ಅಧ್ಯಕ್ಷರೂ ಇಲ್ಲ, ಪದಾಧಿಕಾರಿಗಳೂ ಇಲ್ಲ: ಯಾವ ಚಟುವಟಿಕೆಯೂ ಇಲ್ಲದೇ ಕಾಂಗ್ರೆಸ್ ಕಚೇರಿ ಬಿಕೋ

Source Credit Oneindia.com

ಕೆಪಿಸಿಸಿ ಕಚೇರಿ ಇಷ್ಟು ಕಳೆಗುಂದಿದ್ದು ತೀರಾ ಅಪರೂಪ

ತಮ್ಮ ತಮ್ಮ ಅಹವಾಲುಗಳನ್ನು ಮತ್ತು ಮುಖಂಡರನ್ನು ಭೇಟಿಯಾಗಲೆಂದು ಬರುತ್ತಿರುವ ಕಾರ್ಯಕರ್ತರು ಮತ್ತು ಸ್ಥಳೀಯ ಮುಖಂಡರು, ಬಂದ ದಾರಿಗೆ ಸುಂಕವಿಲ್ಲದಂತೆ ವಾಪಸ್ ಹೋಗುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ, ಕೆಪಿಸಿಸಿ ಕಚೇರಿ ಇಷ್ಟು ಕಳೆಗುಂದಿದ್ದು ತೀರಾ ಅಪರೂಪ.

ಕೆಪಿಸಿಸಿ ಅಧ್ಯಕ್ಷ ಮತ್ತು ಕಾರ್ಯಾಧ್ಯಕ್ಷ ಹುದ್ದೆಯನ್ನು ಬಿಟ್ಟು

ಕೆಪಿಸಿಸಿ ಅಧ್ಯಕ್ಷ ಮತ್ತು ಕಾರ್ಯಾಧ್ಯಕ್ಷ ಹುದ್ದೆಯನ್ನು ಬಿಟ್ಟು, ಮಿಕ್ಕೆಲ್ಲಾ, ಪದಾಧಿಕಾರಿಗಳ ತಂಡವನ್ನು ವಿಸರ್ಜನೆ ಮಾಡಿರುವುದರಿಂದ, ಪದಾಧಿಕಾರಿಗಳೂ, ಕಚೇರಿಯತ್ತ ಹೋಗುತ್ತಿಲ್ಲ. ಹೊಸ ತಂಡ ರೆಡಿಯಾಗುವವರೆಗೆ, ಇದೇ ರೀತಿಯ ವಾತಾವರಣ ಇಲ್ಲಿ ಮುಂದುವರಿಯುವ ಸಾಧ್ಯತೆಯಿದೆ.

ಹೃದಯ ಶಸ್ತ್ರಚಿಕಿತ್ಸೆಗೊಳಗಾದ ಸಿದ್ದರಾಮಯ್ಯ

ಸಿದ್ದರಾಮಯ್ಯನವರು, ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಎರದೇ ದಿನಗಳಲ್ಲಿ, ಹೃದಯ ಶಸ್ತ್ರಚಿಕಿತ್ಸೆಗೊಳಗಾಗಿದ್ದರಿಂದ ಆಸ್ಪತ್ರೆಯಲ್ಲಿ ವಿಶ್ರಾಂತಿಯಲ್ಲಿದ್ದಾರೆ. ಹಾಗಾಗಿ, ಅವರೂ ಕೆಪಿಸಿಸಿ ಕಚೇರಿಯತ್ತ ಹೋಗಿಲ್ಲ. ಎಲ್ಲಾ ಪಕ್ಷಗಳ ಮುಖಂಡರು, ಸಿದ್ದರಾಮಯ್ಯನವರನ್ನು ಆಸ್ಪತ್ರೆಯಲ್ಲೇ ಭೇಟಿಯಾಗುತ್ತಿದ್ದಾರೆ.

ಕಾಂಗ್ರೆಸ್ಸಿನ, ‘ಭಾರತ್ ಬಚಾವೋ’ ಪ್ರತಿಭಟನೆ

ಇನ್ನು, ಪೌರತ್ವದ ವಿಚಾರದಲ್ಲಿ ಕಾಂಗ್ರೆಸ್, ‘ಭಾರತ್ ಬಚಾವೋ’ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ. ರಾಜ್ಯದ ಹೆಚ್ಚಿನ ನಾಯಕರು ನವದೆಹಲಿಗೆ ಹೋಗಿದ್ದಾರೆ. ಹಾಗಾಗಿ, ಈ ವಾರಾಂತ್ಯವಂತೂ, ಇನ್ನೂ, ಕೆಪಿಸಿಸಿ, ಬಿಕೋ ಹೊಡೆಯುವುದಂತೂ ಗ್ಯಾರಂಟಿ.

ದಿನೇಶ್ ಗುಂಡೂರಾವ್, ಡಿಸೆಂಬರ್ 9ರಂದು ರಾಜೀನಾಮೆ

ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಹೀನಾಯ ಪ್ರದರ್ಶನದ ನೈತಿಕ ಹೊಣೆಹೊತ್ತು, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡೂರಾವ್, ಡಿಸೆಂಬರ್ 9ರಂದು ರಾಜೀನಾಮೆ ನೀಡಿದ್ದರು. ಸಿದ್ದರಾಮಯ್ಯ, ರಾಜೀನಾಮೆ ನೀಡಿದ, ಸ್ವಲ್ಪ ಹೊತ್ತಿನಲ್ಲೇ, ದಿನೇಶ್, ತಮ್ಮ ರಾಜೀನಾಮೆಯ ನಿರ್ಧಾರವನ್ನು ಪ್ರಕಟಿಸಿದ್ದರು.

Source Credit Oneindia.com

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಆನ್‌ಲೈನ್ ಮೂಲಕ 2 ದಿನ ವಿದ್ಯುತ್ ಬಿಲ್ ಪಾವತಿ ಮಾಡುವಂತಿಲ್ಲ

Sat Dec 14 , 2019
Source Credit Oneindia.com Pin it Email https://nirantharanews.com/%e0%b2%85%e0%b2%a7%e0%b3%8d%e0%b2%af%e0%b2%95%e0%b3%8d%e0%b2%b7%e0%b2%b0%e0%b3%82-%e0%b2%87%e0%b2%b2%e0%b3%8d%e0%b2%b2-%e0%b2%aa%e0%b2%a6%e0%b2%be%e0%b2%a7%e0%b2%bf%e0%b2%95%e0%b2%be%e0%b2%b0/#Wg== Karnataka oi-Gururaj S | Updated: Thursday, December 12, 2019, 20:03 [IST] ಬೆಂಗಳೂರು, ಡಿಸೆಂಬರ್ 12 : ಎರಡು ದಿನಗಳ ಕಾಲ ಆನ್‌ಲೈನ್ ಮೂಲಕ ವಿದ್ಯುತ್ ಬಿಲ್ ಪಾವತಿ, ಹೊಸ ಸಂಪರ್ಕ ಸೇವೆ ಸೇರಿದಂತೆ ವಿವಿಧ ಸೇವೆಗಳಲ್ಲಿ ವ್ಯತ್ಯಯ ಉಂಟಾಗಲಿದೆ. ಗ್ರಾಹಕರು ಸಹಕಾರ ನೀಡಬೇಕು ಎಂದು ಜನರಲ್ಲಿ ಮನವಿ ಮಾಡಲಾಗಿದೆ. ಡಿಸೆಂಬರ್ 13 ರಿಂದ 15ರ ಸಂಜೆ 6 ಗಂಟೆಯ ತನಕ ಆನ್‌ಲೈನ್ ಸೇವೆ ಲಭ್ಯವಿರುವುದಿಲ್ಲ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ. […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links