ಆಕರ್ಷಕ ಉಗುರುಗಳಿಗಾಗಿ ಇಲ್ಲಿದೆ ನೇಲ್ ಆರ್ಟ್ ಐಡಿಯಾ

Source Credit Kannada.boldsky.com

ಗೋಲ್ಡನ್‌ ಡಿಸೈನ್

ಉಗುರಿಗೆ ಪಾರದರ್ಶಕ ಬಣ್ಣದ ಅಂದರೆ ಉಗುರಿನ ಬಣ್ಣದ ನೇಲ್ ಪಾಲಿಷ್ ಹಚ್ಚಿ ಅದರ ಮೇಲೆ ಗೋಲ್ಡನ್‌ ಬಣ್ಣದ ವಿನ್ಯಾಸ ಅಂಟಿಸಿದರೆ ಉಗುರುಗಳು ತುಂಬಾ ಆಕರ್ಷಕವಾಗಿ ಕಾಣುತ್ತದೆ. ಈ ರೀತಿಯ ವಿನ್ಯಾಸ ಮಾಡುವುದಾದರೆ ಉಗುರುಗಳು ಸ್ವಲ್ಪ ಉದ್ಧವಾಗಿರಲಿ. ಈ ರೀತಿ ನೇಲ್‌ ಆರ್ಟ್ ಫಂಕ್ಷನ್‌ಗಳಿಗೆ ಹೋಗುವಾಗ ಮಾಡಿಕೊಳ್ಳುವುದು ಸೂಕ್ತ.

ರೆಡ್ ಅಂಡ್ ವೈಟ್ ಡಿಸೈನ್

ರೆಡ್ ಹಾಟ್ ಕಲರ್. ಆದರೆ ರೆಡ್ ಅಂಡ್‌ ವೈಟ್ ಕಾಂಬಿನೇಷನ್ ನೋಡಲು ಆಕರ್ಷಕವಾಗಿರುತ್ತದೆ. ಈ ಎರಡು ಕಾಂಬಿನೇಷನ್ ಬಳಸಿ ಉಗುರಿನ ಲುಕ್‌ ಕೂಡ ಹೆಚ್ಚಿಸಬಹುದು. ನೀವು ನೇಲ್ ಪಾಲಿಷ್ ಅನ್ನು ಇಲ್ಲಿ ನೀಡಿರುವಂತೆ ಹಚ್ಚಿದರೆ ನೋಡಲು ಆಕರ್ಷಕವಾಗಿ ಕಾಣುತ್ತದೆ.

ಮಲ್ಟಿ ಕಲರ್ ನೇಲ್‌ ಆರ್ಟ್

ಮಾಡರ್ನ್ ಡ್ರೆಸ್ ಧರಿಸಿದಾಗ ಉಗುರುಗಳು ಕೂಡ ಸ್ವಲ್ಪ ಭಿನ್ನವಾಗಿ ಕಾಣಿಸಬೇಕೆಂದು ನೀವು ಬಯಸುವುದಾರೆ ಈ ರೀತಿ ಮಲ್ಟಿಕಲರ್ ನೇಲ್ ಆರ್ಟ್ ಮಾಡಿದರೆ ನಿಮ್ಮ ಗ್ಲಾಮರಸ್ ಲುಕ್ ಮತ್ತಷ್ಟು ಬೋಲ್ಡ್ ಅಂಡ್ ಹಾಟ್ ನೀಡುವುದು.

ಡಾರ್ಕ್ ಅಂಡ್ ಲೈಟ್ ಕಾಂಬಿನೇಷನ್

ನೇಲ್ ಆರ್ಟ್ ಮಾಡುವಾಗ ಡಾರ್ಕ್ ಅಂಡ್ ಲೈಟ್ ಕಾಂಬಿನೇಷನ್ ಕೂಡ ಚೆನ್ನಾಗಿ ಕಾಣುತ್ತದೆ. ಲೈಟ್ ಕಲರ್ ನೇಲ್ ಪಾಲಿಷ್ ಹಚ್ಚಿ ಅದರ ಮೇಲೆ ಡಾರ್ಕ್ ಬಣ್ಣದಿಂದ ಏನಾದರೂ ವಿನ್ಯಾಸ ಬಿಡಿಸಿದರೆ ಆಕರ್ಷಕವಾಗಿ ಕಾಣುವುದು. ಇಲ್ಲಿ ನೋಡಿ ಬಿಳಿ ಹಾಗೂ ಕಪ್ಪು ಬಣ್ಣ ಎಷ್ಟೊಂದು ಆಕರ್ಷಕವಾಗಿ ಕಾಣುತ್ತಿದೆ ಅಲ್ಲವೇ?

ಸಿಂಪಲ್ ನೇಲ್ ಆರ್ಟ್

ನಿಮಗೆ ತುಂಬಾ ಫಂಕಿ-ಫಂಕಿ ಕಾಣಲು ಇಷ್ಟವಿಲ್ಲದಿದ್ದರೆ ಸಿಂಪಲ್ ಆಗಿ ಹಾಗೂ ಆಕರ್ಷಕವಾಗಿ ಕಾಣುವಂತೆ ನೇಲ್ ಆರ್ಟ್ ಐಡಿಯಾ ಇಲ್ಲಿ ನೀಡಲಾಗಿದೆ ನೋಡಿ. ಈ ನೇಲ್ ಆರ್ಟ್ ನೋಡಲು ತುಂಬಾ ಸಿಂಪಲ್ ಜತೆಗೆ ನೋಡಲು ಆಕರ್ಷಕ ಲುಕ್ ನೀಡುವುದು.

ಬ್ಲ್ಯಾಕ್ ವಿಥ್‌ ಶೈನ್

ಕಪ್ಪು ಬಣ್ಣದ ನೇಲ್‌ ಪಾಲಿಷ್ ಮೇಲೆ ಸಿಲ್ವರ್ ಬಣ್ಣದ ಡಿಸೈನ್ ಹಾಕಿದರೂ ಆಕರ್ಷಕವಾಗಿ ಕಾಣುವುದು. ಆದರೆ ಹೀಗೆ ನೇಲ್ ಆರ್ಟ್ ಮಾಡುವಾಗ ಎಲ್ಲಾ ಉಗುರುಗಳಿಗೆ ಹಾಕುವುದಕ್ಕಿಂತ ಎರಡರಿಂದ ಮೂರು ಉಗುರಿಗೆ ಹಾಕಿದರೆ ಮತ್ತಷ್ಟು ಆಕರ್ಷಕವಾಗಿ ಕಾಣುವುದು.

ಮಾರ್ಬಲ್ ಲುಕ್

ನಿಮ್ಮ ಉಗುರುಗಳಿಗೆ ಮಾರ್ಬಲ್ ಲುಕ್ ನೀಡ ಬಯಸುವುದಾದರೆ ಈ ರೀತಿ ವಿನ್ಯಾಸ ಮಾಡಬಹುದು ನೋಡಿ. ಇಲ್ಲಿ ಬಿಳಿ, ಕಪ್ಪು ಹಾಗೂ ಗ್ಲಿಟರ್ ಹೀಗೆ ಮೂರು ಬಣ್ಣದ ನೇಲ್ ಪಾಲಿಷ್ ಬಳಸಿ ಈ ನೇಲ್ ಆರ್ಟ್ ಮಾಡಲಾಗಿದೆ.

ಬ್ಲೂ ಅಂಡ್ ವೈಟ್

ನೀಲಿ ಬಣ್ಣದ ನೇಲ್ ಪಾಲಿಷ್ ಹಚ್ಚಿ, ಉಂಗುರ ಬೆರಳನ್ನು ಬಿಳಿ ನೇಲ್ ಪಾಲಿಷ್‌ನಿಂದ ಅಲಂಕರಿಸಿದರೆ ಆಕರ್ಷಕವಾಗಿ ಕಾಣುವುದು. ಈ ರೀತಿಯ ನೇಲ್ ಆರ್ಟ್ ಡ್ರೆಸ್ಸಿಂಗ್ ಮ್ಯಾಚಿಂಗ್ ಬಣ್ಣದಲ್ಲಿ ಹಾಕಿದರೆ ಸುಂದರವಾಗಿ ಕಾಣುವುದು.

Source Credit Kannada.boldsky.com

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ವಿಜಯ್ ದೇವರಕೊಂಡಗೆ 48 ಕೋಟಿ ಆಫರ್ ಬಂದಿದ್ದು ನಿಜಾನ?

Sat Dec 28 , 2019
Source Credit Filmibeat.com Pin it Email https://nirantharanews.com/%e0%b2%86%e0%b2%95%e0%b2%b0%e0%b3%8d%e0%b2%b7%e0%b2%95-%e0%b2%89%e0%b2%97%e0%b3%81%e0%b2%b0%e0%b3%81%e0%b2%97%e0%b2%b3%e0%b2%bf%e0%b2%97%e0%b2%be%e0%b2%97%e0%b2%bf-%e0%b2%87%e0%b2%b2%e0%b3%8d%e0%b2%b2/#cmVkLmpwZw== Gossips oi-Bharath Kumar K | Published: Saturday, December 21, 2019, 17:19 [IST] ‘ಅರ್ಜುನ್ ರೆಡ್ಡಿ’ ಸಿನಿಮಾ ಸೂಪರ್ ಹಿಟ್ ಆದ ಬಳಿಕ ತೆಲುಗು ನಟ ವಿಜಯ್ ದೇವರಕೊಂಡ ನ್ಯಾಷನಲ್ ಸ್ಟಾರ್ ಆಗಿಬಿಟ್ಟರು. ಬಾಲಿವುಡ್ ಗೆ ಬರುವಂತೆ ಕೆಲವರು ನಿರ್ಮಾಪಕ ಬೇಡಿಕೆ ಇಟ್ಟರು. ಆದರೆ, ದೇವರಕೊಂಡ ಯಾರಿಗೂ ಕಾಲ್ ಶೀಟ್ ಕೊಟ್ಟಿಲ್ಲ. ಇದೀಗ, ವಿಜಯ್ ದೇವರಕೊಂಡ ಹಿಂದಿ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಕಳೆದ ಕೆಲವು ದಿನಗಳಿಂದ ಟಾಲಿವುಡ್ ಮಾಯನಗರಿಯಲ್ಲಿ ಬಾರಿ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links