ಅನೈತಿಕ ಸಂಬಂಧದ ಜಗಳ; ಚಿತ್ರದುರ್ಗದಲ್ಲಿ ಬೆಂಕಿ ಹಚ್ಚಿಕೊಂಡು ಮೂವರ ಆತ್ಮಹತ್ಯೆ

Source Credit Oneindia.com

Chitradurga

oi-Chidananda M

By ಚಿತ್ರದುರ್ಗ ಪ್ರತಿನಿಧಿ

|

ಚಿತ್ರದುರ್ಗ, ಜನವರಿ 02: ಕೌಟುಂಬಿಕ ಕಲಹದಿಂದ ಬೇಸತ್ತು ಬೆಂಕಿ ಹಚ್ಚಿಕೊಂಡು ಗಂಡ, ಹೆಂಡತಿ ಮತ್ತು ಮಗಳು ಸಾವನ್ನಪ್ಪಿರುವ ಘಟನೆ ಚಿತ್ರದುರ್ಗದ ಗಾರೆಹಟ್ಟಿ ಬಡಾವಣೆಯಲ್ಲಿ ನಡೆದಿದೆ.

ಪತಿ ಅರುಣಕುಮಾರ್ (43), ಪತ್ನಿ ಲತಾ (35), ಮಗಳು ಅಮೃತಾ (13) ಬೆಂಕಿಯಲ್ಲಿ ಸಜೀವ ದಹನವಾಗಿದ್ದಾರೆ. ಬಾಗಿಲು ಹಾಕಿಕೊಂಡು ಬೆಂಕಿ ಹಚ್ಚಿಕೊಂಡಿದ್ದು, ಮನೆಯೊಳಗೇ ಮೂವರು ಸಾವನ್ನಪ್ಪಿದ್ದಾರೆ.

ಅರುಣ್ ಖಾಸಗಿ ಬಸ್ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದರು. ಪತ್ನಿ ಲತಾ ಖಾಸಗಿ ಆಸ್ಪತ್ರೆಯಲ್ಲಿ ಶುಶ್ರೂಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.

ಹದಿನಾಲ್ಕು ವರ್ಷಗಳ ಹಿಂದೆ ಅರುಣ್ ಹಾಗೂ ಲತಾ ಮದುವೆಯಾಗಿತ್ತು. ಅರುಣ್ ಕುಮಾರ್ ಗೆ ಅನೈತಿಕ ಸಂಬಂಧವಿದ್ದು, ಈ ವಿಷಯವಾಗಿ ಪದೇ ಪದೇ ಗಂಡ ಹೆಂಡತಿ ನಡುವೆ ಜಗಳವಾಗುತ್ತಿತ್ತು. ಅರುಣ್ ಕುಮಾರ್ ಹೆಂಡತಿ, ಮಗಳಿಗೆ ಬೆಂಕಿ ಹಚ್ಚಿ, ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಲತಾ ಪೋಷಕರು ದೂರಿದ್ದಾರೆ.

ಮನೆಯ ಕಿಟಕಿ ಹಾಗೂ ಬಾಗಿಲ ಬಳಿಯಿಂದ ದಟ್ಟ ಹೊಗೆ ಹೊರ ಬರುತ್ತಿರುವುದನ್ನು ಕಂಡ ಸ್ಥಳೀಯರು ಕಬ್ಬಿಣದ ರಾಡ್ ನಿಂದ ಬಾಗಿಲು ಒಡೆದಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ದೌಡಾಯಿಸಿ ಮೂವರ ಮೃತದೇಹಗಳನ್ನು ಹೊರ ತೆಗೆದಿದ್ದಾರೆ. ಕೋಟೆ ಠಾಣೆ ಪೊಲೀಸರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ – ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್ . ಇಡೀ ದಿನ ತಾಜಾ ಸುದ್ದಿಗಳ ಪಡೆಯಿರಿ.

Allow Notifications

You have already subscribed

Source Credit Oneindia.com

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಸುದ್ದಿ ಗೋಷ್ಠಿಗೆ ಹೋಗಲು ಕಾರ್ ಇಲ್ಲ.. ಬಸ್ ನಲ್ಲಿ ಹೋದರೆ ಅವಮಾನ.. ಇದ್ದಕ್ಕಿದ್ದ ಹಾಗೆ ಪ್ರೇಮ್ ಮನೆ ಮುಂದೆ ಬಂದು ನಿಂತ ಕಾರ್ ಯಾವ ಸೂಪರ್ ಸ್ಟಾರ್ ದು ಗೊತ್ತಾ?

Thu Jan 2 , 2020
Source Credit RJ News Kannada ಎಲ್ಲೋ ನೂರರಲ್ಲಿ 10 ಜನ ಕಲಾವಿದರು ಹುಟ್ಟುತ್ತಲೇ ಚಿನ್ನದ ಚಮಚ ವನ್ನು ಬಾಯಲ್ಲಿ ಇಟ್ಟುಕೊಂಡು ಹುಟ್ಟಿದ ಅದೃಷ್ಟವಂತರಾದರೆ ಮಿಕ್ಕ 90 ಜನರು ಕಲ್ಲು ಮುಳ್ಳಿನ ಹಾದಿಯನ್ನು ಸವೆಸಿ ಇಂದು ಸೂಪರ್ ಸ್ಟಾರ್ ಗಿರಿಯನ್ನು ಪಡೆದಿದ್ದಾರೆ.. ಅದೇ ರೀತಿ ನಟ ನೆನಪಿರಲಿ ಪ್ರೇಮ್ ಅವರೂ ಕೂಡ ಒಬ್ಬರು.. ಕಷ್ಟಗಳನ್ನು ಮೆಟ್ಟಿ ನಿಂತು ಸತತ ಪರಿಶ್ರಮದ ಬಳಿಕ ಸ್ಟಾರ್ ಪಟ್ಟವನ್ನು ಪಡೆದವರು.. ಬಹಳಷ್ಟು ಅವಮಾನಗಳನ್ನು ಅನುಭವಿಸಿ ಆನಂತರ ಸನ್ಮಾನಕ್ಕೆ ಭಾಜನರಾದವರು.. Pin it Email https://nirantharanews.com/%e0%b2%85%e0%b2%a8%e0%b3%88%e0%b2%a4%e0%b2%bf%e0%b2%95-%e0%b2%b8%e0%b2%82%e0%b2%ac%e0%b2%82%e0%b2%a7%e0%b2%a6-%e0%b2%9c%e0%b2%97%e0%b2%b3-%e0%b2%9a%e0%b2%bf%e0%b2%a4%e0%b3%8d%e0%b2%b0%e0%b2%a6/#UGhvdG9HcmlkXzE ಹೀಗೆ ಒಮ್ಮೆ ಪ್ರೇಮ್ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links