ಆಟದ ನಡುವೆ ಮಗುವಿಗೆ ಎದೆ ಹಾಲುಣಿಸಿದ ವಾಲ್‌ಬಾಲ್‌ ಆಟಗಾರ್ತಿ, ಫೋಟೋ ವೈರಲ್

Source Credit Kannada.boldsky.com

Life

oi-Reena TK

|

ಮೈದಾನದಲ್ಲೇ ಮಗುವಿಗೆ ಎದೆಹಾಲುಣಿಸಿದ ತಾಯಿಯ ಫೋಟೋ ವೈರಲ್ | Oneindia Kannada

ತಾಯಿ ಹೃದಯ ಪ್ರತಿಯೊಂದು ಕ್ಷಣ ತನ್ನ ಮಗುವಿಗಾಗಿ ಮಿಡಿಯುತ್ತಿರುತ್ತದೆ. ಎಲ್ಲೇ ಹೋಗಲಿ, ಏನೇ ಕೆಲಸ ಮಾಡುತ್ತಿರಲಿ ನನ್ನ ಮಗು ಏನು ಮಾಡುತ್ತಿದೆ, ಅದು ಹಾಲು ಕುಡೀತಾ? ಆಹಾರ ಸೇವಿಸುತ್ತಾ? ಎಂಬ ಆತಂಕ ಅವಳಲ್ಲಿ ಇದ್ದೇ ಇರುತ್ತದೆ. ಇನ್ನು ತಾಯಿ ಆದ ಮೇಲೆ ಆಕೆ ಎಷ್ಟೇ ಸುಸ್ತಾಗಿರಲಿ, ಅವುಗಳನ್ನು ಲೆಕ್ಕಿಸದೆ ಮಗುವಿನ ಕಾರ್ಯ ಹಾಗೂ ಬೇಡಿಕೆಗಳಿಗೆ ಹೆಚ್ಚಿನ ಆದ್ಯತೆ ಕೊಡುತ್ತಾಳೆ.

ಇಲ್ಲೊಬ್ಬ ತಾಯಿ ಆಟದ ನಡುವೆ ಸಿಕ್ಕ ಬಿಡುವಿನ ವೇಳೆ ಓಡಿ ಹೋಗಿ ಹಸಿದ ತನ್ನ ಕಂದನಿಗೆ ಹಾಲುಣಿಸುತ್ತಿರುವ ಫೋಟೋ ವೈರಲ್ ಆಗಿದೆ. ಮಿಜುರಾಂನ ವಾಲಿಬಾಲ್‌ ಆಟಗಾರ್ತಿ ನಿಂಗುಲನ್ ಹಾಂಗ್‌ಹಾಲ್ ಆಟದ ನಡುವೆ ಓಡಿ ಹೋಗಿ ಮಗುವಿಗೆ ಹಾಲುಣಿಸುತ್ತಿರುವ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಆಗುತ್ತಿದ್ದಂತೆ ವೈರಲ್ ಆಗಿದೆ. ಎಲ್ಲರೂ ಆ ತಾಯಿ ಕರುಳಿತ ತುಡಿತ ನೋಡಿ ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ.

ಈಗ ಮಹಿಳೆ ಎಲ್ಲಾ ಕ್ಷೇತ್ರದಲ್ಲಿ ಮುಂದೆ ಬರುತ್ತಿದ್ದಾಳೆ. ತನ್ನ ವೃತ್ತಿ ಜವಾಬ್ದಾರಿ ಜತೆ ತಾಯಿಯಾಗಿ ಮಗುವಿಗೆ ಮಾಡಬೇಕಾದ ಕರ್ತವ್ಯದ ಜವಾಬ್ದಾರಿ ಅವಳ ಮೇಲಿರುತ್ತದೆ. ಸಾವಿರಾರು ಜನ ಸೇರಿರುವ ಗ್ರೌಂಡ್‌ ಆಗಿದ್ದರೂ ಅವೆನ್ನೆಲ್ಲಾ ಲೆಕ್ಕಿಸದೆ ತನ್ನ ತಾಯ್ತನದ ಜವಾಬ್ದಾರಿ ಮೆರೆದ ಆಟಗಾರ್ತಿ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತದೆ.

ಮಿಜುರಾಂನ ರಾಜ್ಯ ಮಟ್ಟದ ಆಟ 2019ರಲ್ಲಿ ವಾಲಿಬಾಲ್‌ ಆಟಗಾರ್ತಿಯಾಗಿದ್ದ ನಿಂಗುಲನ್ ಆಟ ಆಡುವಾಗ ಸಿಕ್ಕ ಸ್ವಲ್ಪ ಬಿಡುವಿನ ವೇಳೆಯಲ್ಲಿ ಮಗುವಿಗೆ ಹಾಲುಣಿಸಿದ್ದಾರೆ. ಆಟದ ನಡುವೆಯೂ ತಾಯಿಯಾದ ತನ್ನ ಜವಾಬ್ದಾರಿ ಮರೆಯದ ಆಕೆಯ ಬಗ್ಗೆ ಎಲ್ಲರೂ ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದು ಮಿಜುರಾಂ ಸರ್ಕಾರ ಇತರ ತಾಯಿಂದಿರಿಗೆ ಸ್ಪೂರ್ತಿ ತುಂಬುವಂತೆ ಆಕೆ ನಡೆದು ಕೊಂಡಿರುವುದಕ್ಕೆ ರೂ. 10,000 ಬಹುಮಾನ ಘೋಷಿಸಿದೆ.

GET THE BEST BOLDSKY STORIES!

Allow Notifications

You have already subscribed

Source Credit Kannada.boldsky.com

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಒಂದು ದಿನದಲ್ಲಿ 'ಒಡೆಯ' ಸಿನಿಮಾ ಗಳಿಸಿದ ಹಣ ಎಷ್ಟು?

Fri Dec 13 , 2019
Source Credit Filmibeat.com Pin it Email https://nirantharanews.com/%e0%b2%86%e0%b2%9f%e0%b2%a6-%e0%b2%a8%e0%b2%a1%e0%b3%81%e0%b2%b5%e0%b3%86-%e0%b2%ae%e0%b2%97%e0%b3%81%e0%b2%b5%e0%b2%bf%e0%b2%97%e0%b3%86-%e0%b2%8e%e0%b2%a6%e0%b3%86-%e0%b2%b9%e0%b2%be%e0%b2%b2/#MS0xNTc2MjI4ODE ಮೊದಲ ದಿನ 3 ಕೋಟಿ? ‘ಒಡೆಯ’ ಸಿನಿಮಾ ಮೊದಲ ದಿನ 3 ಕೋಟಿ ಗಳಿಕೆ ಮಾಡಿದೆ ಎನ್ನಲಾಗುತ್ತಿದೆ. ಫಸ್ಟ್ ಡೇ ಬಹುತೇಕ ಎಲ್ಲ ಕಡೆ ಹೌಸ್ ಫುಲ್ ಪ್ರದರ್ಶನ ಆಗಿದೆ. ಸಿನಿಮಾದ ಕ್ರೇಜ್ ಕಡಿಮೆ ಇದ್ದ ಕಾರಣ ಶೋಗಳ ಸಂಖ್ಯೆ ದಾಖಲೆಯ ಮಟ್ಟದಲ್ಲಿ ಇರಲಿಲ್ಲ. ದರ್ಶನ್ ಸಿನಿಮಾ ಎನ್ನುವ ಕಾರಣಕ್ಕೆ ಅಭಿಮಾನಿಗಳು ಮೊದಲ ದಿನ ಮಿಸ್ ಇಲ್ಲದೆ ಸಿನಿಮಾ ನೋಡಿದ್ದಾರೆ. ಹೀಗಾಗಿ ಸಿನಿಮಾ ಮೂರು ಕೋಟಿ ಗಳಿಸಲು ಮಾತ್ರ ಸಾಧ್ಯವಾಗಿದೆ. Pin it Email […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links