ಅಸ್ತಮಾ ರಾತ್ರಿ ಹೊತ್ತೇ ಏಕೆ ಹೆಚ್ಚಾಗುತ್ತದೆ?

Source Credit Kannada.boldsky.com

1. ಆಂತರಿಕ ಪ್ರಚೋದನೆಗಳು

ಕೆಲವು ವ್ಯಕ್ತಿಗಳಿಗೆ ಉಸಿರು ಕಟ್ಟಿದಂತಾಗಿ ಉಸಿರು ಎಳೆದುಕೊಳ್ಳುತ್ತಿರುವಂತೆಯೇ ನಿದ್ದೆಯಿಂದ ಎಚ್ಚರಾಗುತ್ತದೆ. ಈ ಬಗ್ಗೆ ನಡೆಸಿದ ಅಧ್ಯಯನಗಳಲ್ಲಿ ಇದು ಆಂತರಿಕ ಪ್ರಚೋದನೆಗಳು ಕಾರಣದಿಂದ ಎದುರಾಗುತ್ತದೆ ಎಂದು ಕಂಡುಕೊಳ್ಳಲಾಗಿದೆ.

2. ನಿದ್ರಿಸುವ ಭಂಗಿ

ನಿದ್ದೆಯ ಸಮಯದಲ್ಲಿ ನಮ್ಮ ವಾಯುನಾಳಗಳು ಇತರ ಹೊತ್ತಿಗಿಂತಲೂ ಕೊಂಚ ಕಿರಿದಾಗಿರುತ್ತವೆ. ಇದರಿಂದಾಗಿ ಶ್ವಾಸಕೋಶದಿಂದ ಆಮ್ಲಜನಕ ಪಡೆದು ಹೋಗಬೇಕಾಗಿದ್ದಷ್ಟು ಪ್ರಮಾಣದ ರಕ್ತ ಹೋಗದೇ ಅಲ್ಲೇ ಸಂಗ್ರಹಗೊಳ್ಳುತ್ತವೆ. ಕುಹರದಿಂದ ಸ್ರವಿಸುವ ದ್ರವ ಹೆಚ್ಚುತ್ತದೆ. ಇವೆಲ್ಲವೂ ರಾತ್ರಿಯ ಅಸ್ತಮಾವನ್ನು ಪ್ರಚೋದಿಸಬಹುದು.

3. ಹವಾ ನಿಯಂತ್ರಕ (ಎಸಿ)

ತಣ್ಣನೆಯ ಹವೆಯಲ್ಲಿ ಆರ್ದ್ರತೆ ಇರುವುದಿಲ್ಲ ಹಾಗೂ ಈ ಒಣಹವೆ ಎಂದಿಗೂ ಅಸ್ತಮಾವನ್ನು ಪ್ರಚೋದಿಸಬಹುದು. ಈ ವಾಯುವನ್ನು ಸೇವಿಸುವ ರೋಗಿಗಳು ರಾತ್ರಿಯ ಸಮಯದಲ್ಲಿ ಒಂದಕ್ಕಿಂತಲೂ ಹೆಚ್ಚು ಬಾರಿ ನಿದ್ದೆಯಿಂದ ಏಳಬೇಕಾಗಿ ಬರಬಹುದು. ಅದರಲ್ಲೂ ಈ ತೊಂದರೆ ಚಳಿಗಾಲದಲ್ಲಿ ಹೆಚ್ಚಬಹುದು.

4. ಧೂಳಿನ ಕಣಗಳು

ಒಂದು ವೇಳೆ ನಿಮ್ಮ ಹಾಸಿಗೆ, ಹೊದಿಕೆ, ದಿಂಬು ಮೊದಲಾದವುಗಳ ಮೇಲೆ ಧೂಳು ಕುಳಿತಿದ್ದರೆ ಇವು ಧೂಳಿನ ಕ್ರಿಮಿಗಳನ್ನು ಆಕರ್ಷಿಸುತ್ತವೆ. ಹಾಗಾಗಿ, ಇವುಗಳನ್ನು ಕೊಡಕದೇ ಇದರ ಮೇಲೆ ಮಲಗುವುದರಿಂದ ರಾತ್ರಿಯ ಹೊತ್ತಿನಲ್ಲೇ ತೊಂದರೆ ಎದುರಾಗುತ್ತದೆ. ಸಾಕುಪ್ರಾಣಿಗಳ ಕೂದಲು ಸಹಾ ಅಸ್ತಮಾ ಪ್ರಚೋದನೆಗೆ ಇನ್ನೊಂದು ಕಾರಣವಾಗಿದೆ.

5. ಹಾವಸೆಗಳು

ತಣ್ಣನೆಯ ಸ್ಥಳಗಳಲ್ಲಿ ತೇವ ಇದ್ದರೆ ಇಲ್ಲಿ ತಕ್ಷಣವೇ ಹಾವಸೆಗಳು ಬೆಳೆಯುತ್ತವೆ. ಕೊಂಚ ಹೆಚ್ಚಾದರೆ ಇದು ಗಾಢ ಮಚ್ಚೆಯಂತಾಗುತ್ತದೆ. ಇದರಲ್ಲಿರುವ ಕ್ರಿಮಿಗಳು (ಮೌಲ್ಡ್ ಗಳು) ನಿಮ್ಮ ಸುಖನಿದ್ದೆಯನ್ನು ಭಂಗಗೊಳಿಸಬಹುದು.

ಅವಶ್ಯಕ ಸೂಚನೆಗಳು

ಒಂದು ವೇಳೆ ನೀವು ಅಸ್ತಮಾ ರೋಗಿಯಾಗಿದ್ದರೆ ಹೆಚ್ಚು ಎಚ್ಚರಿಕೆ ವಹಿಸಬೇಕು. ನಿಮ್ಮ ಸುತ್ತಮುತ್ತಲ ಪರಿಸರವನ್ನು ಆದಷ್ಟೂ ಒಣದಾಗಿಸಿ ಮತ್ತು ಸ್ವಚ್ಛವಾಗಿಸಿರಬೇಕು. ತಣ್ಣಗಿರುವ ಕೋಣೆಗಳಲ್ಲಿ ಮಲಗುವುದನ್ನು ಆದಷ್ಟೂ ತಪ್ಪಿಸಿ. ಇದರ ಜೊತೆಗೇ, ವೈದ್ಯರು ನಿಮಗೆ ನೀಡಿರುವ ಇನ್ ಹೇಲರ್ ಉಪಕರಣವನ್ನು ಜೊತೆಯಲ್ಲಿಯೇ, ತಕ್ಷಣ ಕೈಗೆ ಸಿಗುವಂತೆ ಇರಿಸಿ ಹಾಗೂ ಈ ಉಪಕರಣದಲ್ಲಿ ಇನ್ನೂ ಸಾಕಷ್ಟು ಪ್ರಮಾಣದ ಔಷಧಿ ಇದೆ ಎಂದು ಖಾತ್ರಿಪಡಿಸಿಕೊಳ್ಳಿ. ಕೊನೆಗೊಳ್ಳುವ ಹಂತದಲಿದ್ದರೆ ಖಾಲಿಯಾಗುವ ಮುನ್ನವೇ ತಂದಿರಿಸಿ. ಒಂದು ಕ್ಷಣ ಮರೆತರೂ ನಿಮ್ಮ ಆರೋಗ್ಯಕ್ಕೆ ಮಾರಕವಾಗಬಹುದು.

ಈ ಮುನ್ನೆಚ್ಚರಿಕೆಗಳ ಹೊರತಾಗಿಯೂ ನಿಮ್ಮ ಸ್ಥಿತಿ ಉಲ್ಬಣಗೊಳ್ಳುತ್ತಿದರೆ ತಕ್ಷಣವೇ ವೈದ್ಯರನ್ನು ಭೇಟಿಯಾಗಿ. ವೈದ್ಯರು ನಿಮಗೆ ಬದಲಿ ಔಷಧಿಗಳನ್ನು ನೀಡಬಹುದು. ಅಸ್ತಮಾದ ಯಾವುದೇ ಲಕ್ಷಣಗಳನ್ನು ಅಲಕ್ಷಿಸಿದರೆ ಇದು ನಿಮ್ಮ ಆರೋಗ್ಯಕ್ಕೆ ಮಾರಕವಾಗಬಹುದು.

Source Credit Kannada.boldsky.com

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಧಾರವಾಡದ ಹೆಬ್ಬಾಳ ಗ್ರಾಮಸ್ಥರು ಕುಡಿಯುತ್ತಿರುವುದು ಈ ಹಳ್ಳದ ನೀರನ್ನು

Fri Dec 13 , 2019
Source Credit Oneindia.com Pin it Email https://nirantharanews.com/%e0%b2%85%e0%b2%b8%e0%b3%8d%e0%b2%a4%e0%b2%ae%e0%b2%be-%e0%b2%b0%e0%b2%be%e0%b2%a4%e0%b3%8d%e0%b2%b0%e0%b2%bf-%e0%b2%b9%e0%b3%8a%e0%b2%a4%e0%b3%8d%e0%b2%a4%e0%b3%87-%e0%b2%8f%e0%b2%95%e0%b3%86/#eHdhdGVyLTEtMTU ಎರಡು ತಿಂಗಳಿಂದ ಹಳ್ಳದ ನೀರು ಕುಡಿಯುತ್ತಿರುವ ಜನ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗಿದೆ. ಹೀಗಾಗಿ ಗ್ರಾಮದ ಹೊರವಲಯದಲ್ಲಿ ಹರಿದು ಹೋಗಿರುವ ಗಲೀಜು ನೀರು ಕುಡಿದು ಬದುಕುವ ಸ್ಥಿತಿ ಇಲ್ಲಿನ ಜನರ ಪಾಲಾಗಿದೆ. ಕಳೆದ ಎರಡು ತಿಂಗಳಿಂದ ಅಶುದ್ಧ ನೀರು ಕುಡಿದು, ಗ್ರಾಮದ ಜನರು ನಾನಾ ಕಾಯಿಲೆಗಳಿಗೆ ತುತ್ತಾಗಿರುವ ಉದಾಹರಣೆಗಳು ಸಿಕ್ಕಿವೆ. ಬರದ ಬೀಡಾಗಿದ್ದ ಚಿತ್ರದುರ್ಗದಲ್ಲಿ ಉಕ್ಕಿ ಹರಿಯುತ್ತಿದೆ ಕೊಳವೆ ಬಾವಿ Pin it Email https://nirantharanews.com/%e0%b2%85%e0%b2%b8%e0%b3%8d%e0%b2%a4%e0%b2%ae%e0%b2%be-%e0%b2%b0%e0%b2%be%e0%b2%a4%e0%b3%8d%e0%b2%b0%e0%b2%bf-%e0%b2%b9%e0%b3%8a%e0%b2%a4%e0%b3%8d%e0%b2%a4%e0%b3%87-%e0%b2%8f%e0%b2%95%e0%b3%86/#bG9hZGluZy5naWY […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links