ ಗೊತ್ತಾ?

Source Credit RJ News Kannada

ಜೊತೆಜೊತೆಯಲಿ ಧಾರಾವಾಹಿ ಶುರು ಆದಾಗಿನಿಂದ ಹೊಸ ದೊಂದು ಕ್ರೇಜ್ ಹುಟ್ಟು ಹಾಕಿತೆನ್ನಬಹುದು.. ಸುಮಾರು ವಾರಗಳಿಂದಲೂ ಅಭಿಮಾನಿಗಳು ಧಾರಾವಾಹಿಯ ಜಾತ್ರೆ ಮಾಡಲು ಮನವಿ ಮಾಡಿಕೊಳ್ಳುತ್ತಲೇ ಇದ್ದರು..

ಎಲ್ಲರೂ ತಮ್ಮ ತಮ್ಮ ಊರಲ್ಲಿ ಜೊತೆಜೊತೆಯಲಿ ಜಾತ್ರೆ ಮಾಡಿ ಎಂದು ಮೆಸೆಜ್, ಫೋನ್ ಮೂಲಕ ಮನವಿ ಮಾಡಿಕೊಂಡಿದ್ದರು.. ಅದರಂತೆ ಇಂದು ಜೀ ವಾಹಿನಿ ಮತ್ತು ಧಾರಾವಾಹಿ ತಂಡ ಜೊತೆಜೊತೆಯಲಿ ಜಾತ್ರೆ ನಡೆಸಲು ಸಜ್ಜಾಗಿದೆ..

ಜಾತ್ರೆ ನಡೆಯುತ್ತಿರುವುದು ಬೇರೆ ಎಲ್ಲೂ ಅಲ್ಲ.. ನಮ್ಮ ನಾಡಿನ ಹೆಮ್ಮೆ.. ಕೋಟೆ ನಾಡು ಚಿತ್ರದುರ್ಗದಲ್ಲಿ.. ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರಿಗೆ ಜೀವನ ಕೊಟ್ಟ ನೆಲದಲ್ಲಿ ಇಂದು ಜೊತೆಜೊತೆಯಲಿ ಧಾರಾವಾಹಿಯ ಮೊದಲ ಜಾತ್ರೆ ನಡೆಯುತ್ತಿದೆ.. ಹೌದು ಈಗಾಗಲೇ ಧಾರಾವಾಹಿಯ ಸಂಪೂರ್ಣ ತಂಡದವರು ಚಿತ್ರದುರ್ಗದಲ್ಲಿ ಬೀಡು ಬಿಟ್ಟಿದ್ದು, ಚಿತ್ರದುರ್ಗದ ಜನತೆ ಜೊತೆಜೊತೆಯಲಿ ಧಾರಾವಾಹಿ ತಂಡದವರನ್ನು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ.. ಇಂದು ಚಿತ್ರದುರ್ಗದ ಜನತೆಗೆ ಮನರಂಜನೆಯ ರಸದೌತಣವೆನ್ನಬಹುದು..

ಇಂದು ಸಂಜೆ 5.30 ಕ್ಕೆ ಚಿತ್ರದುರ್ಗದ ಸರ್ಕಾರಿ ವಿಜ್ಞಾನ ಕಾಲೇಜಿನ ಶ್ರೀ ಮುರುಘರಾಜೇಂದ್ರ ಕ್ರೀಡಾಂಗಣದಲ್ಲಿ ಜೊತೆಜೊತೆಯಲಿ ಜಾತ್ರೆ ನಡೆಯುತ್ತಿದ್ದು ನಿನ್ನೆ ಧಾರಾವಾಹಿ ತಂಡ ಸುದ್ದಿಗೋಷ್ಟಿ ನಡೆಸಿ ಈ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.. ಪ್ರೀತಿಯ ಪ್ರೇಕ್ಷಕರೆಲ್ಲರೂ ಆಗಮಿಸಬೇಕಾಗಿ ಅನಿರುದ್ದ್ ಅವರು ಹಾಗೂ ಧಾರಾವಾಹಿ ತಂಡ ಮನವಿ ಮಾಡಿಕೊಂಡಿದೆ..

ಈಗಾಗಲೇ ಆರ್ಯವರ್ಧನ್ ಅನು ಸೇರಿದಂತೆ ಕಲಾವಿದರು ಸಖತ್ ಪರ್ಫಾರ್ಮೆನ್ಸ್ ನೀಡಲು ತಯಾರಿ ನಡೆಸಿದ್ದು ಚಿತ್ರದುರ್ಗದ ಜನತೆ ಕಾರ್ಯಕ್ರಮ ನೋಡಲು ಕಾತುರದಿಂದ ಕಾದಿದ್ದಾರೆನ್ನಬಹುದು..

ಮುಂದಿನ ಬಾರಿ ನಮ್ಮೂರಲ್ಲೂ ಮಾಡಿ ಸಾರ್ ಎಂಬ ಮನವಿಗಳು ಈಗಾಗಲೇ ಬರುತ್ತಿದ್ದು, ಹೊರ ಜಿಲ್ಲೆಯವರು ಸದ್ಯ ಚಾನಲ್ ನಲ್ಲಿ ಕಾರ್ಯಕ್ರಮ ಪ್ರಸಾರವಾಗುವುದನ್ನು ಕಾದು ನೋಡಬೇಕಿದೆ..

Source Credit RJ News Kannada

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಸಹಜ ಸ್ಥಿತಿಯತ್ತ ಮಂಗಳೂರು

Sun Dec 22 , 2019
Source Credit NewsKannada.com HSA   ¦    Dec 22, 2019 09:08:42 AM (IST) ಮಂಗಳೂರು: ಕಳೆದ ಗುರುವಾರ ನಡೆದ ಪೌರತ್ವ ತಿದ್ದುಪಡಿ ಮಸೂದೆ ವಿರೋಧದ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿದ ಬಳಿಕ ಕರ್ಫೂ ಹೇರಲಾಗಿದ್ದ ಮಂಗಳೂರು ಇಂದು ಸಹಜ ಸ್ಥಿತಿಗೆ ಮರಳುತ್ತಿದೆ. ಭಾನುವಾರ ಬೆಳಗ್ಗೆ 6 ಗಂಟೆಯಿಂದ ಸಂಜೆ ಆರು ಗಂಟೆಯ ತನಕ ಕರ್ಫ್ಯೂ ಸಡಿಲಿಸಲಾಗಿದೆ. ಇಂಟರ್ನೆಟ್ ಸೇವೆಯು ಮತ್ತೆ ಆರಂಭವಾಗಿದೆ. ಸೆಂಟ್ರಲ್ ಮಾರುಕಟ್ಟೆ ಮತ್ತು ಬಂದರಿನಲ್ಲಿ ಖರೀದಿಗಾಗಿ ಜನರು ಮುಗಿಬಿದ್ದರು. ಅದರಲ್ಲೂ ಬಂದರಿನಲ್ಲಿ ಮೀನು ಖರೀದಿಗೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಇದದ್ದು […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links