ಅಭಿಮಾನಿಗಳಿಗೆ ಸೂಪರ್ ಚಾಲೆಂಜ್ ನೀಡಿದ ಅನಿರುದ್ಧ್.. ಇಲ್ಲಿದೆ ನೋಡಿ

Source Credit RJ News Kannada

ಕಿರುತೆರೆಯ ಸೆನ್ಸೇಷನ್ ಅನಿರುದ್ಧ್ ಅವರು ಸಾಮಾಜಿಕ ಜಾಲತಾಣದಲ್ಲಿ ಆಗಾಗ ಆಕ್ಟೀವ್ ಆಗಿದ್ದು ಅಭಿಮಾನಿಗಳೊಂದಿಗೆ ಬೆರೆಯುತ್ತಾ ಪ್ರತಿದಿನ ಆಗುಹೋಗುಗಳನ್ನು ಹಂಚಿಕೊಳ್ಳುತ್ತಾರೆ..

ಇದೀಗ ಅಭಿಮಾನಿಗಳಿಗೆ ಅನಿರುದ್ಧ್ ಅವರು ವಿಭಿನ್ನ ಚಾಲೆಂಜ್ ಒಂದನ್ನು ನೀಡಿದ್ದಾರೆ.. ಇವರ ಈ ಸವಾಲಿಗೆ ಜನರು ಮೆಚ್ಚುಗೆಯನ್ನೂ ವ್ಯಕ್ತಪಡಿಸುತ್ತಾ ಚಾಲೆಂಜ್ ಸ್ವೀಕರಿಸುತ್ತಿದ್ದಾರೆ..

ಈ ಹಿಂದೆ ಅನಿರುದ್ಧ್ ಅವರು ಗಿಡ ನೆಟ್ಟು ಫೋಟೋ ಕಳುಹಿಸಬೇಕೆಂಬ ಚಾಲೆಂಜ್ ನೀಡಿದ್ದರು.. ಇವರ ಈ ಸವಾಲಿಗೆ ಊಹಿಸಲಾಗದಷ್ಟು ಪ್ರತಿಕ್ರಿಯೆ ಬಂದಿತ್ತು.. ಸಾವಿರಾರ್ಯ್ ಜನರು ಗಿಡ ನೆಟ್ಟು ಫೋಟೋಗಳನ್ನು ಕಳುಹಿಸಿದ್ದರು.. ಅದರಲ್ಲಿ ಇಬ್ಬರ ಮನೆಗೆ ಸ್ವತಃ ಅನಿರುದ್ಧ್ ಅವರು ಉಡುಗೊರೆಯನ್ನು ಕಳುಹಿಸಿಕೊಟ್ಟಿದ್ದರು.. ಇದೀಗ ತಮ್ಮ ಅಧಿಕೃತ ಫೇಸ್ಬುಕ್ ಪೇಜ್ ಮೂಲಕ ಹೊಸ ಸವಾಲನ್ನು ನೀಡಿದ್ದಾರೆ.. ಇಲ್ಲಿದೆ ನೋಡಿ..

“ಹೊಸದೊಂದು ಸವಾಲು ನಿಮ್ಮ ಮುಂದೆ.. ಎಲ್ಲಾ ನನ್ನ ಪ್ರೀತಿ ಪಾತ್ರರಿಗೆ ನಿಮ್ಮ ಅನಿರುದ್ಧ್ ನ ನಮಸ್ಕಾರಗಳು.. ಕೆಲ ದಿನಗಳ ಹಿಂದೆ ನೀಡಿದ್ದ ಗಿಡ ನೆಡುವ ಸವಾಲನ್ನು ಸ್ವೀಕರಿಸಿ ಸಾವಿರಾರು ಫೋಟೋಗಳನ್ನು ಕಳುಹಿಸಿಕೊಟ್ಟಿದ್ದೀರಿ.. ಎಲ್ಲಾ ಗಿಡಗಳನ್ನು ಚೆನ್ನಾಗಿ ಪೋಷಿಸುತ್ತಿದ್ದೀರಿ ಎಂಬ ನಂಬಿಕೆ ನನಗಿದೆ.. ಇದೀಗ ಮತ್ತೊಂದು ಸವಾಲಿನ ಸಮಯ.. ಇಲ್ಲಿದೆ ನೋಡಿ #AnirudhChallenge3

ಈ ಸವಾಲನ್ನು ಸ್ವೀಕರಿಸುವವರು, 20 ರೂಪಾಯಿಗಳ ಒಂದು ನೋಟ್ ಬುಕ್ ಹಾಗೂ 5 ರೂಪಾಯಿಯ ಒಂದು ಪೆನ್ ಅನ್ನು ನಿಮ್ಮ ಹತ್ತಿರದ ಸರ್ಕಾರಿ ಶಾಲೆಯ ಒಂದು ಮಗುವಿಗೆ ನೀಡಬೇಕು.. ಈ ಸವಾಲಿನಲ್ಲಿ ನಾನೂ ಕೂಡ ಪಾಲ್ಗೊಳ್ಳುವೆ.. ಸೋಮವಾರ (ಡಿಸೆಂಬರ್ 16) ಸರ್ಕಾರಿ ಶಾಲೆಯ ಯೂನಿಫಾರ್ಮ್ ನಲ್ಲಿ ಇರುವ ಮಕ್ಕಳಿಗೆ ಅವರು ಶಾಲೆಗೆ ಹೋಗುವ ಸಮಯದಲ್ಲಿ ಕನಿಷ್ಟ 1 ಮಗು, ನಿಮ್ಮ ಕೈನಲ್ಲಿ ಸಾಧ್ಯವಾದರೆ 4 ಮಕ್ಕಳಿಗೆ ಪುಸ್ತಕ ಹಾಗೂ ಪೆನ್ ಅನ್ನು ನೀಡಬೇಕು.. ನೀವು ನೋಟ್ ಬುಕ್ ನೀಡುವ ಫೋಟೋವನ್ನು ನಾನು ಸೋಮವಾರ ಸಂಜೆ 5 ಗಂಟೆಗೆ ಹಾಕುವ ಪೋಸ್ಟ್ ಗೆ ಕಮೆಂಟ್ ಮಾಡಬೇಕು.. (ಅನುಕೂಲ ಇದ್ದವರು ಮಾತ್ರ ಭಾಗವಹಿಸಿ)

ಎಂದಿನಂತೆ ಫೋಟೋ ಕಮೆಂಟ್ ಮಾಡಿದ ಎಲ್ಲರ ಫೋಟೋವನ್ನು ನಾನು ನಿಮ್ಮ ಹೆಸರಿನ ಸಮೇತ ಪೋಸ್ಟ್ ಮಾಡುವೆ.. ಹಾಗೆಯೇ ಇಬ್ಬರಿಗೆ ಸಣ್ಣ ಉಡುಗೊರೆಯನ್ನು ಕಳುಹಿಸಿಕೊಡುವೆ.. ಈ ಸವಾಲಿನಲ್ಲಿ 500 ಜನ ಪಾಲ್ಗೊಂಡರೂ ಕೂಡ 500 ಮಕ್ಕಳಿಗೆ ಕನಿಷ್ಠ ಒಂದು ನೋಟ್ ಬುಕ್ ಸಿಕ್ಕಂತಾಗುತ್ತದೆ.. ಇಲ್ಲಿ ಹಣಕ್ಕಿಂತ ಆತ್ಮತೃಪ್ತಿ ಹೆಚ್ಚು ಸಂತೋಷ ಕೊಡುತ್ತದೆ.. ನನ್ನ ನಿಮ್ಮ ನಡುವೆ ನಂಬಿಕಯೊಂದೇ ಸೇತುವೆ.. ನಿಮ್ಮ ಅನಿರುದ್ಧ್” ಎಂದು ಬರೆದು ಪೋಸ್ಟ್ ಮಾಡಿದ್ದಾರೆ..

Source Credit RJ News Kannada

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಈ ವಾರದ ಎಲಿಮಿನೇಷನ್ ಪ್ರಕ್ರಿಯೆ ಮುಕ್ತಾಯ.. ಮನೆಯಿಂದ ಹೊರ ಬಂದವರು ಇವರೇ ನೋಡಿ..

Sat Dec 14 , 2019
Source Credit RJ News Kannada ಬಿಗ್ ಬಾಸ್ ಸೀಸನ್ 7 ರ ಒಂಬತ್ತನೇ ವಾರದ ಎಲಿಮಿನೇಷನ್ ಪ್ರಕ್ರಿಯೆ ಮುಕ್ತಾಯಗೊಂಡಿದ್ದು ವಾರದ ಕತೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ಈ ವಾರ ಮನೆಯಿಂದ ಹೊರ ಬಂದ ಸದಸ್ಯರ ಹೆಸರನ್ನು ಕಿಚ್ಚ ಸುದೀಪ್ ಅವರು ಅನೌನ್ಸ್ ಮಾಡಿದ್ದಾರೆ.. Pin it Email https://nirantharanews.com/%e0%b2%85%e0%b2%ad%e0%b2%bf%e0%b2%ae%e0%b2%be%e0%b2%a8%e0%b2%bf%e0%b2%97%e0%b2%b3%e0%b2%bf%e0%b2%97%e0%b3%86-%e0%b2%b8%e0%b3%82%e0%b2%aa%e0%b2%b0%e0%b3%8d-%e0%b2%9a%e0%b2%be%e0%b2%b2%e0%b3%86%e0%b2%82/#UGhvdG9HcmlkXzE ಈ ಸೀಸನ್ ಕೊಂಚ ವಿಶೇಷವಾಗಿದ್ದು ಎಲ್ಲರೂ ಸೆಲಿಬ್ರೆಟಿಗಳೇ ಅನ್ನೋದು ಮತ್ತೊಂದು ವಿಶೇಷ ಎನ್ನಬಹುದು‌‌.. ಮೊದಲ ವಾರ ಗುರುಲಿಂಗ ಸ್ವಾಮಿಗಳು, ಎರಡನೇ ವಾರ ಚೈತ್ರ ವಾಸುದೇವನ್, ಮೂರನೇ ವಾರ ದುನಿಯಾ ರಶ್ಮಿ, ನಾಲ್ಕನೇ ವಾರ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links