ಆನಂದ್ ಮಹೀಂದ್ರಾ ಮೆಚ್ಚುಗೆಗೆ ಪಾತ್ರನಾದ ಕಂಬಳ ಓಟಗಾರ ಶ್ರೀನಿವಾಸ ಗೌಡ

Source Credit NewsKannada.com


HSA
  ¦   


Feb 15, 2020 02:28:04 PM (IST)

ಮಂಗಳೂರು: ಕರಾವಳಿ ಕರ್ನಾಟಕದ ಜಾನಪದ ಕ್ರೀಡೆ ಕಂಬಳದಲ್ಲಿ ಕೋಣಗಳ ಹಿಂದೆ ಅತಿ ವೇಗವಾಗಿ ಓಡಿದ ದಾಖಲೆ ಮಾಡಿರುವ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ಮೀಯಾರಿನ ಯುವಕ ಶ್ರೀನಿವಾಸ ಗೌಡ ಅವರಿಗೆ ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು ತಮ್ಮ ಟ್ವಿಟ್ಟರ್ ಖಾತೆ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿ, ಕಂಬಳವನ್ನು ಒಲಿಂಪಿಕ್ಸ್ ಗೆ ಸೇರಿಸಿದರೆ ಸ್ವರ್ಣ ಖಚಿತ ಎಂದು ಹೇಳಿದ್ದಾರೆ.

ಐಕಳದಲ್ಲಿ ಫೆ.1ರಂದು ನಡೆದ ಕಂಬಳದಲ್ಲಿ ಶ್ರೀನಿವಾಸ ಗೌಡ ಅವರು 142.50 ಮೀ. ದೂರದ ಕರೆ(ಕೋಣಗಳು ಓಡುವ ಟ್ರ್ಯಾಕ್)ಯಲ್ಲಿ ಕೇವಲ 13.62 ಸೆಕೆಂಡಿನಲ್ಲಿ ಕ್ರಮಿಸಿರುವರು. ಇದು ಕಂಬಳದ ಅತ್ಯಂತ ವೇಗದ ಓಟವಾಗಿದೆ.

ಇದರ ಬಳಿಕ ಶ್ರೀನಿವಾಸ ಗೌಡ ಅವರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದೀಗ ಔಟ್ ಲುಕ್ ನಲ್ಲಿ ಪ್ರಕಟಗೊಂಡಿರುವ ವೀಡಿಯೋಗೆ ಮಹೀಂದ್ರಾ ಅವರು ಟ್ವೀಟ್ ಮಾಡಿರುವರು.

ಒಮ್ಮೆ ಆ ವ್ಯಕ್ತಿಯ ಮೈಕಟ್ಟನ್ನು ನೋಡಿ. ಈತ ಅಸಾಧರಣ ಸಾಹಸ ಮಾಡಲು ಸಮರ್ಥನಿರುವರು. ನೂರು ಮೀಟರ್ ಓಟದಲ್ಲಿ ಭಾಗಿಯಾಗಲು ಕ್ರೀಡಾ ಸಚಿವರಾದ ಕಿರಣ್ ರಿಜು ಅವರು ಇವರಿಗೆ ತರಬೇತಿ ಕೊಡಿಸಲು ವ್ಯವಸ್ಥೆ ಮಾಡಬೇಕು ಅಥವಾ ಕಂಬಳವನ್ನು ಒಲಿಂಪಿಕ್ಸ್ ಗೆ ಸೇರಿಸಬೇಕು. ಆಗ ಸ್ವರ್ಣ ಖಚಿತ ಎಂದು ಆನಂದ್ ಮಹೀಂದ್ರಾ ಟ್ವೀಟ್ ಮಾಡಿರುವರು.

Source Credit NewsKannada.com

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

‘ಮಹಿಳಾಪರ ಕಾನೂನು ದುರುಪಯೋಗ ಆತಂಕಕಾರಿ’

Sat Feb 15 , 2020
Source Credit NewsKannada.com ‘ಮಹಿಳಾಪರ ಕಾನೂನು ದುರುಪಯೋಗ ಆತಂಕಕಾರಿ’ HSA   ¦    Feb 15, 2020 04:29:04 PM (IST) Pin it Email https://nirantharanews.com/%e0%b2%86%e0%b2%a8%e0%b2%82%e0%b2%a6%e0%b3%8d-%e0%b2%ae%e0%b2%b9%e0%b3%80%e0%b2%82%e0%b2%a6%e0%b3%8d%e0%b2%b0%e0%b2%be-%e0%b2%ae%e0%b3%86%e0%b2%9a%e0%b3%8d%e0%b2%9a%e0%b3%81%e0%b2%97%e0%b3%86%e0%b2%97/#c2h5bWFsYS1rdW5 ಉಜಿರೆ: ಹೆಣ್ಣುಮಕ್ಕಳ ಪರವಾಗಿ ಅಸ್ತಿತ್ವದಲ್ಲಿರುವ ಕಾನೂನನ್ನು ದುರುಪಯೋಗಪಡಿಸಿಕೊಳ್ಳುವ ಮನಸ್ಥಿತಿ ಆತಂಕಕಾರಿ ಎಂದು ನವದೆಹಲಿಯ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲಾ ಎಸ್. ಕುಂದರ್ ಹೇಳಿದರು. ಉಜಿರೆಯ ಎಸ್.ಡಿ.ಎಂ ಪದವಿ ಕಾಲೇಜಿನ ಮಹಿಳಾ ಅಭಿವೃದ್ಧಿ ಕೋಶ ಶನಿವಾರ ಆಯೋಜಿಸಿದ್ದ ಅತಿಥಿ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಮಹಿಳಾ ದೌರ್ಜನ್ಯ ತಡೆ ಹಾಗೂ ಸಬಲೀಕರಣ’ ಕುರಿತು ಅವರು ಮಾತನಾಡಿದರು. ಮದುವೆಯಾದ ನಂತರ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links