ಇಂದಿನ ಸಂಚಿಕೆಯಲ್ಲಿ ರೋಚಕ ತಿರುವು.. ಕೊನೆಗೂ ಅನು ಆರ್ಯ ದೂರ ಆಗೇ ಬಿಟ್ರಾ?

Source Credit RJ News Kannada

ಜೊತೆಜೊತೆಯಲಿ ದಿನಕ್ಕೊಂದು ತಿರುವು ಪಡೆದು ನೋಡುಗರ ಮನಸ್ಸಿನಲ್ಲಿ ತವಕವನ್ನು ಹೆಚ್ಚಿಸುತ್ತಿದೆ.. ಅದರಲ್ಲೂ ನಿನ್ನೆಯ ಸಂಚಿಕೆಯಲ್ಲಿ ಅನುವನ್ನು ದೂರ ಮಾಡಿಕೊಳ್ಳುವ ನಿರ್ಧಾರ ತೆಗೆದುಕೊಂಡಿರುವ ಅರ್ಯವರ್ಧನ್ ಅನುವಿಗೆ ಬಡ್ತಿಯ ಜೊತೆಗೆ ಹುಬ್ಬಳ್ಳಿಗೆ ವರ್ಗಾವಣೆ ಮಾಡಿದ್ದು ಪ್ರೇಕ್ಷಕರಿಗೆ ನೋಡಲಾಗದಂತಿತ್ತು..

ಆರ್ಯವರ್ಧನ್ ನಿರ್ಧಾರಕ್ಕೆ ಮನಸ್ಸಿಲ್ಲದಿದ್ದರೂ ಒಪ್ಪಿಕೊಂಡ ಅನು.. ತಮ್ಮಿಬ್ಬರ ಹೆಸರಿಲ್ಲದ ಸಂಬಂಧಕ್ಕೆ ಕೊನೆಯದಾಗಿ ಒಂದು ಚಾಲೆಂಜ್ ನೀಡಿ.. ಮುಂದಿನ 24 ಗಂಟೆಗಳ ಕಾಲ ಇಬ್ಬರೂ ಭೇಟಿಯಾಗಬಾರದೆಂಬ ಕಂಡೀಷನ್ ಹಾಕುತ್ತಾಳೆ.. ಭೇಟಿಯಾದರೆ ಆರ್ಯನ ಮನಸ್ಸಿನಲ್ಲಿರುವ ಪ್ರೀತಿಯ ವಿಚಾರವನ್ನು ಅನುವಿಗೆ ನೇರವಾಗಿ ಹೇಳಬೇಕೆಂದೂ ಹೇಳುತ್ತಾಳೆ..‌ ಕಣ್ಣಲ್ಲಿ ನೀರು ತುಂಬಿಕೊಂಡೇ ಈ ಕಂಡೀಷನ್ ಗೆ ಆರ್ಯ ಒಪ್ಪಿಕೊಳ್ಳುವ ಸನ್ನಿವೇಷ ಮನಮುಟ್ಟುವಂತಿತ್ತು..

ಇತ್ತ ಝೇಂಡೆ ಹಾಗೂ ಮೀರಾ ಅನು ಆರ್ಯ ಭೇಟಿ ಆಗಬಾರದೆಂದು ಪ್ರಯತ್ನ ಪಟ್ಟರೆ‌.. ಅತ್ತ ಅನು ಸ್ನೇಹಿತೆ ರಮ್ಯ ಮತ್ತು ಸಂಪತ್ ಆರ್ಯ ಹೇಗಾದರೂ ಮಾಡಿ ಅನುವನ್ನು ಭೇಟಿ ಮಾಡಿಸಬೇಕೆಂದು ಪ್ರಯತ್ನ ಪಡುತ್ತಾರೆ..

ಅದಕ್ಕೆ ಹೇಳೋದು, ಕೆಟ್ಟದು ಮಾಡೋಕೆ ಒಬ್ಬರಿದ್ದರೆ.. ಕಾಯೋಕೆ ಒಬ್ಬನಿರ್ತಾನೆ ಅಂತ.. ಝೇಂಡೆ ಆರ್ಯನ ಒಳಿತಿಗಾಗಿ ಇದೆಲ್ಲಾ ಮಾಡಿದರೂ ಕೂಡ ಪ್ರೇಕ್ಷಕರ ಮನಸ್ಸಿನಲ್ಲಿ ಅನು ಆರ್ಯ ಒಂದಾಗಬೇಕೆಂದೇ ಇರೋದ್ರಿಂದ ಸದ್ಯದ ಮಟ್ಟಿಗೆ ಝೇಂಡೆ ವಿಲನ್ ಆಗಿ ಕಾಣಿಸುತ್ತಿದ್ದಾರೆ ಎನ್ನಬಹುದು..

ಅತ್ತ ಅನು ನೋಡದೆ ಆರ್ಯನ ಚಡಪಡಿಕೆ.. ಇತ್ತ ಅನು ಮನಸ್ಸಿನ ತೊಳಲಾಟ.. ಎಲ್ಲವೂ ದಿನದಿಂದ ದಿನಕ್ಕೆ ಧಾರಾವಾಹಿ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸುತ್ತಿದೆ..

ಇಂದಿನ ಸಂಚಿಕೆಯಲ್ಲಿ.. ಅನು ಚಾಲೆಂಜ್ ಅನ್ನೋ‌ ನೆಪ ಹಾಕಿ ತನ್ನ ಸ್ನೇಹಿತರನ್ನು ಬಿಟ್ಟು ನಿನ್ನನ್ನು ಭೇಟಿ ಮಾಡೋ‌ ಪ್ಲಾನ್ ಮಾಡಿದ್ದಾಳೆ ಎಂಬ ಝೇಂಡೆ ಮಾತು ಆರ್ಯನ ಮನಸ್ಸು ಕೆಡಿಸುತ್ತಾ? ಅಥವಾ ನಿನ್ನೆ ಅನು ಎಲ್ಲವ್ವನ ಮೇಲೆ ಹಾಕಿದ ಹೂವಿನ ಫಲದಿಂದ ಆರ್ಯ ಅನುವನ್ನ ಭೇಟಿ ಆಗ್ತಾನಾ.. ಅದರಲ್ಲೂ ಇಬ್ಬರ ಭೇಟಿ ಯಾವ ರೀತಿ, ಎಲ್ಲಿ ಆಗುತ್ತದೆ ಎಂಬುದೇ ಕುತೂಹಲ..

ಅಥವಾ ಪ್ರತಿಯೊಂದಕ್ಕೂ ಟ್ವಿಸ್ಟ್ ನೀಡುತ್ತಿರುವ ನಿರ್ದೇಶಕರು ಇಲ್ಲೂ ಕೂಡ ಟ್ವಿಸ್ಟ್ ನೀಡಿ ಹುಬ್ಬಳ್ಳಿಗೆ ಕಳುಹಿಸಿ ಬಿಡ್ತಾರಾ.. ಇಂದಿನ ಸಂಚಿಕೆವರೆಗೂ ಕಾದು ನೋಡಬೇಕಿದೆ.

Source Credit RJ News Kannada

Niranthara News

Leave a Reply

Your email address will not be published. Required fields are marked *

Next Post

ಕಾಲಚಕ್ರ ತಿರುಗಿದಾಗ: ಅಂದು ವರಿಷ್ಠರಿಂದ ಬಿಎಸ್ವೈ ನಿರ್ಲಕ್ಷ್ಯ: ಇಂದು ಮೋದಿಯಿಂದ standing ovation

Fri Dec 13 , 2019
Source Credit Oneindia.com Pin it Email https://nirantharanews.com/%e0%b2%87%e0%b2%82%e0%b2%a6%e0%b2%bf%e0%b2%a8-%e0%b2%b8%e0%b2%82%e0%b2%9a%e0%b2%bf%e0%b2%95%e0%b3%86%e0%b2%af%e0%b2%b2%e0%b3%8d%e0%b2%b2%e0%b2%bf-%e0%b2%b0%e0%b3%8b%e0%b2%9a%e0%b2%95-%e0%b2%a4/#Wg== Karnataka oi-Balaraj Tantri | Published: Friday, December 13, 2019, 10:12 [IST] ಮೇ 15, 2018, ಕರ್ನಾಟಕ ಅಸೆಂಬ್ಲಿ ಚುನಾವಣೆಯ ಫಲಿತಾಂಶ ಹೊರಬೀಳುತ್ತಿತ್ತು. ಸರಕಾರ ನಮ್ಮದೇ ಎಂದು ಮಧ್ಯಾಹ್ನದ ಹೊತ್ತಿಗೆ ಜಗನ್ನಾಥ ಭವನ, ಕೇಶವಕೃಪದಲ್ಲಿ ಪಟಾಕಿ ಹೊಡೆಯುತ್ತಿದ್ದ ಕಾರ್ಯಕರ್ತರು, ಸಂಜೆಹೊತ್ತಿಗೆ ಬೇಸರದಿಂದ ಪಕ್ಷ/ಮಾತೃ ಸಂಘಟನೆಯ ಕಚೇರಿಯನ್ನು ಖಾಲಿ ಮಾಡಿದ್ದರು. 104 ಸೀಟು ಗೆದ್ದು, ಬಹುಮತ ಜಸ್ಟ್ ಮಿಸ್ ಆಗಿದ್ದರೂ, ಯಡಿಯೂರಪ್ಪ ತರಾತುರಿಯಲ್ಲಿ ಸರಕಾರ ರಚನೆಗೆ ಮುಂದಾದರು, ರಾಜ್ಯಪಾಲರು ಪ್ರಮಾಣವಚನವನ್ನೂ ಬೋಧಿಸಿದರು. ಸರಳ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links