ಅಕ್ರಮ ಮದ್ಯ ಮಾರಾಟ; ಪೊಲೀಸರಿಂದ ದಾಳಿ

Source Credit Oneindia.com

Chitradurga

oi-Chidananda M

By ಚಿತ್ರದುರ್ಗ ಪ್ರತಿನಿಧಿ

|

ಚಿತ್ರದುರ್ಗ, ಜನವರಿ 09: ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಅಂಗಡಿ ಮೇಲೆ ಪೊಲೀಸರು ದಾಳಿ ಮಾಡಿ, 83 ಸಾವಿರ ರುಪಾಯಿ ಮೌಲ್ಯದ ಮದ್ಯ ವಶಪಡಿಸಿಕಂಡಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಕಾವಲ್ ಗ್ರಾಮದಲ್ಲಿ ವ್ಯಕ್ತಿಯೊರ್ವನು ಪರವಾನಿಗೆ ಇಲ್ಲದೆ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದನು. ರುದ್ರಪ್ಪ ಎಂಬುವವನೇ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿ, ಈತನನ್ನು ಪೊಲೀಸರು ಬಂಧಿಸಿದ್ದಾರೆ.

ಇತ್ತೀಚಿಗೆ ರಾಜ್ಯದಲ್ಲಿ ಅಕ್ರಮ ಮದ್ಯ ಮಾರಾಟಗಾರರ ಮೇಲೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸ್ತ್ರೀ ಶಕ್ತಿ ಸಂಘಟನೆಯವರು ಆಗಾಗ ಪೊಲೀಸರಿಗೆ ದೂರು ಕೊಡುತ್ತಲೇ ಬಂದಿದ್ದರು.

ಗ್ರಾಮಗಳಲ್ಲಿ ಮದ್ಯ ಮಾರಾಟದಿಂದ ಯುವಕರು ಕುಡಿತದ ದಾಸ್ಯರಾಗುತ್ತಿದ್ದಾರೆ ಮತ್ತು ಅನೇಕ ಗಂಡಸರು ದುಡಿಮೆಯ ದುಡ್ಡನ್ನು ಕುಡಿತಕ್ಕೆ ಖರ್ಚು ಮಾಡುತ್ತಿದ್ದಾರೆ ಎಂದು ಮಹಿಳೆ ಆತಂಕಗೊಂಡಿದ್ದರು.

R D ಕಾವಲ್ ಗ್ರಾಮದಲ್ಲಿನ ಅಂಗಡಿಯ ಮೇಲೆ ಖಚಿತ ಮಾಹಿತಿ ಮೇರೆಗೆ ಪಿಎಸ್ಐ ಸ್ವಾತಿ ಮತ್ತು ಸಿಬ್ಬಂದಿಗಳಿಂದ ದಾಳಿ ಮಾಡಿದ್ದಾರೆ. ಪರವಾನಿಗೆ ಇಲ್ಲದೆ ಸಾರ್ವಜನಿಕ ಸ್ಥಳದಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ರುದ್ರಪ್ಪನಿಂದ 83,514 ರುಪಾಯಿ ಮೌಲ್ಯದ 239 ಲೀಟರ್ ಮದ್ಯ ವಶಪಡಿಸಿಕೊಂಡ ಪೊಲೀಸರು, ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ – ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್ . ಇಡೀ ದಿನ ತಾಜಾ ಸುದ್ದಿಗಳ ಪಡೆಯಿರಿ.

Allow Notifications

You have already subscribed

Source Credit Oneindia.com

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ನನ್ನ ಸಹಕಾರವಿಲ್ಲ: ಸಿ.ಟಿ.ರವಿ

Thu Jan 9 , 2020
Source Credit Oneindia.com Pin it Email https://nirantharanews.com/%e0%b2%85%e0%b2%95%e0%b3%8d%e0%b2%b0%e0%b2%ae-%e0%b2%ae%e0%b2%a6%e0%b3%8d%e0%b2%af-%e0%b2%ae%e0%b2%be%e0%b2%b0%e0%b2%be%e0%b2%9f-%e0%b2%aa%e0%b3%8a%e0%b2%b2%e0%b3%80%e0%b2%b8%e0%b2%b0%e0%b2%bf/#Wg== Chikkamagaluru oi-Chetan BP By ಚಿಕ್ಕಮಗಳೂರು ಪ್ರತಿನಿಧಿ | Updated: Thursday, January 9, 2020, 15:05 [IST] ಚಿಕ್ಕಮಗಳೂರು, ಜನವರಿ 09: ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷರನ್ನಾಗಿ ಕಲ್ಕುಳಿ ವಿಠ್ಠಲ ಹೆಗ್ಡೆ ಅವರನ್ನು ಆಯ್ಕೆ ಮಾಡಿದ್ದಕ್ಕೆ ಹಲವು ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ ಬೆನ್ನಲ್ಲೇ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ಪ್ರತಿಕ್ರಿಯೆ ನೀಡಿದ್ದಾರೆ. “ನಮಗೆ ನಮ್ಮ ದೇಹದಲ್ಲಿ ಎಡಗೈ, ಬಲಗೈ ಹೇಗೆ ಒಂದೆಯೋ ಅದೇ ರೀತಿ ಎಡಪಂಥೀಯರಾದರೇನು, ಬಲಪಂಥೀಯರಾದರೇನು ನಮಗೆ ಎಲ್ಲರೂ ಭಾರತೀಯರೆ” […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links