ಅಮ್ಮನಿಗೆ ಶೈನ್ ಬಗ್ಗೆ ಮಾತನಾಡಬೇಡ ಎಂದು ಕೈ ಸನ್ನೆ ಮಾಡಿದ ವಾಸುಕಿ.. ಕ್ಯಾಮರಾದಲ್ಲಿ ಎಲ್ಲವೂ ರೆಕಾರ್ಡ್ ಆಗಿ ಹೋಯ್ತು..

Source Credit RJ News Kannada

ಬಿಗ್ ಬಾಸ್ ಸೀಸನ್ 7 ರಲ್ಲಿ ಈ ಬಾರಿ ಎಲ್ಲರೂ ಸೆಲಿಬ್ರೆಟಿಗಳೇ ಆದರೂ ಕೂಡ ಅನೇಕರು ಬಿಗ್ ಮನೆಗೆ ಬಂದ ಮೇಲಷ್ಟೇ ಬಹುತೇಕರಿಗೆ ಅವರುಗಳು ಸೆಲಿಬ್ರೆಟಿಗಳು ಎಂದು ತಿಳಿಯಿತು.. ಈಗಾಗಲೇ ಈ ಸೀಸನ್ 13 ವಾರಗಳನ್ನು ಯಶಸ್ವಿಯಾಗಿ ಪೂರೈಸಿದ್ದು, 14ನೇ ವಾರವು ಇನ್ನೇನು ಮುಗಿಯುವ ಹಂತದಲ್ಲಿದೆ..

ಈಗಾಗಲೇ ಬಿಗ್ ಬಾಸ್ ಮನೆಗೆ ಎಲ್ಲಾ ಸದಸ್ಯರ ಕುಟುಂಬದವರ ಆಗಮನವಾಗಿದ್ದು, ಈ ವಾರ ಕುರಿ ಪ್ರತಾಪ್ ಅವರ ಹೆಂಡತಿ ಮಕ್ಕಳು.. ಪ್ರಿಯಾಂಕ ಅವರ ತಾಯಿ ಹಾಗೂ ಕೊನೆಯದಾಗಿ ವಾಸುಕಿ ಅವರ ತಾಯಿ ಬಂದಿದ್ದರು..

ಆದರೆ ವಾಸುಕಿ ಅವರ ತಾಯಿ ಮನೆಗೆ ಬಂದಾಗ ಶೈನ್ ಬಗ್ಗೆ ಮಾತನಾಡುವಾಗ ವಾಸುಕಿ ಅಮ್ಮನಿಗೆ ಮಾತನಾಡಬೇಡ ಎಂದು ಕೈ ಸನ್ನೆ ಮಾಡಿದ್ದೀಗ ಕ್ಯಾಮರಾಗಳಲ್ಲಿ ರೆಕಾರ್ಡ್ ಆಗಿದೆ.. ಹೌದು ಮೊನ್ನೆ ವಾಸುಕಿ ಅವರ ತಾಯಿ ಬಂದಾಗ ಮಗನ ಮೇಲಿನ ಕಾಳಜಿ ಪ್ರೀತಿ ತೋರಿದರು.. ಮಗ ಚೆನ್ನಾಗಿ ಕಾಣಬೇಕು ಅಂತ ಕಿಶನ್ ಕೈಯಲ್ಲಿ ಕಟಿಂಗ್ ಮಾಡಿಸ್ಕೋ.. ಗಡ್ಡ ಟ್ರಿಮ್ ಮಾಡಿಕೋ ಎಂದೆಲ್ಲಾ ಹೇಳಿದರು.. ಅನಂತರ ತಲೆಗೆ ಎಣ್ಣೆಯನ್ನು ಇನ್ನೊಬ್ಬರ ಬಳಿ ಹಾಕಿಸಿಕೊಳ್ಳಬೇಡ.. ನೀನೆ ಹಾಕೋಳೋದು ಅಭ್ಯಾಸ ಮಾಡಿಕೋ.. ಇನ್ನು ಚೆನ್ನಾಗಿ ಆಡಬೇಕು.. ವಿನ್ ಆಗಿ ಬಾ ಎಂದು ಹಾರೈಸಿದರು.. ಜೊತೆಗೆ ಯಾರ ಬಳಿಯಾದರೂ ಐ ಲೈನರ್ ಪಡೆದು ಮತ್ತಷ್ಟು ಹಾಡುಗಳನ್ನು ಬರಿ.. ಚೆನ್ನಾಗಿ ಬರಿ ಎಂದು ಸಲಹೆ ನೀಡಿದರು..

ಆದರೆ ಅಲ್ಲಿ ಮತ್ತೊಂದು ಘಟನೆ ನಡೆದಿದೆ.. ಆ ಘಟನೆ ಕ್ಯಾಮರಾದಲ್ಲಿಯೂ ರೆಕಾರ್ಡ್ ಆಗಿದ್ದು ಅಂದಿನ ಸಂಚಿಕೆಯಲ್ಲಿಯೇ ಪ್ರಸಾರವೂ ಕೂಡ ಆಗಿದೆ.. ಈಗಾಗಲೇ ಅದನ್ನು ಗಮನಿಸಿ ಸಾಮಾಜಿಕ ಜಾಲತಾಣದಲ್ಲಿ ವಾಸುಕಿ ಅವರನ್ನು ಟ್ರೋಲ್ ಮಾಡಲಾಗುತ್ತಿದೆ..

ಹೌದು ಅಂದು ವಾಸುಕಿ ಅವರ ತಾಯಿ ಬಿಗ್ ಮನೆಗೆ ಬಂದಾಗ ಬೆಡ್ ರೂಂ ಏರಿಯಾದಲ್ಲಿ ಮಗನ ಜೊತೆ ಮಾತನಾಡುತ್ತಾ ಕುಳಿತಿದ್ದರು.. ಆ ಸಮಯದಲ್ಲಿ ಮಗನಿಗೆ ಬುದ್ದಿ ಹೇಳುವಾಗ, “ಬೆಳಿಗ್ಗೆ ಎದ್ದು ಎಲ್ಲರೂ ಡ್ಯಾನ್ಸ್ ಮಾಡ್ತಾ ಇರ್ತಾರೆ.. ನೀನ್ ಮಾತ್ರ ಮಲಗಿರ್ತೀಯಾ.. ನೀನು ಕೂಡ ಎದ್ದು ಡ್ಯಾನ್ಸ್ ಮಾಡು.. ನಾಳೆ ನೋಡ್ತೀನಿ.. ಶೈನ್ ಇಲ್ಲಿ ಡ್ಯಾನ್ಸ್ ಮಾಡ್ತಾ ಇರ್ತಾನೆ.. ನೀನು ಕೂಡ ಡ್ಯಾನ್ಸ್ ಮಾಡಬೇಕು ಎಂದರು..

” ಶೈನ್ ಡ್ಯಾನ್ಸ್ ಮಾಡ್ತಿರ್ತಾನೆ.. ನೀನು ಡ್ಯಾನ್ಸ್ ಮಾಡಬೇಕು ಎಂದ ತಕ್ಷಣ.. ವಾಸುಕಿ ಹಿಡಿದಿದ್ದ ಅಮ್ಮನ ಕೈಗಳಲ್ಲೇ ಮಾತನಾಡಬೇಡ ಎಂದು ಸನ್ನೆ ಮಾಡಿದರು.. ಅದು ಕ್ಯಾಮರಾದಲ್ಲಿ ರೆಕಾರ್ಡ್ ಆಗಿದ್ದು, ಬಿಗ್ ಬಾಸ್ ಸಿಬ್ಬಂದಿಯೂ ಕೂಡ ಅದನ್ನು ಗಮನಿಸಿದ್ದು, ಆ ಸಂದರ್ಭದಲ್ಲಿ ವಾಸುಕಿ ಕೈಗಳನ್ನೇ ಪಾಯಿಂಟ್ ಔಟ್ ಮಾಡಿ ತೋರಿದರು.. ಜನವರಿ 15 ರ ಸಂಚಿಕೆಯಲ್ಲಿ 9.06 ರ ಸಮಯದಲ್ಲಿ ಆ ಸಂದರ್ಭ ಪ್ರಸಾರವೂ ಆಯಿತು.. ಇದನ್ನು ಗಮನಿಸಿ ಪ್ರಸಾರ ಮಾಡಿದ್ದಾರೆ ಎಂದರೆ ಬಹುಶಃ ವಾರದ ಕತೆಯಲ್ಲಿ ಕಿಚ್ಚ ಸುದೀಪ್ ಅವರು ಈ ಬಗ್ಗೆ ಮಾತನಾಡಬುಹುದಾಗಿದೆ.. ಅಂದು ಆ ದೃಶ್ಯವನ್ನು ಗಮನಿಸಿದ ಅನೇಕರು ಸಾಮಾಜಿಕ ಜಾಲತಾಣದಲ್ಲಿ ವಾಸುಕಿ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ.. ವಯಸ್ಸಾದವರು ಅವರ ಮನಸ್ಸಿಗೆ ಅನ್ನಿಸಿದನ್ನು ಮಾತನಾಡುತ್ತಾರೆ.. ಅದರಲ್ಲೂ ಮಕ್ಕಳ‌ ಮೇಲಿನ ಕಾಳಜಿಗೆ ಎಲ್ಲಾ ಅಮ್ಮಂದಿರು ಆಡುವ ಮಾತುಗಳೇ ಅವು.. ಅದನ್ನೆಲ್ಲಾ ಅವಾಯ್ಡ್ ಮಾಡುವ ಪ್ರಯತ್ನ ಆ ಸಮಯದಲ್ಲಿ ಬೇಕಿರಲಿಲ್ಲ ಎಂಬುದು ನೋಡುಗರ ಅಭಿಪ್ರಾಯ..

Source Credit RJ News Kannada

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಬಿಗ್ ಬಾಸ್ ಮನೆಗೆ ಬಂದು ಸಿಹಿಸುದ್ದಿ ಕೊಟ್ಟ ಚಂದನ..‌ ಇಷ್ಟು ಬೇಗ ಮದುವೆ ಫಿಕ್ಸ್ ಆಯ್ತಾ?

Fri Jan 17 , 2020
Source Credit RJ News Kannada ಬಿಗ್ ಬಾಸ್ ಸೀಸನ್ 7ರ ಫಿನಾಲೆಗೆ ಇನ್ನೇನು ಕೇವಲ ಮೂರು ವಾರಗಳಷ್ಟೇ ಬಾಕಿ ಇದ್ದು, ಆಟದ ಕಾವು ಹೆಚ್ಚಾಗಿದೆ.. ಈಗಾಗಲೇ ಸ್ಪರ್ಧಿಗಳ ಕುಟುಂಬದವರು ಮನೆಗೆ ಆಗಮಿಸಿ ಸದಸ್ಯರಿಗೆ ಹುರಿದುಂಬಿಸಿ ಹೋಗಿದ್ದಾರೆ.. ಎಲ್ಲರ ಮನಸ್ಸಿನಲ್ಲಿಯೂ ಗೆಲುವಿನ ಲೆಕ್ಕಾಚಾರ ಬಿಟ್ಟು ಬೇರೇನು ಓಡುತ್ತಿಲ್ಲವೆನ್ನಬಹುದು.. Pin it Email https://nirantharanews.com/%e0%b2%85%e0%b2%ae%e0%b3%8d%e0%b2%ae%e0%b2%a8%e0%b2%bf%e0%b2%97%e0%b3%86-%e0%b2%b6%e0%b3%88%e0%b2%a8%e0%b3%8d-%e0%b2%ac%e0%b2%97%e0%b3%8d%e0%b2%97%e0%b3%86-%e0%b2%ae%e0%b2%be%e0%b2%a4%e0%b2%a8/#UGhvdG9HcmlkXzE ಇಂತಹ ಸಮಯದಲ್ಲಿ ಬಿಗ್ ಬಾಸ್ ಮನೆಗೆ ಹಳೆಯ ಸ್ಪರ್ಧಿಯ ರೀಎಂಟ್ರಿ ಆಗಿದ್ದು, ಸಿಹಿಸುದ್ದಿ ಯೊಂದನ್ನು ತಂದಿದ್ದರು.. ಹೌದು ಕಳೆದ ವಾರವಷ್ಟೇ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಹೊರ ಹೋಗಿದ್ದ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links