ಆಧ್ಯಾತ್ಮ ಪ್ರೇರಣೆಯಿಂದ ಆರೋಗ್ಯವಂತ ಸಮಾಜ ನಿರ್ಮಾಣ: ಬಾಳೆಕೋಡಿ ಶ್ರೀ

Source Credit NewsKannada.com

ಆಧ್ಯಾತ್ಮ ಪ್ರೇರಣೆಯಿಂದ ಆರೋಗ್ಯವಂತ ಸಮಾಜ ನಿರ್ಮಾಣ: ಬಾಳೆಕೋಡಿ ಶ್ರೀ


DSK
  ¦   


Feb 14, 2020 06:35:16 PM (IST)

ಮೂಡುಬಿದಿರೆ: ಧರ್ಮ, ಆಧ್ಯಾತ್ಮ ನಮ್ಮನ್ನು ಕಾಪಾಡುವ ಭದ್ರ ಕೋಟೆ. ಸಾಧು ಸಂತರ ಪಾದ ಸ್ಪರ್ಶದಿಂದ ಭೂಮಿ ಪವಿತ್ರಗೊಳ್ಳುತ್ತದೆ. ಗುರು-ಶಿಷ್ಯರ ಸಂಬಂಧ ಎನ್ನುವುದು ಸಂಪತ್ತಿನ ವಿನಮಯವಲ್ಲ. ಅದು ನಮ್ಮ ಭಾರತದ ಶ್ರೇಷ್ಠ ಆಧ್ಯಾತ್ಮ ಜ್ಞಾನದ ಪ್ರಸಾರ, ಪ್ರಭಾವ, ಪ್ರೇರಣೆಯಾಗಿದೆ. ಆಧ್ಯಾತ್ಮ ಪ್ರೇರಣೆಯಿಂದ ಆರೋಗ್ಯವಂತ ಸಮಾಜ ನಿರ್ಮಾಣವಾಗುತ್ತದೆ ಎಂದು ಶ್ರೀಕ್ಷೇತ್ರ ಬಾಳೆಕೋಡಿಯ ಶಶಿಕಾಂತ ಮಣಿ ಸ್ವಾಮೀಜಿ ನುಡಿದರು.

ಶ್ರೀ ಲಕ್ಷ್ಮೀ ಸತ್ಯನಾರಾಯಣ ವೀರಾಂಜನೇಯ ಸ್ವಾಮೀ ಸನ್ನಿಧಿ ಓಂ ಶ್ರೀ ಶಕ್ತಿಗುರುಮಠ ಶ್ರೀಜಗದ್ಗುರು ರಾಘವೇಂದ್ರ ಪೀಠ, ಶ್ರೀ ಕ್ಷೇತ್ರ ಕರಿಂಜೆದಲ್ಲಿ ನೂತನ ಗರ್ಭಗುಡಿಯಲ್ಲಿ ಶ್ರೀದೇವರ ಪ್ರತಿಷ್ಠೆ, ಅಷ್ಟಬಂಧ ಅಷ್ಟೋತ್ತರ ಸಹಸ್ರ ಕಲಶಾಭಿಷೇಕ, ಅಷ್ಟಪವಿತ್ರ ನಾಗಮಂಡಲ ಹಾಗೂ ಜಾತ್ರಾ ಮಹೋತ್ಸವ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.

ಮಾಣಿ ಶ್ರೀಧಾಮದ ಶ್ರೀ ಮೋಹನದಾಸ ಸ್ವಾಮೀಜಿ ಆಶೀರ್ವಚನ ನೀಡಿ, ಧಾರ್ಮಿಕ ಮೌಲ್ಯಗಳ ಉಳಿವಿಗಾಗಿ ಧಾರ್ಮಿಕ ಕೇಂದ್ರಗಳೆಲ್ಲವನ್ನು ನಮ್ಮದೆಂಬ ಭಾವನೆಯಿಂದ ಹಿಂದೂಗಳು ಪರಿಗಣಿಸಬೇಕೆಂದರು.

ನಾಳ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ರಾಘವೇಂದ್ರ ಆಸ್ರಣ್ಣ ಸಭೆಯನ್ನು ಉದ್ಘಾಟಿಸಿದರು. ಕಡಬ ರೆಂಜಿಲಾಡಿಬೀಡು ಯಶೋಧರ ಯಾನೆ ತಮ್ಮಯ್ಯ ಬಲ್ಲಾಳ್ ಸಮಾರಂಭದ ಅಧ್ಯಕ್ಷತೆವಹಿಸಿದರು.

ಧರ್ಮದರ್ಶಿ ಹರಿಕೃಷ್ಣ ಪುನರೂರು, ಅಲಂಗಾರು ಶ್ರೀಮಹಾಲಿಂಗೇಶ್ವರ ದೇವಸ್ಥಾನ ಪ್ರಧಾನ ಅರ್ಚಕ ಈಶ್ವರ ಭಟ್, ಶ್ರೀ ಹನುಮಂತ ಹಾಗೂ ಶ್ರೀ ವೆಂಕಟರಮಣ ದೇವಸ್ಥಾನಗಳ ಆಡಳಿತ ಮೊಕ್ತೇಸರ ಉಮೇಶ್ ಪೈ, ಬ್ರಹ್ಮಕಲಶ-ನಾಗಮಂಡಲ ಸಮಿತಿಯ ಕಾರ್ಯಧ್ಯಕ್ಷ ಸುದರ್ಶನ್ ಎಂ., ಕರಿಂಜೆ ಬ್ರಹ್ಮಕಲಶ ನಾಗಮಂಡಲ ಕಿನ್ನಿಗೋಳಿ ಉಪಸಮಿತಿಯ ಗೌರವಾಧ್ಯಕ್ಷ ಭುವನಾಭಿರಾಮ ಉಡುಪ, ಅಧ್ಯಕ್ಷ ಕುಶಾಲ್ ಪೂಜಾರಿ, ಮೂಲ್ಕು ಉಪಸಮಿತಿಯ ಅಧ್ಯಕ್ಷ ಸುನೀಲ್ ಆಳ್ವ, ಬೆಳುವಾಯಿ ಉಪಸಮಿತಿ ಅಧ್ಯಕ್ಷ ಸೋಮನಾಥ ಕೋಟ್ಯಾನ್, ಮೂಡುಬಿದಿರೆ ಪುರಸಭೆಯ ಮುಖ್ಯಾಧಿಕಾರಿ ಇಂದು ಎಂ., ವೇಣೂರು ಶ್ರೀ ಮಹಾಲಿಂಗೇಶ್ವರ ಆಡಳಿತ ಮೊಕ್ತೇಸರ ಜಯರಾಮ ಶೆಟ್ಟಿ, ಉದ್ಯಮಿಗಳಾದ ತಿಮ್ಮಯ್ಯ ಶೆಟ್ಟಿ, ಪ್ರಸಾದ್ ಶೆಟ್ಟಿ, ಎಂಪಿ ದಿನೇಶ್  ಮತ್ತಿತರರು ಉಪಸ್ಥಿತರಿದ್ದರು.

ಬ್ರಹ್ಮಕಲಶ ಸಮಿತಿಯ ಉಪಾಧ್ಯಕ್ಷ ಬಾಹುಬಲಿ ಪ್ರಸಾದ್ ಸ್ವಾಗತಿಸಿದರು. ವೆಂಕಟರಮಣ ಕೆರೆಗದ್ದೆ ಕಾರ್ಯಕ್ರಮ ನಿರೂಪಿಸಿದರು.

ಧಾರ್ಮಿಕ ಸಭೆಯ ಮೊದಲು ಭಾರತಿ ಶಿಶು ಮಂದಿರದ ವೇಣೂರು ಇಲ್ಲಿನ ವಿದ್ಯಾರ್ಥಿಗಳಿಂದ ನೃತ್ಯ ವೈವಿಧ್ಯ ನಡೆಯಿತು.

Source Credit NewsKannada.com

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಮೈಸೂರಿನಲ್ಲಿ ವಿಶೇಷವಾಗಿ ವ್ಯಾಲೆಂಟೈನ್ಸ್ ಡೇ ಆಚರಿಸಿಕೊಂಡ ನಿಖಿಲ್ ರೇವತಿ.. ಫೋಟೋ ಗ್ಯಾಲರಿ ನೋಡಿ..

Fri Feb 14 , 2020
Source Credit RJ News Kannada ದೊಡ್ಡ ಗೌಡರ ಮೊಮ್ಮಗ ನಿಖಿಲ್ ಹಾಗೂ ರೇವತಿ ಅವರ ಮದುವೆಯ ನಿಶ್ಚಿತಾರ್ಥ ಮೊನ್ನೆ ಮೊನ್ನೆಯಷ್ಟೇ ಅದ್ಧೂರಿಯಾಗಿ ಬೆಂಗಳೂರಿನ ತಾಜ್ ವೆಸ್ಟೆಂಡ್ ಹೋಟೆಲ್ ನಲ್ಲಿ‌ ನೆರವೇರಿದೆ.. ಮದುವೆ ದಿನಾಂಕ ಕೂಡ ನಿಗದಿಯಾಗಿದ್ದು ಏಪ್ರಿಲ್ 17 ರಂದು ಚನ್ನಪಟ್ಟಣದಲ್ಲಿ ಅದ್ಧೂರಿ ವೇದಿಕೆಯಲ್ಲಿ ಜನಗಳ ನಡುವೆ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.. Pin it Email https://nirantharanews.com/%e0%b2%86%e0%b2%a7%e0%b3%8d%e0%b2%af%e0%b2%be%e0%b2%a4%e0%b3%8d%e0%b2%ae-%e0%b2%aa%e0%b3%8d%e0%b2%b0%e0%b3%87%e0%b2%b0%e0%b2%a3%e0%b3%86%e0%b2%af%e0%b2%bf%e0%b2%82%e0%b2%a6-%e0%b2%86%e0%b2%b0%e0%b3%8b/#UGhvdG9HcmlkXzE ಇನ್ನು ಇದೀಗ ನಿಶ್ಚಿತಾರ್ಥವಾದ ನವ ಜೋಡಿಗೆ ವ್ಯಾಲೆಂಟೈನ್ಸ್ ಡೇ ಸಂಭ್ರಮ.. ನಿಖಿಲ್ ಹಾಗೂ ರೇವತಿ ಅವರು ತಮ್ಮ ಮೊದಲ ವ್ಯಾಲೆಂಟೈನ್ಸ್ ಡೇ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links