ಅಕ್ರಮವಾಗಿ ಮರದ ದಿಮ್ಮಿಗಳ ಸಾಗಾಟ: ಓರ್ವನ ಬಂಧನ

Source Credit NewsKannada.com

ಅಕ್ರಮವಾಗಿ ಮರದ ದಿಮ್ಮಿಗಳ ಸಾಗಾಟ: ಓರ್ವನ ಬಂಧನ


MV
  ¦   


Jan 12, 2020 05:39:42 PM (IST)

ಬಂಟ್ವಾಳ: ಪರವಾನಿಗೆ ಇಲ್ಲದೆ ಅಕ್ರಮವಾಗಿ ಮರದ ದಿಮ್ಮಿಗಳನ್ನು ಸಾಗಾಟದ ಆರೋಪದ ಮೇರೆಗೆ ವಾಹನ ಸಹಿತ ಆರೋಪಿಯೋರ್ವನನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

ಪಿಕಪ್ ವಾಹನ ಚಾಲಕ ಐವನ್ ಅರುಣ್ ಮಿನೇಜಸ್ ಎಂಬಾತನ್ನು ಬಂಧಿಸಲಾಗಿದ್ದು, ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ. ವಶಕ್ಕೆ ಪಡೆದುಕೊಂಡ ಸೊತ್ತುಗಳ ಮೌಲ್ಯ 3 ಲಕ್ಷ ರೂ. ಎಂದು ಅರಣ್ಯಾಧಿಕಾರಿಗಳು‌ ತಿಳಿಸಿದ್ದಾರೆ.

ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಸಮೀಪ ಪಿಕಪ್ ವಾಹನವೊಂದರಲ್ಲಿ ಅಕ್ರಮವಾಗಿ ಮರದ ದಿಮ್ಮಿಗಳನ್ನು ಸಾಗಾಟ ಮಾಡುತ್ತಿದ್ದಾಗ ಬಂಟ್ವಾಳ ವಲಯದ ಅರಣ್ಯಾಧಿಕಾರಿಗಳು‌ ಪತ್ತೆ ಹಚ್ಚಿದ್ದಾರೆ.

ವಲಯ ಅರಣ್ಯಾಧಿಕಾರಿ ಬಿ.ಸುರೇಶ್, ಉಪ ಅರಣ್ಯಾಧಿಕಾರಿ ಯಶೋಧರ, ಅರಣ್ಯ ರಕ್ಷಕರಾದ ಜೀತೇಶ್ ಪಿ., ದಯಾನಂದ, ವಿನಯ್ ಕುಮಾರ್, ವೀಕ್ಷಕ ಪ್ರವೀಣ್ ಕಾರ್ಯಚರಣೆ ಪಾಲ್ಗೊಂಡಿದ್ದರು.

ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಡಿಸಿಎಫ್ ಕರಿಕಲನ್ ಅವರ ಮಾರ್ಗದರ್ಶನದಲ್ಲಿ ಎಸಿಎಫ್ ಶಂಕರೇ ಗೌಡ ಅವರು‌ಮುಂದಿನ ತನಿಖೆಯನ್ನು ನಡೆಸುತ್ತಿದ್ದಾರೆ.

 

Source Credit NewsKannada.com

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಚಿನ್ನದ ದರದಲ್ಲಿ ಧಿಡೀರ್ ಕುಸಿತ..

Mon Jan 13 , 2020
Source Credit RJ News Kannada ಆಭರಣ ಪ್ರಿಯರಿಗೆ ಸಿಹಿಸುದ್ದಿ, ಕೆಲ ದಿನಗಳಿಂದ ಗಗನಕ್ಕೆ ಏರುತ್ತಿದ್ದ ಚಿನ್ನದ ಬೆಲೆ ಇದೀಗ ದಿಢೀರ್ ಕುಸಿತ ಕಂಡಿದೆ.. ಇರಾನ್ ಮತ್ತು ಅಮೇರಿಕಾ ನಡುವಿನ ಸಂಘರ್ಷದ ಪರಿಣಾಮವಾಗಿ ಜಾಗತಿಕ ಮಾರುಕಟ್ಟೆ ಮೇಲೆ ತೀರಾ ಪರಿಣಾಮ ಬೀರಿತ್ತು.. ಅದೇ ಕಾರಣಕ್ಕೆ ತೈಲ ಮತ್ತು ಚಿನ್ನದ ಬೆಲೆ ಮೊದಲ ಬಾರಿಗೆ ಗಗನಕ್ಕೇರಿ 4200 ಗಡಿ ದಾಟಿತ್ತು.. Pin it Email https://nirantharanews.com/%e0%b2%85%e0%b2%95%e0%b3%8d%e0%b2%b0%e0%b2%ae%e0%b2%b5%e0%b2%be%e0%b2%97%e0%b2%bf-%e0%b2%ae%e0%b2%b0%e0%b2%a6-%e0%b2%a6%e0%b2%bf%e0%b2%ae%e0%b3%8d%e0%b2%ae%e0%b2%bf%e0%b2%97%e0%b2%b3-%e0%b2%b8/#UGhvdG9HcmlkXzE ಚಿನ್ನ ಕೊಂಡುಕೊಳ್ಳಬೇಕೆಂದುಕೊಳ್ಳುತ್ತಿದ್ದ ಮಧ್ಯಮ ವರ್ಗದವರು ಮತ್ತೊಂದಷ್ಟು ದಿನ ಕಾದು ನೋಡೋಣ ಎನ್ನುವಂತಾಗಿತ್ತು.. ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links