ಆರ್ಯವರ್ಧನ್ ರಿಂದ ಫೋನ್ ಬರಲಿದೆ ಎಂದುಕೊಂಡ ಅನು.. ಆದರೆ ನಡೆದದ್ದೇ ಬೇರೆ..

Source Credit RJ News Kannada

ಜೊತೆಜೊತೆಯಲಿ ಧಾರಾವಾಹಿಯಲ್ಲಿ ಆರ್ಯವರ್ಧನ್ ಅನು ಸಿರಿಮನೆ ನಡುವಿನ ಪ್ರೀತಿಯ ಪರ್ವ ಶುರುವಾಗಿದ್ದು, ಪ್ರೀತಿ, ನಂಬಿಕೆ, ತಪ್ಪುಗಳ‌ ತೊಳಲಾಟದ ನಡುವೆಯೂ ಅನುವನ್ನು ನೋಡದೇ ಒಂದು ದಿನವೂ ಇರಲಾಗದ ಸತ್ಯವನ್ನು ಆರ್ಯವರ್ಧನ್ ಒಪ್ಪಿಕೊಂಡಾಗಿದೆ..

ಈ ನಡುವೆ ಆರ್ಯವರ್ಧನ್ ರಿಂದ ಅನುವನ್ನು ದೂರ ಮಾಡಲೇಬೇಕೆಂದು ಪಣ ತೊಟ್ಟಿರುವ ಮೀರಾಜಿ ಅನುಗೆ ಇದ್ದಕ್ಕಿದ್ದ ಹಾಗೆ ವಾರದ ರಜೆ ನೀಡಿ ಆಫೀಸಿಗೆ ಬರದಂತೆ ಮಾಡಿದ್ದು, ಇತ್ತ ಆರ್ಯವರ್ಧನ್ ಅನುಗಾಗಿ ಚಡಪಡಿಸುವಂತಾಗಿದೆ..

ಅತ್ತ ಅನು ಕೂಡ ಆರ್ಯವರ್ಧನ್ ತನಗೆ ಫೋನ್ ಮಾಡೇ ಮಾಡ್ತಾರೆ ಅನ್ನೋ ನಂಬಿಕೆಯನ್ನು ರಮ್ಯ ಜೊತೆ ಹೇಳಿಕೊಳ್ಳುತ್ತಾಳೆ.. ಇದೆಲ್ಲದರ ನಡುವೆ ಆಗಾಗ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುವ ಬಾಬಾ ಒಬ್ಬರು ಹಿಂದಿನ ಬಾಕಿ ಇದೆ.. ಅವನೇ ಬರ್ತಾನೆ ಎಂದು ಅನುಗೆ ಹೇಳಿದ್ದು, ಮುಂದೆ ಧಾರಾವಾಹಿ ಇನ್ನಷ್ಟು ರೋಚಕ ತಿರುವುಗಳನ್ನು ಪಡೆಯಲಿದೆ ಎಂದು ನಿರೀಕ್ಷಿಸಬಹುದಾಗಿದೆ..

ಇನ್ನು ಸಂಜೆ 5 ರೊಳಗೆ ಆರ್ಯವರ್ಧನ್ ಫೋನ್ ಮಾಡೇ ಮಾಡ್ತಾರೆ ಅನ್ನೋ ನಂಬಿಕೆಯಿಂದ ಕಾಯುತ್ತಿರುವ ಅನು.. ಇನ್ನೇನು ಒಂದೇ ಒಂದು ನಿಮಿಷ ಇದೆ ಎನ್ನುವಾಗಲೂ ಆರ್ಯನ ಮೇಲೆ ನಂಬಿಕೆ ಕಳೆದುಕೊಳ್ಳುವುದಿಲ್ಲ.. ಇನ್ನು ಇಂದಿನ ಸಂಚಿಕೆಯ ಪ್ರೋಮೋದಲ್ಲಿ ತೋರಿರುವಂತೆ ಇಂದು ಫೋನ್ ಗಾಗಿ ಕಾಯುತ್ತಿದ್ದ ಅನುವಿನ ಎದುರಿಗೇ ಆರ್ಯವರ್ಧನ್ ಪ್ರತ್ಯಕ್ಷವಾಗಿದ್ದಾರೆ.. ನಂಬಿಕೆ ಪ್ರೀತಿ‌ ಎಲ್ಲವೂ ಗಟ್ಟಿಯಾಗಿದೆ.. ಆದರೆ ಇದು ಅನುವಿನ ಕನಸೋ ಅಥವಾ ವಾಸ್ತವವೋ ಇಂದಿನ ಸಂಚಿಕೆವರೆಗೂ ಕಾದು ನೋಡಬೇಕಿದೆ..

Source Credit RJ News Kannada

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಸೂಲಿಬೆಲೆ ತೇಜಸ್ವಿ ಮಾತ್ರ ಅಲ್ಲ ನನ್ನ ಕೊಲೆಗೂ ಸ್ಕೇಚ್ ಹಾಕಲಾಗಿತ್ತು – ಯು.ಟಿ ಖಾದರ್

Fri Jan 17 , 2020
Source Credit TheMangaloreMirror.in ಸೂಲಿಬೆಲೆ ತೇಜಸ್ವಿ ಮಾತ್ರ ಅಲ್ಲ ನನ್ನ ಕೊಲೆಗೂ ಸ್ಕೇಚ್ ಹಾಕಲಾಗಿತ್ತು – ಯು.ಟಿ ಖಾದರ್ ಮಂಗಳೂರು ಜನವರಿ 17: SDPI ಕಾರ್ಯಕರ್ತರಿಂದ ಚಿಂತಕ ಸೂಲಿಬೆಲೆ ಹಾಗೂ ಸಂಸದ ತೇಜಸ್ವಿ ಸೂರ್ಯ ಹತ್ಯೆಗೆ ಸ್ಕೆಚ್ ಪ್ರಕರಣಕ್ಕೆ ಕುರಿತಂತೆ ಮಾಜಿ ಸಚಿವ ಯುಟಿ ಖಾದರ್ ಪ್ರತಿಕ್ರಿಯೆ ನೀಡಿದ್ದಾರೆ. ಮಂಗಳೂರಿನಲ್ಲಿ ಮಾತನಾಡಿದ ಅವರು ನನ್ನ ಮೇಲೆ ಕೂಡಾ ಸ್ಕೆಚ್ ಹಾಕಿದ್ದಾರೆ ಎಂಬ ಮಾಹಿತಿಯನ್ನ ಪೊಲೀಸ್ ಇಲಾಖೆ ನೀಡಿತ್ತು, ಅಲ್ಲದೆ ನನಗೆ ಭಧ್ರತೆ ಕೊಡುವ ಬಗ್ಗೆ ಹೇಳಿದ್ದರು. Pin it Email https://nirantharanews.com/%e0%b2%86%e0%b2%b0%e0%b3%8d%e0%b2%af%e0%b2%b5%e0%b2%b0%e0%b3%8d%e0%b2%a7%e0%b2%a8%e0%b3%8d-%e0%b2%b0%e0%b2%bf%e0%b2%82%e0%b2%a6-%e0%b2%ab%e0%b3%8b%e0%b2%a8%e0%b3%8d-%e0%b2%ac%e0%b2%b0%e0%b2%b2/#MXV0a2hhZGVyLmp ಸಮಾಜದ್ರೋಹಿ ಶಕ್ತಿಗಳನ್ನು […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links