ಅಭಿಮಾನಿಗಳು ತಯಾರಿಸಿದ ‘ಕೆಜಿಎಫ್-2’ ಚಿತ್ರದ ಸಂಜಯ್ ದತ್ ಪೋಸ್ಟರ್ ವೈರಲ್

News

oi-Shruthi GK

|

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಾರಿ ನಿರೀಕ್ಷೆಯ ಕೆಜಿಎಫ್ ಚಾಪ್ಟರ್-2 ಸಿನಿಮಾದ ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದೆ. ಬೆಂಗಳೂರು, ಮೈಸೂರು, ಕೋಲಾರ, ಹೈದರಾಬಾದ್ ಗಳಲ್ಲಿ ಕೆಜಿಎಫ್-2 ಚಿತ್ರೀಕರಣ ಮಾಡಲಾಗುತ್ತಿದೆ. ಮಳೆಯ ಕಾರಣದಿಂದ ಚಿತ್ರೀಕರಣ ಕೊಂಚ ನಿಧಾನವಾಗಿದೆ.

ಚಾಪ್ಟರ್-2 ಮೇಲಿನ ನಿರೀಕ್ಷೆ ದುಪ್ಪಟ್ಟಾಗಲು ಕಾರಣ ಬಾಲಿವುಡ್ ಮುನ್ನಾಭಾಯ್ ಸಂಜಯ್ ದತ್. ಅಧೀರ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಸಂಜಯ್ ದತ್ ಈಗಾಗಲೆ ಚಿತ್ರತಂಡ ಸೇರಿಕೊಂಡಿದ್ದಾರೆ. ಸಂಜಯ್ ದತ್ ಎಂಟ್ರಿ ಕೆಜಿಎಫ್-2 ಚಿತ್ರವನ್ನು ಮತ್ತೊಂದು ಲೆವೆಲ್ ಗೆ ಕರೆದೊಯ್ದಿದೆ. ಈಗಾಗಲೆ ಚಿತ್ರತಂಡ ಸಂಜಯ್ ದತ್ ಎಂಟ್ರಿಯಾದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

ಅದು ಬಿಟ್ಟರೆ ಚಿತ್ರದಿಂದ ಯಾವುದೆ ಮಾಹಿತಿ ಹೊರಬಿದ್ದಿಲ್ಲ. ಯಾವುದೆ ಪೋಸ್ಟರ್ ಕೂಡ ರಿವೀಲ್ ಆಗಿಲ್ಲ. ಕೆಜಿಎಫ್-2ಗಾಗಿ ಕಾತುರದಿಂದ ಕಾಯುತ್ತಿರುವ ಅಭಿಮಾನಿಗಳೇ ಈಗ ಚಿತ್ರದ ಪೋಸ್ಟರ್ ಅನ್ನು ತಯಾರಿಸಿ ರಿಲೀಸ್ ಮಾಡಿದ್ದಾರೆ. ಈ ಪೋಸ್ಟರ್ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಪೋಸ್ಟರ್ ನೋಡಿದರೆ ಚಿತ್ರತಂಡವೆ ಅಧಿಕೃತವಾಗಿ ರಿಲೀಸ್ ಮಾಡಿದ ಪೋಸ್ಟರ್ ಎನಿಸುತ್ತೆ. ಈ ಪೋಸ್ಟರ್ ನಲ್ಲಿ ಸಂಜಯ್ ದತ್ ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ರಕ್ತ ಸಿಕ್ತವಾಗಿರುವ ಸಂಜಯ್ ದತ್ ಮಾಸ್ ಲುಕ್ ನೋಡಿದರೆ ಕೆಜಿಎಫ್-2 ಸಿನಿಮಾದ ಲುಕ್ ಇದ್ದ ಹಾಗೆಯೆ ಇದೆ. ಕೆಜಿಎಫ್-2 ಚಿತ್ರದ ಕ್ರೇಸ್ ಹೇಗಿದೆ ಎನ್ನುವುದಕ್ಕೆ ಇದು ಚಿಕ್ಕ ಉದಾಹರಣೆ ಅಷ್ಟೆ. ಈಗಾಗಲೆ ಸಾಕಷ್ಟು ಫ್ಯಾನ್ ಮೇಡ್ ಪೋಸ್ಟರ್ ಗಳು ಹರಿದಾಡುತ್ತಿರುತ್ತವೆ.

ಕೆಜಿಎಫ್-2 ಚಿತ್ರದ ಚಿತ್ರೀಕರಣ ಇನ್ನು ಸಾಕಷ್ಟು ಬಾಕಿ ಇದೆ. ಡಿಸೆಂಬರ್ ಕೊನೆಯಲ್ಲಿ ಚಿತ್ರೀಕರಣ ಮುಗಿಯಲಿದೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಡಿಸೆಂಬರ್ ಅಥವಾ ಜನವರಿಯಲ್ಲಿ ಚಿತ್ರೀಕರಣ ಮುಗಿದರೆ ಬೇಸಿಗೆ ರಜೆ ಸಮಯದಲ್ಲಿ ಅಂದರೆ ಏಪ್ರಿಲ್ ನಲ್ಲಿ ರಿಲೀಸ್ ಮಾಡುವ ಪ್ಲಾನ್ ಮಾಡಿದೆ ಚಿತ್ರತಂಡ. ಚಾಪ್ಟರ್-1 ಗಿಂತ ಚಾಪ್ಟರ್-2 ಭಯಾನಕವಾಗಿರಲಿದೆಯಂತೆ. ಹಾಗಾಗಿ ಚಿತ್ರಪ್ರಿಯರಲ್ಲಿ ಕುತೂಹಲ ದುಪ್ಪಟ್ಟಾಗಿದೆ.

Niranthara News

Leave a Reply

Your email address will not be published. Required fields are marked *

Next Post

ಜನಾಂಗ ಹತ್ಯೆಯಂಥ ಘೋರ ಅಧ್ಯಾಯಗಳ ಸಹಿಸಿ ಉಳಿದವರು

Wed Nov 6 , 2019
Source Credit Vishwavani.news ಸೌರಭ ರಾವ್, ಕವಯಿತ್ರಿಿ, ಬರಹಗಾರ್ತಿ ಬಾಳ್ವೆಗೊಂದು ಅರ್ಥದ ಅನ್ವೇಷಣೆಯೇ ಮನುಷ್ಯನನ್ನು ನಾಳೆಗಳಿಗಾಗಿ ಕಾಯುವಂತೆ ಮಾಡುವುದು ಎಂಬುದು ಫ್ರ್ಯಾಾ್ಂಲೃ್‌ ಅವರ ಪುಸ್ತಕದ ಸಾರ, ಅವರೇ ಹುಟ್ಟುಹಾಕಿದ ಚಿಕಿತ್ಸಕ ತತ್ವಸಿದ್ಧಾಾಂತ – ‘ಲೋಗೋಥೆರಪಿ’ಯ ಸಾರ. ಪುಸ್ತಕದ ಕಪಾಟಿನಲ್ಲಿ ಒಂದಿಡೀ ಭಾಗ ಪದೇಪದೆ ಓದಿಸಿಕೊಳ್ಳುವ ಪುಸ್ತಕಗಳಿಗೇ ಮೀಸಲಿದ್ದು, ಅದರಲ್ಲಿ ಒಂದು ಈ ಬಾರಿ ಹಿಂದಿನ ಯಾವ ಓದುಗಳಿಗಿಂತಲೂ ತೀಕ್ಷ ್ಣವಾಗಿ ಕಾಡುತ್ತಿಿದೆ. ಅದೇ ವಿಕ್ಟರ್ ಫ್ರ್ಯಾಾ್ಂಲೃ್‌ ಅವರ ‘ಮ್ಯಾ್ಸ್‌ಾ ಸರ್ಚ್ ಫಾರ್ ಮೀನಿಂಗ್’ ಈ ಪುಟಗಳಲ್ಲಿ ಸಾವು ಸಹಜತೆ ಪರಿಧಿಯಲ್ಲೇ ಇಲ್ಲದೇ, ಇಡೀ ಮಾನವ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links