ಅನು ಆರ್ಯ ಭೇಟಿಯಾದರೂ ಕೂಡ.‌. ಇಂದು ಆರ್ಯವರ್ಧನ್ ಮಾಡಿದ್ದೇ ಬೇರೆ..

Source Credit RJ News Kannada

ಜೊತೆಜೊತೆಯಲಿ ಧಾರಾವಾಹಿಯಲ್ಲಿ ಕಳೆದ ಒಂದು ವಾರದಿಂದ ಪ್ರೇಕ್ಷಕರು ಕಾದು ಕುಳಿತ್ತಿದ್ದ ಕ್ಷಣವನ್ನು ಒಂದೇ ದಿನದಲ್ಲಿ ನಿರ್ದೇಶಕರು ರಸದೌತಣದಂತೆ ಉಣಬಡಿಸಿದರು.

ಒಂದು ಧಾರಾವಾಹಿಗಾಗಿ ಈ ರೀತಿ ಪ್ರೇಕ್ಷಕ ವಾರಗಟ್ಟಲೆ ಕಾದು ಕುಳಿತ ಉದಾಹರಣೆಯೇ ಇಲ್ಲವೆನ್ನಬಹುದು.. ಸದ್ಯ ಬಿಳಿ ಪಂಚೆ ರೇಶಿಮೆ ಶರ್ಟಿನ ಆರ್ಯವರ್ಧನ್ ಲುಕ್ಕಿಗೆ ಮನಸೋತ ಜನ ದೇವಿಯ ಸನ್ನಿಧಿಯಲ್ಲಿ ಆರ್ಯ ಅನು ಭೇಟಿ ಮಾಡುವುದನ್ನು ನೋಡಲು ಕಾದು ಕುಳಿತಿದ್ದರು..

ಅದರಂತೆಯೇ ಅಮ್ಮನವರ ವಾರವಾದ ಮಂಗಳವಾರವೇ ಇಬ್ಬರ ಭೇಟಿಯ ದೃಶ್ಯ ಪ್ರಸಾರವಾಗಿದ್ದು ಕಾಕತಾಳಿಯವೆನ್ನಬಹುದು.. ಇನ್ನು ದರ್ಶನ ಮುಗಿಸಿ ಬರುತ್ತಿದ್ದ ಅನುವನ್ನು ನೋಡಿದ ಆರ್ಯವರ್ಧನ್ ತಮ್ಮ ಮುಖಕ್ಕೆ ಕುಂಕುಮ ಬಳಿದುಕೊಂಡರೂ ಕೂಡ ಪಕ್ಕದಲ್ಲಿ ಬಂದ ಅನುಗೆ ಅದಾಗಲೇ ಮನಸ್ಸಲ್ಲೇನೋ ತಳಮಳ ಶುರುವಾಗಿತ್ತು.. ಆರ್ಯ ಅಲ್ಲಿಂದ ತೆರಳುವಾಗ ಜೋಗಿತ್ತಿ ಆಡಿದ ಆ ಮಾತು ನಿಜಕ್ಕೂ ಮೈಜುಮ್ಮೆನ್ನುವಂತಿತ್ತು.. ಮುಂದೆ ನೋಡು ಆಟ ಎಂದು ಜೋಗಿತ್ತಿ ಆರ್ಯವರ್ಧನ್ ರಿಗೆ ಹೇಳುವಾಗ ಇವರಿಬ್ಬರ ಕಲ್ಯಾಣ ನಡೆಯೋದು ನಿಶ್ಚಿತ ಎಂದೆನಿಸಿತು ನೋಡುಗರಿಗೆ..

ಆದರೆ ಅನುವಿನಿಂದ ತಪ್ಪಿಸಿಕೊಂಡೇ ಹೋಗುತ್ತಿದ್ದ ಆರ್ಯವರ್ಧನ್ ರಿಗೆ ಪ್ರಸಾದ ನೀಡುವಾಗ ಅನುಗೆ ಆರ್ಯನ ಕೈನಲ್ಲಿದ್ದ ಕಡಗವನ್ನು ನೋಡಿ ಅದು ಆರ್ಯವರ್ಧನ್ ಎಂದೇ ಸಂತೋಷ ಪಡುತ್ತಾಳೆ.. ಇನ್ನೇನು ಮಾತನಾಡಿಸುವಷ್ಟರಲ್ಲಿ ಸುಬ್ಬು ಬಂದು ಅನುವನ್ನು ಕತೆದೊಯ್ಯುತ್ತಾರೆ.. ಆದರೆ ಗಂಟೆ ಆರು ಆಗುವ ಮುನ್ನ ಇಬ್ಬರ ಭೇಟಿಯಾಗಿದೆ.. ಎಂಬುದು ಇಬ್ಬರಿಗೂ ತಿಳಿಯುತ್ತದೆ..

ದೇವಸ್ಥಾನದಿಂದ ಹೊರ ಬರುತ್ತಿದ್ದಂತೆ ಆರ್ಯವರ್ಧನ್ ರ ಕಾರನ್ನು ಕೂಡ ಅನು ನೋಡಿ ಮನಸ್ಸಿ‌ನಲ್ಲಿ ಸಮಾಧಾನವಾದರೂ ಮುಖ ನೋಡದ ಆರ್ಯನ ಬಗ್ಗೆ ಹಲವಾರು ಪ್ರಶ್ನೆಗಳ ಜೊತೆಯಲ್ಲಿಯೇ ಮನೆಗೆ ಹೋಗುತ್ತಾಳೆ..

ಆದರೆ ಇಂದಿನ ಸಂಚಿಕೆಯ ಪ್ರೋಮೋದಲ್ಲಿ ಅನು ಹುಬ್ಬಳ್ಳಿಗೆ ಹೋಗಲು ಸಜ್ಜಾಗಿರುವುದು.. ಮೀರಾ ಅನುವಿಗೆ ಬೀಳ್ಕೊಡುಗೆ ನೀಡುತ್ತಿರುವುದನ್ನು ತೋರಿದ್ದಾರೆ.. ಇಬ್ಬರ ಭೇಟಿಯಾದರೂ ಕೂಡ ಹುಬ್ಬಳ್ಳಿಗೆ ಹೊರಟು ನಿಂತ ಅನುವನ್ನು ಆರ್ಯವರ್ಧನ್ ತಡೆಯುತ್ತಾರಾ? ತಡೆದು ಚಾಲೆಂಜ್ ನಂತೆ ತಮ್ಮ ಮನಸ್ಸಿನಲ್ಲಿರೋದನ್ನ ಅನು ಮುಂದೆ ಹೇಳಿಕೊಳ್ಳುತ್ತಾರಾ ಇಂದಿನ ಸಂಚಿಕೆವರೆಗೂ ಕಾದು ನೋಡಬೇಕಿದೆ..

Source Credit RJ News Kannada

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಅನು ಆರ್ಯ ಭೇಟಿಯಾದರೂ ಕೂಡ.‌. ಹೀಗ್ಯಾಕೆ ಮಾಡ್ತಿದ್ದಾರೆ ಆರ್ಯವರ್ಧನ್..

Wed Dec 25 , 2019
Source Credit RJ News Kannada ಜೊತೆಜೊತೆಯಲಿ ಧಾರಾವಾಹಿಯಲ್ಲಿ ಕಳೆದ ಒಂದು ವಾರದಿಂದ ಪ್ರೇಕ್ಷಕರು ಕಾದು ಕುಳಿತ್ತಿದ್ದ ಕ್ಷಣವನ್ನು ಒಂದೇ ದಿನದಲ್ಲಿ ನಿರ್ದೇಶಕರು ರಸದೌತಣದಂತೆ ಉಣಬಡಿಸಿದರು. ಒಂದು ಧಾರಾವಾಹಿಗಾಗಿ ಈ ರೀತಿ ಪ್ರೇಕ್ಷಕ ವಾರಗಟ್ಟಲೆ ಕಾದು ಕುಳಿತ ಉದಾಹರಣೆಯೇ ಇಲ್ಲವೆನ್ನಬಹುದು.. ಸದ್ಯ ಬಿಳಿ ಪಂಚೆ ರೇಶಿಮೆ ಶರ್ಟಿನ ಆರ್ಯವರ್ಧನ್ ಲುಕ್ಕಿಗೆ ಮನಸೋತ ಜನ ದೇವಿಯ ಸನ್ನಿಧಿಯಲ್ಲಿ ಆರ್ಯ ಅನು ಭೇಟಿ ಮಾಡುವುದನ್ನು ನೋಡಲು ಕಾದು ಕುಳಿತಿದ್ದರು.. Pin it Email https://nirantharanews.com/%e0%b2%85%e0%b2%a8%e0%b3%81-%e0%b2%86%e0%b2%b0%e0%b3%8d%e0%b2%af-%e0%b2%ad%e0%b3%87%e0%b2%9f%e0%b2%bf%e0%b2%af%e0%b2%be%e0%b2%a6%e0%b2%b0%e0%b3%82-%e0%b2%95%e0%b3%82%e0%b2%a1-%e2%80%8c-%e0%b2%87/#UGhvdG9HcmlkXzE ಅದರಂತೆಯೇ ಅಮ್ಮನವರ ವಾರವಾದ ಮಂಗಳವಾರವೇ ಇಬ್ಬರ ಭೇಟಿಯ ದೃಶ್ಯ ಪ್ರಸಾರವಾಗಿದ್ದು ಕಾಕತಾಳಿಯವೆನ್ನಬಹುದು.. […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links