ಆಕರ್ಷಕ ಉಗುರಿಗಾಗಿ ಬೆರಳಿನ ತುದಿಯ ಆರೈಕೆ ಹೀಗಿರಲಿ

Source Credit Kannada.boldsky.com

1. ವಾರಕ್ಕೊಮ್ಮೆ ನಿಮ್ಮ ಉಗುರಿಗಳಿಗೆ ಮೆನಿಕ್ಯೂರ್ ಹಾಗೂ ಪೆಡಿಕ್ಯೂರ್ ಮಾಡಿ

ಮೆನಿಕ್ಯೂರ್ ಹಾಗೂ ಪೆಡಿಕ್ಯೂರ್‌ ಮಾಡಲು ನೀವೇನು ಪಾರ್ಲರ್‌ಗೆ ಹೋಗಬೇಕಾಗಿಲ್ಲ. ನೀವು ಮನೆಯಲ್ಲಿಯೇ ಮಾಡಬಹುದು. ವಾರದಲ್ಲಿ ರಜೆ ಇದ್ದಾಗ ಬಿಸಿ ನೀರು ಮಾಡಿ ಅದನ್ನು ಬಕೆಟ್‌ಗೆ ಹಾಕಿ ಅದರಲ್ಲಿ ನಿಮ್ಮ ಪಾದಗಳನ್ನು ಇಡಿ, ಮತ್ತೊಂದು ಪಾತ್ರೆಯಲ್ಲಿ ನೀರು ಹಾಕಿ ಕೈಬೆರಳನ್ನು ಹಾಕಿ, ತುಂಬಾ ರಿಲ್ಯಾಕ್ಸ್ ಬೇಕೆಂದರೆ ಎರಡು ಚಿಕ್ಕ ಪಾತ್ರೆಯಲ್ಲಿ ನೀರು ಹಾಕಿ, ಕುರ್ಚಿಯಲ್ಲಿ ಆರಾಮವಾಗಿ ಕೂತು ಕೈಗಳನ್ನು ಆ ನೀರಿನಲ್ಲಿ ನೆನೆಸಿ ಒಂದು 10 ನಿಮಿಷ ವಿಶ್ರಾಂತಿಯನ್ನು ಪಡೆಯಿರಿ. ನೀರು ತುಂಬಾ ಬಿಸಿ ಬೇಡ, ಉಗುರು ಬೆಚ್ಚಗೆ ಇದ್ದರೆ ಸಾಕು, ನಂತರ ಕೈ, ಕಾಲು ತೊಳೆದು, ಮೃದುವಾದ ಟವಲ್‌ನಿಂದ ಒರೆಸಿ, ಆಲ್ಕೋಹಾಲ್‌ ಫ್ರೀ ಮಾಯಿಶ್ಚರೈಸರ್ ಅಥವಾ ಯಾವುದಾದರೂ ವ್ಯಾಸೆಲೈನ್ ಹಚ್ಚಿ. ಇದರಿಂದ ಬೆರಳಿನ ತುದಿ ಸ್ವಚ್ಛವಾಗುವುದು ಹಾಗೂ ಉಗುರುಗಳು ಆಕರ್ಷಕವಾಗಿ ಕಾಣುತ್ತದೆ.

2. ಸುವಾಸನೆ ರಹಿತ ಮಾಯಿಶ್ಚರೈಸರ್ ಬಳಸಿ

ಚಳಿಗಾಲದಲ್ಲಿ ತ್ವಚೆ ಶುಷ್ಕವಾಗುವುದನ್ನು ತಡೆಗಟ್ಟಲು ತ್ವಚೆ ತೇವಾಂಶವಾಗಿರುವಂತೆ ನೋಡಿಕೊಳ್ಳಬೇಕು, ಅದಕ್ಕಾಗಿ ಮಾಯಿಶ್ಚರೈಸರ್ ಹಚ್ಚಬೇಕು, ಆದರೆ ಎಲ್ಲಾ ಬಗೆಯ ಮಾಯಿಶ್ಚರೈಸರ್‌ ಬೆರಳಿನ ತುದಿಗೆ ಒಳ್ಳೆಯದಲ್ಲ. ಸುವಾಸನೆ ರಹಿತ ಮಾಯಿಶ್ಚರೈಸರ್‌ ಚಳಿಗಾಲದಲ್ಲಿ ಉಗುರಿನ ಆರೈಕೆಗೆ ಬಳಸುವುದು ಒಳ್ಳೆಯದು. ಸುವಾಸನೆ ಇರುವ ಮಾಯಿಶ್ಚರೈಸರ್‌ನಲ್ಲಿ ಆಲ್ಕೋಹಾಲ್ (ಮದ್ಯ) ಇರುವುದರಿಂದ ಉಗುರಿಗೆ ಹಾನಿಯುಂಟಾಗುವುದು.

3. ಉಗುರಿನ ತುದಿಗೆ ಲಿಪ್‌ಬಾಮ್‌ ಹಚ್ಚಬಹುದು

ತುಟಿಗೆ ಹಚ್ಚುವ ಲಿಪ್‌ಬಾಮ್‌ ಸಾಕು ಬೆರಳಿನ ತುದಿಯ ಆರೈಕೆ ಮಾಡಲು, ಲಿಪ್‌ಬಾಮ್‌ ಉಗುರಿನ ಹೊಳಪನ್ನು ಕೂಡ ಹೆಚ್ಚಿಸುವುದು. ಬೆರಳಿನ ತುದಿ ಚಳಿಯಿಂದಾಗಿ ಒಣಗಿದರೆ ನೋವು ಉಂಟಾಗುವುದು, ಆದ್ದರಿಂದ ಮಾಯಿಶ್ಚರೈಸರ್‌ ಅಥವಾ ಬಾಮ್‌ ಹಚ್ಚಿ ಉಗುರಿನ ಆರೈಕೆ ಮಾಡಿದರೆ ಉಗುರು ಆಕರ್ಷಕವಾಗಿ ಕಾಣುವುದು.

4. ನೇಲ್‌ಪಾಲಿಷ್ ತೆಗೆಯಲು ಎಸಿಟೋನ್ ಫ್ರೀ ನೇಲ್‌ ಪಾಲಿಷ್ ರಿಮೂವರ್ ಬಳಸಿ

ಆಗಾಗ ನೇಲ್‌ ಪಾಲಿಷ್‌ ರಿಮೂವರ್ ಬಳಸುತ್ತಿದ್ದರೆ ಬೆರಳಿನ ತುದಿ ಹಾಳಾಗುವುದು. ಕೆಲವರಿಗೆ ಪ್ರತಿದಿನ ನೇಲ್‌ ಪಾಲಿಷ್‌ ಬದಲಾಯಿಸುವ ಅಭ್ಯಾಸವಿರುತ್ತದೆ. ಅಂಥವರು ನೇಲ್‌ಪಾಲಿಷ್‌ ರಿಮೂವರ್ ಅನ್ನು ತುಂಬಾ ಎಚ್ಚರಿಕೆಯಿಂದ ಆಯ್ದುಕೊಳ್ಳಬೇಕು. ಎಸಿಟೋನ್‌ ಫ್ರೀ ನೇಲ್‌ ಪಾಲಿಷ್‌ ರಿಮೂವರ್ ಆಯ್ಕೆ ನಿಮ್ಮದಾಗಿರಲಿ. ಇನ್ನು ಆಗಾಗ ನೇಲ್‌ ಪಾಲಿಷ್‌ ಹಚ್ಚುವ ಅಭ್ಯಾಸವಿದ್ದರೆ ಚಳಿಗಾಲದಲ್ಲಿ ಸ್ವಲ್ಪ ಕಡಿಮೆ ಮಾಡಿಕೊಳ್ಳಿ. ನೇಲ್‌ ಪಾಲಿಷ್‌ ರಿಮೂವ್‌ ಮಾಡಿದ ಬಳಿಕ ಒಂದೆರಡು ದಿನ ಹಾಗೇ ಬಿಟ್ಟು ನಂತರ ನೇಲ್ ಪಾಲಿಷ್‌ ಹಚ್ಚುವುದು ಒಳ್ಳೆಯದು. ಹೀಗೆ ಮಾಡಿದರೆ ಉಗುರುಗಳು ಕಪ್ಪಾಗುವುದನ್ನು ತಡೆಯಬಹುದು.

5. ಗ್ಲೌಸ್ ಹಚ್ಚಿ

ಮನೆಯಲ್ಲಿ ಪಾತ್ರೆ ಉಜ್ಜುವಾಗ, ಯಾವುದಾದರೂ ರಾಸಾಯನಿಕ ವಸ್ತುಗಳನ್ನು ಮುಟ್ಟುವಾಗ ಗ್ಲೌಸ್ ಹಚ್ಚಿ. ಇದರಿಂದ ಕೈ ಹಾಗೂ ಉಗುರುಗಳಿಗೆ ಯಾವುದೇ ತೊಂದರೆ ಉಂಟಾಗುವುದಿಲ್ಲ. ಕೆಲವರಿಗೆ ಕೆಲವೊಂದು ಸಾಬೂನುಗಳು, ಮಾರ್ಜಕಗಳು (ಡಿಟರ್ಜೆಂಟ್‌)ಗಳನ್ನು ಬಳಸಿದಾಗ ಕೈಯ ತ್ವಚೆಯಲ್ಲಿ ಬಿರುಕು ಉಂಟಾಗುವುದು. ಅಂಥವರು ಗ್ಲೌಸ್‌ ಬಳಸಿದರೆ ಒಳ್ಳೆಯದು. ಗ್ಲೌಸ್‌ ಬೆರಳಿನ ತುದಿ ಹಾಗೂ ಉಗುರುಗಳನ್ನು ರಕ್ಷಣೆ ಮಾಡುತ್ತದೆ. ಇನ್ನು ಚಳಿಯಲ್ಲಿ ಹೊರಗಡೆ ಓಡಾಡುವಾಗ ಗ್ಲೌಸ್‌ ಧರಿಸಿದರೆ ಒಳ್ಳೆಯದು.

Source Credit Kannada.boldsky.com

Niranthara News

Leave a Reply

Your email address will not be published. Required fields are marked *

Next Post

ಪ್ರಾಚೀನ ಗ್ರಂಥಗಳ ಪ್ರಕಾರ ನೀವು ಹೇಗೆ ಸಾಯುತ್ತೀರಿ? ಇಲ್ಲಿದೆ ನೋಡಿ...

Mon Nov 11 , 2019
Source Credit Kannada.boldsky.com Pin it Email https://nirantharanews.com/%e0%b2%86%e0%b2%95%e0%b2%b0%e0%b3%8d%e0%b2%b7%e0%b2%95-%e0%b2%89%e0%b2%97%e0%b3%81%e0%b2%b0%e0%b2%bf%e0%b2%97%e0%b2%be%e0%b2%97%e0%b2%bf-%e0%b2%ac%e0%b3%86%e0%b2%b0%e0%b2%b3%e0%b2%bf%e0%b2%a8/#MDEtMTU3MzQ1Mzc 1.ಸಾವು ಸಮೀಪಿಸಿದಾಗ ನಮ್ಮಲ್ಲಿ ಬದಲಾವಣೆ ವ್ಯಕ್ತಿ ಎಷ್ಟೇ ಕೆಟ್ಟವನಾಗಿದ್ದರೂ, ಅವನಿಗೆ ತನ್ನ ಸಾವು ಸಮೀಪಿಸುತ್ತಿದೆ ಎನ್ನುವ ವಿಷಯ ತಿಳಿದಾಗ ಒಂದು ರೀತಿಯ ಭಯ ಹಾಗೂ ಬೇಸರ ಉಂಟಾಗುವುದು. ಅದೇ ಅವನಿಗೆ ವಿಷಯ ತಿಳಿಯದೇ ಇದ್ದಾಗಲೂ ಸಾವು ಸಮೀಪಿಸುತ್ತಿದ್ದರೆ ಸುಪ್ತ ಮನಸ್ಸು ಹಾಗೂ ಶಕ್ತಿಯಲ್ಲಿ ಭಿನ್ನತೆ ಉಂಟಾಗುವುದು. ವ್ಯಕ್ತಿ ಹೆಚ್ಚು ಮೌನವಾಗಿರುವುದು ಹಾಗೂ ಒಳ್ಳೆಯ ಕೆಲಸ ಕಾರ್ಯಗಳನ್ನು ಮಾಡಲು ಬಯಸುವನು. ಸಾವಿನ ಲಕ್ಷಣಗಳಲ್ಲಿ ಇದೂ ಒಂದು. Pin it Email https://nirantharanews.com/%e0%b2%86%e0%b2%95%e0%b2%b0%e0%b3%8d%e0%b2%b7%e0%b2%95-%e0%b2%89%e0%b2%97%e0%b3%81%e0%b2%b0%e0%b2%bf%e0%b2%97%e0%b2%be%e0%b2%97%e0%b2%bf-%e0%b2%ac%e0%b3%86%e0%b2%b0%e0%b2%b3%e0%b2%bf%e0%b2%a8/#MDItMTU3MzQ1Mzc 2. ಗರುಡ ಪುರಾಣ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links