ಆರ್ಯವರ್ಧನ್ ಅಂದುಕೊಂಡದ್ದೇ ಒಂದು.. ಆಗಿದ್ದೇ ಮತ್ತೊಂದು.. ಹೊಸ ಎಂಟ್ರಿ ಯಾರು ಗೊತ್ತಾ?

Source Credit RJ News Kannada

ಜೊತೆಜೊತೆಯಲಿ ಧಾರಾವಾಹಿಯಲ್ಲಿ ಆರ್ಯವರ್ಧನ್ ತನ್ನ ಆಪ್ತ ಸ್ನೇಹಿತನ ಮೇಲೆ ಕೈ ಮಾಡಿದೆ ಎಂದು ಕೊರಗಿ ತಾನೇ ಹೋಗಿ ಝೇಂಡೆ ಮನಸ್ಸನ್ನು ಸಮಾಧಾನ ಪಡಿಸಿ ಕ್ಷಮೆ ಕೇಳಿ ಗಿರ್ಮಿಟ್ ಹಾಗೂ ಮಿರ್ಚಿ ಬಜ್ಜಿಯ ರುಚಿಯನ್ನು ತಾವೂ ಸವಿದು ಪ್ರೇಕ್ಷಕರೂ ಸವಿಯುವಂತೆ ಮಾಡಿದ್ರು..

ನಂತರ ನಾಳೆ ಆಫೀಸಿಗೆ ಬರುವ ಅನು ಜೊತೆ ಕೆಲ ಸಮಯ ಕಳೆಯುವ ಸಲುವಾಗಿ ಓಪನ್ ಆಫಿಸ್ ಡೇ ಮಾಡೋಣ ಎಂದು ಸಿಬ್ಬಂದಿಗೆ ತಿಳಿಸಿದರು.. ಅತ್ತ ಅನು ಕೂಡ ಆರ್ಯವರ್ಧನ್ ರನ್ನು ನೋಡಲು ಪ್ರೀತಿಯ ಕಾತುರದಿಂದ ಆತುರಾತುರವಾಗಿ ಬರುವಾಗ ಸುಬ್ಬುಗೆ ಮನಸ್ಸಿನ ಒಂದು ಮೂಲೆಯಲ್ಲಿ ಅಸಮಾಧನವಾಗಿ ಅದು ಆತನ ಮುಖದಲ್ಲಿಯೂ ಕಂಡಿತು..

ಇತ್ತ ಆರ್ಯವರ್ಧನ್ ಹೊಸ ಲುಕ್ ನಲ್ಲಿ ಅನುವನ್ನು ನೋಡಲು ಬರುತ್ತಿದ್ದಾರೆ.. ಇನ್ನು ಇಂದಿನ ಸಂಚಿಕೆಯಲ್ಲಿ ಇಬ್ಬರ ಭೇಟಿಯಾಗಿ ಇಬ್ಬರ ನಡುವಿನ ಮಾತುಗಳಿಗಾಗಿ ಪ್ರೇಕ್ಷಕರು ಕಾಯುತ್ತಿರುವಾಗಲೇ ಧಾರಾವಾಹಿಯಲ್ಲಿ ಹೊಸ ಎಂಟ್ರಿಯೊಂದು ಆಗಿದೆ..

ಹೌದು ಇಂದಿನ ಸಂಚಿಕೆಯ ಪ್ರೋಮೋದಲ್ಲಿ ತೋರಿಸಿರುವಂತೆ ಆರ್ಯವರ್ಧನ್ ರ ಹೊಸ ಲುಕ್ ಕಂಡು ಆಫೀಸಿನ ಸಿಬ್ಬಂದಿ ಸಂತೋಷ ವ್ಯಕ್ತ ಪಡಿಸುತ್ತಾರೆ.. ಜೊತೆಗೆ ಮತ್ತೊಂದು ಸರ್ಪ್ರೈಸ್ ನೀಡುವುದಾಗಿ ಆರ್ಯವರ್ಧನ್ ತಮ್ಮ ಸಿಬ್ಬಂದಿಗೆ ಹೇಳಿ.. ಇನ್ನೇನು ಅನು ಬರಬಹುದು ಎಂದುಕೊಳ್ಳುತ್ತಿರುವಾಗಲೇ ಆಫೀಸಿಗೆ ಹೊಸ ಎಂಟ್ರಿ ಆಗಿದೆ..

ಹೌದು ಮೀರಾ ಅವರು ಆ ಹೊಸ ಎಂಟ್ರಿ ಪರಿಚಯ ಮಾಡಿಸಿದ್ದು, ಇವರು ನೀಲ್ ಅಂತ ಇನ್ನುಮುಂದೆ ಕಂಪನಿಯ ಲೀಗಲ್ ಸೆಕ್ಷನ್ ನೋಡಿಕೊಳ್ಳಲಿದ್ದಾರೆ.. ಇವರಿಂದ ಇನ್ನು ಬಹಳಷ್ಟು ಒಳ್ಳೆಯ ಕೆಲಸ ಆಗಲಿದೆ” ಎನ್ನುತ್ತಾರೆ ಮೀರಾಜಿ..

ಅನು ಬರುವ ದಾರಿ ನೋಡುತ್ತಿದ್ದ ಆರ್ಯವರ್ಧನ್ ರಿಗೆ ಕೊಂಚ ಶಾಕ್ ಕೂಡ ಆಗುತ್ತದೆ.. ಇದ್ದಕ್ಕಿದ್ದ ಹಾಗೆ ಮೀರಾ ಅವರು ಲೀಗಲ್ ಸೆಕ್ಷನ್ ಗೆ ನೀಲ್ ಅವರನ್ನು ತೆಗೆದುಕೊಂಡಿದ್ದೇಕೆ? ಆರ್ಯವರ್ಧನ್ ರ ಮುಂದಿನ ನಿರ್ಧಾರವೇನು? ಅನು ವಿಷಯದಲ್ಲಿ ಮುಂದೇನಾಗಬಹುದು ಇಂದಿನ ಸಂಚಿಕೆವರೆಗೂ ಕಾದು ನೋಡಬೇಕಿದೆ..

Source Credit RJ News Kannada

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಭಾರತ ಮುಷ್ಕರ: ಮಂಗಳೂರು ಕಾರ್ಮಿಕ ಸಂಘಟನೆಗಳಿಂದ ಪ್ರತಿಭಟನೆ

Wed Jan 8 , 2020
Source Credit NewsKannada.com YK   ¦    Jan 08, 2020 12:34:10 PM (IST) ಮಂಗಳೂರು: ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಕೈಗೊಂಡ ಭಾರತ ಮುಷ್ಕರ ಹಿನ್ನೆಲೆ ಮಂಗಳೂರಿನಲ್ಲಿ ಬಂದರ ಪೋರ್ಟ್ ರಸ್ತೆಯಲ್ಲಿ ಅಂಗಡಿ ಬಂದ್ ಮಾಡಿ ಪ್ರತಿಭಟನೆ ನಡೆಸಲಾಯಿತು. ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆಯು ದ.ಕ. ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ನಗರದ ಪುರಭವನದ ಎದುರು ಹಲವು ಬೇಡಿಕೆಗಳನ್ನು ಮುಂದಿಟ್ಟು ಪ್ರತಿಭಟನೆ ನಡೆಸಿದರು. ಈ ಪ್ರತಿಭಟನೆಯಲ್ಲಿ 14 ಸಂಘಟನೆಗಳು ಭಾಗಿಯಾಗಿದ್ದವು . ಆದರೆ ಸಾರ್ವಜನಿಕರಿಗೆ ಯಾವುದೇ ತೊಂದರೆಗಳು ಆಗಿಲ್ಲ. ಬಸ್ ಗಳು […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links