ಅಮೇರಿಕಾದ ವಿದ್ಯಾರ್ಥಿಗಳು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ

Source Credit NewsKannada.com


DSK
  ¦   


Jan 07, 2020 09:41:39 AM (IST)

ಬೆಳ್ತಂಗಡಿ: ದಿ ಯುನೈಡೆಡ್ ಮೆಥೊಡಿನಸ್ಸ್ ಚರ್ಚ್ ವತಿಯಿಂದ ಅಮೇರಿಕಾದ ವಿದ್ಯಾರ್ಥಿಗಳು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ಡಾ. ಡಿ.ವೀರೇಂದ್ರ ಹೆಗ್ಗಡೆ ಜತೆ ಮಾತುಕತೆ ನಡೆಸಿದರು.

ನಂತರ ಮಾತನಾಡಿದ ವೀರೇಂದ್ರ ಹೆಗ್ಗಡೆ, “ಶಿವನನ್ನು ಲಯಕರ್ತ ಎಂದು ಕರೆಯುತ್ತಾರೆ. ಸೃಷ್ಠಿಯಲ್ಲಿ ಎಲ್ಲವೂ ಆದಿಯಿಂದ ಅಂತ್ಯದೆಡೆಗೆ ಹೋಗುತ್ತದೆ. ಶಾಶ್ವತವಾಗಿ ಈ ಪ್ರಪಂಚದಲ್ಲಿ ಯಾವುದೇ ಚರಾ ಚರ ವಸ್ತುಗಳು ಇರಲು ಸಾಧ್ಯವಿಲ್ಲ. ಎಲ್ಲವೂ ನಾಶವಾಗುವುದು ಸ್ವಾಭಾವಿಕ ಇದು ಶಿವನ ತತ್ವ.” ಪ್ರಪಂಚದಲ್ಲಿ ನಾನಾ ಧರ್ಮಗಳು ಚಾಲ್ತಿಯಲ್ಲಿದೆ. ಆದರೆ ಎಲ್ಲಾ ಧರ್ಮಗಳ ತಾತ್ಪರ್ಯವು ಮಾನವೀಯತೆ ಆಗಿದೆ. ಆದರೆ ಜನರು ಧರ್ಮವನ್ನು ಅರ್ಥೈಸಿಕೊಳ್ಳುವುದರಲ್ಲಿ ವ್ಯತ್ಯಾಸವಾಗುವ ಕಾರಣ ಧಾರ್ಮಿಕ ಕ್ಲೇತ್ರಗಳು ಸಮಾಜದಲ್ಲಿ ಉಂಟಾಗುತ್ತದೆ. ಧಾರ್ಮಿಕ ಮುಖಂಡರುಗಳು ಈ ವ್ಯತ್ಯಾಸಗಳನ್ನು ಹೊಗಲಾಡಿಸಲು ಪ್ರಯತ್ನಿಸಬೇಕಾಗಿದೆ ಎಂದು ಡಾ. ಡಿ. ವೀರೇಂದ್ರ ಹೆಗ್ಗಡೆಯವರು ದಿ ಯುನೈಡೆಡ್ ಮೆಥೊಡಿನಸ್ಸ್ ಚರ್ಚ್ ವತಿಯಿಂದ ಶ್ರೀ ಕ್ಷೇತ್ರಕ್ಕೆ ಅಮೇರಿಕಾದಿಂದ ಬಂದಂತಹ ವಿಧ್ರ್ಯಾರ್ಥಿಗಳ ತಂಡವನ್ನು ಉದ್ದೇಶಿಸಿ ಮಾತನಾಡಿದರು. ಶ್ರೀ ಕ್ಷೇತ್ರವು ಧರ್ಮಸ್ಥಳವು ನಡೆಸುತ್ತಿರುವ ಜನಕಲ್ಯಾಣ ಕಾರ್ಯಕ್ರಮಗಳ ಅಧ್ಯಯನಕ್ಕೆ ಈ ತಂಡವು ಆಗಮಿಸಿತ್ತು. ಶ್ರೀ ಕ್ಷೇತ್ರದ ವಿವಿಧ ವ್ಯವಸ್ಥೆಗಳನ್ನು ಅಧ್ಯಯನ ಮಾಡಿದರು. ತಂಡದಲ್ಲಿ ಡಾ. ಇ.ವಿ.ಎಸ್ ಮಾಬೆನ್, ಪ್ರೋಪೆಸರ್, ಎ.ಜೆ. ಇನ್ಸ್‍ಟ್ಯೂಟ್ ಆಫ್ ಮೆಡಿಕಲ್ ಕಲಾ ಸಾಯನ್ಸ್, ಬಿಷಬ್ ಸುದರ್ಶನ್ ದೇವಾಧಾರ್, ಮೆಥೋಡಿಸ್ಟ್ ಚರ್ಚ್, ನ್ಯೂಇಂಗ್ಲೆಂಡ್ ಕಾನ್ಪರೆಸ್ಸ್, ಬಿಷಬ್ ಈಸ್ಟರ್‍ಲಿಂಗ್, ಮತ್ತು ಟೆಡ್ ಆಂಡರ್‍ಸನ್ ಮತ್ತು ಮೇರಿ ಆಂಡರ್‍ಸನ್ ಇವರು ವಿಧ್ಯಾರ್ಥಿಗಳ ತಂಡವನ್ನು ಪ್ರತಿನಿಧಿಸಿದರು.

Source Credit NewsKannada.com

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಮೋದಿ, ಶಾಗೆ ಕೊಲೆ ಬೆದರಿಕೆ: ವಿಟ್ಲದ ವ್ಯಕ್ತಿ ಬಂಧನ

Tue Jan 7 , 2020
Source Credit NewsKannada.com ಮೋದಿ, ಶಾಗೆ ಕೊಲೆ ಬೆದರಿಕೆ: ವಿಟ್ಲದ ವ್ಯಕ್ತಿ ಬಂಧನ MV   ¦    Jan 07, 2020 09:34:42 AM (IST) Pin it Email https://nirantharanews.com/%e0%b2%85%e0%b2%ae%e0%b3%87%e0%b2%b0%e0%b2%bf%e0%b2%95%e0%b2%be%e0%b2%a6-%e0%b2%b5%e0%b2%bf%e0%b2%a6%e0%b3%8d%e0%b2%af%e0%b2%be%e0%b2%b0%e0%b3%8d%e0%b2%a5%e0%b2%bf%e0%b2%97%e0%b2%b3%e0%b3%81-%e0%b2%b6/#bW9kaV9tYWluX25 ಬಂಟ್ವಾಳ: ವಿದೇಶದಲ್ಲಿದ್ದು ಪ್ರಧಾನಿ ನರೇಂದ್ರಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರಿಗೆ ಕೊಲೆ ಬೆದರಿಕೆ ಹಾಕಿದ ಆರೋಪದ ಹಿನ್ನೆಲೆಯಲ್ಲಿ ವಿಟ್ಲ ಪೊಲೀಸರು ಒರ್ವ ನನ್ನು ವಶಕ್ಕೆ ಪಡೆದುಕೊಂಡ ಘಟನೆ ಸೋಮವಾರ ಸಂಜೆ ನಡೆದಿದೆ. ಪೆರುವಾಯಿ ಗ್ರಾಮದ ಸೇನೆರಪಾಲು ನಿವಾಸಿ ಅದ್ರಾಮ ಅವರ ಪುತ್ರ ಅನ್ವರ್ ಅವರನ್ನು ಬಂಟ್ವಾಳ ವೃತ್ತ ನಿರೀಕ್ಷಕ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links