ಅದಮಾರು ಶ್ರೀಗಳು ಮೂಡುಬಿದಿರೆ ಜೈನ ಮಠಕ್ಕೆ ಭೇಟಿ

Source Credit NewsKannada.com

ಅದಮಾರು ಶ್ರೀಗಳು ಮೂಡುಬಿದಿರೆ ಜೈನ ಮಠಕ್ಕೆ ಭೇಟಿ


DSK
  ¦   


Jan 15, 2020 09:53:45 AM (IST)

ಮೂಡುಬಿದಿರೆ: ಉಡುಪಿ ಪರ್ಯಾಯ ಶ್ರೀ ಅದಮಾರು ಮಠದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು  ಶ್ರೀ ಕೃಷ್ಣ ಪೂಜಾ ಕೈಂಕರ್ಯ ಮತ್ತು ಸರ್ವಜ್ಞಪೀಠ ಪೀಠಾರೋಹಣ ಮಾಡಲಿರುವ ಶುಭಾವಸರದಲ್ಲಿ ಮಕರ ಸಂಕ್ರಾಂತಿಯ ದಿನವಾದ ಮಂಗಳವಾರ ಇಲ್ಲಿನ ಜೈನಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.

ಜೈನಮಠದ ಚಾರುಕರ್ತೀ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ಅದಮಾರು ಶ್ರೀಗಳನ್ನು ಮಠದ ವತಿಯಿಂದ ಗೌರವಿಸಿದರು.

ಅದಮಾರು ಶ್ರೀಗಳು ಮಾತನಾಡಿ `ನಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ಮಾಡುವುದೇ ನಿಜವಾದ ದೇವರ ಸೇವೆ’ ಎಂದರು.

  ಬಸದಿ ಆಡಳಿತ ಮೊಕ್ತೇಸರ ಆನಡ್ಕ ದಿನೇಶ್ ಕುಮಾರ್, ಪಟ್ಣಶೆಟ್ಟಿ ಸುದೇಶ್ ಕುಮಾರ್, ವಕೀಲರ ಸಂಘದ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್, ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್, ಉದ್ಯಮಿ ಶ್ರೀಪತಿ ಭಟ್, ಎಂಸಿಎಸ್ ಬ್ಯಾಂಕ್ ಮೆನೇಜರ್ ಎಂ.ಚಂದ್ರಶೇಖರ್, ನಿವೃತ್ತ ಶಿಕ್ಷಕ ಅಂಡಾರು ಗುಣಪಾಲ ಹೆಗ್ಡೆ, ಜೈನ್ ಮಿಲನ್ ಅಧ್ಯಕ್ಷೆ ಶ್ವೇತಾ ಜೈನ್ ಮತ್ತಿತರರು ಉಪಸ್ಥಿತರಿದ್ದರು.

ಇದಕ್ಕೂ ಮೊದಲು ಅದಮಾರು ಶ್ರೀಗಳು ಇಲ್ಲಿನ ಎಂಸಿಎಸ್ ಬ್ಯಾಂಕ್‍ಗೆ ಭೇಟಿ ನೀಡಿ ಆಶೀರ್ವಚನ ನೀಡಿದರು. ಬ್ಯಾಂಕ್‍ನ ಅಡಳಿತ ಮಂಡಳಿ ಸದಸ್ಯರು ಶ್ರೀಗಳನ್ನು ಗೌರವಿಸಿದರು.

Source Credit NewsKannada.com

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 2 ಕೋಟಿ ಮೌಲ್ಯದ 5 ಕೆಜಿ ಚಿನ್ನ ವಶಕ್ಕೆ

Wed Jan 15 , 2020
Source Credit TheMangaloreMirror.in ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 2 ಕೋಟಿ ಮೌಲ್ಯದ 5 ಕೆಜಿ ಚಿನ್ನ ವಶಕ್ಕೆ ಮಂಗಳೂರು ಜನವರಿ 15: ವಿದೇಶದಿಂದ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 2 ಕೋ.ರೂ. ಮೌಲ್ಯದ 5 ಕೆ.ಜಿ. ಚಿನ್ನವನ್ನು ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ಪತ್ತೆ ಹಚ್ಚಿ ವಶಪಡಿಸಿಕೊಂಡಿದ್ದಾರೆ.ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಏರ್ ಕಾರ್ಗೋ ಕಾಂಪ್ಲೆಕ್ಸ್‌ನಲ್ಲಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಕಂಪನಿಯೊಂದರ ನಿರ್ದೇಶಕ ಸಹಿತ ಇಬ್ಬರನ್ನು ಡಿಆರ್‌ ಐ ಅಧಿಕಾರಿಗಳು ಬಂಧಿಸಿದ್ದಾರೆ. Pin it Email https://nirantharanews.com/%e0%b2%85%e0%b2%a6%e0%b2%ae%e0%b2%be%e0%b2%b0%e0%b3%81-%e0%b2%b6%e0%b3%8d%e0%b2%b0%e0%b3%80%e0%b2%97%e0%b2%b3%e0%b3%81-%e0%b2%ae%e0%b3%82%e0%b2%a1%e0%b3%81%e0%b2%ac%e0%b2%bf%e0%b2%a6%e0%b2%bf%e0%b2%b0/#V2hhdHNBcHAtSW1 ಬಂಧಿತರನ್ನು ಉಡುಪಿಯ ಸ್ವರೂಪ್ ಮಿನರಲ್ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links