ಆಯುರ್ವೇದದ ಪ್ರಕಾರ ತಲೆಗೆ ಎಣ್ಣೆ ಹೀಗೆ ಹಚ್ಚಿದರೆ ಒಳ್ಳೆಯದು

Source Credit Kannada.boldsky.com

ತಲೆಬುರುಡೆ(ಮುದ್ರಾ ತೈಲ) ಹಚ್ಚಿಕೊಳ್ಳುವ ಲಾಭಗಳು

ಕೂದಲು ತುಂಬಾ ದಪ್ಪ, ಮೃಧು ಮತ್ತು ಕಾಂತಿಯುತವಾಗಿ ಬೆಳೆಯಲು ನೆರವಾಗುವುದು.

ಸ್ಪರ್ಶದ ಅಂಗಾಂಗಳನ್ನು ಇದು ಶಮನ ಮತ್ತು ಉತ್ತೇಜಿಸಲು ನೆರವಾಗುವುದು.

ಮುಖದ ಮೇಲಿನ ನೆರಿಗೆ ನಿವಾರಣೆ ಮಾಡುವುದು.

ಭೃಂಗರಾಜ ತೈಲ, ಬ್ರಾಹ್ಮಿ ತೈಲ ಮತ್ತು ಆರೋಗ್ಯಕಾರಿ ಕೂದಲಿನ ತೈಲಗಳು ತಲೆಬುರುಡೆಯ ಮಸಾಜ್ ಗೆ ತುಂಬಾ ಒಳ್ಳೆಯದು.

ತಲೆಬುರುಡೆ ಮೇಲೆ ತೈಲದ ಮಸಾಜ್ ಮಾಡುವುದರಿಂದ ಅತ್ಯಧಿಕ ಲಾಭ ಪಡೆಯಲು ಸರಿಯಾದ ಕ್ರಮ ಹಾಗೂ ಸಮಯದಲ್ಲಿ ಇದನ್ನು ಹಚ್ಚಬೇಕು. ಯಾವ ರೀತಿಯ ಲಾಭ ಪಡೆಯಲು ಬಯಸುತ್ತೀರಿ ಎನ್ನುವುದರ ಮೇಲೆ ಯಾವ ವಿಧಾನ ಮತ್ತು ಹೇಗೆ ಹಚ್ಚಿಕೊಳ್ಳುವಿರಿ ಎನ್ನುವುದು ಅವಲಂಬಿಸಿರುವುದು. ಇಲ್ಲಿ ತೈಲ ಹಚ್ಚುವ

ವಿಧಾನಗಳು ಮತ್ತು ಅದರ ಕೆಲವೊಂದು ಲಾಭಗಳ ಬಗ್ಗೆ ತಿಳಿಸಿಕೊಡಲಿದ್ದೇವೆ.

ಕೂದಲಿನ ಗುಣಮಟ್ಟ ಸುಧಾರಿಸಲು

ಕೂದಲಿನ ಬೆಳವಣಿಗೆಯು ಸರಿಯಾಗಿದ್ದ ವೇಳೆ, ತುದಿಗಳು ಸೀಳದೆ ಇರುವಾಗ, ನಯ ಹಾಗೂ ಕಾಂತಿಯುತ ಕೂದಲು, ಅಕಾಲಿಕ ಬಿಳಿಯಾಗುವಿಕೆ ಸಮಸ್ಯೆ ಇಲ್ಲದೆ ಇದ್ದರೆ ಆಗ ಕೂದಲಿನ ಗುಣಮಟ್ಟವು ಸುಧಾರಣೆ ಆಗುತ್ತಿದೆ ಎಂದು ಹೇಳಬಹುದು. ರಾತ್ರಿ ಮಲಗುವ ಮೊದಲು ಕೂದಲು ಮತ್ತು ತಲೆಬುರುಡೆಗೆ ಸರಿಯಾಗಿ ಎಣ್ಣೆ ಹಚ್ಚಿಕೊಳ್ಳಬೇಕು. ರಾತ್ರಿಯಿಡಿ ಹಾಗೆ ಬಿಡಬೇಕು ಮತ್ತು ಬೆಳಗ್ಗೆ ಎದ್ದು ಉಗುರುಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿ ಕೂದಲು ತೊಳೆಯಬೇಕು.

ಕೂದಲು ಯಾವಾಗ ತೊಳೆಯಬೇಕು ಎಂದು ಇಚ್ಛಿಸುವಿರೋ ಆಗ ನೀವು ಎಣ್ಣೆ ಹಚ್ಚಿಕೊಳ್ಳಬಹುದು. ಪ್ರತಿನಿತ್ಯವೂ ಕೂದಲು ತೊಳೆಯಬಾರದು. ಅದರಲ್ಲೂ ಉದ್ದ ಕೂದಲು ಇರುವವರು ಪ್ರತಿನಿತ್ಯ ಕೂದಲು ತೊಳೆಯಬಾರದು. ವಾರದಲ್ಲಿ ಎರಡು ಅಥವಾ ಮೂರು ದಿನಗಳ ಕಾಲ ಮಾತ್ರ ಕೂದಲು ತೊಳೆಯಿರಿ.

ಕೆಲವು ಜನರು ಕೂದಲು ತೊಳೆದ ಬಳಿಕ ಕೂಡ ತೈಲ ಹಚ್ಚಿಕೊಳ್ಳುವರು. ಆದರೆ ಹೀಗೆ ಮಾಡುವುದು ಸರಿಯಲ್ಲ. ಯಾಕೆಂದರೆ ಕೂದಲು ಧೂಳು ಮತ್ತು ಕಲುಷಿತ ವಾತಾವರಣದ ಕಣಗಳನ್ನು ಸೆಳೆಯಬಹುದು. ಮನೆಯಲ್ಲೇ ಇದ್ದರೆ ಆಗ ನೀವು ಕೂದಲಿಗೆ ಸ್ವಲ್ಪ ಎಣ್ಣೆ ಹಚ್ಚಿಕೊಳ್ಳಬಹುದು. ಕೂದಲು ಬೆಳವಣಿಗೆ ಆಗಬೇಕಿದ್ದರೆ ಆಗ ನೀವು ತಲೆಬುರುಡೆ, ಕೂದಲಿನ ಬುಡ ಹಾಗೂ ಸಂಪೂರ್ಣ ಕೂದಲಿಗೆ ತೈಲ ಹಚ್ಚಿ. ತಲೆಬುರುಡೆಗೆ ತೈಲ ಹಚ್ಚುವ ಮೊದಲು ನೀವು ಸ್ವಲ್ಪ ಬಿಸಿ ಮಾಡಿ. ಆದರೆ ಪಿತ್ತ ಅಸಮತೋಲನ, ತಲೆನೋವು ಅಥವಾ ತಲೆಬುರುಡೆಯಲ್ಲಿ ದದ್ದು ಇದ್ದರೆ ಆಗ ನೀವು ತೈಲದ ಚಿಕಿತ್ಸೆ ಕಡೆಗಣಿಸಿ.

ತಲೆಹೊಟ್ಟು ನಿವಾರಣೆ ಮಾಡಲು

ತಲೆಬುರುಡೆಯಲ್ಲಿ ತಲೆಹೊಟ್ಟಿನಿಂದಾಗಿ ನಿಮಗೆ ತುಂಬಾ ಕಿರಿಕಿರಿ ಆಗುತ್ತಲಿದ್ದರೆ, ಆಗ ನೀವು ನಿಯಮಿತವಾಗಿ ತೈಲ ಹಚ್ಚಿಕೊಂಡರೆ ತಲೆಹೊಟ್ಟಿನ ಸಮಸ್ಯೆ ನಿವಾರಣೆ ಮಾಡಬಹುದು.

ಇದಕ್ಕಾಗಿ ನೀವು ಬೇವಿನ ಎಣ್ಣೆ ಮತ್ತು ಸ್ವಲ್ಪ ಕಹಿ ಸುವಾಸನೆ ನೀಡುವಂತಹ ಸಾರಭೂತ ತೈಲಗಳನ್ನು ಬಳಸಬಹುದು. ಸ್ನಾನಕ್ಕೆ ಒಂದು ಗಂಟೆಗೆ ಮೊದಲು ತಲೆಬುರುಡೆ ಮತ್ತು ಕೂದಲಿಗೆ ಈ ಎಣ್ಣೆ ಹಚ್ಚಿಕೊಳ್ಳಿ. ಇದರ ಬಳಿಕ ಬಿಸಿ ನೀರಿನಿಂದ ಕೂದಲು ತೊಳೆಯಿರಿ.

ತಲೆನೋವು ನಿವಾರಿಸಲು

ತಲೆನೋವು ನಿವಾರಣೆ ಮಾಡಲು ಆಯುರ್ವೇದ ತೈಲ ಬಳಸಬಹುದು ಅಥವಾ ವೈದ್ಯರ ಸಲಹೆ ಪಡೆದು ನೀವು ಇದನ್ನು ಬಳಸಬಹುದು.

ಸಂಜೆ ವೇಳೆ ಅಂದರೆ 6 ಗಂಟೆಗೆ ತೈಲ ಹಚ್ಚಿಕೊಳ್ಳಬೇಕು. ಯಾಕೆಂದರೆ ತಲೆನೋವು ಸಾಮಾನ್ಯವಾಗಿ ವಾತದಿಂದ ಬರುವುದು ಮತ್ತು ಈ ಸಮಯವು ವಾತದ ಸಮಯವಾಗಿರುವುದು. ಇದರಿಂದ ಈ ಸಮಯದಲ್ಲಿ ಸರಿಯಾಗಿ ತೈಲ ಹಚ್ಚಿಕೊಳ್ಳಿ.

ಸರಿಯಾಗಿ ನಿದ್ರೆ ಬರಲು

ಮಲಗುವ ಅರ್ಧ ಗಂಟೆಗೆ ಮೊದಲು ತೈಲದಿಂದ ತಲೆಗೆ ಮಸಾಜ್ ಮಾಡಿಕೊಂಡರೆ ಆಗ ಖಂಡಿತವಾಗಿಯೂ ಒಳ್ಳೆಯ ನಿದ್ರೆ ಬರುವುದು. ಪರಿಣಾಮಕಾರಿ ಆಗಿರಲು ನೀವು ಎಳ್ಳೆಣ್ಣೆ ಬಳಸಿ. ಎಳ್ಳೆಣ್ಣೆ ಬಳಸಿದರೆ ಆಗ ತಲೆ ಬೋಳು ಆಗುವುದನ್ನು ತಡೆಯಲು, ಅಕಾಲಿಕ ಕೂದಲು ಬಿಳಿಯಾಗುವುದು ಮತ್ತು ತಲೆನೋವು ತಡೆಯುತ್ತದೆ ಎಂದು ಆಯುರ್ವೇದವು ಹೇಳುತ್ತದೆ.

ಕೇರಳದಲ್ಲಿನ ಹೆಚ್ಚಿನ ಆಯುರ್ವೇದ ಥೆರಪಿ ಕೇಂದ್ರಗಳು ಎಳ್ಳೆಣ್ಣೆ ಬಳಸುತ್ತವೆ.

ಎಳ್ಳೆಣ್ಣೆಗೆ ಪರ್ಯಾಯವೆಂದರೆ ಅದು ತೆಂಗಿನ ಎಣ್ಣೆ. ತೆಂಗಿನ ಎಣ್ಣೆಯನ್ನು ಹದವಾಗಿ ಬಿಸಿ ಮಾಡಿಕೊಂಡು, ಕೂದಲು ಹಾಗೂ ತಲೆಬುರುಡೆಗೆ ಹಚ್ಚಿಕೊಳ್ಳಬೇಕು. ಹೀಗೆ ಮಾಡಿದರೆ ಶೀತ ದೂರವಾಗುವುದು ಮತ್ತು ಸೈನಟಿಸ್ ದೂರವಾಗುವುದು.

ಈಗ ಕೂದಲು ಹಾಗೂ ತಲೆಬುರುಡೆಗೆ ತೈಲ ಹಚ್ಚಿಕೊಳ್ಳುವ ಸರಿಯಾದ ವಿಧಾನ ನಿಮಗೆ ತಿಳಿದಿದೆ ಎಂದು ನಾವು ಭಾವಿಸುತ್ತೇವೆ. ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್ ಬಾಕ್ಸ್ ನಲ್ಲಿ ಬರೆಯಲು ಮರೆಯಬೇಡಿ.

Source Credit Kannada.boldsky.com

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಗಂಭೀರ ಕಾಯಿಲೆ ಬಗ್ಗೆ ಚರ್ಮ ನೀಡುವ ಎಚ್ಚರಗಳಿವು!

Tue Dec 17 , 2019
Source Credit Kannada.boldsky.com Pin it Email https://nirantharanews.com/%e0%b2%86%e0%b2%af%e0%b3%81%e0%b2%b0%e0%b3%8d%e0%b2%b5%e0%b3%87%e0%b2%a6%e0%b2%a6-%e0%b2%aa%e0%b3%8d%e0%b2%b0%e0%b2%95%e0%b2%be%e0%b2%b0-%e0%b2%a4%e0%b2%b2%e0%b3%86%e0%b2%97%e0%b3%86-%e0%b2%8e/#MDEtMTU3NjUwNjg ಚರ್ಮವು ಏನನ್ನು ಸೂಚಿಸುವುದು ದೇಹದಲ್ಲಿನ ಅತೀ ದೊಡ್ಡ ಅಂಗವಾಗಿರುವಂತಹ ಚರ್ಮವು ಆರೋಗ್ಯಕ್ಕೆ ಕೈಗನ್ನಡಿಯಾಗಿದೆ. ಎಲ್ಲಾ ಅಂಗಾಂಗಗಳು ಇದಕ್ಕೆ ಸಂಬಂಧವನ್ನು ಹೊಂದಿದೆ. ದೇಹದಲ್ಲಿ ಏನು ನಡೆಯುತ್ತಿದೆಯೋ ಅದು ಕೆಲವೊಮ್ಮೆ ನಿಮ್ಮ ಚರ್ಮದ ಮೇಲೆ ಪರಿಣಾಮ ಬೀರುವುದು. ಚರ್ಮವನ್ನು ನೋಡಲು ವೈದ್ಯರಿಗೆ ಬೇರೆ ರೀತಿಯ ಸಾಧನವು ಬೇಕಾಗಿಲ್ಲ, ದೇಹದೊಳಗೆ ಮತ್ತು ಆರೋಗ್ಯದಲ್ಲಿ ಏನಾಗುತ್ತಿದೆ ಎಂದು ಅವರು ಚರ್ಮವನ್ನು ನೋಡಿಯೇ ಹೇಳಬಹುದು. ಕೆಲವೊಂದು ಗಂಭೀರ ಕಾಯಿಲೆಗಳ ಬಗ್ಗೆ ಚರ್ಮವು ತೋರಿಸುವ ಲಕ್ಷಣಗಳು ಯಾವುದು ಎಂದು ನಾವು ಇಲ್ಲಿ ತಿಳಿಯುವ. […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links