ಅತಿಯಾದ ಮಕ್ಕಳ ಕಾಳಜಿ ಅವರ ಬುದ್ಧಿಮತ್ತೆಗೆ ಪೆಟ್ಟು ತಂದೀತು ಜೋಕೆ!

Source Credit Kannada.boldsky.com

1. ಸ್ವ-ಅವಲಂಬನೆಗೆ ಒಳಗಾಗುತ್ತಾರೆ

ಒಬ್ಬ ತಾಯಿಯಾಗಿ ನೀವು ಮಗುವಿನ ಜೊತೆಗೆ ಯಾವಾಗಲೂ ಇರುವುದಕ್ಕೆ ಬಯಸುತ್ತಿರಬಹುದು. ಆದರೆ ಹಾಗೆ ಮಾಡುವುದರಿಂದಾಗಿ ನಿಮ್ಮ ಮಗು ಸಂಪೂರ್ಣ ನಿಮ್ಮನ್ನೇ ಎಲ್ಲದಕ್ಕೂ ಅವಲಂಬಿಸುವಂತೆ ನೀವು ಮಾಡುತ್ತಿರುತ್ತೀರಿ. ಮಗುವಿನ ಜೊತೆ ಇರುವುದು ಖಂಡಿತ ಒಳ್ಳೆಯದೇ ಆದರೆ ಕೆಲವೊಮ್ಮೆ ನೀವು ಅವರನ್ನು ಸ್ವತಂತ್ರವಾಗಿ ಬಿಟ್ಟುಬಿಡಬೇಕು. ಹೀಗೆ ಮಾಡುವುದರಿಂದಾಗಿ ಅವರದ್ದೇ ಆದ ಶೈಲಿಯಲ್ಲಿ ಕೆಲವು ವಿಚಾರಗಳನ್ನು ಮಾಡುವುದಕ್ಕೆ ಅವಕಾಶ ನೀಡಿದಂತಾಗುತ್ತದೆ. ಪ್ರತಿಯೊಂದಕ್ಕೂ ಅಮ್ಮ ಎಂದು ಕೂಗಿದಾಗ ತೆರಳುವ ಅಗತ್ಯವಿಲ್ಲ. ಕೆಲವು ಸಮಸ್ಯೆಗಳನ್ನು ಅವರೇ ಬಗೆಹರಿಸಿಕೊಳ್ಳುವುದಕ್ಕೆ ಬಿಟ್ಟುಬಿಡಿ. ಇದನ್ನು ನೀವು ಮೊದಲಿನಿಂದಲೂ ಮಗುವಿಗೆ ಪ್ರಚೋದಿಸಿದಲ್ಲಿ ಸ್ವಯಂ ಅವಲಂಬನೆಯನ್ನು ಕಲಿತು ತಮ್ಮ ಸಮಸ್ಯೆಯನ್ನು ತಾವೇ ಬಗೆಹರಿಸಿಕೊಳ್ಳುವುದನ್ನು ಅವರು ಕಲಿಯುತ್ತಾರೆ.

2. ತಮ್ಮ ತಪ್ಪುಗಳನ್ನು ಸ್ವೀಕರಿಸುವುದಕ್ಕೆ ಕಲಿಯುತ್ತಾರೆ

ಯಾವಾಗ ನೀವು ನಿಮ್ಮ ಮಗುವನ್ನು ಸ್ವತಂತ್ರವಾಗಿ ಬಿಟ್ಟುಬಿಡುತ್ತೀರೋ ಆಗ ಖಂಡಿತ ಅವರು ಸಾಕಷ್ಟು ತಪ್ಪುಗಳನ್ನು ಮಾಡುತ್ತಾರೆ. ಆ ತಪ್ಪುಗಳ ಬಗ್ಗೆ ನೀವು ತಿಳಿಹೇಳುವುದನ್ನು ಮುಂದುವರಿಸಿ. ತಪ್ಪುಗಳನ್ನು ಸ್ವೀಕರಿಸಿ ತಿದ್ದಿ ನಡೆಯಲು ಹೇಳಿಕೊಡಿ. ತಪ್ಪುಗಳನ್ನು ಸ್ವೀಕರಿಸಿ ಅದನ್ನು ಮುಂದೆ ಸರಿಪಡಿಸಿಕೊಂಡು ಹೋಗುವುದನ್ನು ಒಂದು ಮಗು ಕಲಿಯಿತು ಎಂದಾದರೆ ಖಂಡಿತ ಇದು ಯಶಸ್ವೀ ಜೀವನಕ್ಕೆ ಇದು ಅವರಿಗೆ ಸೂತ್ರವಾಗಬಲ್ಲದು. ತಪ್ಪುಗಳಿಂದ ಆಗುವ ಮುಜುಗರವನ್ನು ಎದುರಿಸುವುದು ಹೇಗೆ ಮತ್ತು ತಪ್ಪುಗಳೇ ಆಗದಂತೆ ಬದುಕುವುದು ಹೇಗೆ ಇತ್ಯಾದಿ ವಿಚಾರಗಳು ಅವರ ಗಮನಕ್ಕೆ ಬರುತ್ತದೆ. ಮಕ್ಕಳನ್ನು ತಪ್ಪು ಮಾಡಲು ಬಿಡಿ ಜೊತೆಗೆ ತಿದ್ದಿ ನಡೆಯುವಂತೆಯೂ ಮಾಡಿ.

3. ಕಂಫರ್ಟ್ ಝೋನ್ ನಿಂದ ಹೊರಬರಲಿ

ಪ್ರತಿಯೊಬ್ಬರಿಗೂ ಕೂಡ ತಮ್ಮದೇ ಆದ ಆರಾಮ ವಲಯ(ಕಂಫರ್ಟ್ ಝೋನ್) ಯಾವಾಗಲೂ ಕೂಡ ಸುರಕ್ಷಿತ ಮತ್ತು ಸುಖದಂತೆ ಭಾಸವಾಗುತ್ತದೆ. ಆದರೆ ಯಾವುದೇ ಅನ್ವೇಷಣೆ ಇಲ್ಲದ ಇಂತಹ ಜೀವನದಿಂದ ಏನು ತಾನೆ ಸಾಧನೆ ಮಾಡಿದಂತಾಯಿತು? ಸವಾಲುಗಳ ಬಗ್ಗೆ ಭಯವಿರಬಾರದು. ಸವಾಲುಗಳನ್ನು ನಿರೀಕ್ಷಿಸಬೇಕು. ಸವಾಲುಗಳಿಂದ ಲಭ್ಯವಾಗುವ ಸಕಾರಾತ್ಮಕ ಫಲಿತಾಂಶದ ಬಗ್ಗೆ ಯೋಚಿಸುವಂತಿರಬೇಕು. ಮಗುವನ್ನು ಸ್ವತಂತ್ರವಾಗಿ ಬೆಳೆಸಿ ಅವರನ್ನು ಪ್ರೋತ್ಸಾಹಿಸುವುದರಿಂದಾಗಿ ಅವರ ಆರಾಮ ವಲಯದಿಂದ ಅವರು ಹೊರಬರುತ್ತಾರೆ ಮತ್ತು ಆಗ ಸಾಮಾನ್ಯ ಜೀವನಶೈಲಿಗೆ ಅವರು ಒಗ್ಗು ಸಹಕಾರಿಯಾಗುತ್ತದೆ.

4. ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕೆ ಕಲಿಯುತ್ತಾರೆ

ಮಕ್ಕಳು ತಮ್ಮ ಕಾಲ ಮೇಲೆ ನಿಲ್ಲುವಂತೆ ಮಾಡುವುದರಿಂದಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕೆ ಅವರು ಕಲಿಯುತ್ತಾರೆ. ಇದು ಅವರ ಜೀವನದಲ್ಲಿ ಸಾಕಷ್ಟು ನೆರವಿಗೆ ಬರುತ್ತದೆ. ಯಾಕೆಂದರೆ ಜೀವನದ ಯಾವುದೇ ಹಂತದಲ್ಲಿ ನಿರ್ಧಾರ ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಪ್ರತಿಯೊಬ್ಬರಿಗೂ ಎದುರಾಗುತ್ತದೆ. ಅವರ ರಾತ್ರಿಯ ಊಟಕ್ಕೆ ಏನು ಬೇಕು ಎಂಬುದನ್ನು ಅವರಿಗೆ ನಿರ್ಧರಿಸುವುದಕ್ಕೆ ಬಿಡಿ (ಆರೋಗ್ಯಯುತವಾಗಿ ಮಾಡುವುದು ಹೇಗೆ ಎಂಬುದು ನಿಮಗೆ ತಿಳಿದಿದೆ ಅಲ್ಲವೇ?). ಅವರ ಬಟ್ಟೆಗಳನ್ನು ಅವರಿಗೇ ಆಯ್ಕೆ ಮಾಡುವುದಕ್ಕೆ ಬಿಡಿ ಅಥವಾ ಅವರ ಹೇರ್ ಸ್ಟೈಲ್ ನ್ನು ಅವರೇ ಮಾಡಿಕೊಳ್ಳುವುದಕ್ಕೆ ಅವಕಾಶ ಕೊಡಿ. ಒಂದು ವೇಳೆ ನಿರ್ಧಾರ ತಪ್ಪಾಗಿದ್ದಲ್ಲಿ ಖಂಡಿತ ಅದರಿಂದ ಅವರು ಏನನ್ನಾದರೂ ಕಲಿಯುತ್ತಾರೆ, ಚಿಂತಿಸಬೇಡಿ.

5. ಸವಾಲುಗಳನ್ನು ಎದುರಿಸುವುದಕ್ಕೆ ಕಲಿಯುತ್ತಾರೆ

ಅದೆಷ್ಟೋ ಜೀವನದ ಮಹತ್ವದ ಸಂದರ್ಭದಲ್ಲಿ ನಾವು ಸವಾಲುಗಳನ್ನು ಎದುರಿಸುವುದರಲ್ಲಿ ಸೋಲುತ್ತೇವೆ. ಪರಿಸ್ಥಿತಿ ನಮ್ಮನ್ನ ಹೀನಾಯ ಮಾಡುತ್ತದೆ ಯಾಕೆಂದರೆ ನಾವು ಆ ಸವಾಲಿಗೆ ಸಿದ್ಧರಾಗಿರುವುದೇ ಇಲ್ಲ. ನೀವು ಕೂಡ ಇಂತಹ ಸಂದರ್ಭವನ್ನು ನಿಮ್ಮ ಜೀವನದಲ್ಲಿ ಎದುರಿಸಿರಬಹುದು. ಆದರೆ ನಿಮ್ಮ ಮಗುವೂ ಕೂಡ ಹೀಗೆ ಸವಾಲುಗಳಿಗೆ ಹೆದರುವಂತೆ ಬೆಳಸಬೇಡಿ. ನಿಮ್ಮ ಮಗುವಿನ ಎದುರಾಗುವ ಸವಾಲುಗಳನ್ನು ಅವರು ಸ್ವೀಕರಿಸಲಿ ಮತ್ತು ಅದನ್ನು ಪರಿಹರಿಸಲಿ. ಅದಕ್ಕಾಗಿ ನೀವು ಅವರ ಸಹಾಯಕ್ಕೆ ತೆರಳಬೇಡಿ. ಹೀಗೆ ಅವರನ್ನು ಅವರ ಪಾಡಿಗೇ ಬಿಡುವುದರಿಂದ ಜೀವನದ ಯಾವುದೇ ಸವಾಲಿಗೂ ಕೂಡ ಅವರು ಸಿದ್ಧರಾಗಿರುತ್ತಾರೆ.

6. ಅನ್ವೇಷಣೆಗೆ ತಮ್ಮನ್ನ ತಾವು ಒಡ್ಡಿಕೊಳ್ಳುತ್ತಾರೆ

ನಿಮ್ಮ ಮಗು ಮಾಡುವುದಕ್ಕೆ ಇಚ್ಛಿಸುವ ಪ್ರಮುಖವಾದ ಕೆಲಸ ಯಾವುದು? ಚಿತ್ರ ಬಿಡಿಸುವುದು, ಪಝಲ್ ಬಿಡಿಸುವುದು, ಆಟ ಆಡುವುದು? ಇತ್ಯಾದಿ ಯಾವುದೇ ಇರಬಹುದು. ಅವರು ಇಷ್ಟಪಡುವುದನ್ನು ಅವರಿಗೆ ಮಾಡುವುದಕ್ಕೆ ಬಿಟ್ಟುಬಿಡಿ. ತಾವು ಸಂತೋಷಪಡುವ ಕೆಲಸವನ್ನು ಯಾವಾಗ ನಿಮ್ಮ ಮಗು ಮಾಡುತ್ತದೆಯೋ ಆಗ ಅವರನ್ನು ಅವರು ಅತ್ಯುತ್ತಮ ರೀತಿಯಲ್ಲಿ ಅನ್ವೇಷಣೆ ಮಾಡಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ಅವರ ಅನ್ವೇಷಣೆಯು ನಿಮಗೂ ಕೂಡ ಅವರ ಬಗ್ಗೆ ಹೆಚ್ಚು ಅರ್ಥೈಸಿಕೊಳ್ಳುವುದಕ್ಕೆ ಸಹಕರಿಸುತ್ತದೆ. ಅವರ ಉತ್ಸಾಹ ಮತ್ತು ಆಸೆಗಳನ್ನು ನೀವು ಅವರನ್ನು ಸ್ವತಂತ್ರವಾಗಿ ಬಿಡುವುದರಿಂದ ತಿಳಿದುಕೊಳ್ಳಬಹುದು ಮತ್ತು ಅವರ ಇಚ್ಛೆಗೆ ಅಗತ್ಯವಿರುವ ಅವಕಾಶವನ್ನು ಕಲ್ಪಿಸಿಕೊಡುವುದಕ್ಕೆ ನಿಮಗೂ ಸಹಕಾರಿಯಾಗುತ್ತದೆ.

7. ನಿರ್ಧಾರಗಳನ್ನು ಹೇರಬೇಡಿ

ನಿಮ್ಮ ನಿರ್ಧಾರಗಳನ್ನು ಅವರ ಮೇಲೆ ಹೇರಬೇಡಿ. ಅವರನ್ನು ಅವರಾಗಿ ಬಿಟ್ಟು ಬಿಡಿ. ಯಾವಾಗ ನೀವು ನಿಮ್ಮ ಮಗುವನ್ನು ಅವರಂತೆಯೇ ಇರಲು ಬಿಟ್ಟುಬಿಡುತ್ತೀರೋ ಆಗ ಅವರಿಂದ ಹೊಸ ಹೊಸ ವಿಚಾರಗಳನ್ನು ನೀವು ತಿಳಿದುಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ನಿಮ್ಮ ಮಗುವಿಗೆ ಸ್ವತಂತ್ರ್ಯವಾಗಿರುವಂತ ರೆಕ್ಕೆಗಳನ್ನು ನೀಡಿದರೆ ಖಂಡಿತ ಆಕಾಶದೆತ್ತರಕ್ಕೆ ಅವರು ಹಕ್ಕಿಯಂತೆ ಹಾರಬಲ್ಲರು! ನಿಮ್ಮ ಮಗುವನ್ನು ಅರ್ಥ ಮಾಡಿಕೊಂಡು ಅವರನ್ನು ಅವರಾಗಿರಲು ಬಿಡಿ. ಬದಲಾವಣೆಯನ್ನು ಖಂಡಿತ ಗಮನಿಸುತ್ತೀರಿ.

Source Credit Kannada.boldsky.com

Niranthara News

Leave a Reply

Your email address will not be published. Required fields are marked *

Next Post

ಕನ್ಯಾಪೊರೆ ಹಾಗೂ ವರ್ಜಿನಿಟಿ ಬಗ್ಗೆ ಇರುವ ತಪ್ಪು ಕಲ್ಪನೆಗಳು

Fri Nov 8 , 2019
Source Credit Kannada.boldsky.com Pin it Email https://nirantharanews.com/%e0%b2%85%e0%b2%a4%e0%b2%bf%e0%b2%af%e0%b2%be%e0%b2%a6-%e0%b2%ae%e0%b2%95%e0%b3%8d%e0%b2%95%e0%b2%b3-%e0%b2%95%e0%b2%be%e0%b2%b3%e0%b2%9c%e0%b2%bf-%e0%b2%85%e0%b2%b5%e0%b2%b0-%e0%b2%ac%e0%b3%81/#d29tZW4yLTE1NzM ಹೆಣ್ಣು ಗಂಡು ಮೊದಲ ಬಾರಿ ಕೂಡಿದಾಗ ರಕ್ತಸ್ರಾವ ಆಗಲೇ ಬೇಕಾ? ಮದುವೆಗೆ ಮೊದಲಿನ ಆಕೆಯ ಶೀಲವನ್ನು ಕನ್ಯೆಪೊರೆ ಮೂಲಕ ಅಳಿಯಲಾಗುತ್ತಿದೆ. ಮದುವೆಯಾದ ಬಳಿಕ ಗಂಡು-ಹೆಣ್ಣು ಕೂಡಿದಾಗ ರಕ್ತಸ್ರಾವವಾದರೆ ಮಾತ್ರ ಆಕೆ ಶೀಲವಂತೆ ಅಂತ ಹೇಳಲಾಗುವುದು. ಇಲ್ಲದಿದ್ದರೆ ಆಕೆ ಕನ್ಯೆ ಆಗಿರಲಿಲ್ಲ ಎಂದು ಹೇಳಲಾಗುವುದು. ಈ ಭಯದಿಂದಲೇ ಹೆಣ್ಣು ಮಕ್ಕಳು ಮದುವೆಗೆ ಮೊದಲು ಕನ್ಯಾಪೊರೆ ಹರಿದಿದ್ದರೆ ಅದರ ಮರುಜೋಡಣೆಯ ಚಿಕಿತ್ಸೆಗೆ ಒಳಗಾಗುತ್ತಾರೆ. ಆದರೆ ಕನ್ಯಾಪೊರೆ ಮೊದಲ ಬಾರಿ ಲೈಂಗಿಕ ಕ್ರಿಯೆ ನಡೆದಾಗ ಮಾತ್ರ ಹರಿಯಲು ಸಾಧ್ಯ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links