ಅನುಶ್ರೀ ನಿರೂಪಕಿಯಾಗಿ ಮಾತ್ರವಲ್ಲ ಬೇರೆ ಕೆಲಸವನ್ನೂ ಮಾಡ್ತಿದ್ದಾರೆ ಗೊತ್ತಾ?

Source Credit RJ News Kannada

ಸದ್ಯ ಕನ್ನಡ ಕಿರುತೆರೆಯ ಪ್ರಖ್ಯಾತ ನಿರೂಪಕರು ಯಾರೆಂದರೆ ಬಹುಶಃ ಅನುಶ್ರೀ ಅವರು ಮೊದಲ ಒಂದೆರೆಡು ಸ್ಥಾನದಲ್ಲಿಯೇ ನಿಲ್ಲುವರು.. ಕ್ಲಾಸ್ ಆಗಲಿ ಮಾಸ್ ಆಗಲಿ ಸದ್ಯ ಅನುಶ್ರೀ ಅವರು ಸೈ ಎನಿಸಿಕೊಂಡಿದ್ದಾರೆನ್ನಬಹುದು.. ಜೀ ವಾಹಿನಿಯ ನಂಬರ್ 1 ನಿರೂಪಕಿಯಾಗಿ ಬಹಳಷ್ಟು ವರ್ಷಗಳಿಂದ ಕೆಲಸ ಮಾಡಿಕೊಂಡು ಬರುತ್ತಿದ್ದಾರೆ.. ಆದರೆ ಅನುಶ್ರೀ ಅವರು ನಿರೂಪಣೆಯ ಜೊತೆಗೆ ಇನ್ನಷ್ಟು ಕೆಲಸಗಳನ್ನೂ ಕೂಡ ಮಾಡುತ್ತಿದ್ದಾರೆ..

ಹೌದು ಅನುಶ್ರೀ ಅವರು ಈ ಸ್ಥಾನಕ್ಕೆ ಬರಲು ಪಟ್ಟ ಕಷ್ಟಗಳು ಕೆಲವರಿಗೆ ಮಾತ್ರ ತಿಳಿದಿದೆ.. ಓದಿದ್ದು ಕಡಿಮೆ.. ಬದುಕು ಕಟ್ಟಿಕೊಳ್ಳಲು ಬೆಂಗಳೂರಿಗೆ ಬಂದರು.. ತಮ್ಮ ಇನ್ನು ಚಿಕ್ಕವನು.. ಅಮ್ಮನನ್ನು ಸಾಕಬೇಕಿತ್ತು.. ತಮ್ಮನನ್ನು ಓದಿಸಬೇಕಿತ್ತು.. ಹೀಗೆ ಹಲವಾರು ದೊಡ್ಡ ದೊಡ್ಡ ಜವಬ್ದಾರಿಗಳನ್ನು ಅನುಶ್ರೀ ಅವರು ತಮ್ಮ ಬೆನ್ನಿಗೆ ಕಟ್ಟಿಕೊಂಡು ಬೆಂಗಳೂರಿಗೆ ಬಂದರು..

ಮೊದಮೊದಲು ಗುರು ಕಿರಣ್ ಅವರು ನೀಡುತ್ತಿದ್ದ ಸ್ಟೇಜ್ ಶೋಗಳಲ್ಲಿ ಬ್ಯಾಕ್ ಡ್ಯಾನ್ಸರ್ ಗಳ ಹಿಂದೆ ನಿಂತು ಟೇಪ್ ಬಿಡುತ್ತಿದ್ದ ಕೆಲಸವನ್ನು ಅನುಶ್ರೀ ಅವರು ಮಾಡುತ್ತಿದ್ದರು.. ಆದರೆ ಇವರಲ್ಲಿನ ಪ್ರತಿಭೆಯನ್ನು ಗುರುತಿಸಿ ಗುರುಕಿರಣ್ ಅವರು ಶೋಗಳಲ್ಲಿ ನಿರೂಪಣೆ ಮಾಡಲು ಅನುಶ್ರೀ ಅವರಿಗೆ ಅವಕಾಶ ಮಾಡಿಕೊಟ್ಟರು..

ನಂತರ ಅವರ ಮಾತೆ ಅವರಿಗೆ ಜೀವನ ಕಟ್ಟಿಕೊಳ್ಳಲು ನೆರವಾಯಿತು.. ಮುಂದೆ ಹಲವಾರು ಶೋಗಳಲ್ಲಿ ನಿರೂಪಣೆ ಮಾಡಿದರೂ ಕೂಡ ಅಂತಹ ದೊಡ್ಡ ಹೆಸರು ಬಂದಿರಲಿಲ್ಲ… ಕನ್ನಡದ ನಿರೂಪಕರಲ್ಲಿ ಅವರೂ ಒಬ್ಬರು ಎನ್ನುವಂತಿತ್ತು ಅಷ್ಟೇ..

ಆನಂತರ ಬಿಗ್ ಬಾಸ್ ನಲ್ಲಿ ಭಾಗವಹಿಸಿ ಬಂದರು… ಒಂದೆರೆಡು ಸಿನಿಮಾವನ್ನೂ ಮಾಡಿದರು.. ನಂತರದಲ್ಲಿ ರಾಘವೇಂದ್ರ ಹುಣಸೂರು ಅವರು ಅನುಶ್ರೀ ಅವರಿಗೆ ಜೀ ವಾಹಿನಿಯ ಶೋಗಳಲ್ಲಿ ನಿರೂಪಣೆ ಮಾಡಲು ಅವಕಾಶ ಮಾಡಿಕೊಟ್ಟರು.. ನಂತರ ಅನುಶ್ರೀ ಅವರ ಜೀವನದಲ್ಲಿ ನಡೆದದ್ದೆಲ್ಲಾ ಇತಿಹಾಸವಾಯಿತು… ಸರಿಗಮಪ ವಾಗಲಿ, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಆಗಲಿ ಶೋಗಳ ಯಶಸ್ಸಿನಲ್ಲಿ ಅನುಶ್ರೀ ಅವರ ಪಾಲು ಕೂಡ ಇದೆ ಎನ್ನಬಹುದು.. ತನ್ನ ಕನಸಿನಂತೆ ಅಮ್ಮನನ್ನು ಸ್ವಂತ ಮನೆಯಲ್ಲಿ‌ ಇರಿಸಿದರು.. ತಮ್ಮನನ್ನು ವಿದ್ಯಾಭ್ಯಾಸದಲ್ಲಿ ಒಂದು ದಡವನ್ನು ಮುಟ್ಟಿಸಿದರು.. ಹೆಣ್ಣು ಮಗಳಾದರೂ ಮನೆಯ ಮಗನಂತೆ ಅವರು ಜವಬ್ದಾರಿ‌ ನಿಭಾಯಿಸಿದ ರೀತಿ ಮಾತ್ರ ನಿಜಕ್ಕೂ ಮೆಚ್ಚುವಂತದ್ದು..

ಆದರೆ ಅನುಶ್ರೀ ಅವರು ಜೀ ವಾಹಿನಿಯ ನಿರೂಪಣೆಯ ಜೊತೆ ಜೊತೆಗೆ ಸಾಕಷ್ಟು ಕೆಲಸಗಳನ್ನು‌ ಮಾಡುತ್ತಿದ್ದಾರೆ.. ಹೌದು ಟಿವಿ ಜಾಹೀರಾತುಗಳಲ್ಲಿಯೂ ಅನುಶ್ರೀ ಕಾಣಿಸಿಕೊಳ್ಳುತ್ತಾರೆ.. ಜೊತೆಗೆ ಯಾವುದೇ ಕನ್ನಡದ ದೊಡ್ಡ ದೊಡ್ಡ ಸಿನಿಮಾಗಳ ಆಡಿಯೋ ಬಿಡುಗಡೆ ಸಮಾರಂಭವಾಗಿರಬಹುದು ಅಥವಾ ಬೇರೆ ಭಾಷೆಯ ಸಿನಿಮಾಗಳ ಪ್ರಮೋಷನ್ ಕಾರ್ಯಕ್ರಮವಾಗಿರಬಹುದು ಎಲ್ಲಕ್ಕೂ ಅನುಶ್ರೀ ಅವರೇ ಇರಬೇಕು ಎನ್ನುವಂತಾಗಿದೆ.. ಜೊತೆಗೆ ಸರ್ಕಾರ ಆಯೋಜಿಸುವ ಜಲಪಾತೋತ್ಸವದಂತಹ ಕಾರ್ಯಕ್ರಮಗಳಿಗೂ ಅನುಶ್ರೀ ಅವರು ನುರೂಪಕಿಯಾಗಿ ಕೆಲಸ ಮಾಡುತ್ತಾರೆ..

ಇದೆಲ್ಲದರ ಜೊತೆಗೆ ಅನುಶ್ರೀ ಅವರು ಯೂಟ್ಯೂಬ್ ಚಾನಲ್ ಅನ್ನು ಕೂಡ ಹೊಂದಿದ್ದು, ನಟ ನಟಿಯರ ಸಂದರ್ಶನಗಳನ್ನು ಹಾಗೂ ಸಿನಿಮಾಗಳ‌ ಕುರಿತ ಸಂದರ್ಶನಗಳನ್ನು‌ ಮಾಡುತ್ತಿರುತ್ತಾರೆ.. ಒಟ್ಟಿನಲ್ಲಿ ದುಡಿಯುವ ವಯಸ್ಸಿನಲ್ಲಿ, ಹೆಸರು ಇರುವಾಗಲೇ ಅದನ್ನು ಸಮರ್ಥವಾಗಿ ಸದುಪಯೋಗ ಪಡಿಸಿಕೊಳ್ಳಬೇಕೆಂದು ಕಾಲಹರಣ ಮಾಡದೇ ಅನುಶ್ರೀ ಅವರು ಸದಾ ಬ್ಯುಸಿ ಆಗಿರುವುದು ಬಹುತೇಕರಿಗೆ ಸ್ಪೂರ್ತಿ ಎಂದರು ತಪ್ಪಲ್ಲ.. ಇದೆಲ್ಲದರ ನಡುವೆ ಅನುಶ್ರೀ ಅವರು ಸಾಕಷ್ಟು ವಿಚಾರಗಳಿಗೆ ಟ್ರೋಲ್ ಆದರೂ ಕೂಡ ಯಾವುದನ್ನು ಗಂಭೀರವಾಗಿ ಪರಿಗಣಿಸದೆ ತಾವಾಯ್ತು ತಮ್ಮ ಕೆಲಸವಾಯ್ತು ಎಂಬ ಅನುಶ್ರೀ ಅವರ ನಡೆ.. ಕೆಲಸದ ಮೇಲಿನ ಶ್ರದ್ಧೆ ನಿಜಕ್ಕೂ ಮೆಚ್ಚುವಂತದ್ದು..

Source Credit RJ News Kannada

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಮನೆ ಕಟ್ಟಿಸಿ ನೆರವಾಗಲು ಹೋದ್ರು ಜಗ್ಗೇಶ್..‌ ಆದರೆ ಆಗಿದ್ದೇ ಬೇರೆ..

Fri Feb 14 , 2020
Source Credit RJ News Kannada ಒಬ್ಬರು ಒಳ್ಳೆಯದನ್ನ ಮಾಡ್ತಾ ಇದ್ದಾರೆ ಅಂದ್ರೆ ನಮ್ಮ ಕೆಲವು ಜನರಿಗೆ ಅದನ್ನ ಸಹಿಸೋ ಶಕ್ತಿಯೂ ಇಲ್ಲ ಅನ್ಸತ್ತೆ.. ಹೌದು ಸರಿಗಮಪ ಖ್ಯಾತಿಯ ದೇವರ ಮಕ್ಕಳಾದ ರತ್ನಮ್ಮ ಹಾಗೂ ಮಂಜಮ್ಮ‌ರ ಸೂರು ಸೋರುತ್ತಿದೆ ಮಳೆ ಬಂದರೆ ನೆನೆದುಕೊಂಡೇ ಇರುತ್ತೇವೆ ಎಂದು ಕಣ್ಣೀರಿಟ್ಟರು.. ಅವರ ಮಾತಿಗೆ ಎಲ್ಲರ ಮನ ಮಿಡಿಯಿತು..‌ಜಗ್ಗೇಶ್ ಅವರು ಒಂದು ಹೆಜ್ಜೆ ಮುಂದೆ ಹೋಗಿ ಅವರಿಗೆ ಮನೆ ಕಟ್ಟಲು ನೆರವಾಗುತ್ತೇನೆಂದರು.. Pin it Email https://nirantharanews.com/%e0%b2%85%e0%b2%a8%e0%b3%81%e0%b2%b6%e0%b3%8d%e0%b2%b0%e0%b3%80-%e0%b2%a8%e0%b2%bf%e0%b2%b0%e0%b3%82%e0%b2%aa%e0%b2%95%e0%b2%bf%e0%b2%af%e0%b2%be%e0%b2%97%e0%b2%bf-%e0%b2%ae%e0%b2%be%e0%b2%a4%e0%b3%8d/#UGhvdG9HcmlkXzE ಹೇಳಿದ ಮಾತಿನಂತೆ ತಮ್ಮ ಕೊರಟಗೆರೆ ಜಗ್ಗೇಶ್ ಅಭಿಮಾನಿಗಳ ಸಂಘಕ್ಕೆ ಜವಬ್ದಾರಿಯನ್ನೂ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links