ಅತಿಯಾದ ಮಾಯಿಶ್ಚರೈಸರ್‌ನಿಂದ ನಿಮ್ಮ ಚರ್ಮದ ಮೇಲಾಗುವ ಪರಿಣಾಮಗಳು

Source Credit Kannada.boldsky.com

ಮಾಯಿಶ್ಚರೈಸರ್ ಎಷ್ಟು ಬಾರಿ ಮಾಡಿದರೆ ಒಳ್ಳೆಯದು?

ಆರೋಗ್ಯಕರ ಹಾಗೂ ಆಕರ್ಷಕ ತ್ವಚೆಗಾಗಿ ಪ್ರತಿದಿನ ಮಾಯಿಶ್ಚರೈಸರ್ ಮಾಡಬೇಕು, ಆದರೆ ದಿನದಲ್ಲಿ ಎರಡು ಬಾರಿ ಮಾಡಿದರೆ ಸಾಕಾಗುವುದು. ಬೆಳಗ್ಗೆ ಹಚ್ಚಿದರೆ ಇನ್ನು ಮಲಗುವ ಮುನ್ನ ಮಾಡಿದರೆ ಸಾಕು. ಚಳಿಗಾಲದಲ್ಲಿ ತ್ವಚೆ ಒಡೆಯುವುದರಿಂದ ಮಧ್ಯದಲ್ಲಿ ಒಮ್ಮೆ ಬಳಸಿ. ಗಂಟೆಗೊಮ್ಮೆ ಮಾಯಿಶ್ಚರೈಸರ್ ಮಾಡಿದರೆ ಅಭ್ಯಾಸವಿದ್ದರೆ ಇಂದೇ ನಿಲ್ಲಿಸಿ.

ನೀವು ನಿಮ್ಮ ಮುಖಕ್ಕೆ ಹೆಚ್ಚು ಮಾಯಿಶ್ಚರೈಸರ್ ಮಾಡುತ್ತಿದ್ದೀರಿ ಎಂದು ಗೊತ್ತಾಗುವುದು ಹೇಗೆ?

* ನಿಮ್ಮ ತ್ವಚೆ ಎಣ್ಣೆ-ಎಣ್ಣೆಯಾಗಿ ಕಾಣುವುದು

* ಮಾಯಿಶ್ಚರೈಸರ್ ಹೆಚ್ಚಾದರೆ ಮೇಕಪ್ ಆಕರ್ಷಕವಾಗಿ ಕಾಣುವುದಿಲ್ಲ

* ನಿಮ್ಮ ಮುಖದ ಕಾಂತಿ ಮಂಕಾಗುವುದು

* ತ್ವಚೆ ಉರಿ ಕೂಡ ಉಂಟಾಗಬಹುದು

* ಮುಖಕ್ಕೆ ಮೇಕಪ್ ಹಚ್ಚಿದಾಗ ಮುಖಕ್ಕೆ ಎಣ್ಣೆ ಹಚ್ಚಿ ಮೇಕಪ್ ಮಾಡಿದ ರೀತಿಯಲ್ಲಿ ಕಾಣುವುದರಿಂದ ಮುಖದ ಹೊಳಪು ಕಡಿಮೆಯಾಗುವುದು.

ತ್ವಚೆಯ ಕೋಮಲತೆಗಾಗಿ ಮಾಯಿಶ್ಚರೈಸರ್ ಕೊಳ್ಳುವಾಗ ಈ ಅಂಶಗಳನ್ನು ಗಮನಿಸಿ:

1. ನಿಮ್ಮ ತ್ವಚೆಗೆ ತಕ್ಕಂತಹ ಮಾಯಿಶ್ಚರೈಸರ್ ಖರೀದಿ ಮಾಡಿ ನಿಮ್ಮದು ಒಣ ತ್ವಚೆಯಾಗಿದ್ದರೆ ನಿಮ್ಮ ತ್ವಚೆಯಲ್ಲಿ ತೇವಾಂಶ ಉಳಿಯುವಂತೆ ಮಾಡುವ ಮಾಯಿಶ್ಚರೈಸರ್ ಬಳಸಿ. ಎಣ್ಣೆ ತ್ವಚೆಯಾಗಿದ್ದರೆ ನಾರ್ಮಲ್ ಮಾಯಿಶ್ಚರೈಸರ್ ಸಾಕು. ನಿಮ್ಮದು ಸೆನ್ಸಿಟಿವ್ ಸ್ಕಿನ್ (ಸೂಕ್ಷ್ಮ ತ್ವಚೆ) ಆಗಿದ್ದರೆ ಅದಕ್ಕೆ ಹೊಂದುವಂಥ ಕ್ರೀಮ್ ಬಳಸಿ.

2. ನಿಮ್ಮ ತ್ವಚೆಗೆ ತಕ್ಕಂಥ ಮಾಯಿಶ್ಚರೈಸರ್ ಬಳಸಬೇಕೆ ಹೊರತು ನಿಮ್ಮ ತ್ವಚೆ ಬಣ್ಣಕ್ಕೆ ಹೊಂದುವಂಥ ಮಾಯಿಶ್ಚರೈಸರ್ ಇಲ್ಲ. ನಿಮ್ಮ ತ್ವಚೆ ತುಂಬಾ ಶುಷ್ಕವಾಗುತ್ತಿದ್ದರೆ ಹಾಲಿನಂಶ ಅಧಿಕವಿರುವ ಕ್ರೀಮ್ ಬಳಸಿ. ಒಣ ಚರ್ಮದವರು ಮಾಯಿಶ್ಷರೈಸರ್ ಹಚ್ಚುವುದರಿಂದ ತುರಿಕೆ ಮತ್ತು ಉರಿಯೂತವನ್ನು ಕಡಿಮೆಯಾಗುತ್ತವೆ. ನಿಮ್ಮ ಮಾಯಿಶ್ಚರೈಸರ್‌ನಲ್ಲಿ ಗ್ಲಿಸರಿನ್, ಹೈಲುರಾನಿಕ್ ಆಮ್ಲ, ಸೋಡಿಯಂ ಹೈಲುರೋನೆಟ್, ವಿಟಮಿನ್ ಇ, ಪ್ಯಾಂಥೆನಾಲ್ ಅಂಶಗಳಿದ್ದರೆ ತ್ವಚೆಗೆ ಒಳ್ಳೆಯದು.

ಎಣ್ಣೆ ತ್ವಚೆಯವರು ಮಾಯಿಶ್ಚರೈಸರ್

3. ಎಣ್ಣೆ ತ್ವಚೆಯವರು ಮಾಯಿಶ್ಚರೈಸರ್ ಲೋಷನ್ ಬಳಸುವುದಕ್ಕಿಂತ ಕ್ರೀಮ್ ಬಳಸಿದರೆ ಒಳ್ಳೆಯದು. ಹೈರುಲಾನಿಕ್ ಆಮ್ಲ, ಗ್ಲೈಕಾಲ್ ನಿಯಾಸಿನಮೈಡ್ ರೆಟಿನಾಯ್ಡ್ ಸ್ಯಾಲಿಸಿಲಿಕ್ ಆಮ್ಲ, ಸತು, ಪಿಪಿಎ ಲ್ಯಕ್ಟಿಕ್ ಆಮ್ಲ ಇರುವ ಮಾಯಿಸ್ಚರೈಸರ್ ಕ್ರೀಮ್ ಒಳ್ಳೆಯದು.

4. ಸೂಕ್ಷ್ಮ ತ್ವಚೆಯವರು ಮಾಯಿಶ್ಚರೈಸರ್‌ ಅನ್ನು ಎಚ್ಚರಿಕೆಯಿಂದ ಆಯ್ಕೆ ಮಾಡಬೇಕು. ಸೂಕ್ಷ್ಮ ತ್ವಚೆಯವರು ಬಳಸುವ ಮಾಯಿಶ್ಚರೈಸರ್‌ಗಳಲ್ಲಿ ಪ್ರಮುಖವಾಗಿ ಟೈಟಾನಿಯಂ, ಡೈಆಕ್ಸೈಡ್, ಶಿಯಾ ಬೆಣ್ಣೆ, ವಿಟಮಿನ್-ಇ, ಹೈಲುರಾನಿಕ್ ಆಮ್ಲ, ಕ್ಯಾಮೊಮೈಲ್ ಸಾರ, ಜೊಜೊಬಾ ಸಾರಗಳು ಇದ್ದರೆ ತ್ವಚೆಗೆ ಒಳ್ಳೆಯದು.

Source Credit Kannada.boldsky.com

Niranthara News

Leave a Reply

Your email address will not be published. Required fields are marked *

Next Post

ಎಕ್ಸ್‌ರೇ ಪ್ರಯೋಜನಗಳು ಮತ್ತು ಅಡ್ಡಪರಿಣಾಮಗಳು

Fri Nov 8 , 2019
Source Credit Kannada.boldsky.com Wellness oi-Reena TK | Updated: Friday, November 8, 2019, 16:46 [IST] ನಮಗೆ ಏನಾದರೂ ಆರೋಗ್ಯ ಸಮಸ್ಯೆ ಉಂಟಾದಾಗ ಕೆಲವೊಂದು ಕಾಯಿಲೆಗಳನ್ನು ನೋಡಿದಾಗ ಅಥವಾ ರೋಗದ ಲಕ್ಷಣಗಳನ್ನು ನೋಡಿ ವೈದ್ಯರು ಕಾಯಿಲೆ ಯಾವುದೆಂದು ಪತ್ತೆ ಹಚ್ಚುತ್ತಾರೆ. ಇನ್ನು ಕೈ ಮುರಿದಾಗ, ಹೊಟ್ಟೆ ನೋವಿನ ಸಮಸ್ಯೆ ಉಂಟಾದಾಗ , ದೇಹದೊಳಗೆ ಬೇರೆ ಏನಾದರೂ ಸಮಸ್ಯೆ ಉಂಟಾದಾಗ ಕಾಯಿಲೆ ಯಾವುದೆಂದು ಪತ್ತೆ ಹಚ್ಚಲು ವೈದ್ಯರಿಗೆ ನೆರವಾಗುವುದೇ ಎಕ್ಸ್‌ರೇ ಅಥವಾ ಕ್ಷ ಕಿರಣಗಳು. ಕ್ಷ ಕಿರಣಗಳು ಅತ್ಯಂತ ಉಪಯುಕ್ತವಾದ ವಿದ್ಯುದಾಯಸ್ಕಾಂತೀಯ ವಿಕಿರಣ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links